ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳ
Team Udayavani, Mar 2, 2018, 6:00 AM IST
ಮುಂಬಯಿ: ಗೃಹ, ವಾಹನ ಸಾಲಕ್ಕೆ ಅರ್ಜಿ ಸಲ್ಲಿಸಿದವರಿಗೆ ನಿರಾಸೆ ಕಾದಿದೆ! ಸರಕಾರಿ ಸ್ವಾಮ್ಯದ ಎಸ್ಬಿಐ, ಪಂಜಾಬ್ ನ್ಯಾಶನಲ್ ಬ್ಯಾಂಕ್, ಖಾಸಗಿ ರಂಗದ ಐಸಿಐಸಿಐ ಬ್ಯಾಂಕ್ ವಿವಿಧ ಸಾಲಗಳ ಮೇಲಿನ ಬಡ್ಡಿದರವನ್ನು ಗುರುವಾರ ಹೆಚ್ಚಿಸಿವೆ. ಇದರಿಂದಾಗಿ ಸಾಲಗಳ ಮೇಲಿನ ಇಎಂಐ ಹೆಚ್ಚಾಗಲಿದೆ.
2016ರ ಎಪ್ರಿಲ್ ಬಳಿಕ ಇದೇ ಮೊದಲ ಬಾರಿಗೆ ಎಸ್ಬಿಐ ಸಾಲದ ಮೇಲಿನ ಬಡ್ಡಿ ದರ ಹೆಚ್ಚಿಸಿದೆ. ಎಸ್ಬಿಐ ವೆಚ್ಚ ಆಧಾರಿತ ಸಾಲ ವ್ಯವಸ್ಥೆ (ಎಂಸಿಎಲ್ಆರ್)ಯನ್ನು ಶೇ. 0.20ರಷ್ಟು ಹೆಚ್ಚಳ ಮಾಡಿದೆ. ಬುಧವಾರ ವಷ್ಟೇ ಎಸ್ಬಿಐ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿತ್ತು.
ಐಸಿಐಸಿಐ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್ ಎಂಸಿಎಲ್ಆರ್ ಅನ್ನು ಕ್ರಮವಾಗಿ ಶೇ. 0.10 ಮತ್ತು ಶೇ. 0.15 ಎಂದು ಪರಿಷ್ಕರಿಸಿವೆ. ವೆಚ್ಚ ಆಧಾರಿತ ಸಾಲ ವ್ಯವಸ್ಥೆ ಎಂದರೆ ನಿಗದಿತ ದರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಯಾರಿಗೂ ಸಾಲ ಕೊಡದಂತೆ ಇರುವ ನಿಯಮ. ಸದ್ಯ ಅದರ ಪ್ರಮಾಣ ಶೇ. 7.95 ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.