ಕಂಬಾರರ ಸ್ತ್ರೀ ಸಂಪಿಗೆ


Team Udayavani, Feb 28, 2018, 5:45 PM IST

kambara.jpg

ಕನ್ನಡದ ಖ್ಯಾತ ಸಾಹಿತಿ ಚಂದ್ರಶೇಖರ ಕಂಬಾರ ಅವರ ಪತ್ನಿ ಸತ್ಯಭಾಮ ಕಂಬಾರ. ದೊಡ್ಡ ಸಾಹಿತಿಯೊಬ್ಬರ ಪತ್ನಿ ನಾನು ಎಂಬ ಪುಟ್ಟ ಅಹಂ ಕೂಡ ಸತ್ಯಭಾಮ ಅವರಿಗೆ ಇಲ್ಲ. ಅಷ್ಟು ಸರಳ, ಸಂಪನ್ನ ವ್ಯಕ್ತಿತ್ವ ಅವರದ್ದು. ನಮ್ಮೊಡನೆ ಮಾತಿಗೆ ಕುಳಿತ ದಂಪತಿ, ಮಾತಾಡಿದಷ್ಟೂ ಹೊತ್ತು ಪರಸ್ಪರರ ಬಗ್ಗೆ ಮೆಚ್ಚುಗೆ ಸೂಚಿಸಿದರೇ ಹೊರತು ಒಂದು ಅಪದ್ಧ ನುಡಿಯಲಿಲ್ಲ. ಈ ನಡುವೆ ಕಂಬಾರರು ಹೊರಟು ನಿಂತರು, “ಅಕಾಡೆಮಿಗಾ?’ ಎಂದು ಸತ್ಯಭಾಮ ಕೇಳಿದರು. ಹೌದೆಂದಾಗ, “ಚಾಳೀಸು, ಕಚೀìಫ‌ು, ಪೆನ್ನು  ತಗೊಂಡ್ರಾ?’ ಎಂದು ನೆನಪಿಸಿದರು ಸತ್ಯಭಾಮ. “ತಗೊಂಡೆ’ ಎಂದರು ಕಂಬಾರರು. “ಮತ್ತೆ ಕಿವೀದು?’ ಸತ್ಯಭಾಮರಿಂದ ಪ್ರಶ್ನೆ ಬಂತು. “ಅದನ್ನು ಮರೆತೆ ನೋಡು. ನೋಡಿ, ಈಗಲೂ ನನಗೆ ಇದನ್ನೆಲ್ಲಾ ಆಕೀನೇ ನೆನಪಿಸಬೇಕು. ಇಲ್ಲಾಂದ್ರೆ ಒಂದಿಲ್ಲೊಂದು ವಸ್ತು ಮರೆತು ಹೋಗಿ ಇಡೀ ದಿನ ಪೇಚಾಡೊ ಹಾಂಗೆ ಆಗ್ತದ’ ಎಂದರು ಕಂಬಾರರು. ಇಂಥಾ ಅನುರೂಪದ ದಾಂಪತ್ಯ ಅವರದ್ದು.

ನಾನು ನಗರ, ಆಕೆ ಹಳ್ಳಿ
ಕಂಬಾರ:
ರಾಮಾಯಣ, ಮಹಾಭಾರತ, ಜಾನಪದ ಕಥನಗಳಲ್ಲಿ ನನಗಿಂತಲೂ ಆಕೆಗೆ ಹೆಚ್ಚು ಜ್ಞಾನ ಇದೆ. ಆಕೆ ಸಂಗ್ರಹಿಸಿಕೊಟ್ಟ ಜಾನಪದ ಕಥನಗಳನ್ನು ನನ್ನ ಎಷ್ಟೋ ಕೃತಿಗಳಲ್ಲಿ ಬಳಸಿಕೊಂಡಿದ್ದೇನೆ. ಆಕೆಯಲ್ಲಿ ನೆನಪುಗಳ ಸೃಜನಶೀಲತೆ ಇದೆ. ಆಕೆಗೊಂದು ದೃಷ್ಟಿಕೋನ ಇದೆ. ಅದು ಅಪ್ಪಟ ಜನಪದೀಯರ ದೃಷ್ಟಿಕೋನ, ಆ ದೃಷ್ಟಿಕೋನದಿಂದಲೇ ಆಕೆ ನನ್ನ ಕೃತಿಗಳನ್ನು ವಿಮರ್ಶೆ ಮಾಡುತ್ತಾಳೆ. ಅದು ನನ್ನ ಅರಿವನ್ನು ವಿಸ್ತರಿಸಿದೆ. ನಾವಿಬ್ಬರೂ ಹಳ್ಳಿಯಲ್ಲೇ ಬೆಳೆದವರು. ಆದರೆ, ನಾನು ನಗರೀಕರಣಗೊಂಡೆ. ಆಕೆ ಹಾಗೇ ಉಳಿದಳು. ಜನಪದೀಯ ಮೌಲ್ಯಗಳ ಅಪವ್ಯಯ ಅವಳಲ್ಲಿ ಆಗಿಲ್ಲ. ಅದು ಜಾನಪದೀಯರ ದೊಡ್ಡ ಲಕ್ಷಣ. ನಗರ ಮತ್ತು ಹಳ್ಳಿ ಮನಸ್ಸಿನ ನಾವು, ಒಂದೇ ಕಡೆ ಸಂತೋಷದಿಂದ ಬಾಳ್ವೆ ಮಾಡುತ್ತಿದ್ದೇವೆ.

