ಕಂಚಿ ಶ್ರೀ ಬ್ರಹ್ಮೀಭೂತ
Team Udayavani, Mar 1, 2018, 12:28 AM IST
ಕಾಂಚಿಪುರಂ: ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಠಗಳಲ್ಲೊಂದೆಂಬ ಹೆಗ್ಗಳಿಕೆ ಪಡೆದಿರುವ ಕಂಚಿ ಕಾಮಕೋಟಿ ಪೀಠದ ಪ್ರತಿಷ್ಠಿತ ಶ್ರೀ ಕಂಚಿ ಕಾಮಕೋಟಿ ಪೀಠಂನ 69ನೇ ಪೀಠಾಧ್ಯಕ್ಷರಾಗಿದ್ದ ಜಯೇಂದ್ರ ಸರಸ್ವತಿ (82), ಹೃದಯ ಸ್ತಂಭನದಿಂದಾಗಿ ನಿಧನ ಹೊಂದಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಅವರು ಪಾರ್ಶ್ವವಾಯುವಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಬೆಳಗ್ಗೆ ಶ್ರೀಗಳ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಗಿದ್ದರಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಬೆಳಗ್ಗೆ 9 ಗಂಟೆ ಸುಮಾರಿಗೆ ದೈವಾಧೀನರಾಗಿದ್ದಾರೆ.
ಮಠದಲ್ಲಿ ಶ್ರೀಗಳ ಅಂತಿಮ ದರ್ಶನಕ್ಕೆ ಮಧ್ಯಾಹ್ನದಿಂದಲೇ ಅನುವು ಮಾಡಿಕೊಡ ಲಾಯಿತು. ಪಾರ್ಥಿವ ಶರೀರವನ್ನು ಕುರ್ಚಿ ಮೇಲೆ ಕೂರಿಸಿ, ಹಣೆಗೆ ವಿಭೂತಿ ಹಾಗೂ ಕುಂಕುಮ ಹಚ್ಚಲಾಗಿತ್ತು. ಕೊರಳಿಗೆ ಭಕ್ತರು ಅರ್ಪಿಸಿದ ಹೂಮಾಲೆಗಳನ್ನು ಹಾಕಲಾಯಿತು.
ಗುರುವಾರ ಬೆಳಗ್ಗೆ 8 ಗಂಟೆಯಿಂದ ಜಯೇಂದ್ರ ಸರಸ್ವತಿಯವರ ಬೃಂದಾವನ ಪ್ರವೇಶ ಕಾರ್ಯಕ್ರಮ (ಹಿಂದೂ ಮಠಾಧಿ ಪತಿಗಳಿಗಾಗಿ ನೆರವೇರಿಸಲಾಗುವ ಅಂತ್ಯ ಸಂಸ್ಕಾರ ಪ್ರಕ್ರಿಯೆ) ಶುರುವಾಗಲಿದೆ.
2520 ವರ್ಷಗಳ ಹಿಂದೆ ಶಂಕರಾಚಾರ್ಯ ರಿಂದ ಸ್ಥಾಪನೆಗೊಂಡಿರುವ ಕಂಚಿ ಮಠದ
70ನೇ ಸ್ವಾಮೀಜಿಯಾಗಿ ಕಿರಿಯ ಸ್ವಾಮಿ ವಿಜಯೇಂದ್ರ ಸರಸ್ವತಿ ಸದ್ಯದಲ್ಲೇ ಪೀಠಾ ರೋಹಣ ನಡೆಸಲಿದ್ದಾರೆ.
ಶ್ರೀಗಳ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹಿತ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಶ್ರೀಗಳ ಪೂರ್ವಾಪರ: ತಮಿಳುನಾಡಿನ ತಂಜಾವೂರಿನ ಇರುಲೆ°àಕಿಯಲ್ಲಿ 1935ರ ಜುಲೈ 18ರಂದು ಜನಿಸಿದ್ದ ಶ್ರೀಗಳ ಮೊದಲ ಹೆಸರು ಎಂ. ಸುಬ್ರಹ್ಮಣ್ಯ ಅಯ್ಯರ್. ಚಿಕ್ಕಂದಿನಿಂದಲೇ ಸನ್ಯಾಸ ಜೀವನದತ್ತ ಆಕರ್ಷಿತರಾದ ಅವರು, 1994ರಲ್ಲಿ ಕಂಚಿ ಕಾಮಕೋಟಿ ಪೀಠಾಧ್ಯಕ್ಷರಾಗಿದ್ದ ಚಂದ್ರಶೇಖರೇಂದ್ರ ಸರಸ್ವತಿ ಶ್ರೀಗಳ ನಿಧನದ ಅನಂತರ, ಪೀಠಾಧ್ಯಕ್ಷರಾದರು. ಆಗ, ಅವರಿಗೆ 58 ವರ್ಷ. ಅಲ್ಲಿಂದ 2018ರ ವರೆಗೆ ಸುಮಾರು 24 ವರ್ಷಗಳ ಕಾಲ ಅವರು ಪೀಠಾಧ್ಯಕ್ಷರಾಗಿದ್ದು, ಜಗದ್ಗುರು ಗೌರವ ಪಡೆದಿದ್ದರು.
