ಇಂದಿನ ಸತ್ಯ ನಾಳೆಯ ಮಿಥ್ಯೆ ಆಗಬಹುದು


Team Udayavani, Feb 28, 2018, 2:30 AM IST

indina-satya.jpg

ಮೂಢನಂಬಿಕೆಗಳಿಂದಾಗಿ ಸಾಮಾಜಿಕ ಪ್ರಗತಿ ಕುಂಠಿತವಾಗಿರುವುದು ಸಾಮಾನ್ಯ ವಿಚಾರ. ಆದರೆ ಮೂಢನಂಬಿಕೆಗಳು ಮತ್ತು ತಪ್ಪುಕಲ್ಪನೆಗಳು ವಿಜ್ಞಾನ ಕ್ಷೇತ್ರದ ಮುನ್ನಡೆಗೆ ತಡೆಯೊಡ್ಡಿರುವ ಹಲವು ದೃಷ್ಟಾಂತಗಳು ಇತಿಹಾಸದಲ್ಲಿವೆ. ರಸಾಯನ ವಿಜ್ಞಾನವೂ ಇದಕ್ಕೆ ಹೊರತಾಗಿಲ್ಲ. ಮಿಥ್ಯೆಗಳಿಂದಾಗಿ ರಸಾಯನ ವಿಜ್ಞಾನದ ಬೆಳವಣಿಗೆ ಕುಂಠಿತಗೊಂಡಿರುವುದು ಸರ್ವವಿದಿತ. ವಿಜ್ಞಾನ ಚಲನಶೀಲವಾಗಿರುವುದರಿಂದ ಒಮ್ಮೆ ಕಂಡು ಬಂದ ಸತ್ಯ ಕಾಲದಲ್ಲಿ ಬದಲಾವಣೆಯನ್ನು ಕಂಡಿದೆ. ಹಳೆಯ ತಣ್ತೀಗಳು ಅಮಾನ್ಯಗೊಂಡು ಹೊಸ ಸಿದ್ಧಾಂತಗಳು ರೂಪುಗೊಂಡಿವೆ. ತರ್ಕ ಆಧಾರಿತ ಸಿದ್ಧಾಂತಗಳು ಹುಸಿ ಎಂಬುದನ್ನು ಪ್ರಾಯೋಗಿಕ ಪುರಾವೆಗಳು ಸಾಧಿಸಿ ಬೆರಗು ಮೂಡಿಸಿವೆ.

