BBMP ಬಜೆಟ್ 2018 ಮಂಡನೆ;ಈ ಬಾರಿ ಬೆಂಗಳೂರಿಗರಿಗೆ ಸಿಕ್ಕಿದ್ದೇನು?
Team Udayavani, Feb 28, 2018, 12:02 PM IST
ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಆಡಳಿತದ ಮೂರನೇ ಬಜೆಟ್ ಅನ್ನು(ಇದನ್ನೂ ಓದಿ: ಬಿಬಿಎಂಪಿ ಬಜೆಟ್ ಇಂದು ಮಂಡನೆ) ಬುಧವಾರ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ ಅವರು ಮಂಡಿಸಿದರು.
ಜೆಡಿಎಸ್ ಸದಸ್ಯ ಹಾಗೂ ತೆರಿಗೆ ಹಾಗೂ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್ ಅವರು 2018-19ನೇ ಸಾಲಿಗೆ 9300 ಕೋಟಿ ರೂ.ಗಳ ಗಾತ್ರದ ಬಜೆಟ್ ಮಂಡಿಸಿದ್ದಾರೆ.
ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಮಂಡಿಸಿರುವ ಈ ಬಜೆಟ್ ನಲ್ಲಿ ಬಿಬಿಎಂಪಿ ಎಲ್ಲಾ ಕಾರ್ಪೋರೇಟರ್ ಗಳಿಗೆ ಟ್ಯಾಬ್ ಭಾಗ್ಯ, ಪಾಲಿಕೆ ಸದಸ್ಯರ ವೈದ್ಯಕೀಯ ಅನುದಾನ 6ಲಕ್ಷಕ್ಕೆ ಹೆಚ್ಚಳ ಮಾಡಿದೆ.
ಬಿಬಿಎಂಪಿ ಬಜೆಟ್ ಹೈಲೈಟ್ಸ್:
ಪಾಲಿಕೆ ಗಣ್ಯ ಅತಿಥಿಗಳ ಉಪಚಾರಕ್ಕೆ 60 ಲಕ್ಷ ರೂಪಾಯಿ ಮೀಸಲು
ಪೌರ ಕಾರ್ಮಿಕರಿಗೆ ಸುರಕ್ಷತಾ ಸಾಧನಾ ಕಿಟ್
ಬಜೆಟ್ ನಲ್ಲಿ ನೀರು,ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ
ಬೆಂಗಳೂರು ನಗರದ 400 ಸ್ಥಳಗಳಲ್ಲಿ ಉಚಿತ ವೈಫೈ ವ್ಯವಸ್ಥೆ
ಪಾಲಿಕೆ ಸಂಪನ್ಮೂಲ ಸೋರಿಕೆ ತಡೆಗೆ ಕಂದಾಯ ಜಾಗೃತಿ ದಳ
ನಗರದ ಕೆರೆಗಳ ನಿರ್ವಹಣೆಗೆ 10 ಕೋಟಿ
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆರೋಗ್ಯ ಠೇವಣಿ
ಶಿಕ್ಷಣಕ್ಕೆ 5 ಕೋಟಿ ರೂಪಾಯಿ ಮೀಸಲು
ಆರೋಗ್ಯ ಕ್ಷೇತ್ರಕ್ಕೆ 98 ಕೋಟಿ ರೂಪಾಯಿ ಮೀಸಲು
ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆಗೆ 15 ಕೋಟಿ ರೂಪಾಯಿ
8 ವಲಯಗಳಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ 5 ಕೋಟಿ ರೂಪಾಯಿ
ಬೆಂಗಳೂರಿನಲ್ಲಿ 150 ಕಿಮೀ ಉದ್ದದ ರಸ್ತೆಗೆ ವೈಟ್ ಟ್ಯಾಪಿಂಗ್
3 ಹೊಸ ಆಂಬುಲೆನ್ಸ್ ಖರೀದಿಗೆ 1 ಕೋಟಿ ರೂಪಾಯಿ
ಶಾಲಾ ಕಾಲೇಜುಗಳಲ್ಲಿ ಕುಡಿಯುವ ನೀರಿಗೆ 5 ಕೋಟಿ ರೂಪಾಯಿ
ಪಿಂಕ್ ಬೇಬಿ ಕಾರ್ಯಕ್ರಮಕ್ಕೆ 1.5 ಕೋಟಿ ರೂಪಾಯಿ ಮೀಸಲು
ಇಂದಿರಾ ಕ್ಯಾಂಟೀನ್ ನಲ್ಲಿ ಜನೌಷಧ ಕೇಂದ್ರ ಸ್ಥಾಪನೆ
ಎಸ್ ಸಿ, ಎಸ್ ಟಿ ಒಂಟಿ ಮನೆ ಯೋಜನೆಗಳಿಗೆ 80 ಕೋಟಿ ರೂಪಾಯಿ
ಮಹಿಳಾ ಕೌಶಲಾಭಿವೃದ್ಧಿಗಾಗಿ ಪ್ರತಿ ವಾರ್ಡ್ ಗೆ 10 ಲಕ್ಷ ರೂಪಾಯಿ
ತೃತೀಯ ಲಿಂಗಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ
ನಗರದಲ್ಲಿ ಶವಗಳ ಸಂರಕ್ಷಣೆಗೆ 40 ಫ್ರೀಜರ್ ಗಳ ವ್ಯವಸ್ಥೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Transport: ಕೆಎಸ್ಸಾರ್ಟಿಸಿ ದಾಖಲೆ: ಒಂದೇ ದಿನ 1.23 ಕೋಟಿ ಮಂದಿ ಪ್ರಯಾಣ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
MUST WATCH
ಹೊಸ ಸೇರ್ಪಡೆ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.