ಮಾಜಿ ಶಾಸಕ; ಬಳಿಕ ಗ್ರಾ.ಪಂ. ಸದಸ್ಯ!
Team Udayavani, Feb 28, 2018, 12:32 PM IST
ಸುಳ್ಯ: ಹಿಂದೆ 1983ರಿಂದ 85ರ ಅವಧಿಯಲ್ಲಿ ಸುಳ್ಯದ ಕ್ಷೇತ್ರದ ಶಾಸಕರಾಗಿದ್ದ ಗುತ್ತಿಗಾರಿನ ಬಾಕಿಲ ಹುಕ್ರಪ್ಪ ಸರಳ ಬದುಕಿನ ಮೂಲಕ ಸುದ್ದಿಯಾದವರು. ಕೆಲವು ತಿಂಗಳ ಹಿಂದೆಯಷ್ಟೇ ನಿಧನರಾದ ಇವರು ಮಾಜಿ ಶಾಸಕನಾದರೂ ಕೂಲಿ ಮಾಡಿ ಜೀವನ ನಿರ್ವಹಿಸುತ್ತಿದ್ದರು. ಮಾಜಿ ಶಾಸಕನಾದ ಬಳಿಕ ಗುತ್ತಿಗಾರು ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ನಾಲ್ಕು ಬಾರಿ ಸದಸ್ಯರಾಗಿ, ಒಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮಾಜಿ ಶಾಸಕ ಗ್ರಾ.ಪಂ. ಚುನಾವಣೆಯ ಅಖಾಡಕ್ಕೆ ಧುಮುಕಿದ್ದು ರಾಜಕೀಯ ಪಡಸಾಲೆಯ ಅಪರೂಪದ ಸಂಗತಿ.
ಯಾವುದೇ ಆಸ್ತಿ, ಅಂತಸ್ತು ಬಯಸದೆ, ಎರಡೂವರೆ ಎಕ್ರೆ ಸ್ಥಳದಲ್ಲಿ ಗುಡಿಸಲಿ ನಂತಿದ್ದ ಸಣ್ಣ ಮನೆಯಲ್ಲಿ 68ರ ವಯಸ್ಸಿನಲ್ಲಿಯೂ ದುಡಿದು ಬದುಕಿದ್ದ ಬಾಕಿಲ ಹುಕ್ರಪ್ಪ ಅಪರೂಪದ ರಾಜಕಾರಣಿ.
1983ರಲ್ಲಿ ಬಿಜೆಪಿಯಿಂದ ಗೆದ್ದ ಬಾಕಿಲ ಹುಕ್ರಪ್ಪ 1985ರಲ್ಲಿ ಜನತಾ ಪಕ್ಷ ಸೇರಿ ಸ್ಪರ್ಧಿಸಿದ್ದರು. ಎದುರಾಳಿ ಕುಶಲ ವಿರುದ್ಧ ಕೇವಲ 793 ಮತ ಗಳ ಅಂತರದಿಂದ ಸೋಲನ್ನುಭವಿಸಿದರು. ಅನಂತರ ಜನತಾಪಕ್ಷ, ಕೆಸಿಪಿ, ಕಾಂಗ್ರೆಸ್, ಜನತಾದಳ, ಜೆಡಿಎಸ್, ಬಿಜೆಪಿ ಹೀಗೆ ಹತ್ತಾರು ಪಕ್ಷ ಬದಲಾಯಿಸಿದ ಪರಿಣಾಮವೋ ಏನೋ, 1985ರ ಬಳಿಕ ಬಾಕಿಲ ಹುಕ್ರಪ್ಪ ಅವರಿಗೆ ಅದೃಷ್ಟ ಖುಲಾಯಿಸಲಿಲ್ಲ.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!
Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್!
Kiran Raj: ಸೂಪರ್ ಹೀರೋ ಆಗಲಿದ್ದಾರೆ ಕಿರಣ್ ರಾಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.