‘ಬರವಣಿಗೆ ನಿಂತರೆ, ಉಸಿರು ನಿಂತಂತೆ!’


Team Udayavani, Mar 3, 2018, 11:41 AM IST

3-March-6.jpg

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾ. 5ರಿಂದ 7ರವರೆಗೆ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ಎ.ಪಿ. ಮಾಲತಿ ಅವರು ಆಯ್ಕೆಯಾಗಿದ್ದಾರೆ. ಕಾದಂಬರಿಗಾರ್ತಿಯಾಗಿ ಮನ್ನಣೆ ಪಡೆದಿರುವ ಅವರು ಸಮ್ಮೇಳನ ಹಿನ್ನೆಲೆಯಲ್ಲಿ ಸುದಿನದೊಂದಿಗೆ ಮಾತನಾಡಿದ್ದು, ಸಾಹಿತ್ಯ, ಕನ್ನಡ ಕುರಿತಾಗಿ ಮುಕ್ತವಾಗಿ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಪಾಲಿಗೆ ಸಾಹಿತ್ಯ ಅಂದರೇನು?
ಸಾಹಿತ್ಯವೆಂದರೆ ನನ್ನ ಪಾಲಿಗೆ ಬದುಕು. ಬದುಕಿನ ಅರ್ಥ ಕಲಿಸಿ ಜೀವನೋತ್ಸಾಹ ತುಂಬಿಸಿದೆ. ಕೃಷಿ ನನ್ನ ವೃತ್ತಿ. ಸಾಹಿತ್ಯ ನನ್ನ ಪ್ರವೃತ್ತಿ. ಬರವಣಿಗೆ ನನಗೆ ಮಾನಸಿಕ ಸ್ಥಿತಪ್ರಜ್ಞತೆ ಕೊಟ್ಟಂತೆ ಜೀವನದ ಹಲವು ಸೌಂದರ್ಯಗಳನ್ನು ತೋರಿಸಿಕೊಟ್ಟಿದೆ. ಹಿರಿ-ಕಿರಿಯ ಲೇಖಕಿಯರ ಒಡನಾಟದಿಂದ ಬೌದ್ಧಿಕ ಜಗತ್ತು ವಿಸ್ತರಿಸಿದೆ. ಸಾಹಿತ್ಯಾಭಿಮಾನಿಗಳು, ಕಾರ್ಯಕ್ರಮಗಳಿಂದ ನಾನು ಸದಾ ಚೈತನ್ಯದಿಂದ ಇರುವಂತೆ ಸಾಧ್ಯವಾಗಿದೆ. ಸಾಹಿತ್ಯ ಬರವಣಿಗೆ ನಿಂತು ಹೋದರೆ ನನ್ನ ಉಸಿರು ನಿಂತಂತೆ!

 ಸಾಹಿತಿಗಳು ಈಗ ಅನ್ಯ ಕಾರಣದಿಂದಲೇ ಹೆಚ್ಚು ಸುದ್ದಿಯಾಗುತ್ತಾರಲ್ಲ?
ಸಮಾಜದ ಅನೇಕ ವೈರುಧ್ಯಗಳ ನಡುವೆ ಸಾಹಿತಿ ಬೆಳೆಯಬೇಕಾಗುತ್ತದೆ. ಬದುಕಿನ ವಾಸ್ತವದಲ್ಲಿ ಸಮಾಜದ ಒಳಿತು ಕೆಡಕುಗಳನ್ನು ಚಿಂತಿಸುವ ಬುದ್ಧಿವಂತ ಸಾಹಿತಿ ತನಗೆ ಕಂಡದ್ದನ್ನು ನಿಸ್ಸಂಕೋಚವಾಗಿ ಹೇಳುತ್ತಾನೆ. ಅವನ ಟೀಕೆ, ವಿಮರ್ಶೆಗಳಿಗೆ ಜನ ಹೆಚ್ಚು ಗಮನ ಕೊಡುತ್ತಾರೆ. ಹಾಗೆಂದು ಎಲ್ಲರಿಗೂ ಪಥ್ಯ ಆಗಲೇಬೇಕಿಲ್ಲ. ಅನಿಸಿದ್ದನ್ನು ಹೇಳುವ ಹಕ್ಕು ಪ್ರಜ್ಞಾವಂತ ಓದುಗನಿಗೂ ಇದೆ. ಸಾಹಿತಿ ಕೊಡುವ ಹೇಳಿಕೆ ಮೇಲೆ ಗೊಂದಲವಿಲ್ಲದ ಆರೋಗ್ಯಪೂರ್ಣ ಚರ್ಚೆ ನಡೆಯಬೇಕು. ಶಾಂತ, ಸಹಬಾಳ್ವೆ, ಸಾಮರಸ್ಯ ಇರುವಂತೆ ಸಾಹಿತಿ-ಓದುಗ- ಸಮಾಜ ಎಚ್ಚರವಾಗಿರಬೇಕು.

