ಕನ್ನಡಾಭಿವೃದ್ಧಿಗಾಗಿ ಅನುದಾನ ಸ್ಟಾರ್ಟ್


Team Udayavani, Feb 28, 2018, 3:22 AM IST

21.jpg

ಬೆಂಗಳೂರು: ಕೇವಲ ತಂತ್ರಜ್ಞಾನ ಕ್ಷೇತ್ರ ಮಾತ್ರವಲ್ಲದೇ ಶಾಸ್ತ್ರಿಯ ಸ್ಥಾನಮಾನ ಪಡೆದಿರುವ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿ, ಪ್ರಚಾರ, ಸಂರಕ್ಷಣೆಗೆ ತಂತ್ರಜ್ಞಾನ ಬಳಸಿಕೊಳ್ಳುವ ಕಾರ್ಯದಲ್ಲಿ ತೊಡಗಿಸಿ ಕೊಂಡಿ ರುವ ಸ್ಟಾರ್ಟ್‌ ಅಪ್‌ಗ್ಳಿಗೂ ರಾಜ್ಯ
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆ ಇದೇ ಮೊದಲ ಬಾರಿ ಅನುದಾನ ನೀಡಿ ಉತ್ತೇಜಿಸುತ್ತಿದೆ.

“ಎಲಿವೇಟ್‌ ಕಾಲ್‌-2′ ಕಾರ್ಯಕ್ರಮದಡಿ ಕನ್ನಡ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟಂತೆ ಆಯ್ದ ಒಂಬತ್ತು ಸ್ಟಾರ್ಟ್‌ ಅಪ್‌ಗ್ಳಿಗೆ ಐದು ಲಕ್ಷ ರೂ.ನಿಂದ ಗರಿಷ್ಠ 35 ಲಕ್ಷ ರೂ.ವರೆಗೆ ಒಟ್ಟು 1.40 ಕೋಟಿ ರೂ. ಪ್ರೋತ್ಸಾಹ ಧನ ಮಂಜೂರು ಮಾಡಿ ಉತ್ತೇಜನ ನೀಡಿದೆ. ಇದರಿಂದ ಸ್ಟಾರ್ಟ್‌ಅಪ್‌ ಸಂಸ್ಥೆಗಳು ತಮ್ಮ ಪರಿಕಲ್ಪನೆ ಯನ್ನು ಸಾಕಾರಗೊಳಿ ಸುವ ಪ್ರಯತ್ನವನ್ನು ಚುರುಕು ಗೊಳಿಸಿದ್ದು, ಸದ್ಯದಲ್ಲೇ
ಕೆಲವು ಕಾರ್ಯಾ ರಂಭವಾಗಲಿವೆ. ವ್ಯಾಪಾರ, ವ್ಯವಹಾರ, ಉದ್ದಿಮೆ, ತಂತ್ರಜ್ಞಾನ, ಇ-ಕಾಮರ್ಸ್‌ ಸೇರಿದಂತೆ ಗ್ರಾಹಕ ಸ್ನೇಹಿ ಹಾಗೂ ಉದ್ದಿಮೆ ಸ್ನೇಹಿ ಸೇವೆ ಒಗಿಸುವ ಸ್ಟಾರ್ಟ್‌ಅಪ್‌ಗ್ಳು ಈಚಿನ ವರ್ಷಗಳಲ್ಲಿ ಹೆಚ್ಚು ಪ್ರಚಲಿತಕ್ಕೆ ಬರುತ್ತಿವೆ. ಹೊಸ ಚಿಂತನೆ,
ಅನ್ವೇಷಣೆ, ಪ್ರಯೋಗಶೀಲತೆಗೆ ಸೀಮಿತ ಬಂಡವಾಳದೊಂದಿಗೆ ಉದ್ಯೋಗ ಸೃಷ್ಟಿಗೂ ಸಹಕಾರಿಯಾದ ಸ್ಟಾರ್ಟ್‌ಅಪ್‌ಗ್ಳು ದೊಡ್ಡ ಸಂಖ್ಯೆಯಲ್ಲಿ ಆರಂಭವಾಗುತ್ತಿವೆ. ಹಾಗಾಗಿ ಐಟಿಬಿಟಿ ಇಲಾಖೆಯು “ಎಲಿವೇಟ್‌-100′ ಕಾರ್ಯಕ್ರಮದಡಿ 111 ಸ್ಟಾರ್ಟ್‌ಅಪ್‌ಗಳಿಗೆ ಒಟ್ಟು 117 ಕೋಟಿ ರೂ. ಅನುದಾನ ಪ್ರಕಟಿಸಿದೆ.

