ದುಬಾೖ ಟೆನಿಸ್ ಚಾಂಪಿಯನ್‌ಶಿಪ್:ಡಿಮಿಟ್ರೋವ್‌ಗೆ ಮೊದಲ ಸುತ್ತಿನ ಸೋಲು
Team Udayavani, Mar 1, 2018, 6:05 AM IST
ದುಬಾೖ: ಅಗ್ರ ಶ್ರೇಯಾಂಕದ ಬಲ್ಗೇರಿಯನ್ ಆಟಗಾರ ಗ್ರಿಗರ್ ಡಿಮಿಟ್ರೋವ್ ದುಬಾೖ ಟೆನಿಸ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲೇ ಸೋಲಿನ ಆಘಾತಕ್ಕೆ ಸಿಲುಕಿದ್ದಾರೆ. ಮಂಗಳವಾರ ರಾತ್ರಿ ನಡೆದ ತೀವ್ರ ಪೈಪೋಟಿಯ ಪಂದ್ಯದಲ್ಲಿ ಟ್ಯುನೀಶಿಯಾದ 117ನೇ ರ್‍ಯಾಂಕಿಂಗ್‌ನ ಮಾಲೆಕ್ ಜಾಕಿರಿ 4-6, 7-5, 6-4 ಅಂತರದಿಂದ ಡಿಮಿಟ್ರೋವ್ ಆಟ ಮುಗಿಸಿದರು.
ಮಾಲೆಕ್ ಜಾಕಿರಿ ವಿಶ್ವದ ಟಾಪ್-10 ಆಟಗಾರನ ವಿರುದ್ಧ ಸಾಧಿಸಿದ ಮೊದಲ ಜಯ ಇದಾಗಿದೆ. ಸದ್ಯ ಡಿಮಿಟ್ರೋವ್ ವಿಶ್ವ ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿದ್ದಾರೆ. ವೈಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆದ ಜಾಕಿರಿ ಕಳೆದ 6 ವರ್ಷಗಳಿಂದ ದುಬಾೖ ಟೂರ್ನಿಯಲ್ಲಿ ಆಡುತ್ತಲೇ ಇದ್ದಾರೆ. 2014ರಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದು ಇವರ ಅತ್ಯುತ್ತಮ ಸಾಧನೆ.
ದಿನದ ಇನ್ನೊಂದು ಪಂದ್ಯದಲ್ಲಿ ದ್ವಿತೀಯ ಶ್ರೇಯಾಂಕದ ಫ್ರಾನ್ಸ್‌ನ ಲುಕಾಸ್ ಪೌಲಿ ಲಾತ್ವಿಯಾದ ಎರ್ನೆಸ್ಟ್ ಗುಲ್ಬಿಸ್ ವಿರುದ್ಧ 6-4, 6-4 ಅಂತರದ ಜಯ ಸಾಧಿಸಿದರು. ಸರ್ಬಿಯಾದ ಫಿಲಿಪ್ ಕ್ರಾಜಿನೋವಿಕ್ ಇಟೆಲಿಯ ಥಾಮಸ್ ಫ್ಯಾಬಿಯಾನೊ ಅವರನ್ನು 0-6, 6-2, 6-2 ಅಂತರದಿಂದ ಹಿಮ್ಮೆಟ್ಟಿಸಿದರು.
ಮಾರ್ಸೆಲಿ ಟೆನಿಸ್ ಚಾಂಪಿಯನ್ ಕರೆನ್ ಕಶನೋವ್ 7-6 (7-1), 7-6 (7-0) ಅಂತರದಿಂದ ಡೆನ್ನಿಸ್ ಇಸ್ತೋಮಿನ್‌ಗೆ ಸೋಲುಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.