ಬಾಲ್ಯದಲ್ಲಿ ನಿಮ್ಮನ್ನು  ಸಾಹಿತಿಯಾಗಿ ಬೆಳೆಸಿದ  ಅಂಶಗಳು ಯಾವುದು?
ದಕ್ಷಿಣ ಕನ್ನಡದ ವಿಟ್ಲದವರಾದ ತಂದೆ ಉದ್ಯೋಗ ನಿಮಿತ್ತ ಉತ್ತರ ಕನ್ನಡದ ಕಾರವಾರ, ಕರ್ಕಿ, ಹೊನ್ನಾವರ, ಧಾರವಾಡ, ಆನಂತರ ಮುಂಬಯಿ ಹೀಗೆ ಹಲವಾರು ಸಣ್ಣ ದೊಡ್ಡ, ಮಹಾನಗರದಲ್ಲಿ ಇದ್ದವರು. ಕರ್ಕಿಯಲ್ಲಿ ಹಾಸ್ಯಗಾರರ ಯಕ್ಷಗಾನ ಮೇಳದ ಭಾಗವತಿಕೆ ಹಾಡು, ಕುಣಿತ, ವೇಷಭೂಷಣಗಳು ಮಕ್ಕಳಾದ ನಮ್ಮ ಮೇಲೆ ತುಂಬ ಪ್ರಭಾವ ಬೀರಿತ್ತು. 

ಧಾರವಾಡದಲ್ಲಿ ಖ್ಯಾತ ಕವಿ ದ.ರಾ.ಬೇಂದ್ರೆ, ವಿ.ಜಿ.ಭಟ್ಟ, ಪಾಂಡೇಶ್ವರ ಗಣಪತ ರಾಯರು, ಶಾಲೆಯಲ್ಲಿ ಕನ್ನಡ ಟೀಚರ್‌ರಿಂದ ಕಾರಂತರ ಮತ್ತು ಹಲವರ ಕಾದಂಬರಿಗಳನ್ನು ಓದುವ ಹವ್ಯಾಸ, ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳ ಹುಚ್ಚು, ಓಪನ್‌ ಥಿಯೇಟರ್‌ನಲ್ಲಿ ನಾಟಕಗಳನ್ನು ನೋಡುವ ಗೀಳು, ಮುಂಬಯಿಯಲ್ಲಿ ಸುನೀತಾ ಶೆಟ್ಟಿ, ಶ್ರೀನಿವಾಸ ಹಾವನೂರು, ಯಶವಂತ ಚಿತ್ತಾಲ, ವ್ಯಾಸರಾಯ ಬಲ್ಲಾಳರು ಮುಂತಾದ ಸಾಹಿತಿಗಳ ಒಡನಾಟ, ಬಂಗಾಲೀ ಅನುವಾದಕ ಅಹೋಬಲ ಶಂಕರರಿಂದ ಬರವಣಿಗೆಗೆ ಮಾರ್ಗದರ್ಶನ ಈ ಹಲವು ಬಾಲ್ಯದಲ್ಲಿ ಬರೆಯಲು ಪ್ರೇರಣೆ ನೀಡಿದ್ದವು.