ಕಣ ಸಿದ್ಧಾಂತದ ಮೂಲಪುರುಷ ಕಣಾದ
ಅಣು-ಪರಮಾಣು ಕುರಿತ ವಿವರಣೆಗಳನ್ನು ಮೊದಲು ನೀಡಿದ್ದು ಕ್ರಿ.ಪೂ.600ರಲ್ಲಿ ಭಾರತದ ಆಚಾರ್ಯ ಕಣಾದ. ಎಲ್ಲ ದ್ರವ್ಯಗಳು ವಿಭಜಿಲಸಾಧ್ಯವಾದ ಅತಿ ಸಣ್ಣ ಕಣಗಳಿಂದಾಗಿವೆ ಎಂಬುದಾಗಿ ಗ್ರೀಕ್‌ ತತ್ವಜ್ಞಾನಿ ಡೆಮೋಕ್ರಿಟಸನ(ಕ್ರಿ.ಪೂ.400) ಚಿಂತನೆ. ಆದರೆ ಅರಿಸ್ಟಾಟಲ್‌(ಕ್ರಿ.ಪೂ.384-322) ವಸ್ತು ಪ್ರಪಂಚ ವೆಲ್ಲಾ ಭೂಮಿ,ನೀರು,ಗಾಳಿ,ಬೆಂಕಿ ಈ ನಾಲ್ಕು ಮೂಲ ಧಾತುಗಳಿಂದಾಗಿವೆ ಎಂದು ಪ್ರತಿಪಾದಿಸಿದ. ಭಾರತದದಾರ್ಶನಿಕರು ಆಕಾಶವನ್ನೂ ಸೇರಿಸಿ ಅವನ್ನು ಪಂಚಭೂತಗಳೆಂದರು. ಡೆಮಾಕ್ರಿಟಸನ ಕಣ ಸಿದ್ಧಾಂತ ಊಹೆ ಯಾದ ಕಾರಣ ಅದು ಕಲ್ಪನೆ ಮಾತ್ರ. ಪ್ರಯೋಗದ ವಿವರಣೆ ನೀಡುವ ಸಲುವಾಗಿ ಕಣಾದ/ಡೆಮೊಕ್ರಿಟಸ್‌ನ ಕಲ್ಪನೆಗೆ ಪರಿಕಲ್ಪ ನೆಯ ಘನತೆ ಬಂದಿತು. ಆದ್ದರಿಂದ ಅಣು ಕುರಿತಾದ ನಂಬಿಕೆ ಶತಮಾನಗಳ ಕಾಲ ಹಾಗೇ ಉಳಿದಿತ್ತು.   ಪ್ರಾಯೋಗಿಕ ರಸಾಯನ ವಿಜ್ಞಾನ ಪ್ರಾರಂಭವಾದದ್ದು ಮಧ್ಯಯುಗದ(500-1500) ರಸ ಸಿದ್ಧರ (alchemists) ಕಾಲದಲ್ಲಿ. ಎಲ್ಲ ವಸ್ತುವನ್ನು ಚಿನ್ನವಾಗಿಸುವ ಪ್ರಯತ್ನದಲ್ಲಿ ಹೊಸ ಧಾತುಗಳು, ಸಂಯುಕ್ತಗಳು, ರಾಸಾಯನಿಕ ಕ್ರಿಯೆಗಳು, ಸಂಶ್ಲೇಷಣಾ ವಿಧಾನಗಳು, ಉಪಕರಣಗಳು ಇತ್ಯಾದಿಗಳನ್ನು ಬೆಳಕಿಗೆ ತಂದದ್ದು ರಸಸಿದ್ಧರ ಸಾಧನೆ. ಯಾವ ವಸ್ತುವನ್ನು ವಿಭಜಿಸಿ ಎರಡು ಅಥವಾ ಹೆಚ್ಚು ಬೇರೆ ವಸ್ತುಗಳನ್ನು ಪಡೆಯಲಾ ಗುವುದಿಲ್ಲವೋ ಅದನ್ನು ಮಾತ್ರ ಮೂಲ ಧಾತುವೆಂದು ರಾಬರ್ಟ್‌ ಬಾಯ್ಲ 1661ರಲ್ಲಿ ಸ್ಪಷ್ಟವಾಗಿ ನಿರೂಪಿಸಿದ. ಅಂದರೆ ಧಾತುವೇ ವಸ್ತುವಿನ ಅಂತಿಮ ರೂಪ, ಅದನ್ನು ರೂಪಾಂತರಗೊಳಿಸಲು ಸಾಧ್ಯವಿಲ್ಲ ಎಂಬದು ಅಂದಿನ ತಿಳಿವಳಿಕೆಯಾಗಿತ್ತು. ಹೈಡ್ರೊಜನ್‌, ಆಕ್ಸಿಜನ್‌, ತಾಮ್ರ, ಬೆಳ್ಳಿ, ಚಿನ್ನ, ಮುಂತಾದ 28 ವಸ್ತುಗಳನ್ನು ಮೂಲಧಾತುಗಳೆಂದು 1780 ರಲ್ಲಿಯೇ ಫ್ರೆಂಚ್‌ ವಿಜ್ಞಾನಿ ಲೆವಾಸ್ಯೆ ಪ್ರಯೋಗಗಳ ಮೂಲಕ ಗುರುತಿಸಿದ್ದ. ಈಗ ಮೂಲಧಾತುಗಳ ಸಂಖ್ಯೆ 118ಕ್ಕೇರಿದೆ.

ಡೆಮೋಕ್ರಿಟಸನ ಕಣ ಸಿದ್ಧಾಂತಕ್ಕೆ ಪುನರ್ಜೀವ ನೀಡಿದ್ದು ಜಾನ್‌ ಡಾಲ್ಟನ್‌ 1801ರಲ್ಲಿ. ಎಲ್ಲ ಧಾತುಗಳು ಪರಮಾಣುಗಳಿಂದಾಗಿದ್ದು ಅವು ತಟಸ್ಥ ಕಣಗಳಾಗಿವೆ. ಯಾವುದೇ ಧಾತುವಿನ ಪರಮಾಣುಗಳು ತೂಕ, ಗಾತ್ರ ಮತ್ತು ಗುಣಗಳಲ್ಲಿ ಒಂದೇ ಬಗೆಯದ್ದಾಗಿವೆ; ಪರಮಾಣುಗಳ ವಿನಿಮಯದಿಂದ ರಾಸಾ ಯನಿಕಕ್ರಿಯೆ ನಡೆಯುತ್ತದೆ; ಪರಮಾಣುಗಳನ್ನು ವಿಭಾಜಿಸು ವುದಾಗಲೀ ನಾಶ ಮಾಡುವುದಾಗಲೀ ಸಾಧ್ಯವಿಲ್ಲ ಎಂಬದೇ ಡಾಲ್ಟನ್‌ನ ಪರಮಾಣು ಸಿದ್ಧಾಂತದ ತಿರುಳು.

