ನಗರ ಹಿಗ್ಗಿದೆ, ಬಜೆಟ್‌ ಕುಗ್ಗಿದೆ


Team Udayavani, Mar 1, 2018, 10:25 AM IST

gul-2.jpg

ಬೆಂಗಳೂರು: ಕಳೆದ ವರ್ಷ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಹಲವು ಪ್ರದೇಶಗಳು ಪ್ರವಾಹಕ್ಕೆ ಸಿಲುಕಿ ರಸ್ತೆಗುಂಡಿಗಳಿಂದ ಸಾವು-ನೋವು ಸಂಭವಿಸಿತ್ತು. ಹೀಗಾಗಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆ ಹುಸಿಗೊಳಿಸಿರುವ ಪಾಲಿಕೆ, ರಸ್ತೆ ಮೂಲ ಸೌಕರ್ಯಕ್ಕೆ ಆದ್ಯತೆಯನ್ನೇ ನೀಡಿಲ್ಲ.

ಆರ್ಟಿರಿಯಲ್‌, ಸಬ್‌ಆರ್ಟಿರಿಯಲ್‌ ರಸ್ತೆಗಳು ಸೇರಿದಂತೆ 13 ಸಾವಿರ ಕಿ.ಮೀ ಉದ್ದದ ರಸ್ತೆಗಳಿವೆ. ಈ ಪೈಕಿ ಬಹುತೇಕ ಕಡೆಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಮಳೆ ನೀರು ಸರಾಗವಾಗಿ ಹರಿಯುವ ಮಳೆ ನೀರು ಕಾಲುವೆಗಳು ದುಸ್ಥಿತಿಯಲ್ಲಿವೆ. ಈ ಬಗ್ಗೆ ಬಜೆಟ್‌ನಲ್ಲಿ ಗಮನ ಹರಿಸಿಲ್ಲ. ಘನತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ಇಲ್ಲ: ಅಷ್ಟೇ ಅಲ್ಲ ಒಮ್ಮೊಮ್ಮೆ ಕಸ ವಿಲೇವಾರಿ ಸ್ಥಗಿತಗೊಂಡು ದೇಶಾದ್ಯಂತ ಸುದ್ದಿಯಾಗುವ ಘನತ್ಯಾಜ್ಯ ವಿಲೇವಾರಿ ಸಮಸ್ಯೆ ನಿವಾರಣೆಯ ಕೈಗೊಳ್ಳುವ ಕ್ರಮಗಳ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಕಳೆದ ಬಾರಿಗಿಂತಲೂ ಎರಡು ಪಟ್ಟು ಅಂದರೆ 1066 ಕೋಟಿ ರೂ. ಮೀಸಲಿಡಲಾಗಿದೆ. ಆದರೆ, ತ್ಯಾಜ್ಯದಿಂದ ವಿದ್ಯುತ್‌ ಘಟಕಗಳ ನಿರ್ಮಾಣಕ್ಕೆ 100 ಕೋಟಿ ರೂ., ಬೆಳ್ಳಹಳ್ಳಿ ವ್ಯಾಪ್ತಿಯ ಕ್ವಾರಿಯಲ್ಲಿ ಬೈಕ್‌ ರೇಸ್‌ ಟ್ರ್ಯಾಕ್‌ ನಿರ್ಮಾಣಕ್ಕೆ 2 ಕೋಟಿ ರೂ. ಮೀಸಲಿಟ್ಟಿರುವ ಬಗ್ಗೆ ಮಾತ್ರ ಪ್ರಸ್ತಾಪಿಸಲಾಗಿದೆ. 

ಜತೆಗೆ ಕೈಗಾರಿಕಾ ಶೆಡ್‌ಗಳಲ್ಲಿ ಕಸ ಸಂಸ್ಕರಣಾ ಘಟಕ ಸ್ಥಾಪನೆಗೆ ಪ್ರೋತ್ಸಾಹ, ಪ್ಲಾಸ್ಟಿಕ್‌ ಚೀಲ ಬಳಕೆ ನಿಷೇಧ, ಪ್ರತಿ
ವಾರ್ಡ್‌ಗಳಲ್ಲಿ ಸಾವಯವ ಗೊಬ್ಬರ ಘಟಕ ಸ್ಥಾಪನೆ ಘೋಷಣೆ ಮಾಡಲಾಗಿದೆ. ಆದರೆ, ಘನತ್ಯಾಜ್ಯ ನಿರ್ವಹಣೆಗೆ ಸುಮಾರು 400 ಕೋಟಿ ರೂ. ಹೆಚ್ಚುವರಿಯಾಗಿ ಮೀಸಲಿಟ್ಟಿರುವುದು ಏಕೆ ಎಂಬ ಬಗ್ಗೆ ಬಜೆಟ್‌ನಲ್ಲಿ ಮಾಹಿತಿ ನೀಡಿಲ್ಲ.