ಅವತ್ತಾಕೆ ಏನು ಮಾತಾಡಿದಳ್ಳೋ ಗೊತ್ತಿಲ್ಲ!
ಕಂಬಾರ: ನಾನು ಅಮೆರಿಕದಿಂದ ಬಂದಮೇಲೆ ರಾಮಾನುಜನ್‌ ದಂಪತಿ ನಮ್ಮ ಮನೆಗೆ ಬಂದಿದ್ದರು. ರಾಮಾನುಜನ್‌ ಪತ್ನಿ ಮಾಲಿ, ರಾಜ್ಯಪಾಲರ ಮಗಳು, ಕೇರಳ ಮೂಲದ ಮಹಿಳೆ. ಆಕೆಗೆ ಕನ್ನಡ ಗೊತ್ತಿರಲಿಲ್ಲ. ಬರುತ್ತಲೇ “ನಿಮ್ಮ ಪತ್ನಿಯನ್ನು ಪರಿಚಯಿಸಿ’ ಎಂದರು. ನಾನು ನನ್ನಾಕೆಯನ್ನು ಕರೆದು ಕೂರಿಸಿ, “ದುಭಾಷಿಯಾಗಿ ನಾನೂ ನಿಮ್ಮ ನಡುವೆ ಕೂರುತ್ತೇನೆ’ ಎಂದೆ. ಆಗ ಆಕೆ, “ಬೇಡ, ಬೇಡ. ನೀವು ರಾಮಾನುಜನ್‌ ಜೊತೆ ಮಾತನಾಡಿ’ ಎಂದು ಹೇಳಿ ನನ್ನ ಪತ್ನಿಯನ್ನು ಹೊರಗೆ ಕರಕೊಂಡು ಹೋದರು. ಮಾತು ಮುಗಿಸಿ ಒಳಗೆ ಬರುತ್ತಾ ಮಾಲಿ ಬಹಳ ಉಲ್ಲಸಿತರಾಗಿದ್ದರು. “ನಿಮ್ಮ ಪತ್ನಿ ಅದ್ಭುತ ಮಹಿಳೆ’ ಎಂದೆಲ್ಲಾ ಹೊಗಳಿದರು. ಸ್ವಲ್ಪವೂ ಕನ್ನಡ ಬಾರದ ಮಹಿಳೆ ಜೊತೆ ನನ್ನ ಹೆಂಡತಿ ಹೇಗೆ ಸಂವಹನ ನಡೆಸಿದಳು ಎಂದು ನನಗೆ ಇವತ್ತಿಗೂ ತಿಳಿದಿಲ್ಲ. ಆಕೆ ಇಂಗ್ಲಿಷ್‌, ಹಿಂದಿ ಓದುತ್ತಾಳೆ ಅಂತ ತಿಳಿದಿತ್ತು. ಸಂವಹನ ಮಾಡಲೂ ಈಕೆಗೆ ಸಾಧ್ಯ ಎಂದು ಅವತ್ತೇ ತಿಳಿದಿದ್ದು.