ಪುತ್ತೂರಿನಲ್ಲಿ ಮಾವ ಎ.ಪಿ.ಸುಬ್ಬಯ್ಯ ಮತ್ತು ಪತಿ ಎ.ಪಿ. ಗೋವಿಂದ ಭಟ್ಟರ ಪ್ರೋತ್ಸಾಹ, ಜಿ.ಟಿ.ನಾರಾಯಣರಾಯ ಅವರ ಸಹಕಾರ, ಶಿವರಾಮ ಕಾರಂತರ, ಅನುಪಮಾ ನಿರಂಜನ ದಂಪತಿಗಳ ಆತ್ಮೀಯ ಸ್ನೇಹಾಚಾರ ನೆರವಾಗಿದೆ.

ಸರಕಾರಿ ಕನ್ನಡ ಶಾಲೆಗಳ ಕುರಿತು ನಿಮ್ಮ ಅಭಿಪ್ರಾಯ ?
ಇತ್ತೀಚಿನ ದಿನಗಳಲ್ಲಿ ಕನ್ನಡ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವಾಸ್ತವದಲ್ಲಿ ಕನ್ನಡ ಭಾಷಾಭಿಮಾನ ಕುಂಠಿತವಾಗುತ್ತಿದೆ. ಇಂಗ್ಲಿಷ್‌ ವ್ಯಾಮೋಹದಿಂದ ಹೆತ್ತವರು ತಮ್ಮ ಅಸ್ಮಿತೆಯನ್ನು ಮರೆತರೆ ಕನ್ನಡ ಲಿಪಿ ಅರಿಯದ ಮಕ್ಕಳು ಕನ್ನಡದ ಬಗೆಗೆ ಸಂಪೂರ್ಣ ಅಜ್ಞಾನಿಗಳು. ಗಡಿನಾಡಿನಲ್ಲಿ ವಾಸಿಸುವ ಕನ್ನಡಿಗರ ಮತ್ತು ಕನ್ನಡ ಭಾಷೆಯ ಸ್ಥಿತಿ ಶೋಚನೀಯ. ವರ್ಷವೂ ಎಲ್ಲ ಸಮ್ಮೇಳನದಲ್ಲಿ ಕನ್ನಡ ಭಾಷಾ ಉಳಿವಿಗಾಗಿ ಎಚ್ಚರಿಕೆಯ ಗಂಟೆ ಬಾರಿಸಿದರೂ ಇನ್ನೂ ಫಲಿತಾಂಶ ಸಿಕ್ಕಿಲ್ಲ.

ಹೆತ್ತವರಲ್ಲಿ ಸರಕಾರಿ ಕನ್ನಡ ಶಾಲೆಗಳ ಬಗ್ಗೆ ನಂಬಿಕೆ ಮೂಡಿಸುವುದು ಹೇಗೆ?
ಹಳ್ಳಿಯಲ್ಲೂ ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬ ನಂಬಿಕೆ ಮೂಡಿಸಬೇಕು. ಪ್ರತಿಭಾವಂತ ಶಿಕ್ಷಕ, ಶಿಕ್ಷಕಿಯರನ್ನು ಅರ್ಹತೆಯ ಆಧಾರದಲ್ಲಿ ನೇಮಕ ಮಾಡಬೇಕು. ಶಾಲೆಯಲ್ಲಿ ಮೂಲಸೌಕರ್ಯ ವೃದ್ಧಿ, ಶಾಲೆಗೆ ಹೋಗಿ ಬರುವ ಹಳ್ಳಿ ರಸ್ತೆಯ ಅಭಿವೃದ್ಧಿ, ವಾಹನ ವ್ಯವಸ್ಥೆ ಇತ್ಯಾದಿ ಒದಗಿಸಿದರೆ ಕನ್ನಡ ಶಾಲೆ ಉಳಿವ ಸಾಧ್ಯತೆ ಇದೆ.

