ಜಿಲ್ಲೆಯಲ್ಲಿ 13 ಲಕ್ಷ ಮತದಾರರು
Team Udayavani, Mar 2, 2018, 12:12 PM IST
ಬೀದರ: ವಿಧಾನಸಭೆ ಚುನಾವಣೆಯ ಮಹಾಸಮರಕ್ಕೆ ರಾಜಕೀಯ ಪಕ್ಷಗಳಿಂದ ವೇದಿಕೆ ಸಿದ್ಧಗೊಳ್ಳುತ್ತಿದ್ದರೆ, ಇತ್ತ ಅಭ್ಯರ್ಥಿಗಳ ಭವಿಷ್ಯ ಬರೆಯುವ ಮತದಾರರ ಅಂತಿಮ ಪಟ್ಟಿಯನ್ನು ಜಿಲ್ಲಾಡಳಿತ ಅಂತಿಮಗೊಳಿಸಿದೆ. 40,687 ಹೊಸ ಮತದಾರ ನೋಂದಣಿ ಸೇರಿ ಈಗ ಜಿಲ್ಲೆಯ ಮತದಾರರ ಸಂಖ್ಯೆ 13.01ಲಕ್ಷಕ್ಕೆ ತಲುಪಿದೆ.
ಬೀದರ ಜಿಲ್ಲೆಯು ಬೀದರ, ಔರಾದ, ಭಾಲ್ಕಿ, ಹುಮನಾಬಾದ, ಬಸವಕಲ್ಯಾಣ ಮತ್ತು ಬೀದರ ದಕ್ಷಿಣ ಸೇರಿ ಒಟ್ಟು 6
ಕ್ಷೇತ್ರಗಳನ್ನು ಹೊಂದಿದೆ. ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕೈಗೊಂಡಿದ್ದ ಜಿಲ್ಲಾಡಳಿತ ಇದೀಗ ರಾಜ್ಯ ವಿಧಾನಸಭಾ ಚುನಾವಣೆಗೆ ಅಂತಿಮವಾಗಿ ಅರ್ಹ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು 13,01,546 ಮತದಾರರಲ್ಲಿ 6,78,421 ಪುರುಷರು ಮತ್ತು 6,23,125 ಮಹಿಳೆಯರು ಸೇರಿದ್ದಾರೆ. ಈ ಮತದಾರರು ರಾಜಕಾರಣಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಜಿಲ್ಲೆಯು 9,52,527 ಪುರುಷ ಮತ್ತು 9,16,792 ಮಹಿಳೆ ಸೇರಿ ಒಟ್ಟು 18,69,250 ಜನಸಂಖ್ಯೆ ಹೊಂದಿದೆ. 2017ರ ನ.30ರ ವರೆಗೆ ಜಿಲ್ಲೆಯಲ್ಲಿ 12,60,859 (6,58,602 ಪುರುಷ, 6,02,257 ಮಹಿಳೆ) ಮತದಾರರು ಇದ್ದರು.
ಮತದಾನ ಸಂವಿಧಾನದ ಮೂಲಭೂತ ಹಕ್ಕು. ಇದನ್ನು ಪ್ರತಿಯೊಬ್ಬರು ಚಲಾವಣೆ ಮಾಡಬೇಕು. ಈ ದಿಸೆಯಲ್ಲಿ ಜಿಲ್ಲಾಡಳಿತ 18 ವರ್ಷ ತುಂಬಿದ ಯುವ ಸಮೂಹವನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು “ಮಿಲೇನಿಯಂ ವೋಟರ್ ಆಫ್ ಇಂಡಿಯಾ’ ಬ್ಯಾಡ್ಜ್ ನೀಡುವುದು ಮತ್ತು ಸ್ವೀಪ್ ಯೋಜನೆ ಸೇರಿ ವಿನೂತನ ಕಾರ್ಯಕ್ರಮಗಳನ್ನು ನಡೆಸಿದ್ದು, ಈ ಕ್ರಮದಿಂದಾಗಿ 3 ತಿಂಗಳಲ್ಲಿ 40,687 ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.
2013ರಲ್ಲಿ 11.62ಲಕ್ಷ ಮತದಾರರು: ಜಿಲ್ಲಾಡಳಿತದ ಅಂಕಿ ಅಂಶಗಳ ಪ್ರಕಾರ ಗಡಿ ಜಿಲ್ಲೆ ಬೀದರನಲ್ಲಿ 2013ರ ವೇಳೆ ಮತದಾರರ ಸಂಖ್ಯೆ 11,62,374 ಇತ್ತು. ಈ ಪೈಕಿ ಹುಮನಾಬಾದ ಕ್ಷೇತ್ರ 2.05 ಲಕ್ಷ, ಬೀದರ ದಕ್ಷಿಣ, 1.83, ಬಸವಕಲ್ಯಾಣ 1.97 ಲಕ್ಷ, ಬೀದರ, 1.89 ಲಕ್ಷ, ಭಾಲ್ಕಿ 1.99 ಲಕ್ಷ ಮತ್ತು ಔರಾದನಲ್ಲಿ 1.87 ಲಕ್ಷ ಮತದಾರು ಇದ್ದರು. ಕಳೆದ ಐದು ವರ್ಷಗಳಲ್ಲಿ 1,39,172 ಮತದಾರು
ಹೊಸದಾಗಿ ಸೇರ್ಪಡೆಯಾಗಿದ್ದಾರೆ.
ಸಧ್ಯ ಬೀದರ ಜಿಲ್ಲೆ ಒಟ್ಟು 13,01,546 ಮತದಾರರ ಪೈಕಿ ಹುಮನಾಬಾದ ಕ್ಷೇತ್ರದಲ್ಲಿ ಅತಿ ಹೆಚ್ಚು 2,33,577 (1,21,884 ಮಹಿಳೆ, 1,11,693 ಪುರುಷ) ಮತದಾರರು ಇದ್ದಾರೆ.
ಇನ್ನುಳಿದಂತೆ ಭಾಲ್ಕಿ ಕೇತ್ರದಲ್ಲಿ 2,22,472 (1,16,904 ಪುರುಷ, 1,05,568 ಮಹಿಳೆ) ಮತದಾರರು, ಬಸವಕಲ್ಯಾಣ ಕ್ಷೇತ್ರದಲ್ಲಿ 2,21,072 (1,16,825 ಪುರುಷ, 1,04,247 ಮಹಿಳೆ) ಮತದಾರರು, ಬೀದರ ಕ್ಷೇತ್ರದಲ್ಲಿ 2,14,608 (1,09,861 ಪುರುಷ, 1,04,747 ಮಹಿಳೆ) ಮತದಾರರು ಹಾಗೂ ಔರಾದ ಕ್ಷೇತ್ರದಲ್ಲಿ 2,13,194 (1,11,027 ಪುರುಷ, 1,02,167 ಮಹಿಳೆ) ಮತದಾರರು ಇದ್ದಾರೆ ಎಂದು ಜಿಲ್ಲಾ ಚುನಾವಣಾ ಶಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.