ಇಪ್ಪತ್ತನೇ ಶತಮಾನದ ಆದಿ ಭಾಗದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಒಂದರ ಮೇಲೊಂದರಂತೆ ನಡೆದ ಹಠಾತ್‌ ಬೆಳವಣಿಗೆಗಳಾದ, ಹೆನ್ರಿ ಬೆಕಿರಲ್‌ ಪತ್ತೆ ಮಾಡಿದ ವಿಕಿರಣಶೀಲತೆ, ರಾಂಟ್ಜನ್‌ ಕಂಡುಹಿಡಿದ ಎಕ್ಸ್‌ರೇ, ಜೆ.ಜೆ.ಥಾಮ್ಸನ್‌ ಆವಿಷ್ಕರಿಸಿದ ಎಲೆಕ್ಟ್ರಾನ್‌, ರದಫ‌ìಡ್‌ ಸಾದರಪಡಿಸಿದ ಪರಮಾಣು ನ್ಯೂಕ್ಲಿಯಸ್‌ ಹಾಗೂ ನ್ಯೂಕ್ಲೀಯ ಕ್ರಿಯೆ, ಮ್ಯಾಕ್ಸ್‌ಪ್ಲಾಂಕ್‌ ಮಂಡಿಸಿದ ಕ್ವಾಂಟಮ್‌ ಸಿದ್ಧಾಂತ, ಐನ್‌ಸ್ಟೈನ್‌ನ ದ್ರವ್ಯರಾಶಿ ಮತ್ತು ಚೈತನ್ಯಗಳ ನಡುವಿನ ಸಂಬಂಧವನ್ನು ನಿರೂಪಿಸುವ ಸಮೀಕರಣ, ನೀಲ್ಸ್‌ಬೋರನ ಹೈಡ್ರೊಜನ್‌ ಪರಮಾಣು ಮಾದರಿ, ಜೇಮ್ಸ್‌ ಚಾಡ್ವಿಕ್‌ ನೀಡಿದ ನ್ಯೂಟ್ರಾನ್‌ ಬಗೆಗಿನ ಪ್ರಾಯೋಗಿಕ ಪುರಾವೆ, ನ್ಯೂಕ್ಲೀಯ ವಿದಳನ ಮತ್ತು ನ್ಯೂಕ್ಲೀಯ ಸಮ್ಮಿಲನಗಳಿಂದಾಗುವ ಶಕ್ತಿಯ ಬಿಡುಗಡೆ, ಮುಂತಾದುವುಗಳು ವಿಜ್ಞಾನದ ಗತಿಯನ್ನೇ ಬದಲಾಯಿಸಿದವು. ಹಲವು ಪ್ರಯೋ ಗಗಳ ಫ‌ಲಿತಾಂಶಗಳನ್ನು ವಿವರಿಸಲು ಹೊಸ ಸಿದ್ಧಾಂತಗಳು ಬೇಕಾದವು. ಅದರ ಪರಿಣಾಮವಾಗಿ ಪರಮಾಣು ವಿಗೆ ಒಳರಚನೆ ಇದೆ, ಅದರಲ್ಲಿ ಎಲೆಕ್ಟ್ರಾನ್‌, ಪ್ರೋಟಾನ್‌ ಮತ್ತು ನ್ಯೂಟ್ರಾನ್‌ಗಳಷ್ಟೇ ಅಲ್ಲದೆ ಇನ್ನೂ ಹಲವಾರು ಉಪಕಣಗಳಿವೆ. ಒಂದೇ ಧಾತು ಬೇರೆ ಬೇರೆ ತೂಕದ ಪರಮಾಣುಗಳನ್ನು ಅಂದರೆ ಸಮಸ್ಥಾನಿ ಗಳನ್ನು (isotopes) ಪಡೆದಿರಲು ಸಾಧ್ಯ, ನ್ಯೂಕ್ಲೀಯ ಕ್ರಿಯೆ ಯಿಂದ ಒಂದು ಧಾತುವನ್ನು ಇನ್ನೊಂದು ಧಾತುವಾಗಿ ಪರಿವರ್ತಿ ಸಬಹುದು ಎಂಬಿತ್ಯಾದಿ ಸಂಗತಿಗಳು ದೃಢವಾದುವು. ಈ ರೀತಿ ಸುಮಾರು ಎರಡು ಸಾವಿರ ವರ್ಷ ಚಾಲ್ತಿಯಲ್ಲಿದ್ದ ಅಣು ಕಲ್ಪನೆ ಆಧರಿತ ಕಣ ಸಿದ್ಧಾಂತ ನೇಪಥ್ಯಕ್ಕೆ ಸರಿಯಿತು.

