ವಿಶೇಷ ಸ್ಥಾನಮಾನ ಕೊಡಿ, ಸಿಕ್ಖ್ ತೀವ್ರವಾದಿಗಳಿಂದ ಒತ್ತಾಯ
Team Udayavani, Feb 28, 2018, 11:15 AM IST
ಹೊಸದಿಲ್ಲಿ: ಸಿಕ್ಖ್ ಸಮುದಾಯದ ತೀವ್ರವಾದಿಗಳ ಗುಂಪೊಂದು ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ಗೆ ಕ್ರೈಸ್ತ ಸಮುದಾಯದ ಪರಮೋಚ್ಚ ಧರ್ಮಗುರು ಪೋಪ್ ಇರುವ ಸ್ಥಳ ವ್ಯಾಟಿಕನ್ ಸಿಟಿಗೆ ಸಮಾನವಾದ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿ ಸಿದೆ. ಇದರ ಜತೆಗೆ ಸಮುದಾಯದ ಪವಿತ್ರ ಕ್ಷೇತ್ರಗಳಾಗಿರುವ ಅಕಾಲ್ ತಖ್¤, ಹರ್ಮಂದರ್ ಸಾಹಿಬ್ಗೂ ಅದೇ ಮಾದರಿಯ ಮಾನ್ಯತೆ ನೀಡಬೇಕು ಎಂದು ಮನವಿ ಮಾಡಿದೆ.
1984ರಲ್ಲಿ ನಡೆಸಲಾಗಿದ್ದ ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಹಾಲಿ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ಕ್ಷಮೆ ಯಾಚಿಸಬೇಕು ಮತ್ತು ಬ್ಲೂ ಸ್ಟಾರ್ ಕಾರ್ಯಾಚರಣೆ ಮತ್ತು ಎಲ್ಲ ರೀತಿಯ ಸಿಕ್ಖ್ ವಿರೋಧಿ ದಂಗೆಗಳ ಬಗ್ಗೆ ಮುಕ್ತ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದೆ. ಈ ಬಗ್ಗೆ ಕೇಂದ್ರ ಸರಕಾರದ ಜತೆ ನಡೆಸಲಾಗಿರುವ ರಹಸ್ಯ ಮಾತುಕತೆ ವೇಳೆ ಬೇಡಿಕೆ ಮುಂದಿಡಲಾಗಿದೆ ಎಂದು “ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.
2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಯುನೈಟೆಡ್ ಕಿಂಗ್ಡಮ್ಗೆ ಭೇಟಿ ನೀಡು ವುದಕ್ಕಿಂತ ಮೊದಲು ಅನೌಪಚಾರಿಕವಾಗಿ ಮಾತುಕತೆಗೆ ಚಾಲನೆ ನೀಡಲಾಗಿತ್ತು. ಭೇಟಿಯ ಬಳಿಕ ಅಧಿಕೃತವಾಗಿ ಮಾತುಕತೆಗೆ ಚಾಲನೆ ನೀಡಲಾಗಿತ್ತು. ಅದಕ್ಕೆ ಪೂರಕವಾಗಿ ಸಿಕ್ಖ್ ಸಮುದಾಯದ 20 ಮಂದಿ ಹೋರಾಟಗಾರರಿಗೆ ಭಾರತ ಪ್ರವೇಶಕ್ಕೆ ಇರುವ ನಿಷೇಧ ಹಿಂಪಡೆಯಬೇಕು ಮತ್ತು ಭಾರತದ ಕಾರಾಗೃಹದಲ್ಲಿರುವ 20 ಮಂದಿಯನ್ನು ಬಿಡುಗಡೆ ಮಾಡಬೇಕು ಎಂಬ ಪೂರ್ವಷರತ್ತು ಹಾಕಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.