“ಮೌನ’ದಲ್ಲೇ ಪ್ರೀತಿಸಿದೆವು…
ಕಂಬಾರ:
ನಮ್ಮಿಬ್ಬರ ಕುಟುಂಬದವರು ಸಂಬಂಧದಲ್ಲಿ ಬೀಗರು. ಈ ಬೀಗರ ನಡುವೆ ವೈಮನಸ್ಸು, ದ್ವೇಷ ಏನೇನೋ ಇರ್ತವಲ್ಲಾ, ಅವೆಲ್ಲ ನಮ್ಮ ಕುಟುಂಬಗಳ ನಡುವೆಯೂ ಇದ್ದವು. ಹೀಗಾಗಿ ನಮ್ಮಿಬ್ಬರ ಮನೆ ಒಂದೇ ಓಣಿಯಲ್ಲಿದ್ದರೂ ನಮ್ಮ ಕುಟುಂಬಗಳ ನಡುವೆ ಮಾತುಕತೆ ಇರಲಿಲ್ಲ. ಆದರೆ, ಚಿಕ್ಕ ವಯಸ್ಸಿನಿಂದಲೇ ನಾವಿಬ್ಬರೂ ಒಬ್ಬನ್ನೊಬ್ಬರು ಇಷ್ಟಪಡುತ್ತಿದ್ದೆವು. ಬುದ್ಧಿ ತಿಳಿದ ಮೇಲೆ ಮದುವೆಯಾಗಬೇಕು ಅಂತ ತೀರ್ಮಾನಿಸಿದೆವು. ಆಕೆಯ ಮನೆಯಲ್ಲಿ ಹೇಗೋ ಒಪ್ಪಿಕೊಂಡರು. ಆದರೆ, ನಮ್ಮ ಮನೆಯಲ್ಲಿ ಸುತರಾಂ ಒಪ್ಪಲಿಲ್ಲ. ಅದರಲ್ಲೂ ನನಗೊಬ್ಬಳು ಅಕ್ಕ ಇದ್ದಳು. ಆಕೆಗೆ ತನ್ನ ಮಗಳನ್ನು ನನಗೇ ಕೊಡಬೇಕು ಅಂತ ಆಸೆ. ನನ್ನ ಅಪ್ಪನಿಗೆ ನಾನು ಪಿಚ್‌ಡಿ ಮಾಡಲೇಬೇಕು ಅಂತ ಬಯಕೆ. “ನೀನು ಓದು ಮುಗಿಸಿಕೊಂಡು ಬಾ, ಆಮೇಲೆ ಮದುವೆ ಬಗ್ಗೆ ಯೋಚಿಸೋಣ’ ಅಂತ ಹೇಳಿದರು. ಭೂಸನೂರ ಮಠ ಅವರು ನನ್ನಪ್ಪನಿಗೆ ಬೈದು ನಮ್ಮ ಮದುವೆ ಮಾಡಿಸಿದರು.

ಕಷ್ಟಗಳನ್ನು ಮೆಟ್ಟಿ ನಿಂತೆವು…
ಕಂಬಾರ:
1954ರಲ್ಲಿ ನಮಗೆ ನಿಶ್ಚಿತಾರ್ಥ ಆಯಿತು. ಬಳಿಕ ಕಾಲೇಜು ಮುಗಿಸಿ ಬೆಳಗಾವಿಯಲ್ಲಿ ಶಿಕ್ಷಕನಾಗಿದ್ದೆ. ಸ್ವಲ್ಪ ಸಮಯದ ನಂತರ ಶಿಕ್ಷಕ ವೃತ್ತಿಯನ್ನೂ ಬಿಟ್ಟೆ. ಆಗಲೇ ನಿಶ್ಚಿತಾರ್ಥ ಆಗಿ 6-7 ವರ್ಷ ಕಳೆದಿತ್ತು. ಆಗಲೂ ನಮ್ಮಪ್ಪ ನಮ್ಮಿಬ್ಬರ ಮದುವೆ ಮಾಡಿಸಿರಲಿಲ್ಲ. ಭೂಸನೂರ ಮಠ ಮಧ್ಯ ಪ್ರವೇಶಿಸಿ ಮದುವೆ ಮಾಡಿಸಿದರು. ಇವಳು ಮನೆಯೊಳಗೆ ಕಾಲಿಟ್ಟಳು. ಸಾಗರದಿಂದ ಅಡಿಗರು ನನಗೆ ಲೆಕ್ಚರರ್‌ ಹುದ್ದೆಗೆ ನೇಮಕಾತಿ ಪತ್ರ ಕಳಿಸಿದರು. ನಾವು ದಾಂಪತ್ಯ ಜೀವನ ಆರಂಭಿಸಿದ್ದೇ ಸಾಗರದಲ್ಲಿ. ಆಗ ಬಹಳ ಕಷ್ಟ ಇತ್ತು. ಅಡಿಗರು, ಬಂಗಾರಪ್ಪ, ಶಾಂತವೇರಿ ಗೋಪಾಲಗೌಡರು, ಕಾಗೋಡು ತಿಮ್ಮಪ್ಪ ಮುಂತಾದವರೆಲ್ಲ ನಮ್ಮ ಬೆಂಬಲಕ್ಕೆ ನಿಂತರು. ನಾವೂ ಕಷ್ಟಗಳನ್ನೆಲ್ಲಾ ಎದುರಿಸುತ್ತಾ ಗಟ್ಟಿಯಾದೆವು. ಹಾ.ಮಾ ನಾಯಕ, ಕುರ್ತಕೋಟಿ, ಎಸ್‌.ಎಲ್‌. ಭೈರಪ್ಪ, ಜಿ.ಎಸ್‌ ಶಿವರುದ್ರಪ್ಪ ಎಲ್ಲರೂ ನಮಗೆ ಒಂದಲ್ಲಾ ಒಂದು ಹಂತದಲ್ಲಿ ನೆರವಾದವರೇ. ಭೂಸನೂರ ಮಠ ನಮ್ಮ ಪಾಲಿನ ಪ್ರತ್ಯಕ್ಷ ದೈವ.

– ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಪತ್ನಿ ನೀವು… ಈ ಕುರಿತು ಏನನ್ನಿಸುತ್ತಿದೆ?
ಪರಿಶ್ರಮದಿಂದಲೇ ಅವರು ಒಂದೊಂದೇ ಮೆಟ್ಟಿಲೇರಿ ಈ ಹಂತ ತಲುಪಿದ್ದಾರೆ. ಒಟ್ಟಿನಲ್ಲಿ ನನಗೆ ಅವರ ಪ್ರತಿಭೆ ಬಳಕೆಯಾಗುತ್ತಿರಬೇಕು ಅಷ್ಟೇ. ಅವರು ಸುಮ್ಮನೇ ಕೂರಬಾರದು.

– ನಿಮ್ಮ ಬಾಲ್ಯದ ದಿನಗಳು ಹೇಗಿದ್ದವು?
ಸಣ್ಣದರಲ್ಲಿ ನಾನು ಭಾರೀ ಚುರುಕಿನ ಹುಡುಗಿ. ತರಗತಿಯಲ್ಲಿ ಸದಾ ಮುಂದಿದ್ದೆ. ನನ್ನನ್ನು ಶಾಲೆಗೆ ಕಳಿಸಲು ಮನೆಯಲ್ಲಿ ಯಾರಿಗೂ ಇಷ್ಟ ಇರಲಿಲ್ಲ. “ಆಕಿ ರೊಟ್ಟಿ ಬಡಿಯಾದನ್ನ ಮೊದಲು ಕಲೀಲಿ, ಸಾಲಿ ಕಲಿತು ಏನೂ ಆಗ್ಬೇಕಿಲ್ಲಾ’ ಅನ್ನೋರು. ಶಾಲೆ ಬಿಡಿಸಿದರೆ, ಶಿಕ್ಷಕರೇ ಬಂದು ಮತ್ತೆ ನನ್ನನ್ನು ಕರಕೊಂಡು ಹೋಗೋರು. ಅಂತೂ ಇಂತೂ 7ನೇ ತರಗತಿ ಮುಗಿಸಿದೆ. ಆಗಿನ ಕಾಲಕ್ಕೇ ಅದೇ ಸಾಧನೆ. ನನಗೆ ಹಿಂದಿ ಕಲೀಬೇಕು ಅಂತ ಆಸೆ. ಹಿಂದಿ ಪರೀಕ್ಷೆ ಕಟ್ಟಿ ಪಾಸು ಮಾಡಿದೆ. ನಾನು ಹಿಂದಿ ಪರೀಕ್ಷೆ ಕಟ್ಟಿರುವುದೇ ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಸಂಗೀತದ ಗೀಳೂ ಇತ್ತು. ಆಗೆಲ್ಲ ಹೆಣ್ಣು ಮಕ್ಕಳು ಸಂಗೀತ ಕಲಿತಾರೆ ಅಂದ್ರೆ ಕೀಳಾಗಿ ಕಾಣೋರು. ಆದರೆ, ಛಲ ಬಿಡದೆ ಅದನ್ನೂ ಕಲಿತಿದ್ದೆ.

