ಸವಿರುಚಿ ಕ್ಯಾಂಟೀನ್‌ಗೆ ಚಾಲನೆ


Team Udayavani, Feb 28, 2018, 11:53 AM IST

saviruchi.jpg

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ “ಸವಿರುಚಿ ಸಂಚಾರಿ ಕ್ಯಾಂಟೀನ್‌’ ಲೋಕಾರ್ಪಣೆ ಹಾಗೂ ವಿಕಲಚೇತನರಿಗೆ “ಯಂತ್ರಚಾಲಿತ ದ್ವಿಚಕ್ರ ವಾಹನಗಳ’ ವಿತರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ವಿಧಾನಸೌಧದ ಮುಂಭಾಗ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 16 ಸವಿರುಚಿ ಸಂಚಾರಿ ಕ್ಯಾಂಟೀನ್‌ಗಳಿಗೆ ಹಸಿರು ನಿಶಾನೆ ತೋರಿಸಿದ ಮುಖ್ಯಮಂತ್ರಿಯವರು ಇದೇ ವೇಳೆ ಆಯ್ದ 100 ವಿಕಲಚೇತನ ಫ‌ಲಾನುಭವಿಗಳಿಗೆ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಿದರು.

ಬಳಿಕ ಮಾತನಾಡಿದ ಅವರು, ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಸ್ತ್ರೀಶಕ್ತಿ ಸಂಘಗಳ ಉಸ್ತುವಾರಿಯಲ್ಲಿ ಮಹಿಳಾ ಒಕ್ಕೂಟಗಳ ಮೂಲಕ ಸವಿರುಚಿ ಸಂಚಾರಿ ಕ್ಯಾಂಟೀನ್‌ ಆರಂಭಿಸಲಾಗುತ್ತಿದೆ. ಇದರಲ್ಲಿ ರಿಯಾಯಿತಿ ದರದಲ್ಲಿ ಊಟ, ಉಪಹಾರ ದೊರೆಯಲಿದೆ.

ಸ್ತ್ರೀಶಕ್ತಿ ಸಂಘದವರು ತಯಾರಿಸುವ ಆಹಾರ ಪದಾರ್ಥಗಳನ್ನು ಕಡಿಮೆ ದರದಲ್ಲಿ ಒದಗಿಸುವುದರಿಂದ ಬಡವರು, ಶ್ರಮಿಕರಿಗೆ ಅನುಕೂಲವಾಗಲಿದೆ. ಸವಿರುಚಿ ಸಂಚಾರಿ ಕ್ಯಾಂಟೀನ್‌ ನಿರ್ಮಾಣಕ್ಕೆ ಸ್ತ್ರೀಶಕ್ತಿ ಸಂಘಗಳಿಗೆ 10 ಲಕ್ಷ ರೂ. ಬಡ್ಡಿರಹಿತ ಸಾಲ ಸೌಲಭ್ಯ ಸಿಗಲಿದೆ ಎಂದರು.

ಸ್ಕೂಟರ್‌ ವಿತರಣೆ: ಅಲ್ಲದೇ ನಾಲ್ಕು ಸಾವಿರ ವಿಕಲಚೇತನರಿಗೆ ಸ್ಕೂಟರ್‌ಗಳನ್ನು ವಿತರಿಸಲಾಗುವುದು ಎಂದು ಕಳೆದ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಅದರಂತೆ ಸಾಂಕೇತಿಕವಾಗಿ 100 ಮಂದಿ ಆಯ್ದ ವಿಲಕಚೇತನ ಫ‌ಲಾನುಭವಿಗಳಿಗೆ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಲಾಗಿದೆ.

ಇದರಿಂದ ವಿಕಲಚೇತನರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ಈ ವೇಳೆ ಸಚಿವರಾದ ಉಮಾಶ್ರೀ, ಕೆ.ಜೆ. ಜಾರ್ಜ್‌, ಎಚ್‌.ಎಂ. ರೇವಣ್ಣ, ಮೇಯರ್‌ ಸಂಪತ್‌ರಾಜ್‌, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್‌ ಮತ್ತಿತರರು ಇದ್ದರು.

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

16-cm

Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ

15-ccb

Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್‌ ಸಾಧ್ಯತೆ

14-fruad

Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.