ಸಮಬಾಳು-ಸಮಪಾಲು ತತ್ವ ಪ್ರತಿಪಾದಿಸಿದ್ದ ಶರಣರು
Team Udayavani, Mar 3, 2018, 12:13 PM IST
ಬೀದರ: ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ತತ್ವ ಹಾಗೂ ಸ್ವತ್ಛ ಸಮಾಜದ ಕನಸನ್ನು ಅಂದು ಬಸವಾದಿ ಶರಣರು ಕಂಡಿದ್ದರು. ಆ ಕನಸು ನನಸು ಮಾಡಿಸಿ ತೋರಿಸಿ ವಿಶ್ವಕ್ಕೆ ಶರಣರು ಮಾದರಿಯಾದರು ಎಂದು ಮಾತೆ ಸತ್ಯಾದೇವಿ ನುಡಿದರು.
ನಗರದ ಬಸವ ಮಂಟಪದಲ್ಲಿ ಜಿಲ್ಲಾ ರಾಷ್ಟ್ರೀಯ ಬಸವ ದಳ ಮತ್ತು ಲಿಂಗಾಯತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಮಾಸಿಕ ಕಲ್ಯಾಣ ಕ್ರಾಂತಿ ಹುಣ್ಣಿಮೆ ಮತ್ತು ಬಸವ ಜ್ಯೋತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಜಾತಿ, ವರ್ಣ ಮತ್ತು ವರ್ಗರಹಿತ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ಸಮಗಾರ ಹರಳಯ್ಯನವರ ಮಗ ಶೀಲವಂತನಿಗೂ, ಬ್ರಾಹ್ಮಣರ ಮಧುವರಸರ ಮಗಳು ಲಾವಣ್ಯಳಿಗೂ ಅಂತರ್ಜಾತಿ ಮದುವೆ ಮಾಡಿಸಿದರು. ಇದಕ್ಕಾಗಿ ಅವರನ್ನು ಆನೆ ಕಾಲಿಗೆ ಕಟ್ಟಿ ಎಳೆಹೂಟೆ ಶಿಕ್ಷೆ ವಿ ಧಿಸಲಾಯಿತು. ಶರಣರೆಲ್ಲ ಕಲ್ಯಾಣದಿಂದ ಚದುರಿದರು. ವಚನ ಸಾಹಿತ್ಯವನ್ನು ಸುಡಲಾಯಿತು. ಹೀಗೆ ಕಲ್ಯಾಣ ಕ್ರಾಂತಿಯ ನೆನಪಿಗಾಗಿ ಈ ಹುಣ್ಣಿಮೆಯನ್ನು ಕಲ್ಯಾಣ ಕ್ರಾಂತಿ ಹುಣ್ಣಿಮೆ ಎಂದು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಸಮಾಜ ಸೇವಕ ದಶಪ್ಪ ಬೋರಗೊಂಡ ಮಾತನಾಡಿ, ಬಸವಾದಿ ಶರಣರ ಷಡ್‌ಗಣಾಧೀಶರಲ್ಲಿ ಶಿವಯೋಗಿ ಸಿದ್ಧರಾಮೇಶ್ವರರು ಕೂಡಾ ಒಬ್ಬರಾಗಿದ್ದರು. ಹಾದಿ ಹಾದಿಗೆ ಗುಡಿಗಳನ್ನು ಕಟ್ಟುತ್ತ, ಬೀದಿ ಬೀದಿಗೆ ಕೆರೆಗಳನ್ನು ಕಟ್ಟಿಸುತ್ತ ಸಾಗಿದ್ದರು. ಅಜ್ಞಾನ ಅಂಧಕಾರದಲ್ಲಿ ಮುಳುಗಿದ್ದ ಸಿದ್ಧರಾಮರನ್ನು ಅಲ್ಲಮಪ್ರಭು ಮತ್ತು ಬಸವಣ್ಣನವರು ಪರಿವರ್ತಿಸಿ, ಚೆನ್ನಬಸವಣ್ಣನವರಿಂದ ಲಿಂಗದೀಕ್ಷೆ ಕೊಡಿಸಿ ಶಿವಯೋಗಿಯನ್ನಾಗಿ ಮಾಡಿದರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಸಿದ್ಧರಾಮರ ಕೊಡುಗೆ ಅಪಾರವಾಗಿತ್ತು. ಹಾಗಾಗಿ ಶರಣ ಸಂಕುಲದಲ್ಲಿ ಅವರ ಹೆಸರು ಅಮರವಾಗಿ ಉಳಿದಿದೆ ಎಂದು ಹೇಳಿದರು.
ಡಾ| ನಾಗಶೆಟ್ಟಿ ಪಾಟೀಲ ಗಾದಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ ಅಧ್ಯಕ್ಷತೆ ವಹಿಸಿದ್ದರು. ಶಿವರಾಜ ಪಾಟೀಲ ಅತಿವಾಳ ಧ್ವಜಾರೋಹಣ ನೆರವೇರಿಸಿದರು. ನಾಗಶೆಟ್ಟಿ ದಾಡಗಿ, ಕಾಶಪ್ಪ, ಸೀತಾ ಅಡಿವೆಪ್ಪ ಪಟೆ° ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಬಸವ ತತ್ವಕ್ಕಾಗಿ ದುಡಿದ ಹಿರಿಯ ನಾಗರಿಕರಾದ ಅಣ್ಣೆಪ್ಪ ಮಂಗಲಗಿ, ಬಂಡೆಪ್ಪ ಅಳ್ಳಿ, ಶಿವಕುಮಾರ ಪಾಟೀಲ ಹಾರೂರಗೇರಿ ದಂಪತಿಗಳನ್ನು ಸನ್ಮಾನಿಸಲಾಯಿತು. ಗಣಪತಿ ದೇಶಮುಖ, ಗಣಪತಿ ಬಿರಾದಾರ, ಮನ್ಮಥಯ್ಯ ಸ್ವಾಮಿ, ಅಶೋಕ ಶೀಲವಂತ, ವಿವೇಕ ಪಟೆ°, ಶಾಂತಾದೇವಿ ಬಿರಾದಾರ, ಚಂದ್ರಕಲಾ ದಾಡಗಿ, ಮಹಾಲಿಂಗ ಸ್ವಾಮಿ, ಕಾಶಿನಾಥ ಸೂರ್ಯವಂಶಿ ಮತ್ತಿತರರು ಇದ್ದರು. ಸುರೇಶ ಸ್ವಾಮಿ ಸ್ವಾಗತಿಸಿದರು. ಮಹಾರುದ್ರ ಡಾಕುಳಗಿ ನಿರೂಪಿಸಿದರು. ರವಿ ಪಾಪಡೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
ಗುತ್ತಿಗೆದಾರ ಸಚಿನ್ ಕೇಸ್: ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ
Bidar: ಸಚಿನ್ ಆತ್ಮಹತ್ಯೆ ಪ್ರಕರಣ; ನಿಗೂಢ ಸಾವಿನ ತನಿಖೆ, ಮೃತ ಕುಟುಂಬಕ್ಕೆ ಪರಿಹಾರ:ಆಗ್ರಹ
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
Bidar; ಗುತ್ತಿಗೆದಾರ ಸಚಿನ್ ಮನೆಗೆ ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.