-ನಿಮಗೂ ಸಾಹಿತ್ಯದಲ್ಲಿ ಒಲವಿದೆಯಾ? ನಿಮ್ಮ ನೆಚ್ಚಿನ ಲೇಖಕರು..?
ಓದುವ ಹುಚ್ಚು ನನಗೆ ಯಾರಿಂದ ಬಂದಿದ್ದು ಅಂತ ಗೊತ್ತಿಲ್ಲ. ನಾನು 2ನೇ ತರಗತಿಯಲ್ಲಿರುವಾಗಲೇ ಗ್ರಂಥಾಲಯಕ್ಕೆ ಹೋಗಿ ಓದುತ್ತಾ ಕೂತಿದ್ದೆ. ರಾಮಾಯಣ, ಮಹಾಭಾರತ, ಉಪನಿಷತ್‌ಗಳನ್ನು ಚಿಕ್ಕದರಲ್ಲೇ ಓದಿದ್ದೆ. ಕನ್ನಡಕ್ಕೆ ಅನುವಾದವಾಗಿರುವ ಇಂಗ್ಲಿಷ್‌ನ ಖ್ಯಾತ ಸಾಹಿತಿಗಳ ಪುಸ್ತಕಗಳನ್ನು ಓದುತ್ತಿದ್ದೆ. ಬಂಗಾಳಿ, ಗುಜರಾತಿ ಸಾಹಿತ್ಯಗಳ ಪರಿಚಯವೂ ಇತ್ತು. ಕನ್ನಡದ ಎಲ್ಲಾ ಹಿರಿಯ ಸಾಹಿತಿಗಳ ಪುಸ್ತಕಗಳನ್ನೂ ಓದಿದ್ದೇನೆ. ನಾನು ಓದಿದ ಕೆಲ ಹಿರಿಯ ಸಾಹಿತಿಗಳ ಪುಸ್ತಕವನ್ನು ಕಂಬಾರರೂ ಓದಿಲ್ಲ. ಮಹಿಳಾ ಸಾಹಿತಿಗಳ ಪುಸ್ತಕಗಳ ಬಗ್ಗೆ ನನಗೆ ವಿಶೇಷ ಅಕ್ಕರೆ. ಉಷಾ ನವರತ್ನರಾಂ, ಟಿ. ಸುನಂದಮ್ಮ, ಎಂ.ಕೆ. ಇಂದಿರಾ ನನ್ನ ನೆಚ್ಚಿನ ಸಾಹಿತಿಗಳು.

– ಮದುವೆಗೂ ಮುಂಚಿನ ದೃಶ್ಯಗಳನ್ನು ಹೇಳಿ…
 ಬುದ್ಧಿ ತಿಳಿದಾಗಿನಿಂದ ನಾನು ಇವರನ್ನು ಪ್ರೀತಿಸುತ್ತಿದ್ದೆ. ನಾನು ಕ್ಲಾಸ್‌ ತಪ್ಪಿಸಿ ಇವರನ್ನು ಭೇಟಿಯಾಗುತ್ತಿದ್ದೆ. ಇಬ್ಬರೂ ಹಠ ಹಿಡಿದ್ವಿ ಅಂತ 1954ರಲ್ಲಿ ನಿಶ್ಚಿತಾರ್ಥ ಮಾಡಿದರು. ನಿಶ್ಚಿತಾರ್ಥ ಮುಗಿಸಿಕೊಂಡು ಅವರು ಕಾಲೇಜು ಅಂತ ಹೋದರು. ಅವರು ಮನೆಗೆ ಬಂದಾಗ ಹೆತ್ತವರು ಮಗನನ್ನು ಹೊರಗೆ ಬಿಡುತ್ತಿರಲಿಲ್ಲ. “ಅವಳನ್ನು ನೋಡಿದರೆ ನನ್ನ ಮಗ ಓದುವುದನ್ನು ಬಿಡುತ್ತಾನೆ’ ಅಂತ ಭಯವಿತ್ತು ಮಾವನಿಗೆ. ಅವರ ಅಕ್ಕನಿಗೆ ಮೊದಲೇ ಈ ಮದುವೆ ಕುರಿತು ಬೇಸರ ಇತ್ತಲ್ಲ, ಅವರೂ ನನಗೆ ಕಿರುಕುಳ ಕೊಡುತ್ತಿದ್ದರು. ಒಂದಲ್ಲಾ ಒಂದು ದಿನ ಇವರು ನನ್ನನ್ನು ಖಂಡಿತಾ ಮದುವೆ ಆಗ್ತಾರೆ ಎಂಬ ಗುಂಗಿನಲ್ಲೇ ಖುಷಿ ಹುಡುಕುತ್ತ ಸಮಯ ತಳ್ಳುತ್ತಿದ್ದೆ. ಯಾರು ಏನೇ ನೋವು ಕೊಟ್ಟರೂ, ಚುಚ್ಚುಮಾತು ಆಡಿದರೂ ಆ ಕ್ಷಣಕ್ಕೇ ಅದನ್ನು ಮರೆತುಬಿಡುತ್ತಿದ್ದೆ.