ಮಳೆ ಕೊಯ್ಲಿಗೆ ಹಣ: ಬಜೆಟ್‌ನಲ್ಲಿ ವಾರ್ಡ್‌ ಮಟ್ಟದ ಕಾಮಗಾರಿಗಳಿಗಾಗಿ ಹಳೆ ವಾರ್ಡ್‌ಗಳಿಗೆ 2 ಕೋಟಿ ರೂ., ಹೊಸ ವಾರ್ಡ್‌ಗಳಿಗೆ 3 ಕೋಟಿ ರೂ. ನೀಡಲಾಗಿದ್ದು, ಆ ಅನುದಾನಲದಲ್ಲಿ ಕನಿಷ್ಠ 30 ಲಕ್ಷ ಮಳೆನೀರು ಕೊಯ್ಲು ಪದ್ಧತಿಗೆ ಮೀಸಲಿಡಲಾಗಿದೆ. ಕುಡಿಯುವ ನೀರು ನಿರ್ವಹಣೆಗೆ ಹಳೆಯ ವಾರ್ಡ್‌ಗೆ 15 ಲಕ್ಷ ರೂ. ಹಾಗೂ ಹೊಸ ವಾರ್ಡ್‌ಗೆ 40 ಲಕ್ಷ ರೂ. ಮೀಡಲಿಡಲಾಗಿದೆ. 

ಮರದ ಸ್ಕೈವಾಕ್‌: ದೇಶದಲ್ಲೇ ಮೊದಲ ಬಾರಿ ಹಡ್ಸನ್‌ ವೃತ್ತದಲ್ಲಿ ಎಂಜಿನಿಯರ್‌ ವುಡ್‌ ಉಪಯೋಗಿಸಿ ಅತಿ ಹೆಚ್ಚು
ಉದ್ದದ 5 ಮಾರ್ಗಗಳನ್ನು ಒಳಗೊಂಡಿರುವ ಸ್ಕೈವಾಕ್‌ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವುದಾಗಿ ಘೋಷಿಸಲಾಗಿ¨

ಬಸ್‌ ತಂಗುದಾಣ ಕನ್ನಡಮಯ ನಗರದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳಸಲು ಪ್ರಮುಖ ಸ್ಥಳಗಳಲ್ಲಿ ಕನ್ನಡದ ಸೊಗಡನ್ನು ಸೂಸುವ ಸಂಸ್ಕೃತಿಯ ಪರಿಚಯ, ನಾಡು-ನುಡಿ, ಸಂಸ್ಕೃತಿ ಬಿಂಬಿಸುವ ಯೋಜನೆ, ಬಸ್‌ ತಂಗುದಾಣಗಳಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತರು, ಸಾಹಿತಿಗಳು, ದಾರ್ಶನಿಕರು ಗಣ್ಯರ ಛಾಯಾಚಿತ್ರಗಳು ವೈಫೈ ಸೈಲಭ್ಯ, ಶುದ್ಧ ಕುಡಿಯುವ ನೀರು, ಶೌಚಾಲಯ, ವಿದ್ಯುತ್‌ ಹಾಗೂ ಇತರೇ ವ್ಯವಸ್ಥೆಗಳನ್ನು ಹೊಂದಿರುವ ಸಂಪೂರ್ಣ ಕನ್ನಡಮಯವಾದ ಬಸ್‌ ತಂಗುದಾಣಗಳನ್ನು 5 ಕೋಟಿ ವೆಚ್ಚದಲ್ಲಿ ನಗರದ ಪ್ರಮುಖ ಭಾಗಗಳಲ್ಲಿ ನಿರ್ಮಿಸುವುದಾಗಿ ಘೋಷಿಸಲಾಗಿದೆ.

ಅಗಸರ ಕಟ್ಟೆ ನಿರ್ಮಾಣ ಅಗತ್ಯವಿರುವ ಕಡೆಗಳಲ್ಲಿ ಅಗಸರ ಕಟ್ಟೆ ನಿರ್ಮಾಣಕ್ಕೆ 1 ಕೋಟಿ ರೂ. ನೀಡಲಾಗಿದೆ. ಆಯ್ದ 1000 ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯ /ಇ-ಟಾಯ್ಲೆಟ್‌ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಕ್ಕಾಗಿ ಪ್ರತಿವಾರ್ಡ್‌ಗೆ 15 ಲಕ್ಷ ರೂ., ಪಾಲಿಕೆ ಕಚೇರಿಗಳಲ್ಲಿ ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ಶೌಚಾಲಯ, ಪಾಲಿಕೆ ಕಟ್ಟಡಗಳಲ್ಲಿ ಸೋಲಾರ್‌ ವ್ಯವಸ್ಥೆ ಕಲ್ಪಿಸಲು ಬಜೆಟ್‌ನಲ್ಲಿ ಘೋಷಿಸಲಾಗಿದೆ. 