ಇಂಗ್ಲೀಷ್‌ ಶಿಕ್ಷಣ ಮಕ್ಕಳ ಸಾಹಿತ್ಯಾಸಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆಯೇ?
ಕನ್ನಡ ಭಾಷೆಯನ್ನು ಪಠ್ಯದಲ್ಲಿ ಸೇರಿಸಿದರಷ್ಟೇ ಸಾಹಿತ್ಯಾಸಕ್ತಿಗೆ ಕಾರಣವಾಗದು. ಮನೆಯಲ್ಲಿ ಓದುವ ಸಂಸ್ಕೃತಿ ಇರಬೇಕು. ಮನೆಯ ಹಿರಿಯರು ದಿನ ಪತ್ರಿಕೆ, ವಾರ ಪತ್ರಿಕೆ, ಮಾಸ ಪತ್ರಿಕೆ, ಕಥೆ, ಕಾದಂಬರಿ – ಒಟ್ಟು ಸಾಹಿತ್ಯದ ಓದಿನಲ್ಲಿ ತೊಡಗಿದರೆ ಎಳೆಯ ಮಕ್ಕಳಲ್ಲಿ ಅದು ಗಾಢವಾದ ಪ್ರಭಾವ ಬೀರುತ್ತದೆ.

ಜಿಲ್ಲಾ ಸಮ್ಮೇಳನದ ಅಧ್ಯಕ್ಷತೆ ಮಹಿಳೆಗೆ ಸಿಕ್ಕ ಪ್ರಾಶಸ್ಯವೋ ಅಥವಾ ನಿಮ್ಮ ಸಾಹಿತ್ಯ ಕೃಷಿಗೆ ಸಿಕ್ಕಿದ ಸ್ಥಾನವೋ?
60 ವರ್ಷದ ಸುದೀರ್ಘ‌ ಜೀವನದಲ್ಲಿ ಸಾಹಿತ್ಯ ಕೃಷಿಯಲ್ಲಿದ್ದರೂ ಸಾಧನೆಯ ಬಗ್ಗೆ ಚಿಂತಿಸಲಿಲ್ಲ. ಪ್ರಶಸ್ತಿ ಪುರಸ್ಕಾರದ ಬೆನ್ನು ಹತ್ತಲಿಲ್ಲ. ಆದರೆ ಕಾಲಕಾಲಕ್ಕೆ ಸಾಧನೆಯ ನೆಲೆಯಲ್ಲಿ ಒಲಿದು ಬಂದ ಗೌರವವನ್ನು, ಜೀವಮಾನದ ಸಾಹಿತ್ಯ ಸಾಧನೆಗೆ ಬಂದ ಗೌರವವನ್ನೂ ವಿನೀತಳಾಗಿ ಒಪ್ಪಿಕೊಂಡಿದ್ದೇನೆ. ಜಿಲ್ಲಾ ಸಮ್ಮೇಳನಾಧ್ಯಕ್ಷ ಗೌರವ ಸ್ಥಾನ ದೊರೆತದ್ದು ನಾನು ಬಯಸದೇ ಬಂದ ಭಾಗ್ಯ.

ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಬರಹಗಾರರ ಬಗ್ಗೆ ನಿಮ್ಮ ಅನಿಸಿಕೆ?
ಸೃಜನಶೀಲ ಕಥೆ ಕಾದಂಬರಿಗಿಂತ ಈಗಿನವರು ಕವನ, ಲಲಿತ ಪ್ರಬಂಧತ್ತ ಹೊರಳಿದ್ದಾರೆ ಎನ್ನಿಸುತ್ತದೆ. ಒಳ್ಳೆಯದೇ. ಆದರೆ ನಡೆಯಬೇಕಾದ ಹಾದಿ ದೂರವಿದೆ. ಸತತ ಬರವಣಿಗೆಯಿಂದಲೇ ಉತ್ತಮ ಕೃತಿಯ ಸಾಕ್ಷಾತ್ಕಾರ. ಇನ್ನೊಬ್ಬರ ರುಚಿ ನೋಡಿ ಬರೆಯುವುದಲ್ಲ. ನಮ್ಮ ರುಚಿ ಎತ್ತರಕ್ಕೆ ಓದುಗನನ್ನು ಕೊಂಡೊಯ್ಯಲು ಪ್ರಯತ್ನಿಸುವುದೇ ಲೇಖಕರ ಗುರಿಯಾಗಬೇಕು.