– ಬಡತನದಲ್ಲೂ ಸಂತೋಷವಾಗಿ ಇದ್ವಿ ಅಂತ ಕಂಬಾರರು ಹೇಳಿದರು. ಆ ದಿನಗಳು ಹೇಗಿದ್ದವು?
ಮದುವೆಯದಾಗ ಆರ್ಥಿಕವಾಗಿ ಅಂಥ ಉತ್ತಮ ಸ್ಥಿತಿಯೇನೂ ಇರಲಿಲ್ಲ. ಮದುವೆಯಾದಾಗ ನನ್ನ ಬಳಿ ಇದ್ದಿದ್ದು ಎರಡೇ ಸೀರೆ. ನಾನು ಯಾವತ್ತೂ ಸೀರೆ ಕೊಡಿಸಿ, ಒಡವೆ ಕೊಡಿಸಿ ಅಂತ ಅವರನ್ನು ಕೇಳಿಲ್ಲ. ಆದರೆ, ಬಾಚಣಿಕೆಯಿಂದ ಹಿಡಿದು ಎಲ್ಲವನ್ನೂ ಅವರೇ ತಂದುಕೊಡುತ್ತಿದ್ದರು. ಸುಖಾಸುಮ್ಮನೆ ಯಾಕೆ ದುಡ್ಡು ಖರ್ಚು ಮಾಡುತ್ತೀರಿ ಎಂದು ನಾನು ಸಿಟ್ಟಾಗುತ್ತಿದ್ದೆ. ಬಡತನದಲ್ಲೂ ಅವರು ನನಗೆ ಯಾವುದಕ್ಕೂ ಕಡಿಮೆ ಮಾಡಿರಲಿಲ್ಲ.

– ನೀವಿಬ್ಬರೂ ಜಗಳವೇ ಆಡುತ್ತಿರಲಿಲ್ವಾ?
ನಮ್ಮ ನಡುವೆ ಗಂಭೀರ ಜಗಳಗಳಾಗಿದ್ದು ತುಂಬಾ ಕಡಿಮೆ. ಅವರು, “ನೀನು ಅನ್‌ಎಜುಕೇಟೆಡ್‌ ಇದ್ದೀಯ’ ಅಂತ ತಮಾಷೆ ಮಾಡುತ್ತಿದ್ದರು. ಆಗೆಲ್ಲಾ ನಾನು, “ನಿಮಗೆ ಬರುವ ಹಿಂದಿ, ಇಂಗ್ಲಿಷ್‌ ಪತ್ರಗಳನ್ನು ಓದಿ ಹೇಳ್ತೀನಿ, ಫೋನ್‌ ಕರೆಗಳನ್ನು ಅಟೆಂಡ್‌ ಮಾಡ್ತೀನಿ. ಪುಸ್ತಕಗಳನ್ನು ಓದಿ ವಿಮರ್ಶೆ ಮಾಡ್ತೀನಿ. ಇನ್ನು ಹ್ಯಾಂಗೆ ನಾನು ಅನ್‌ಎಜುಕೇಟೆಡ್‌ ಆಗ್ತಿàನಿ’ ಅಂತ ಕೇಳ್ತಿದ್ದೆ. ನನ್ನ ಮಕ್ಕಳನ್ನು ಹೈಲೀ ಎಜುಕೇಟೆಡ್‌ ಮಾಡಬೇಕು ಅನ್ನುವ ಆಸೆಯೂ ಅವರಿಗಿಂತ ಹೆಚ್ಚು ನನಗೇ ಇದ್ದದ್ದು. ಮಕ್ಕಳನ್ನು ಕೂರಿಸಿ ಓದಿಸುತ್ತಿದ್ದದ್ದು ನಾನೇ. ಈಗ ನಾಲ್ಕು ಮಕ್ಕಳೂ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ.

– ಮೊಮ್ಮಕ್ಕಳನ್ನು ತುಂಬಾ ಹಚ್ಚಿಕೊಂಡಿದ್ದೀರಂತೆ?
ಮೊಮ್ಮಕ್ಕಳು ಬಂದ ಮೇಲೆ ಮತ್ತೂಂದು ಜನ್ಮ ಸಿಕ್ಕಂತಾಗಿದೆ. ನಾನಂತೂ ನನ್ನ ಅಜ್ಜಿ ಪದವಿಯನ್ನು ತೀವ್ರವಾಗಿ ಅನುಭವಿಸಿದ್ದೇನೆ. ಅವರಿಗೆ ತಿನ್ನಿಸುವುದು, ಸ್ನಾನ ಮಾಡಿಸುವುದು, ತಿಂಡಿ ಮಾಡಿ ಕೊಡುವುದು ಎಲ್ಲವನ್ನೂ ಮಾಡಿದ್ದೇನೆ. ಅವರನ್ನು ಕಂಡರೇನೇ ಸಂಭ್ರಮ. ಈಗ ಪುಟ್ಟ ಮರಿಮೊಮ್ಮಗ ನಮ್ಮ ಕುಟುಂಬಕ್ಕೆ ಸೇರಿದ್ದಾನೆ. ಅವನು ಬಂದಮೇಲೆ ಮುತ್ತಜ್ಜಿಯಾಗಿ ಮತ್ತೂಂದು ರೀತಿಯ ಖುಷಿ. ಈಗ ಕಾಲು ನೋವು ಬಾಧಿಸುತ್ತಿರುವುದರಿಂದ ಅವನಿಗೆ ಸ್ನಾನ ಮಾಡಿಸಲು, ಹೊತ್ತು ತಿರುಗಲು ಆಗುತ್ತಿಲ್ಲ. ಅದೊಂದು ಕೊರಗು ನನಗಿದೆ.

– ಮೊಮ್ಮಕ್ಕಳು ನಿಮ್ಮಿಬ್ಬರಲ್ಲಿ ಯಾರನ್ನು ಹೆಚ್ಚು ಹಚ್ಚಿಕೊಂಡಿದ್ದಾರೆ?
ಮಕ್ಕಳು, ಮೊಮ್ಮಕ್ಕಳ ಚಾಕರಿ ಮಾಡಿದ್ದು, ಹೊತ್ತು ತಿರುಗಿದ್ದು ನಾನು. ಹೆಚ್ಚು ಮುದ್ದು ಮಾಡುವವಳೂ ನಾನೇ. ಆದರೆ, ಅವರೆಲ್ಲಾ ಹೆಚ್ಚು ಹಚ್ಚಿಕೊಂಡಿದ್ದು ಮಾತ್ರ ನಮ್ಮನೆಯವರನ್ನು. ಅದೇ ಸಿಟ್ಟು ನನಗೆ. ಮಕ್ಕಳು “ಅಮ್ಮಾ’ ಎಂದಿದ್ದಕ್ಕಿಂತ “ಅಪ್ಪಾ’ ಎಂದಿದ್ದೇ ಹೆಚ್ಚು. ಮೊಮ್ಮಕ್ಕಳೂ ಅಷ್ಟೇ “ದಾದಾ..ದಾದಾ..’ ಎಂದು ಅವರ ಹಿಂದೆ ಮುಂದೇನೇ ಸುತ್ತುತ್ತಾರೆ. ಮರಿಮೊಮ್ಮಗನೂ ಅಷ್ಟೇ, ಅವನ ಗಮನವನ್ನ ನನ್ನ ಕಡೆ ಸೆಳೆಯಲು ಎಷ್ಟು ಪ್ರಯತ್ನಿಸಿದರೂ ಆತ ದಾದಾ (ಕಂಬಾರರು)ನನ್ನೇ ಕೇಳುತ್ತಾನೆ. ಅದಕ್ಕೆ ನನ್ನ ಸೊಸೆ ಹೇಳ್ತಾ ಇರ್ತಾಳೆ, “ನೋಡಮ್ಮಾ, ನಾಲ್ಕೂ ಮಕ್ಕಳು ಅಮ್ಮ ಅನ್ನೋದೇ ಕಡಿಮೆ. ಎಲ್ಲಾ ಅಪ್ಪನ್ನೇ ಕೇಳ್ತಾರೆ’ ಅಂತಾಳೆ. ಅದಕ್ಕೆ ನಾನು “ಇರ್ಲಿ ಬಿಡಮ್ಮ. ನೀ ಒಬ್ಟಾಕಿಯಾದರೂ ಅಮ್ಮಾ… ಅಂತೀಯಲ್ಲ ನನಗ ಅಷ್ಟೇ ಸಾಕು’ ಅಂತೀನಿ. ಎಲ್ಲರೂ ಅವರನ್ನು ಅಷ್ಟೊಂದು ಹಚ್ಚಿಕೊಂಡಿರುವುದಕ್ಕೆ ನಾನು ಒಳೊಳಗೇ ಖುಷಿಪಡ್ತೀನಿ.