ಕಬ್ಬಿಣಾಂಶದ ಬಿಸ್ಕತ್ತು 
ತಾಯಿಯ ಅಪೌಷ್ಟಿಕತೆ ಹುಟ್ಟುವ ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಕಬ್ಬಿಣ ಅಂಶವಿರುವ ಬಿಸ್ಕೇಟ್‌ಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 25 ಲಕ್ಷ ರೂ. ಮೀಸಲಿಡಲಾಗಿದೆ. ಅಲ್ಲದೆ, ಪೌರ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‌ ಮೂಲಕ ಬಿಸಿಯೂಟ
ಒದಗಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರಿಂದ ಗುಣಮಟ್ಟದ ಹಾಗೂ ಸಮಯಕ್ಕೆ ಸರಿಯಾಗಿ ಪೌರಕಾರ್ಮಿಕರಿಗೆ ಊಟ ದೊರೆಯಲಿದೆ. ಇಂದಿರಾ ಕ್ಯಾಂಟೀನ್‌ ಮೂಲಕ ಈಗಾಗಲೇ ನಗರದ ಬಡವರಿಗೆ ಕಡಿಮೆ ದರದಲ್ಲಿ ಊಟ ದೊರೆಯುತ್ತಿದೆ.

ಸಿಬ್ಬಂದಿಗೂ ಆರೋಗ್ಯ ವಿಮೆ
ಪಾಲಿಕೆಯ ಎಲ್ಲ ಖಾಯಂ ಅಧಿಕಾರಿ ಮತ್ತು ಸಿಬ್ಬಂದಿಗೆ ಸಕಾಲ ದಲ್ಲಿ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು “ಆರೋಗ್ಯ ಕವಚ’ದಡಿ ವಿಮೆ ಜಾರಿಗೊಳಿಸಲಾಗುತ್ತಿದೆ. ಉತ್ತಮ ಶುಚಿತ್ವ ಹೊಂದಲು ಪಾಲಿಕೆ ಆಸ್ಪತ್ರೆಗಳಲ್ಲಿನ ಬಾಣಂತಿಯರಿಗೆ ತಾಯಿ ಮಡಿಲು ಕಿಟ್‌ ವಿತರಣೆಗೆ 1.5 ಕೋಟಿ ಮೀಸಲಿಡಲಾಗಿದೆ. ಉಚಿತ ಸ್ಟಂಟ್‌ಗಳ ವಿತರಣಾ ಕಾರ್ಯಕ್ರಮ ಮುಂದುವರಿಸಲಾಗುತ್ತಿದೆ.

ಕ್ಯಾಂಟೀನ್‌ಗಳಲ್ಲಿ ಜನೌಷಧ ಕೇಂದ್ರ
ಬೆಂಗಳೂರು: ಬಡವರ ಆಹಾರ ಕೇಂದ್ರ “ಇಂದಿರಾ ಕ್ಯಾಂಟೀನ್‌’ಗಳಲ್ಲಿ ಇನ್ಮುಂದೆ ಅಗ್ಗದ ದರದ “ಜನೌಷಧ’ಗಳೂ ಸಿಗಲಿವೆ. ಈ ಬಗ್ಗೆ ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಕೇಂದ್ರ ಸರ್ಕಾರದಿಂದ ಅತಿ ಕಡಿಮೆ ದರದಲ್ಲಿ ದೊರೆಯುವ ಜನರಿಕ್‌ ಔಷಧಗಳನ್ನು ಇಂದಿರಾ ಕ್ಯಾಂಟಿ ನ್‌ನಲ್ಲೂ ಲಭ್ಯವಾಗುವಂತೆ ಮಾಡುವ ಮೂಲಕ ಮತ್ತಷ್ಟು ಜನಪ್ರಿಯಗೊಳಿಸಲು ಬಿಬಿಎಂಪಿಯು ಇಂದಿರಾ ಕ್ಯಾಂಟೀನ್‌ಗಳ ಮೊರೆಹೋಗಿದೆ. ಬಿಬಿಎಂಪಿಯ ಪ್ರತಿ
ವಾರ್ಡ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ ನಲ್ಲೇ ಈ ಔಷಧ ಮಳಿಗೆಗಳನ್ನು ತೆರೆಯಲಾಗುತ್ತದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಇಂದಿರಾ ಕ್ಯಾಂಟೀನ್‌ ಈಗಾಗಲೇ ಜನಪ್ರಿಯಗೊಂಡಿರುವುದ ರಿಂದ ಲ್ಯಾಂಡ್‌ಮಾರ್ಕ್‌ ಸುಲಭವಾಗಲಿದೆ. ಕ್ಯಾಂಟೀನ್‌ಗೆ ಬರುವ ಬಹುತೇಕರು ಬಡವರಾಗಿರುವ ಕಾರಣ, ಅಲ್ಲಿಯೇ ಜನರಿಕ್‌ ಔಷಧ ವಿತರಣೆ ಸಿಕ್ಕರೆ ಅನುಕೂಲವಾಗಲಿದೆ. ತಿಂಡಿ-ಊಟದ ಸಮಯ ಮುಗಿದ ನಂತರ ಕ್ಯಾಂಟೀನ್‌ಗಳಲ್ಲಿ ಜನರ ಒತ್ತಡ ಕಡಿಮೆ ಇರುತ್ತದೆ. ಅಷ್ಟಕ್ಕೂ ಜನೌಷಧ ಮಳಿಗೆಗೆ 10×10 ಅಡಿ ಜಾಗ ಸಾಕು ಎನ್ನುವುದು ಇದರ ಹಿಂದಿನ ಲೆಕ್ಕಾಚಾರ.