ಈಗ ಶುದ್ಧ ಸಾಹಿತ್ಯವಿಲ್ಲ ಎನ್ನುತ್ತಾರೆ. ನಿಮ್ಮ ಅಭಿಪ್ರಾಯ ಏನು?
ಶುದ್ಧ ಸಾಹಿತ್ಯವೆಂದರೇನು? ಅಪ್ಪಟ ಕನ್ನಡದಲ್ಲಿದ್ದರಷ್ಟೇ ಶುದ್ಧ ಸಾಹಿತ್ಯವೇ? ಅದಕ್ಕಿಂತ ಬೇರೆ ಹೆಚ್ಚಿನದ್ದೇನೋ ಇದೆ. ಬದುಕಿನ ಅರ್ಥವನ್ನು ಶೋಧಿಸಿ ನಮ್ಮ ಜೀವನಕ್ಕೆ ಹೊಸ ಹಾದಿ ತೋರುವ ಸಾಹಿತ್ಯ ನನಗೆ ಶುದ್ಧ ಸಾಹಿತ್ಯ ಅಂದೆನಿಸುತ್ತದೆ. ನಮ್ಮ ನೆಲೆದ ಸಂಸ್ಕೃತಿಯಲ್ಲಿ ಹುಟ್ಟುವ ಕೃತಿ, ಮಾತೃಭಾಷೆಯಲ್ಲಿ ಸಂವಹನ ಸರಿಯಾಗಿದ್ದರೆ ಸಾಹಿ ತ್ಯವೂ ಶುದ್ಧವಾಗಿರುತ್ತದೆ. ಸಮುದಾಯದ ಭಾಷೆಯನ್ನು ಸಾಹಿತ್ಯ ಕೃತಿಗಳಲ್ಲಿ ಹಿತಮಿತವಾಗಿ ಬಳಸಿದರೆ ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇಂಗ್ಲಿಷನ್ನು ಹೆಚ್ಚು ಬಳಸಿದರೆ ಕಲಸುಮೇಲೋಗರವಾಗುತ್ತದೆ.

ಎ.ಪಿ.ಮಾಲತಿ ಅವರ ಬಗ್ಗೆ
20 ಕಾದಂಬರಿ, 8 ಇತರ ಕೃತಿಗಳು, 2 ಸಣ್ಣ ಕಥಾ ಸಂಕಲನ, 3 ಜೀವನ ಚರಿತ್ರೆ ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಆತ್ಮಕಥನ ಸ್ಮತಿಯಾನ ಬಿಡುಗಡೆಗೊಳ್ಳಲಿದೆ. ಹೊಸ ಕೃತಿಯೊಂದು ಪ್ರಕಟನೆಯ ಹಂತದಲ್ಲಿದೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಥಾರಂಗ ಪ್ರಶಸ್ತಿ ಇತ್ಯಾದಿ ಸಂದಿವೆ. ಉತ್ತರಕನ್ನಡದ ಭಟ್ಕಳದಲ್ಲಿ ಜನಿಸಿದ ಅವರು ಪತಿ ಎ.ಪಿ. ಗೋವಿಂದ ಭಟ್ಟರೊಂದಿಗೆ ಆರ್ಯಾಪು ಗ್ರಾಮದ ಸಂಟ್ಯಾರಿನಲ್ಲಿ ವಾಸವಾಗಿದ್ದಾರೆ. ಪುತ್ರ ಡಾ| ಎ.ಪಿ. ರಾಧಾಕೃಷ್ಣ ಪುತ್ತೂರು ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ. ಪುತ್ರಿ ಲಲಿತಾ ಮೈಸೂರಿನಲ್ಲಿ ಉದ್ಯಮಿ ಆಗಿದ್ದಾರೆ.

ಕಿರಣ್‌ ಪ್ರಸಾದ್‌ ಕುಂಡಡ್ಕ 

ಟಾಪ್ ನ್ಯೂಸ್

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.