ಕೇವಲ ತಂತ್ರಜ್ಞಾನ ಕ್ಷೇತ್ರ ಮಾತ್ರವಲ್ಲದೇ ಕನ್ನಡ ನಾಡು, ನುಡಿ, ಸಂಸ್ಕೃತಿ ಬೆಳವಣಿಗೆ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಹಲವು ಸ್ಟಾರ್ಟ್‌ಅಪ್‌ಗ್ಳು ಆರಂಭವಾಗಿವೆ. ಭಾಷೆ ಕಲಿಕೆ, ಕೀಲಿಮಣೆ ಅಭಿವೃದ್ಧಿ, ಧ್ವನಿಯಿಂದ ಅಕ್ಷರ ಪರಿವರ್ತನೆ, ಸಂಗೀತ ಕಲಿಕೆ
ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸ್ಟಾರ್ಟ್‌ಅಪ್‌ಗ್ಳನ್ನು ಗುರುತಿಸಿ ಉತ್ತೇಜಿಸಲು ಇಲಾಖೆ ಮುಂದಾಗಿದೆ. ಯೋಜನೆ ಪ್ರಗತಿಗೆ ಪೂರಕವಾಗಿ ಹಂತ ಹಂತವಾಗಿ ಅನುದಾನ ಬಿಡುಗಡೆಯಾಗಲಿದೆ. ಯೋಜನೆಯಡಿ ಯಾವುದೇ ಪ್ರಗತಿ ಸಾಧಿಸದಿದ್ದರೆ ಅನುದಾನ ಸ್ಥಗಿತವಾಗಲಿದೆ.

ಯಾರಿಗೆ, ಎಷ್ಟು?
ಕ-ನಾದ ಫೋನಿಕ್ಸ್‌ ಪೇಟೆಂಟ್‌ ಹೊಂದಿರುವ ಯುಎಸ್‌ಬಿ ಕೀ ಬೋರ್ಡ್‌- 25 ಲಕ್ಷ ರೂ. ಕನ್ನಡ ಸೇರಿದಂತೆ ಎಲ್ಲ ಬ್ರಾಹ್ಮಿ ಭಾಷೆಯಲ್ಲಿ ಟೈಪ್‌ ಮಾಡಬಹುದಾದ ಸ್ವರ- ವ್ಯಂಜನ ಬಳಕೆಗೆ ಪೂರಕವಾದ ಕನ್ನಡ ಅಕ್ಷರಗಳುಳ್ಳ ಕೀಲಿಮಣೆಯನ್ನು ಸಂಸ್ಥೆ ಅಭಿವೃದಿಟಛಿಪಡಿಸುತ್ತಿದೆ. ಕ್ವೆರ್ಟಿ ಕೀಬೋರ್ಡ್‌ಗೆ ಬದಲಾಗಿ “ಕ-ನಾದ’ ಪೇಟೆಂಟ್‌ ಹೊಂದಿರುವ ಯುಎಸ್‌ಬಿ ಕೀಬೋರ್ಡ್‌ ರೂಪಿಸುತ್ತಿದೆ. ಕನ್ನಡ ಮಾತ್ರವಲ್ಲದೇ ಇತರೆ ಬ್ರಾಹ್ಮಿ ಭಾಷೆಯನ್ನು ಆಲಿಸಿ ಟೈಪ್‌ ಮಾಡಿದರೆ ಆ ಭಾಷೆಯಲ್ಲೇ ಅಕ್ಷರಗಳು ಮೂಡುವ ಕೀಬೋರ್ಡ್‌ ಅಭಿವೃದ್ಧಿಪಡಿಸುತ್ತಿದೆ. 

