ಮಿಂಚಿನ ರಾಣಿ ಮತ್ತು ರಾಜಕುಮಾರ
Team Udayavani, Mar 1, 2018, 12:15 PM IST
ಒಂದು ಊರಿನಲ್ಲಿ ಒಬ್ಬ ರಾಜ ಇದ್ದ. ಆತನಿಗೆ ಒಬ್ಬನೇ ಮಗ. ರಾಜಕುಮಾರ ಮದುವೆಯ ವಯಸ್ಸಿಗೆ ಬಂದಾಗ, ರಾಜ ಮಗನಿಗೆ ಮದುವೆ ಮಾಡಲು ಹೆಣ್ಣು ಹುಡುಕಲಾರಂಭಿಸಿದ. ರಾಜಕುಮಾರ ಯಾವ ಹೆಣ್ಣನ್ನು ನೋಡಿದರೂ ಏನಾದರೊಂದು ಕೊಂಕು ತೆಗೆದು ಹೆಣ್ಣನ್ನು ತಿರಸ್ಕರಿಸುತ್ತಿದ್ದ. ಒಮ್ಮೆ ಅವನ ಆಸ್ಥಾನ ಮಂತ್ರಿ ದೂರ ದೇಶದಿಂದ ರಾಜಕುಮಾರಿಯೊಬ್ಬಳನ್ನು ರಾಜನಿಗೆ ಪರಿಚಯಿಸಲು ಕರೆತಂದರು. ರಾಜಕುಮಾರ ಮತ್ತೆ ಕೊಂಕು ಮಾತಾಡಿ ರಾಜಕುಮಾರಿಯನ್ನು ತಿರಸ್ಕರಿಸಿದ. ರಾಜಕುಮಾರನ ನಡವಳಿಕೆಯನ್ನು ಕೇಳಿ ತಿಳಿದಿದ್ದ ಮಂತ್ರಿ, “ನೀನು ಮೆಚ್ಚ ಬಹುದಾದ ಹೆಣ್ಣೆಂದರೆ ಮಿಂಚಿನ ರಾಣಿ ಒಬ್ಬಳೇ.’ ಎಂದು ಹೇಳುತ್ತಾನೆ. ರಾಜಕುಮಾರನ ಕಿವಿ ಚುರುಕಾಯಿತು, “ಯಾರು ಈ ಮಿಂಚಿನ ರಾಣಿ?’ ಎಂದು ಕೇಳುತ್ತಾನೆ.
ಮಂತ್ರಿ “ಏಳು ಪರ್ವತಗಳನ್ನು ದಾಟಿ, ಕೊನೆಯ ಪರ್ವತದ ಮೇಲೆ ಸತತ ಮಿಂಚು ಗುಡುಗು ಸಹಿತವಾದ ಮಳೆ ಸದಾ ಸುರಿಯುತ್ತಿರುತ್ತದೆ. ಮಿಂಚಿನೊಳಗೆ ಕೈ ಹಾಕಿದರೆ ನಿನಗೊಂದು ದಾರದ ಉಂಡೆ ಸಿಗುತ್ತದೆ. ಹೀಗೆ ಒಂದು ಸೀರೆಗೆ ಬೇಕಾಗುವಷ್ಟು ದಾರದ ಉಂಡೆಗಳನ್ನು ಸಂಗ್ರಹಿಸಿದ ಮೇಲೆ, ಒಂದು ಸೀರೆಯನ್ನು ನೇಯಬೇಕು. ಅ ಸೀರೆಯನ್ನು ತೆಗೆದುಕೊಳ್ಳಲು ಮಿಂಚಿನ ರಾಣಿ ಬರುತ್ತಾಳೆ. ತನ್ನನ್ನು ಮದುವೆಯಾಗುವುದಾದರೆ ಮಾತ್ರ ಈ ಸೀರೆ ಕೊಡುವೆ ಎಂದು ನೀವು ಹೇಳಬೇಕು. ಆಗಲೇ ಅವಳು ನಿಮ್ಮನ್ನು ಒಪ್ಪಿ ಮದುವೆಯಾಗುತ್ತಾಳೆ’ ಎಂದರು. ಮಂತ್ರಿಯ ಮಾತು ಕೇಳಿ ರಾಜನಿಗೆ ಅತ್ಯಾಶ್ಚರ್ಯವಾಯಿತು. ಆ ಮಿಂಚಿನ ರಾಣಿ ಅಪ್ರತಿಮ ಸುಂದರಿಯೇ ಇರಬೇಕು ಎಂದು ರಾಜನಿಗೆ ತೋರಿತು.