– ಈಗಲೂ ಅವರು ಮನೆಯಿಂದ ಹೊರಹೋಗುವಾಗ ಮೊದಲಿನಷ್ಟೇ ಕಾಳಜಿ ಮಾಡುತ್ತೀರಾ?
ಅದರಲ್ಲೇ ಅಲ್ವಾ ದಾಂಪತ್ಯದ ಸುಖ ಇರೋದು… ಪರಸ್ಪರರ ಕಾಳಜಿ ಮಾಡಲು ಯಾವ ವಯಸ್ಸಾದರೇನು? ಹೀಗೆ ಕಾಳಜಿ ಇದ್ದರೇನೇ ಅಟ್ಯಾಚ್‌ಮೆಂಟ್‌ ಕಡೇವರೆಗೂ ಉಳಿಯುವುದು. ಅವರು ಮನೆಯಲ್ಲಿ ಏನಾದ್ರು ಬಿಟ್ಟು ಹೋದ್ರೆ, ಮಾತ್ರೆ ತೆಗೆದುಕೊಳ್ಳದೇ ಹಾಗೇ ಹೋದ್ರೆ ಅವರು ಮನೆಗೆ ವಾಪಸ್ಸಾಗುವವರೆಗೂ ನನಗೆ ಚಡಪಡಿಕೆಯಾಗುತ್ತದೆ.

– ನಿಮ್ಮ ವಿದೇಶ ಪ್ರವಾಸಗಳ ಬಗ್ಗೆ ಹೇಳಿ
ನೇಪಾಳಕ್ಕೆ ಹೋಗಿದ್ವಿ. ನಾಟಕೋತ್ಸವಕ್ಕಾಗಿ ಫ್ರಾನ್ಸ್‌ಗೆ ಕರೆದುಕೊಂಡು ಹೋಗಿದ್ರು. ಫ್ರಾನ್ಸ್‌ ಬಗ್ಗೆ ತುಂಬಾ ಓದಿಕೊಂಡಿದ್ದೆ. ಅದಕ್ಕೋ ಏನೊ ಅಲ್ಲಿ ಹೋದಾಗ ಅಂಥಾ ರೋಮಾಂಚನವೇನೂ ಆಗಲಿಲ್ಲ. ಅಲ್ಲಿ ಎಲ್ಲಾ ಹೆಣ್ಣು ಮಕ್ಕಳೂ ಲಿಪ್‌ಸ್ಟಿಕ್‌ ಹಚ್ಚಿರುತ್ತಿದ್ದರು. ಎತ್ತರೆತ್ತರದ ಕಟ್ಟಡಗಳಿದ್ದವು. ಜನರೂ ಎತ್ತರ ಇದ್ದರು ಎನ್ನುವುದಷ್ಟೇ ಈಗ ನೆನಪು.

– ಚೇತನ ಜೆ.ಕೆ.

ಟಾಪ್ ನ್ಯೂಸ್

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 37,000 ಮತಗಳಿಂದ ಮುನ್ನಡೆ

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 37,000 ಮತಗಳಿಂದ ಮುನ್ನಡೆ

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.