ಜ್ಞಾನಿ ಇನ್ನೋವೇಷನ್‌ ಪ್ರೈವೇಟ್‌ ಲಿಮಿಟೆಡ್‌-ಸ್ಪೀಚ್‌ ಟೆಕ್ನಾಲಜಿ 20 ಲಕ್ಷ ರೂ. “ಸ್ಪೀಕ್ಸ್‌ ಟು ಟೆಕ್ಟ್’ ಪರಿಕಲ್ಪನೆಯಡಿ ಧ್ವನಿಯನ್ನು ಅಕ್ಷರಗಳಾಗಿ ಪರಿವರ್ತಿಸುವ ವ್ಯವಸ್ಥೆ ರೂಪಿಸುವ ಕಾರ್ಯದಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನದಡಿ ಕನ್ನಡ ಭಾಷೆಯ ವೈವಿಧ್ಯದ ಉಚ್ಚಾರಣೆ ಪದಗಳನ್ನು ದಾಖಲಿಸಿ ಧ್ವನಿ ಆಧರಿಸಿ ಮುದ್ರಣವಾಗುವ ಸಾಫ್ಟ್ವೇರ್‌ ಅಭಿವೃದ್ಧಿ. ನುಡಿ ಲಿಪಿ ಬಳಕೆಗೂ ಪ್ರಯತ್ನ ನಡೆಸಿದ್ದು, ಪ್ರಾಯೋಗಿಕ ಬಳಕೆಗೆ ಸಿದ್ಧತೆ ನಡೆಸಿದೆ.

ಕೋರ್ಸ್‌ಲೋಕ ಲರ್ನಿಂಗ್‌ ಪ್ರೈವೇಟ್‌ ಲಿಮಿಟೆಡ್‌- ಕನ್ನಡ ಭಾಷೆ ಮತ್ತು ಸಂಸ್ಕೃತಿ ಅಭಿವೃದ್ಧಿ- 5 ಲಕ್ಷ ರೂ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಆನ್‌ಲೈನ್‌ ಕೋರ್ಸ್‌ ಮೂಲಕ ಪರಿಹರಿಸಿಕೊಳ್ಳುವ ವೇದಿಕೆ ಸಿದ್ಧಪಡಿಸುತ್ತಿದೆ.
ಆ್ಯಪ್‌ ಕೂಡ ಅಭಿವೃದ್ಧಿಪಡಿಸುತ್ತಿದ್ದು, ಆಫ್ಲೈನ್‌ ಮೂಲಕ ನಿರಂತರ ಕಲಿಕೆಗೆ ಅವಕಾಶವಿರಲಿದ್ದು, ಮಾತೃಭಾಷೆ ಯೊಂದಿಗೆ ಇನ್ನೊಂದು ಭಾಷೆ ಕಲಿಯುವ ಅವಕಾಶ.

ಸನ್‌ಟ್ರೀ ಇಂಡಿಯಾ ಸಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌- ಸಮುದ್ರ- ಕೋಡ್‌ ಇನ್‌ ಕನ್ನಡ- 10 ಲಕ್ಷ ರೂ. ಹೊಸ ಅನ್ವೇಷಣೆಗಳೆಲ್ಲಾ ಇಂಗ್ಲಿಷ್‌ ಕೋಡ್‌ನ‌ಲ್ಲೇ ಇರುವುದರಿಂದ ಕನ್ನಡದ ಕೋಡ್‌ ಅಭಿವೃದ್ಧಿ.

ಬಜ್‌ಮೀಡಿಯಾ ಟೆಕ್ನಾಲಜಿಸ್‌- ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ನಡಿ ಭಾರತೀಯ ಶಾಸ್ತ್ರಿಯ ಸಂಗೀತದ ವಿಜ್ಞಾನ ಮತ್ತು ಕಲೆ ಸಂಗ್ರಹ- 10 ಲಕ್ಷ ರೂ. ದಿಗ್ಗಜರಿಂದ ಸಂಗೀತ ಕಲಿಕೆಗೆ ಮೊಬೈಲ್‌ ಹಾಗೂ ವೆಬ್‌ ಆಧಾರಿತ ವ್ಯವಸ್ಥೆ. ಸಂಕೇತ ಹಾಗೂ ಆಳ
ಅಧ್ಯಯನ ವ್ಯವಸ್ಥೆ ಮೂಲಕ ಆಫ್ಲೈನ್‌ನಲ್ಲಿ ಅಭ್ಯಾಸಕ್ಕೆ ಅವಕಾಶ