“ಫ್ಲೊಜಿಸ್ಟನ್‌ ತತ್ವ’ದ ಅವಸಾನ
ದಹನ ಕ್ರಿಯೆಗೆ ವಸ್ತುವಿನಲ್ಲಿ ಹುದುಗಿರುವ “ಫ್ಲೊಜಿಸ್ಟನ್‌’ ಎಂಬ ತೂಕ ರಹಿತ ಧಾತು ಕಾರಣವೆಂದು ಹಿಂದೆಲ್ಲಾ ವಿವರಿಸಲಾಗುತ್ತಿತ್ತು. ವಸ್ತು ದಹಿಸಿದಾಗ‌ ಅದರಲಿದ್ದ “ಫ್ಲೊಜಿಸ್ಟನ್‌’ ಅನ್ನು ಕಳೆದುಕೊಂದು ವಿಶಿಷ್ಟವಾದ ಭಸ್ಮ ಉಳಿಸುವುದು ಎಂದು ಆಗಿನವರು ನಂಬಿದ್ದರು. ಅಂದಿನ ಖ್ಯಾತ ಅನ್ವೇಷಕರಾದ ಕಾರ್ಲ್ ವಿಲ್‌ಹೆಮ್‌ ಶೀಲೆ, ಜೊಸೆಫ್ ಪ್ರೀಸ್ಟೆ, ಹೆನ್ರಿ ಕೇವಂಡಿಶ್‌ ಮುಂತಾದವರು “ಫ್ಲೊಜಿಸ್ಟನ್‌ ಸಿದ್ಧಾಂತದ’ ಪ್ರತಿಪಾದಕರಾಗಿದ್ದವರು. ಆದರೆ ಯಾವುದೇ ಲೋಹ ದಹಿಸಿದಾಗ ಉಳಿಯುವ ಭಸ್ಮದ ತೂಕ, ಲೋಹದ ತೂಕಕ್ಕಿಂತ ಯಾಕೆ ಜಾಸ್ತಿಯಾಯಿತು ಎಂದು ಕರಾರುವಕ್ಕಾಗಿ ವಿವರಿಸಲು ಫ್ಲೊಜಿಸ್ಟನ್‌ ಸಿದ್ಧಾಂತ ವಿಫ‌ಲವಾಯಿತು.

ವಸ್ತುಗಳುಉರಿಯುವುದು, ಸಿಡಿಮದ್ದು ಸ್ಫೋಟಗೊಳ್ಳುವುದು, ಲೋಹಗಳಿಗೆ ತುಕ್ಕು ಹಿಡಿಯುವುದು, ಪ್ರಾಣಿಗಳ ಉಸಿರಾಟ, ಇವೆಲ್ಲಾ ವಿಭಿನ್ನ ವೇಗದಲ್ಲಿ ನಡೆಯುವ ದಹನಕ್ರಿಯೆಗಳೆಂದು ಜಗತ್ತಿಗೆ ಸಾದರ ಪಡಿಸಿದ್ದು ಫ್ರೆಂಚ್‌ ಅನ್ವೇಷಕ ಆಂಟಿನ್‌ ಲಾರೆಂಟ್‌ ಲೆವಾಸ್ಯೆ(1743-1794).