5 ಲಕ್ಷ ರೂ. ಠೇವಣಿ: ಪಾಲಿಕೆಯ ಎಲ್ಲ ಆಸ್ಪತ್ರೆಗಳಲ್ಲಿ ವರ್ಷದ ಮೊದಲ ಸಹಜ ಹೆರಿಗೆಯಡಿ ಜನಿಸುವ ಹೆಣ್ಣುಮಗುವಿಗೆ ಶಿಕ್ಷಣಕ್ಕಾಗಿ “ಪಿಂಕ್‌ ಬೇಬಿ’ ಯೋಜನೆ ಪರಿಚಯಿಸಲಾಗಿದೆ. ಇದರಡಿ ಹೆಣ್ಣುಮಗುವಿನ ಶಿಕ್ಷಣಕ್ಕಾಗಿ ಪಾಲಿಕೆಯು 5 ಲಕ್ಷ
ರೂ. ಠೇವಣಿ ಇಡಲಿದೆ. ಇದಕ್ಕಾಗಿ 1.20 ಕೋಟಿ ರೂ. ಮೀಸಲಿಡಲಾಗಿದೆ.

ಡಯಾಲಿಸಿಸ್‌ ಕೇಂದ್ರ: ಪುಲಕೇಶಿನಗರ, ವಿಜಯನಗರ, ಜಯನಗರ, ಸರ್ವಜ್ಞನಗರ, ರಾಜಾಜಿ ನಗರದಲ್ಲಿ 15 ಕೋಟಿ ವೆಚ್ಚದಲ್ಲಿ ಡಯಾಲಿಸಿಸ್‌ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ. ನಗರದಲ್ಲಿ ಮೂತ್ರಪಿಂಡ ಕಾಯಿಲೆಯಿಂದ
ಬಳಲುವವರ ಸಂಖ್ಯೆ ಹೆಚ್ಚಿದ್ದು, ಡಯಾಲಿಸಿಸ್‌ ಕೇಂದ್ರಗಳಲ್ಲಿ ಬಡವರಿಗೆ ಉಚಿತ ಸೇವೆ ಕಲ್ಪಿಸುವ ಅಗತ್ಯವಿತ್ತು

ಇತ್ತೀಚೆಗೆ ಸ್ಥನ ಕ್ಯಾನ್ಸರ್‌ಗೆ ತುತ್ತಾಗುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಅರಿವಿಗೆ ಬರುವಷ್ಟರಲ್ಲಿ ಕಾಯಿಲೆ 3ನೇ ಹಂತ ತಲುಪಿರುತ್ತದೆ. ಈ ಹಿನ್ನೆಲೆಯಲ್ಲಿ ಕಳೆದ ಬಾರಿ ಘೋಷಿಸಿದ್ದ ಉಚಿತ ಮೆಮೊಗ್ರಫಿ ತಪಾಸಣೆ ಮುಂದುವರಿಸಿದ್ದರೆ ಅನುಕೂಲವಾಗುತ್ತಿತ್ತು.
 ಜಿ.ಪದ್ಮಾವತಿ, ಮಾಜಿ ಮೇಯರ್‌

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.