ಏಕಾಏಕಿ ನಾಪತ್ತೆಯಾಗಿದ್ದರು: ಮಠದ ಕಿರಿಯ ಸ್ವಾಮಿಯಾಗಿದ್ದಾಗಲೆ, 1987ರಲ್ಲಿ ಜಯೇಂದ್ರ ಸರಸ್ವತಿ ಶ್ರೀಗಳು ಏಕಾಏಕಿ ನಾಪತ್ತೆಯಾಗಿದ್ದರು. ಮಠದಲ್ಲಿನ ತಮ್ಮ ಕೊಠಡಿಯಲ್ಲಿ ಅವರ ಜನಿವಾರ, ಪೂಜಾ ಸಾಮಗ್ರಿಗಳನ್ನು ಬಿಟ್ಟುಹೋಗಿದ್ದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಮೂರು ದಿನಗಳ ಸತತ ಹುಡುಕಾಟದ ಅನಂತರ, ಕರ್ನಾಟಕದ ತಲಕಾವೇರಿಯಲ್ಲಿ ಅವರು ಪತ್ತೆಯಾಗಿದ್ದರು. ಅನಂತರ, ಅವರನ್ನು ಮಠಕ್ಕೆ ಕರೆದೊಯ್ಯಲಾಗಿತ್ತು.
ಶಂಕರ ರಾಮನ್ ಪ್ರಕರಣ: 2004ರ ಸೆ. 3 ರಂದು ನಡೆದಿದ್ದ ಶ್ರೀ ವರದರಾಜ ಪೆರುಮಾಳ್ ದೇಗುಲದ ಮ್ಯಾನೇಜರ್ ಶಂಕರ ರಾಮನ್ ಹತ್ಯೆ ಪ್ರಕರಣ ಕಂಚಿ ಶ್ರೀಗಳಿಗೆ ಸುತ್ತಿಕೊಂಡಿತ್ತು. ಈ ಹಿಂದೆ, ಕಂಚಿ ಮಠದಲ್ಲೇ ಮ್ಯಾನೇಜರ್ ಆಗಿದ್ದಾಗ, ಶಂಕರ ರಾಮನ್ ಅವರು ಕಂಚಿ ಶ್ರೀಗಳು ಹಾಗೂ ಮಠದ ಕಿರಿಯ ಸ್ವಾಮಿಯಾದ ವಿಜಯೇಂದ್ರ ಸರಸ್ವತಿ ಶ್ರೀಗಳ ವಿರುದ್ಧ ಹಣಕಾಸು ಅವ್ಯವಹಾರ ಆರೋಪ ಮಾಡಿದ್ದೇ ಕೊಲೆಗೆ ಕಾರಣ ಎಂದು ಆರೋಪಿಸಲಾಗಿತ್ತು. ಹೀಗಾಗಿ ಅವರನ್ನು ಬಂಧಿಸಲಾಗಿತ್ತು. ಇದಾಗಿ, ಒಂದು ತಿಂಗಳ ಅನಂತರ, ಮದ್ರಾಸ್ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದರು. 2013ರ ನವೆಂಬರ್‌ನಲ್ಲಿ ಪಾಂಡಿಚೇರಿ ಸೆಷನ್ಸ್ ನ್ಯಾಯಾಲಯ ಶ್ರೀ ಜಯೇಂದ್ರ ಸರಸ್ವತಿ, ಕಿರಿಯ ಸ್ವಾಮೀಜಿ ಶ್ರೀ ವಿಜಯೇಂದ್ರ ಸರಸ್ವತಿ ಅವರು ಸಹಿತ ಪ್ರಕರಣದಲ್ಲಿ ಆರೋಪಿಗಳಾಗಿದ್ದ 21 ಮಂದಿಯನ್ನು ಖುಲಾಸೆಗೊಳಿಸಿತು.
ಕಂಚಿ ಕಾಮಕೋಟಿ ಪೀಠದ ಜಯೇಂದ್ರ ಸರಸ್ವತಿ
ಶ್ರೀಗಳ ನಿಧನದಿಂದ ನಮ್ಮ ದೇಶ ಒಬ್ಬ ಮಹಾ ಧಾರ್ಮಿಕ ಮುಖಂಡ ಹಾಗೂ ಸಮಾಜ ಸುಧಾರಕರನ್ನು ಕಳೆದುಕೊಂಡಿದೆ. ಅವರ ಕೋಟ್ಯಂತರ ಭಕ್ತರಿಗೆ ದುಃಖ ಭರಿಸುವ ಶಕ್ತಿ ಬರಲಿ.
– ರಾಮನಾಥ ಕೋವಿಂದ್, ರಾಷ್ಟ್ರಪತಿ
ಸಮುದಾಯ ಸೇವೆಗಳಲ್ಲಿ ಸದಾ
ಮುಂದಿರುತ್ತಿದ್ದ ಜಗದ್ಗುರು ಜಯೇಂದ್ರ ಸರಸ್ವತಿ ಶ್ರೀಗಳು, ಬಡವರ ಹಾಗೂ ನಿರ್ಗತಿಕರ ಬದುಕನ್ನು ಹಸನಾಗಿಸಲು ಯತ್ನಿಸುವ ಸಂಸ್ಥೆಗಳನ್ನು ಅವರು ಕಟ್ಟಿದರು.
- ನರೇಂದ್ರ ಮೋದಿ, ಪ್ರಧಾನಿ
ಪೂಜ್ಯ ಜಗದ್ಗುರು ಶ್ರೀ ಜಯೇಂದ್ರ ಸರಸ್ವತಿ
ಸ್ವಾಮಿಗಳ ನಿಧನ ವಾರ್ತೆ ಬೇಸರ ತರಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.-ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
n 24 ವರ್ಷಗಳ ಕಾಲ
ಮಠದ 69ನೇ ಪೀಠಾಧ್ಯಕ್ಷ ರಾಗಿದ್ದ ಜಯೇಂದ್ರ ಸರಸ್ವತಿ
n ಮಠದ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ
n ಗುರುವಾರ ಬೆಳಗ್ಗೆ 8 ಗಂಟೆಯಿಂದ ಬೃಂದಾವನ ಪ್ರವೇಶ ಪ್ರಕ್ರಿಯೆ ಶುರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.