ಮನಸ್ಸಿನ ಆನಂದಕ್ಕೆಬಣ್ಣ ಪೂರಕ: ಹೆಬ್ಟಾರ
Team Udayavani, Mar 3, 2018, 11:12 AM IST
ಕಲಬುರಗಿ: ಕಾಮನ ದಹನ ಮಾಡಿ ಮರುದಿನ ಓಕುಳಿ ಆಡುವ ಮೂಲಕ ಬಣ್ಣಗಳಲ್ಲಿ ಮಿಂದೆದ್ದು ಕುಣಿದು ಕುಪ್ಪಳಿಸಿ ಖುಷಿ ಪಡುವುದರಲ್ಲಿ ಜೀವನದ ಪರಮಾನಂದವಿದೆ. ಬಣ್ಣಗಳಿಂದ ಮನಸ್ಸಿಗೆ ಮುದ ನೀಡಿ ಆನಂದಕ್ಕೆ ಪೂರಕ ಪ್ರೇರಣೆ ನೀಡುತ್ತವೆ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಮುಖ್ಯಸ್ಥ ಲಕ್ಷ್ಮೀನಾರಾಯಣ ಹೆಬ್ಟಾರ ಹೇಳಿದರು.
ನಗರದ ಬಸವೇಶ್ವರ ಆಸ್ಪತ್ರೆ ಎದುರಿನ ಮಲ್ಲಿಕಾರ್ಜುನ ದೇವಸ್ಥನದ ಆವರಣದಲ್ಲಿ ವಿದ್ಯಾನಗರ ವೇಲ್‌ಫೇರ್ ಸೂಸೈಟಿ ಆಶ್ರಯದಲ್ಲಿ ಮಲ್ಲಿಕಾರ್ಜುನ ತರುಣ ಸಂಘ ಹಮ್ಮಿಕೊಂಡಿದ್ದ ಕಾಮದಹನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಯ ಬದಲಾದಂತೆ ಆಚರಣೆಯಲ್ಲಿ ಸಂಘರ್ಷ ಮೂಡಿದೆ. ಪೊಲೀಸರ ಕಾವಲಿನಲ್ಲಿ ಬಣ್ಣ ಎರಚಿಕೊಂಡು ತಾತ್ಕಾಲಿಕ ಖುಷಿ ಪಡುವ ದಿನಗಳನ್ನು ಎದುರಿಸುತ್ತಿದ್ದೇವೆ. ಹೀಗಾಗಿ ಗ್ರಾಮೀಣ ಸೊಗಡಿನ ಆಚರಣೆ ನಮ್ಮ ನಾಗರಿಕ ಎಚ್ಚರಿಕೆಯಿಂದಾಗಿ ಮರೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಆಧ್ಯಾತ್ಮಿಕವಾಗಿ ಪ್ರತಿಯೊಂದು ಬಣ್ಣದಲ್ಲು ಒಂದೊಂದು ಸಂದೇಶವಿದೆ. ಇತ್ತೀಚೆಗೆ ಬಣ್ಣಗಳಿಂದ ಚಿಕಿತ್ಸೆ ಕೊಡಲಾಗುತ್ತಿದ್ದು, ಹಾಗಾಗಿ ಬಣ್ಣ ಮನಸ್ಸಿನ ಆನಂದಕ್ಕೆ ಪೂರಕ, ಪ್ರೇರಕ ಶಕ್ತಿಯಾಗಿದೆ ಎಂದು ಹೇಳಿದರು.
ಮಲ್ಲಿಕಾರ್ಜುನ ತರುಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಮಾತನಾಡಿ, ಕಾಮದಹನದ ಹಿಂದೆ ರೋಚಕ ಪುರಾಣ ಕಥೆಯೂ ಇದೆ. ಕಾಮದಹನದ ವೇಳೆಯಲ್ಲಿ ಗ್ರಾಮೀಣ ಭಾಗದಲ್ಲಿನ ಹಾಡುಗಳು ನಿಜಕ್ಕೂ ನಮ್ಮೊಳಗಿನ ಗತ್ತು ಮತ್ತು ಅಹಂಕಾರ ಕಳೆಯುತ್ತವೆ. ಅಂತಹ ಹಬ್ಬದ ಆಚರಣೆಗಾಗಿ ನಾವು ಅತಿಥಿಗಳನ್ನು ಕರೆಯಿಸಿ ಅವರಿಂದ ಕಾಮದಹನ ಮಾಡಿಸಿ, ಬೊಬ್ಬೆ ಹಾಕಿ ಸಂಭ್ರಮಿಸುತ್ತಿರುವುದು ನೋಡಲು ಸ್ವಲ್ಪ ಭಿನ್ನ ಎನ್ನಿಸಿದರೂ ಅದರೊಳಗೊಂದು ಖುಷಿ ಇದೆ ಎಂದು ಹೇಳಿದರು.
ಅಥಿತಿಗಳಾಗಿ ವಿದ್ಯಾನಗರ ವೇಲ್‌ಫೇರ್ ಸೂಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ. ಕಾರ್ಯದರ್ಶಿ ಶ್ರೀಮಂತ ಶೆಳ್ಳಗಿ, ತರುಣ ಸಂಘದ ಉಪಾಧ್ಯಕ್ಷ ವೀರೇಶ ನಾಗಶೆಟ್ಟಿ ಕಾರ್ಯದರ್ಶಿ ಕರಣ ಆದೋಲಾ, ತರುಣ ಸಂಘದ ಪದಾಧಿಕಾರಿಗಳಾದ ಅಮಿತ್ ಜಿವಣಗಿ, ಮಾಹಾದೇವ ತಂಬಾಕೆ, ಶಿವರಾಜ ಕೊಳಕೂರ ಅಮಿತ್ ಸಿಕೇದ್, ಅನಿಲ ನಾಗೂರ, ಸಂಜು ತಂಭಾಕೆ, ಡಾ| ಸಂತೋಷ ಪಾಟೀಲ, ಕುನಾಲ್ ಆಂದೋಲಾ, ಅಚಲ್‌ರಾಜ್ ಅಂಡಗಿ, ಅನೀಶ ದಶ್ಮಾ ಶಿವಾನಂದ ಸಂದಿಮಠ. ವಿನೋದ ಪಾಟೀಲ, ಶಿವರಾಜ ಮಠಪತಿ, ಮಾವಿನ್ ಉಪ್ಪನ್, ಸಿದ್ದು ಬಾವಿಕಟ್ಟಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.