ಮಾತಿನ ಮತ,ಸಂದರ್ಶನ :ಕೆ. ಜಯರಾಮ ಶೆಟ್ಟಿ ಮಾಜಿ ಶಾಸಕ, ಉಳ್ಳಾಲ ಕ್ಷೇತ್ರ
Team Udayavani, Mar 2, 2018, 2:15 PM IST
ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ನಿರೀಕ್ಷೆ ಈಡೇರಿದೆಯೇ ?
ಭಾರೀ ಅಂತರದಲ್ಲಿ ಮತ ಪಡೆದು ಶಾಸಕರಾಗಿ, ರಾಜ್ಯದ ಸಚಿವರಾಗಿ ಅಧಿಕಾರ ಸ್ವೀಕರಿಸಿದಾಗ ಜನರಲ್ಲಿ ನಿರೀಕ್ಷೆ ಇತ್ತು ಆದರೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ. 1997ರಲ್ಲಿ ನಾನು ಶಾಸಕನಾಗಿದ್ದಾಗ ಕಡಲ್ಕೊರೆತಕ್ಕೆ ಶಾಶ್ವತ ತಡೆಗೋಡೆಗೆ ಪಟ್ಟ ಶ್ರಮದಿಂದ ಅಂದಿನ ನೀರಾವರಿ ಸಚಿವ ಜಯಪ್ರಕಾಶ ಹೆಗ್ಡೆ 500 ಕೋಟಿ ರೂ. ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿದ್ದರು. ಕಳೆದ 25 ವರ್ಷಗಳ ಬಳಿಕ ಕಾಮಗಾರಿ ನಡೆದರೂ ಪರಿಣಾಮಕಾರಿ ಪರಿಹಾರ ಸಿಕ್ಕಿಲ್ಲ. ಉಳ್ಳಾಲದಲ್ಲಿದ್ದ ಸಮಸ್ಯೆ ಸೋಮೇಶ್ವರ ಉಚ್ಚಿಲದವರೆಗೆ ಹಬ್ಬಿದೆ. ರೈತರ ಉಪ್ಪು ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಅಸಂಘಟಿತ ಕಾರ್ಮಿಕರ ಭರವಸೆಯನ್ನು ಈಡೇರಿಸಿಲ್ಲ.
ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಏನೆನ್ನುವಿರಿ ?
ಕಾಂಕ್ರೀಟ್ ರಸ್ತೆ, ಕಟ್ಟಡ ನಿರ್ಮಾಣವಷ್ಟೇ ಅಭಿವೃದ್ಧಿಯಲ್ಲ. ಕ್ಷೇತ್ರದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿತ್ತು. ಅದನ್ನು ಸಾಧಿಸುವಲ್ಲಿ ವಿಫಲವಾಗಿದ್ದಾರೆ. ನಾನು ಶಾಸಕನಾಗಿದ್ದಾಗ ತುಂಬೆಯಿಂದ ಕುಡಿಯುವ ನೀರು ತರಿಸುವ ಯೋಜನೆ ರೂಪಿಸಿದ್ದೆ, ಬಳಿಕ ಬಂದ ಶಾಸಕರು ಈ ಕಾರ್ಯದಲ್ಲಿ ಪ್ರಗತಿ ಸಾಧಿಸಿಲ್ಲ. ಹೆಚ್ಚಿನ ಯೋಜನೆಗಳೂ ಭರವಸೆಯಾಗಿಯೇ ಉಳಿದಿವೆ; ಕಾರ್ಯಗತವಾಗಿಲ್ಲ.
ಸಾಮರಸ್ಯಕ್ಕೆ ಯಾವ ರೀತಿಯ ಕೊಡುಗೆ ನೀಡಬಹುದು?
ಕ್ಷೇತ್ರದಲ್ಲಿ ಕೋಮು ಸಾಮರಸ್ಯಕ್ಕೆ ಹೆಚ್ಚಿನ ಮಹತ್ವ ಇದೆ. ಯು.ಟಿ. ಖಾದರ್ ಮತ್ತು ಅವರ ತಂದೆ ಯು.ಟಿ. ಫರೀದ್ ಅವರು ಎಲ್ಲ ಸಮುದಾಯಗಳ ಜನರೊಂದಿಗೆ ಹೆಚ್ಚಾಗಿ ಬೆರೆಯುತ್ತಿದ್ದರು. ಆದರೆ ಖಾದರ್ ಅವಧಿಯಲ್ಲಿ ಕೋಮು ಸಾಮರಸ್ಯಕ್ಕೆ ಹೆಚ್ಚಿನ ಮಹತ್ವ ನೀಡಿಲ್ಲ. ಅವರಿಗೆ ಅದು ಬೇಕಾಗಿಲ್ಲ. ಸಾಮರಸ್ಯದ ಸಂಕೇತವಾಗಿ ಅಬ್ಬಕ್ಕ ಉತ್ಸವವನ್ನು ನನ್ನ ಅವಧಿಯಲ್ಲಿ ಆರಂಭಿಸಿದ್ದೆ. ಇತ್ತೀಚಿನ ದಿನಗಳಲ್ಲಿ ಅಬ್ಬಕ್ಕ ಉತ್ಸವ ಕಾಂಗ್ರೆಸ್ ಉತ್ಸವವಾಗಿ ಮಾರ್ಪಾಡಾಗುತ್ತಿದೆ.
ಜನಪ್ರತಿನಿಧಿಯಾದವರು ಹೇಗೆ ಇದ್ದರೆ ಉತ್ತಮ ?
ಜನಪ್ರತಿನಿಧಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಜನಸಾಮಾನ್ಯರ ನಡುವೆ ಹೋದರೆ ಅವರ ಸಮಸ್ಯೆಗಳನ್ನು ಅರಿತುಕೊಳ್ಳಬಹುದು.
ಈ ಬಾರಿಯ ಚುನಾವಣೆ ಬಗ್ಗೆ ನಿಮ್ಮ ಅಭಿಪ್ರಾಯ ?
ಮಂಗಳೂರು ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯಿಂದ ಉತ್ತಮ ಅಭ್ಯರ್ಥಿ ಇರುತ್ತಾರೆ. ಹಿಂದೂ, ಮುಸ್ಲಿಂ, ಕ್ರೈಸ್ತರ ಸಹಿತ ಎಲ್ಲ ಧರ್ಮಗಳ ಮತದಾರರರು ಬಿಜೆಪಿಯೊಂದಿಗೆ ಇದ್ದಾರೆ.
ನೀವು ಸ್ಪರ್ಧಾ ಆಕಾಂಕ್ಷಿಯೇ ?
ಯಾವುದೇ ನಾಯಕರನ್ನು ಸಂಪರ್ಕಿಸಿಲ್ಲ. ಸೀಟು ಕೊಟ್ಟರೆ ಸ್ಪರ್ಧೆಗೆ ಸಿದ್ಧ. ಕ್ಷೇತ್ರದ ಜನರೊಂದಿಗೆ ಉತ್ತಮ ಸಂಪರ್ಕ ಇಟ್ಟಕೊಂಡಿದ್ದೇನೆ.
ವಸಂತ ಎನ್. ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.