ಮುಚ್ಚಿದ ಪಾತ್ರೆಯಲ್ಲಿ ರಾಸಾಯನಿಕ ಕ್ರಿಯೆ ನಡೆದಾಗ ಒಟ್ಟಾರೆ ತೂಕದಲ್ಲಿ ಬದಲಾವಣೆ ಆಗುವುದಿಲ್ಲ ಎಂದು ಲೆವಾಸ್ಯೆ ಪ್ರಚುರ ಪಡಿಸಿದ. ರಸ ಸಿಂಧೂರವನ್ನು (ರೆಡ್‌ ಮರ್ಕ್ನೂರಿಕ್‌ ಓಕ್ಸೆ„ಡ್‌)ಉಬ್ಬು ಮಸೂರದಿಂದ ಸೂರ್ಯ ರಶ್ಮಿಯನ್ನು ಏಕಾಗ್ರಗೊಳಿಸಿ ಕಾಯಿಸಿದಾಗ ಪಾದರಸ ಮತ್ತು ಒಂದು ದಹನ ಪ್ರೇರಕ ಅನಿಲ ಬಿಡುಗಡೆ ಆಗುವುದೆಂದು ಪ್ರೀಸ್ಟಿ ತೋರಿಸಿಕೊಟ್ಟದ್ದ. ಆ ದಹನ ಪ್ರೇರಕ ಅನಿಲ ಒಂದು ಮೂಲಧಾತುವೆಂದು ತೋರಿಸಿ ಅದಕ್ಕೆ “ಆಕ್ಸಿಜನ್‌’ ಎಂದು ಲೆವಾಸ್ಯೆ ನಾಮಕರಣ ಮಾಡಿದ. ಪಾದರಸ
ವನ್ನು ಕಾಯಿಸಿದಾಗ “ಆಕ್ಸಿಜನ್‌’ ಜತೆ ಸಂಯೋಗಗೊಂಡುಲೋಹ ಸಂಯುಕ್ತ(ಆಕ್ಸೆ„ಡ್‌)ಉಂಟಾಗುವುದನ್ನು ವಿವರಿಸಿದ. ಅದೇ ರೀತಿ, ಕ್ಯಾವೆಂಡಿಷ್‌ ಕಂಡು ಹಿಡಿದ ದಹ್ಯ ಅನಿಲವನ್ನೇ ಫ್ಲೊಜಿಸ್ಟನ್‌ ಎಂದು ತಪ್ಪಾಗಿ ಅರ್ಥೈಸಲಾದಾಗ, ಲೆವಾಸ್ಯೆ ಅದೊಂದು ಧಾತುವೆಂದು ತೋರಿಸಿ ಅದಕ್ಕೆ ಹೈಡ್ರೊಜನ್‌ ಎಂದು ಹೆಸರಿಟ್ಟ. ಈ ರೀತಿ ಆಳವಾಗಿ ಬೇರೂರಿದ್ದ ಆಲ್ಕೆಮಿಯ ಹುಸಿ ನಂಬಿಕೆಯನ್ನು ನಿವಾರಿಸಿ ರಸವಿದ್ಯೆಯನ್ನು ರಸಾಯನ ಶಾಸ್ತ್ರವನ್ನಾಗಿಸಿ, ಅದನ್ನು ಗುಣಾತ್ಮಕ (ಕ್ವಾಲಿಟೇಟಿವ್‌) ನೆಲೆಯಿಂದ ಪರಿಮಾಣಾತ್ಮಕ (ಕ್ವಾಂಟಿ ಟೇಟಿವ್‌) ವಿಜ್ಞಾನವನ್ನಾಗಿ ಉನ್ನತೀಕರಿಸಿದ್ದು ಲೆವಾಸ್ಯೆ. “ಫ್ಲೊಜಿಸ್ಟನ್‌ ಸಿದ್ಧಾಂತವನ್ನು ನಿರ್ನಾಮ ಮಾಡಿ ದಹನದ ನಿಜ ಸ್ವರೂಪವನ್ನು ಕಂಡು ಹಿಡಿದದ್ದು ರಸಾಯನ ಶಾಸ್ತ್ರದ ಇತಿಹಾಸದಲ್ಲಾದ ಅತ್ಯಂತ ದೊಡ್ಡಕ್ರಾಂತಿ’ ಎಂದು ಇತಿಹಾಸಕಾರರು ಬಣ್ಣಿಸಿದ್ದಾರೆ.

ಬುಡಮೇಲಾದ “ಜೀವ ಶಕ್ತಿವಾದ’
ಸಾವಯವ ರಸಾಯನ ವಿಜ್ಞಾನ ಮತ್ತು ನಿರವಯವರಸಾಯನ ವಿಜ್ಞಾನ ಎಂಬ ವಿಂಗಡನೆಯ ಪರಿಕಲ್ಪನೆಯನ್ನು ಬರ್ಜೀಲಿಯಸ್‌ 1806ರಲ್ಲಿ ಮಂಡಿಸಿದ. “ಜೀವಜನ್ಯ ಸಂಯುಕ್ತಗಳ ನಿರ್ಮಾಣದಲ್ಲಿ ವಿಶೇಷ ಶಕ್ತಿ ಅಡಗಿರುತ್ತದೆ. ಆ ಶಕ್ತಿಯನ್ನು ಜೀವಿಗಳ ಮೂಲಕ ಮಾತ್ರ ಒದಗಿಸಲು ಸಾಧ್ಯ. ಆದ್ದರಿಂದ ಅಜೈವಿಕ ವಸ್ತುಗಳಿಂದ ಸಾವಯವ ಸಂಯುಕ್ತಗಳನ್ನು ತಯಾರಿಸುವುದು ಅಸಾಧ್ಯ’ ಎಂಬ ನಂಬಿಕೆ ಬೇರೂರಿತ್ತು. ಈ ರೀತಿಯ ನಂಬಿಕೆಯು ರಸಾಯನ ವಿಜ್ಞಾನದ ಪ್ರಗತಿಯನ್ನು ಬಹುಕಾಲ ಕುಂಠಿತಗೊಳಿಸಿತ್ತು.

