ಶ್ರೀಕಾಂತ್ಗೆ ವರ್ಷದ ಶ್ರೇಷ್ಠ ಕ್ರೀಡಾಪಟು ಗೌರವ
Team Udayavani, Feb 28, 2018, 7:00 AM IST
ಮುಂಬಯಿ: ಕಿದಂಬಿ ಶ್ರೀಕಾಂತ್ ಅವರ ಸಾಧನೆಗಳಿಗೆ ಮತ್ತೂಂದು ಪುರಸ್ಕಾರ ಒಲಿದಿದೆ. ವಿಶ್ವದ ಮೂರನೇ ಶ್ರೇಯಾಂಕಿತರಾಗಿರುವ ಅವರಿಗೆ ಸೋಮವಾರ ನಡೆದ 3ನೇ ಮಹೀಂದ್ರ ಸ್ಕಾರ್ಪಿಯೋ ಟೈಮ್ಸ್ ಆಫ್ ಇಂಡಿಯಾದ ವರ್ಷದ ಶ್ರೇಷ್ಠ ಕ್ರೀಡಾಪಟು (ಜನರ ಆಯ್ಕೆ) ಗೌರವ ದೊರೆತಿದೆ.
ಶ್ರೀಕಾಂತ್ ಅವರು ಜಿತು ರೈ ಮತ್ತು ಪಿ.ವಿ. ಸಿಂಧು ಅವರ ಬಳಿಕ ಈ ಗೌರವಕ್ಕೆ ಪಾತ್ರವಾದ ಭಾರತದ ಮೂರನೇ ಆಟಗಾರ ಎಂದೆನಿಸಿಕೊಂಡರು. 2017ರ ಋತುವಿನಲ್ಲಿ ಶ್ರೀಕಾಂತ್ ಅವರ ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು. ಭಾರತದ ಭರವಸೆಯ ಆಟಗಾರನೆನಿಸಿರುವ ಶ್ರೀಕಾಂತ್ ಸೂಪರ್ ಸೀರೀಸ್ ಪ್ರಶಸ್ತಿ ಗೆದ್ದಿರುವುದಲ್ಲದೆ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ಎರಡನೇ ರ್ಯಾಂಕಿಂಗ್ಗೆ ಏರಿದ ಸಾಧನೆಗೂ ಪಾತ್ರರಾಗಿದ್ದಾರೆ.
ಈ ಪ್ರಶಸ್ತಿಗೆ ಘಟಾನುಘಟಿ ಕ್ರೀಡಾಪಟುಗಳು ಸ್ಪರ್ಧೆಯಲ್ಲಿದ್ದರು. ಅವರಲ್ಲಿ ಪಿ.ವಿ. ಸಿಂಧು, ಸುನಿಲ್ ಚೇತ್ರಿ, ವಿರಾಟ್ ಕೊಹ್ಲಿ, ಮಿಥಾಲಿ ರಾಜ್, ಅಂಕುರ್ ಮಿತ್ತಲ್, ಗುರ್ಜಿತ್ ಕೌರ್ ಪ್ರಮುಖರಾಗಿದ್ದರು. ಅವರೆಲ್ಲರನ್ನೂ ಹಿಂದಿಕ್ಕಿದ 25ರ ಹರೆಯದ ಶ್ರೀಕಾಂತ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ ಎನ್ನುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.