ಅಂಧೇರಿಯಲ್ಲಿ ಅಗ್ನಿ ದುರಂತ: ಹಲವು ಕಾರ್ಖಾನೆ ಘಟಕಗಳು ಭಸ್ಮ
Team Udayavani, Mar 3, 2018, 12:11 PM IST
ಮುಂಬಯಿ : ನಗರ ಹೊರವಲಯದ ಅಂಧೇರಿಯಲ್ಲಿ ನಿನ್ನೆ ತಡರಾತ್ರಿ ಉಂಟಾದ ಭೀಕರ ಅಗ್ನಿ ಅನಾಹುತದಲ್ಲಿ ಅನೇಕ ಗಾರ್ಮೆಂಟ್ ಮತ್ತು ರಾಸಾಯನಿಕ ಉತ್ಪಾದನಾ ಘಟಕಗಳು ಸುಟ್ಟು ಭಸ್ಮವಾಗಿರುವುದಾಗಿ ಹಿರಿಯ ಪೌರಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಸಲ್ಫಾ ಗ್ರಾಮದಲ್ಲಿ ರಾತ್ರಿ 11.45ರ ಹೊತ್ತಿಗೆ ಒಂದು ಘಟಕದಲ್ಲಿ ಕಾಣಿಸಿಕೊಂಡ ಬೆಂಕಿಯು ಶರವೇಗದಲ್ಲಿ ಇತರ ಘಟಕಗಳಿಗೆ ಹಬ್ಬಿಕೊಂಡಿತು. ಬೆಂಕಿ ನಂದಿಸುವ ಕಾರ್ಯಾಚರಣೆ ಈಗಲೂ ನಡೆಯತ್ತಿದೆ ಎಂದವರು ಹೇಳಿದರು.
ಸುಮಾರು 8 ಅಗ್ನಿ ಶಾಮಕಗಳು, 6 ಜಂಬೋ ಟ್ಯಾಂಕರ್‌ಗಳು ಮತ್ತು 5 ಜೆಟ್ಟಿಗಳನ್ನು ಬೆಂಕಿ ನಂದಿಸುವ ಕಾರ್ಯಾಚರಣೆಗೆ ಬಳಸಲಾಯಿತು.
ಈ ಬೆಂಕಿ ಅನಾಹುತದಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ; ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂದು ಇನ್ನೂ ಗೊತ್ತಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.