ವಿಶೇಷವೆಂದರೆ ಈ ವಾದವನ್ನು ಬುಡಮೇಲು ಮಾಡಿದವನು ಫ್ರೆಡರಿಕ್‌ ವೊØàಲರ್‌(1828), ಅದೂ ತನ್ನ ಅತ್ಯಂತ ಸರಳ ಪ್ರಯೋಗದಿಂದ! ಪ್ರಾಣಿಗಳ ಮೂತ್ರದಲ್ಲಿರುವ ಸಾವಯವ ಸಂಯುಕ್ತ ಯೂರಿಯಾವನ್ನು ಪ್ರಥಮ ಬಾರಿಗೆ ಕೃತಕವಾಗಿ ಸಂಶ್ಲೇಷಣೆ ಮಾಡಿದ. ಅಮೋನಿಯಂ ಸಯನೇಟ್‌ ಎಂಬ ನಿರವಯವ ಲವಣದ ನೀರಿನ ದ್ರಾವಣವನ್ನು ಕಾಯಿಸಿದಾಗ ಸಾವಯವ ವಸ್ತುವಾದ ಯೂರಿಯಾ ಉತ್ಪತ್ತಿ ಆಯಿತು. ಸಾವಯವ ಸಂಯುಕ್ತಗಳು ಕೇವಲ ಜೀವ ಶಕ್ತಿಯಿಂದ ಮಾತ್ರ ಸೃಷ್ಟಿಯಾಗಬಲ್ಲವೆಂಬ ಆವರೆಗಿನ ನಂಬಿಕೆಯನ್ನು ಈ ಪ್ರಯೋಗ ತೊಡೆದು ಹಾಕಿತು. ಅಲ್ಲದೆ ಜೀವ ವಿಜ್ಞಾನ ಮತ್ತು ರಸಾಯನ ವಿಜ್ಞಾನದ ನಡುವೆ ಸಂಪರ್ಕ ಕೊಂಡಿಯನ್ನು ಕಲ್ಪಿಸಿತು. ವೊØàಲರನ ಪ್ರಯೋಗವು ಜೀವ ಮೂಲದಿಂದ ಪಡೆದ ವಸ್ತುಗಳಿಗೂ, ಅಜೈವಿಕ ರಾಸಾಯನಿಕ ವಸ್ತುಗಳಿಗೂ ಯಾವ ರೀತಿಯ ವ್ಯತ್ಯಾಸವೂ ಇಲ್ಲವೆಂದು ಸ್ಪಷ್ಟಪಡಿಸಿದ್ದು ಮಾತ್ರವ ಲ್ಲದೆ ಸಾವಯವ ರಸಾಯನ ವಿಜ್ಞಾನ ಬೃಹದಾಕಾರವಾಗಿ ಬೆಳೆಯಲು ಕಾರಣವಾಯಿತು.

ಜಡ ಅನಿಲಗಳು ಜಡವಲ್ಲ
ಪ್ರಕೃತಿಯಲ್ಲಿ ಇತರ ಧಾತುಗಳೊಡನೆ ಸಂಯೋಗ ಹೊಂದದೆ ಸ್ವಾಭಾವಿಕ ರೂಪದಲ್ಲೇ ದೊರಕುವ ಪ್ಲಾಟಿನಮ್‌ ಮತ್ತು ಚಿನ್ನಗಳು “ರಾಜಲೋಹ’ಗಳಾದರೆ ಬಣ್ಣ-ವಾಸನೆ ಇಲ್ಲದ ರಾಸಾಯನಿಕ ಜಡತೆಯ ನಿಸರ್ಗದತ್ತ ಹೀಲಿಯಮ್‌, ನಿಯಾನ್‌, ಆರ್ಗಾನ್‌, ಕ್ರಿಪಾrನ್‌, ಕ್ಸೀನಾನ್‌, ರೇಢಾನ್‌ ಇವುಗಳು “ರಾಜಾನಿಲ’/ “ಜಡ ಅನಿಲ’ಗಳು.ರಾಜಾನಿಲಗಳ ಸರಣಿಯನ್ನು ಪತ್ತೆ ಹಚ್ಚಲು ಮೊದಲಾದದ್ದು ಸಾಂದ್ರತೆಯ ನಿಖರ ಲೆಕ್ಕಾಚಾರ ವಿಧಾನದಿಂದ ಮತ್ತವು ಧಾತುಗಳೆಂದು ಸ್ಥಿರಪಟ್ಟದ್ದು “ಎಮಿಶನ್‌ ಸ್ಪೆಕ್ಟ್ರಾ’ ವಿಧಾನದಿಂದ. ದಿವ್ಯ ನಿಷ್ಕ್ರಿಯತೆಯ ಮೊದಲ ಐದು ವಿರಳ ಅನಿಲ ಧಾತುಗಳನ್ನು ಪ್ರಕೃತಿ ಗರ್ಭದಿಂದ ಹೊರ ತೆಗೆದು ಬೆಳಕಿಗೆ ತಂದ ಬ್ರಿಟಿಷ್‌ ವಿಜ್ಞಾನಿ ವಿಲಿಯಮ್‌ ರ್ಯಾಮ್‌ಸೆಯ (1896) ಸಾಮರ್ಥ್ಯ ಕಲ್ಪನೆಗೂ ಮಿಗಿಲಾದದ್ದು. ಆ ಶೋಧನೆಗಾಗಿ 1904ರ ನೋಬೆಲ್‌ ಬಹುಮಾನವನ್ನು ನೀಡಲಾಯಿತು. ರಾಜಾನಿಲಗಳಿಗೆ ಅವುಗಳ ಜಡತೆಯನ್ನಾಧರಿಸಿದ ಕೆಲವು ಉಪಯೋಗಗಳಿವೆ.