ಭಾರತಿ ಹೆರಿಟೇಜ್‌ ಪ್ರೈವೇಟ್‌ ಲಿಮಿಟೆಡ್‌ – ಕಲಾ ಸಂಗಮ- 10 ಲಕ್ಷ ರೂ. ತಂತ್ರಜ್ಞಾನದ ಮೂಲಕ ಕರ್ನಾಟಕದ ಸಾಂಸ್ಕೃತಿಕ
ಪರಂಪರೆಯನ್ನು ಸಂರಕ್ಷಿಸುವ ಜತೆಗೆ ಇನ್ನಷ್ಟು ಉತ್ಕೃಷ್ಠಗೊಳಿಸುವ ಪ್ರಯತ್ನ 

ಹಾರ್ಸ್‌ಮೆನ್‌- ಕನ್ನಡ ಸಮಗ್ರ ಸುದ್ದಿ- 35 ಲಕ್ಷ ರೂ. ಸಮಗ್ರ ಸುದ್ದಿ ವೆಬ್‌ಸೈಟ್‌ ಅಭಿವೃದ್ಧಿ. ವಿಶೇಷ ಆ್ಯಪ್‌ ಮೂಲಕ ನಗರ, ಗ್ರಾಮೀಣ ಮಂದಿಗೆ ಮಾಹಿತಿ ತಲುಪಿಸುವುದು

ಮಡ್‌ಸ್ಕಿಪರ್‌-ಕನ್ನಡ ಮೆನಿ ವಲ್ಡ್‌- 20 ಲಕ್ಷ ರೂ. ಕರ್ನಾಟಕದ ಭೂವಿನ್ಯಾಸ, ಸಂಸ್ಕೃತಿ, ಜನ, ಪಾರಂಪರಿಕ ತಾಣಗಳು, ವನ್ಯಜೀವಿ ವೈವಿಧ್ಯ, ಬೆಳಕಿಗೆ ಬಾರದ ಸ್ಥಳಗಳ ಕುರಿತ 4ಡಿ ಎಚ್‌ಡಿಆರ್‌ ಚಿತ್ರ ನಿರ್ಮಾಣ

ಸೋವರ್‌ ಪಿಕ್ಚರ್ ಪ್ರೈವೇಟ್‌ ಲಿಮಿಟೆಡ್‌- ಯಕ್ಷಾರುಣ್ಯ- 5 ಲಕ್ಷ ರೂ. ವೈವಿಧ್ಯದ ಜಾನಪದ ಕಲೆಯಾದ ಯಕ್ಷಗಾನ ಕುರಿತಂತೆ ಮೂಲ ಮಾಹಿತಿ, ವಿಡಿಯೋ ಜತೆಗೆ ದೇಶ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಪಡಿಸಲು ಪೂರಕವಾಗಿ ಆ್ಯಂಡ್ರಾಯ್ಡ/
ಐಒಎಸ್‌ ಅಪ್ಲಿಕೇಷನ್‌ ಅಭಿವೃದ್ಧಿ.

ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಸಂರಕ್ಷಣೆ, ಉತ್ತೇಜನ, ಪ್ರಚಾರದಲ್ಲಿ ತೊಡಗಿಸಿ ಕೊಂಡಿರುವ ಆಯ್ದ 9 ಸ್ಟಾರ್ಟ್‌ಅಪ್‌ಗ್ಳಿಗೆ 1.40
ಕೋಟಿ ರೂ. ಅನುದಾನ ನೀಡಿ ಉತ್ತೇಜನ ನೀಡಲಾಗುತ್ತಿದೆ. ಭಾಷೆ, ಸಂಸ್ಕೃತಿ, ಸಂಗೀತ, ಕಲೆಯ ಸಂರಕ್ಷಣೆ, ದಾಖಲೀಕರಣ, 
ಪ್ರಚಾರ, ವ್ಯಾಪಕ ಬಳಕೆಗೆ ಅವಕಾಶ ಕಲ್ಪಿಸುವ ಪ್ರಯೋಗ ನಿರತ ಸಂಸ್ಥೆಗಳನ್ನು ಉತ್ತೇಜಿಸಲು ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.

ಪ್ರಿಯಾಂಕ್‌ ಖರ್ಗೆ, ಐಟಿಬಿಟಿ ಸಚಿವ

ಎಂ.ಕೀರ್ತಿಪ್ರಸಾದ್‌

ಟಾಪ್ ನ್ಯೂಸ್

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.