ಅಂದೇ ರಾಜಕುಮಾರ ಬುತ್ತಿಯನ್ನು ಕಟ್ಟಿಕೊಂಡು ಮಿಂಚಿನ ರಾಣಿಯನ್ನು ಮದುವೆಯಾಗಲು ಹೊರಟುಬಿಟ್ಟ. ಹಲವಾರು ದಿನಗಳು ನಡೆದು ಆರು ಪರ್ವತಗಳನ್ನು ಹತ್ತಿ, ಇನ್ನೇನು ಏಳನೇ ಪರ್ವತವನ್ನು ಹತ್ತಲು ಸಜ್ಜಾಗುತಿ¨ªಾಗ ಅಲೊಂದು ಗುಹೆಯಿಂದ “ನೀರು… ನೀರು…’ ಎಂದು ಯಾರೋ ಕೂಗುತ್ತಿರುವುದು ಕೇಳಿಸಿತು. ಯಾರೋ ಋಷಿಯಿರಬೇಕು ಎಂದು ರಾಜಕುಮಾರ ಗುಹೆಯ ಒಳಗೆ ಹೋದನು. ಅಲ್ಲಿ ಒಂದು ದೊಡ್ಡ ಬಂಡೆ, ಮೇಲೊಂದು ಬಿಂದಿಗೆ ಅಷ್ಟೇ ಮತ್ತೇನು ಕಾಣಿಸಲಿಲ್ಲ. ಬಂಡೆಯಿಂದ “ನೀರು ನೀರು’ ಎಂಬ ಶಬ್ದ ಬರುತಿತ್ತು. ಯಾರೋ ಮರೆಯಲ್ಲಿ ಅವಿತಿರಬೇಕು, ಅವರಿಗೆ ನೀರು ಬೇಕೇನೋ ಎಂದುಕೊಂಡು ರಾಜಕುಮಾರ ಬಿಂದಿಗೆಯಿಂದ ನೀರು ಹೊತ್ತು ತಂದು ಬಂಡೆಯ ಮೇಲಿರಿಸಿ ಹೊರಡಲನುವಾದ. ಅಷ್ಟರಲ್ಲಿ ಬಿಂದಿಗೆ ಉರುಳಿ ನೀರು ಬಂಡೆಯ ಮೇಲೆÇÉಾ ಚೆಲ್ಲಿ ಹೋಯಿತು.
ರಾಜಕುಮಾರ ಮತ್ತೆ ಹೊಂಡದಿಂದ ನೀರನ್ನು ಮೊಗೆದು ತಂದು ಮತ್ತೆ ಬಂಡೆಯ ಮೇಲೆ ಇರಿಸಿದ. ಮತ್ತೆ ಬಿಂದಿಗೆ ಉರುಳಿ ನೀರು ಬಂಡೆಯ ಮೇಲೆÇÉಾ ಚೆಲ್ಲಿ ಹೋಯಿತು. ಹೀಗೆ ರಾಜಕುಮಾರ ನೂರ ಒಂದು ಬಾರಿ ಮಾಡಿದಾಗ ಅ ಬಂಡೆಗಲ್ಲು ಇದ್ದಲ್ಲಿ ಋಷಿಯೊಬ್ಬ ಎದ್ದು ಬಂದನು. ಅವನು ರಾಜಕುಮಾರನನ್ನು ಅಪ್ಪಿಕೊಂಡನು. ಯಾರದೋ ಶಾಪಕ್ಕೆ ಗುರಿಯಾಗಿದ್ದ ಋಷಿ ಬಂಡೆಯಾಗಿದ್ದನು. ರಾಜಕುಮಾರನ ನೂರೊಂದು ಬಾರಿ ನೀರಿನ ಸ್ನಾನದಿಂದ ಅವನ ಸಾಪ ವಿಮೋಚನೆಯಾಗಿತ್ತು. ಅದಕ್ಕೆ ಪ್ರತಿಯಾಗಿ ಋಷಿ ತನ್ನಿಂದ ಏನಾದರೂ ಸಹಾಯ ಬೇಕಿದ್ದರೆ ಕೇಳುವಂತೆ ವಿನಂತಿಸಿದ. ರಾಜಕುಮಾರ ತಾನು ಮಿಂಚಿನ ರಾಣಿಯನ್ನು ಮದುವೆಯಾಗಲು ಹೊರಟಿರುವ ವಿಷಯವನ್ನು ತಿಳಿಸುತ್ತಾನೆ. ಆಗ ಋಷಿ, “ನಾನೊಂದು ಮುಲಾಮನ್ನು ಕೊಡುತ್ತೇನೆ ಪ್ರತಿಬಾರಿ ನೀನು ಮಿಂಚಿನೊಳಗೆ ಕೈ ಹಾಕುವ ಮೊದಲು ಈ ಮುಲಾಮನ್ನು ಕೈಗೆ ಹಚ್ಚಿಕೋ, ಆಗ ನಿಂಗೆ ಮಿಂಚಿನ ಬಿಸಿ ತಾಕುವುದಿಲ್ಲ’ ಎಂದು ಹೇಳಿ ಮಿಂಚಿನ ರಾಣಿಯೊಡನೆ ನಿನ್ನ ಮದುವೆ ನಿರ್ವಿಘ್ನವಾಗಿ ನೆರವೇರಲಿ ಎಂದು ಹಾರೈಸಿ ಹೊರಡುತ್ತಾನೆ.
ಮುಲಾಮನ್ನು ಪಡೆದ ರಾಜಕುಮಾರ ತನ್ನ ಪ್ರಯಾಣವನ್ನು ಮುಂದುವರೆಸುತ್ತಾನೆ. ಕೊನೆಯ ಪರ್ವತದ ತುದಿಯನ್ನೇರಿ, ಮುಲಾಮನ್ನು ತನ್ನ ಕೈಗೆ ಹಚ್ಚಿಕೊಂಡು ಮಿಂಚಿನೊಳಗೆ ಕೈ ಹಾಕಿದಾಗ, ಕೈಗೊಂದು ದಾರದ ಉಂಡೆ ಸಿಕ್ಕಿತು. ಹಲವಾರು ಬಾರಿ ಹೀಗೆ ಮಾಡಿ ಸಾಕಷ್ಟು ದಾರದ ಉಂಡೆ ಸಂಗ್ರಹಿಸಿ, ನಂತರ ಅಲ್ಲಿಯೇ ಇದ್ದ ಮರದ ಸಹಾಯದಿಂದ ಒಂದು ಮಗ್ಗವನ್ನು ತಯಾರಿಸಿ, ಹಗಲು ರಾತ್ರಿ ಮಗ್ಗ ನೇಯ್ದು ಒಂದು ಸುಂದರವಾದ ಸೀರೆಯನ್ನು ತಯಾರಿಸುತ್ತಾನೆ. ಮಂತ್ರಿ ಹೇಳಿದಂತೆಯೇ ಆಗಸದಿಂದ ಮಿಂಚಿನ ರಾಣಿ ಪ್ರತ್ಯಕ್ಷಳಾಗಿ, “ಈ ಮೋಹಕವಾದ ಸೀರೆಯನ್ನು ನನಗೆ ಕೊಡುವೆಯಾ?’ ಎಂದು ಕೇಳುತ್ತಾಳೆ. ಆಕೆಯ ರೂಪಕ್ಕೆ ಮರುಳಾದ ರಾಜಕುಮಾರ “ನನ್ನನ್ನು ವರಿಸುವುದಾದರೆ ಈ ಸೀರೆ ನಿನ್ನದು’ ಎನ್ನುತ್ತಾನೆ. ಅದಕ್ಕೆ ಒಪ್ಪಿಗೆಯಿತ್ತು ಮಿಂಚಿನ ರಾಣಿ ರಾಜಕುಮಾರನನ್ನು ಮದುವೆಯಾಗುತ್ತಾಳೆ.
– ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.