ವಿದ್ಯುತ್‌ ಬಲುºಗಳಲ್ಲಿ ತುಂಬಲು ಆರ್ಗಾನ್‌ ಬಳಸಲಾಯಿತು. ರಾತ್ರಿಯ ವೇಳೆ ನಳನಳಿಸುವ ಜಾಹೀರಾತಿನ ನಳಿಕೆ ದೀಪಗಳಲ್ಲಿ (ನಿಯಾನ್‌ ದೀಪಗಳು), ಬೀದಿ ದೀಪಗಳಲ್ಲಿ ನಿಯಾನ್‌ ಅನಿಲವನ್ನು ಉಪಯೋಗಿಸಲಾಯಿತು. ಆಕಾಶ ಬುಟ್ಟಿಗಳಲ್ಲಿ ತುಂಬುವುದಕ್ಕೆ ಹೀಲಿಯಮ್‌ ಬಳಕೆಗೆ ಬಂದಿತು. ಈಜುಗಾರರು ಅನುಭವಿಸುವ “ಕೈಸಾನ್‌’ ಎಂಬ ಒಂದು ಬಗೆಯ ಪಾರ್ಶ್ವ ವಾಯುವಿನ ನಿವಾರಣೆಗೂ ಹೀಲಿ ಯಂನ್ನು ಬಳಸುತ್ತಾರೆ.

ಜಡ ಅನಿಲದ ಪರಮಾಣುವಿನ ಅತ್ಯಂತ ಹೊರ ಕವಚದ ಎಲೆಕ್ಟ್ರಾನ್‌ ಸರಣಿಯ ಪೂರ್ಣ ತುಂಬಿಕೆಯಿಂದೊದಗಿದ ವಿಶೇಷ ಸ್ಥಿರತೆಯಿಂದಾಗಿ ಅದು ಎಲೆಕ್ಟ್ರಾನ್‌ಗಳನ್ನು ದಾನ ಮಾಡಲು ಅಥವಾ ಸ್ವೀಕರಿಸಲು ಅಸಮರ್ಥವಾಗಿ ಜಡ ಎಂದು ತಿಳಿಯಲಾ ಯಿತು. ರಸಾಯನ ವಿಜ್ಞಾನಿಗಳು ಇವುಗಳಲ್ಲಿ ರಾಸಾಯನಿಕ ಕ್ರಿಯೆಯ ಪಟುತ್ವವನ್ನುಂಟು ಮಾಡುವುದಕ್ಕಾಗಿ ಶತ ಪ್ರಯತ್ನವನ್ನೇ ಮಾಡಿದರು. ಆದರೂ ಆ ಅನಿಲಗಳು ಯಾವುದಕ್ಕೂ ಜಗ್ಗಲಿಲ್ಲ. ಬಹಳ ಕಾಲದವರೆಗೆ ರಸಾಯನ ವಿಜ್ಞಾನದ ಚಟುವಟಿಕೆಯ ವಲಯದಿಂದ ಹೊರಗುಳಿದಿದ್ದ ಜಡ ಅನಿಲಗಳ ಸಮಸ್ಯೆಗೆ ಆಶ್ಚರ್ಯಕರ ಪರಿಹಾರ ಕಂಡುಹಿಡಿದದ್ದು ಕೆನಡಾದ ನೀಲ್‌ ಬಾರ್ಟ್‌ಲೆಟ್‌ 1962ರಲ್ಲಿ. ಪರಮಾಣುವಿನ ಗಾತ್ರ ಹೆಚ್ಚಿದ ಹಾಗೆ ನ್ಯೂಕ್ಲಿಯಸ್‌ಗೂ ಹೊರ ಕವಚದ ಎಲೆಕ್ಟ್ರಾನುಗಳಿಗೂ ಆಕರ್ಷಣೆ ಕಡಿಮೆ. ಸೂಕ್ತ ವಿದ್ಯುದಾಕರ್ಷಕ ಪರಿಸರದಲ್ಲಿ ಸಂಯುಕ್ತ ತಯಾರಿಸಲು ಸಾಧ್ಯವಿರಬಹುದೆಂಬ ತರ್ಕ ಮುಂದಾಯಿತು. ಆದ್ದರಿಂದ ಅಧಿಕ ಗಾತ್ರದ ಜಡ ಅನಿಲಗಳನ್ನೆ ಪ್ರಯೋಗಕ್ಕೆ ಒಳಪಡಿಸಲಾಯಿತು. ಬಾರ್ಟ್‌ಲೆಟ್‌ ಅತ್ಯಂತ ಚೈತನ್ಯದಾಯಕ ರಾಸಾಯನಿಕ ಪ್ಲಾಟಿನಮ್‌ ಹೆಕ್ಸಾಫ್ಲೋರೈಡನ್ನು ಬಳಸಿ ಕ್ಸಿನಾನ್‌ ಪರಮಾಣುವಿನ‌ ಒಂದು ಎಲೆಕ್ಟ್ರಾನನ್ನು ಕಳಚಿ ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಜಡ ಅನಿಲದ ಸಂಯುಕ್ತ ಕ್ಸಿನಾನ್‌ ಹೆಕ್ಸಾಫ್ಲೊರೋ ಪ್ಲಾಟಿನೇಟ್‌ ಸೃಷ್ಟಿಸುವುದರೊಂದಿಗೆ ರಾಜಾನಿಲಗಳ ಎಲೆಕ್ಟ್ರಾನ್‌ ಹೊರಕವಚವು ಅಗಮ್ಯವೆಂಬ ಮಿಥ್ಯೆಯು ಕುಸಿದು ಬಿದ್ದಿತು. ಈ ರೀತಿ “ಜಡ ಅನಿಲಗಳ ರಸಾಯನ ವಿಜ್ಞಾನ’ವೆಂಬ ಹೊಸ ಅಧ್ಯಾಯದ ಪ್ರಾರಂಭವಾ ದದು. ಇದೀಗ ಸುಮಾರು 40ಕ್ಕೂ ಹೆಚ್ಚು ರಾಜಾನಿಲಗಳ ಸಂಯುಕ್ತಗಳನ್ನು ತಯಾರಿಸಲಾಗಿದೆ.

ಈ ಉದಾಹರಣೆಗಳು ರಸಾಯನ ವಿಜ್ಞಾನದ ಇತಿಹಾಸ ದಿಂದ ಲಭ್ಯವಾದುವು. ಇಂದು ಮಿಥ್ಯೆ ಎನಿಸುವ ಸಿದ್ಧಾಂತಕ್ಕೂ ಐತಿಹಾಸಿಕ ಮಹತ್ವ ಇದೆ. ವಿಜ್ಞಾನದ ಇತರ ಪ್ರಕಾರಗಳಲ್ಲಿಯೂ ಇದೇ ರೀತಿಯ ಅನೇಕ ನಿದರ್ಶನಗಳಿವೆ. ಈ ರೀತಿಯ ಅವಲೋಕನ, ವಿಜ್ಞಾನವು ವಿವಿಧ ಹಂತಗಳಲ್ಲಿ ಪಡೆದ ತಿರುವುಗಳು, ಹೊಂದಿರುವ ಪ್ರಗತಿ ಹಾಗೂ ಮುಂದೆ ಕ್ರಮಿಸಬಹುದಾದ ದಾರಿಯ ಮೇಲೆ ಬೆಳಕು ಚೆಲ್ಲುತ್ತದೆ. ಸತ್ಯ ಸಿದ್ಧಾಂತದೆಡೆಗೆ ಸಾಗುವ ದಾರಿಯಲ್ಲಿ ಮಿಥ್ಯೆಯ ಮೆಟ್ಟಲು ಗಳಿರುವುದಂತೂ ನಿಜ. ಆದ್ದರಿಂದ ಮಿಥ್ಯಾಕಲ್ಪನೆ ಹಾಗೂ ಅದರ ಸೋಲಿಗೆ ಸಹಾನುಭೂತಿ ಇರಲಿದೆ. ಆದರೆ ಮರೆಯದಿರೋಣ, ಇಂದಿನ ಸತ್ಯವು ನಾಳೆಯ ಮಿಥ್ಯೆ ಆಗಬಾರದೆಂದಿಲ್ಲವಲ್ಲ!

– ಡಾ| ಬಿ. ಎಸ್‌. ಶೇರಿಗಾರ್‌

ಟಾಪ್ ನ್ಯೂಸ್

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.