ಹೋಳಿ ಸಂಭ್ರಮ
Team Udayavani, Mar 3, 2018, 12:56 PM IST
ವಿಜಯಪುರ: ಅರಿಷಡ್ವರ್ಗಗಳನ್ನು ಗೆಲ್ಲುವ ಪಾರಂಪರಿಕ ಹಿನ್ನೆಲೆ ಹೊಂದಿರುವ ಹಿಂದೂಗಳ ಪವಿತ್ರ ಹಬ್ಬ ಹೋಳಿ ಬಣ್ಣದ ಸಂಭ್ರಮದಲ್ಲೇ ನಾಗರಿಕರು ಮುಳಿಗೆದ್ದರು.
ಹುಣ್ಣಿಮೆ ಮರು ದಿನವಾದ ಶುಕ್ರವಾರ ಜಿಲ್ಲೆಯ ಬಹುತೇಕ ನಗರ ಪ್ರದೇಶಗಳಲ್ಲಿ ಎಲ್ಲೆಲ್ಲೂ ರಂಗಿನಾಟದ ಮೋಜೇ ಮೋಜು. ಹೆಣ್ಣು-ಗಂಡು, ಮಕ್ಕಳು-ವೃದ್ಧರು ಎನ್ನದೇ ಸ್ನೇಹಿತರು, ಆಪ್ತರಿಗೆಲ್ಲ ವೈವಿದ್ಯಮಯ ಬಣ್ಣಗಳನ್ನು ಎರಚಿಕೊಂಡು ಕುಣಿದು, ಕುಪ್ಪಳಿಸುವ ದೃಶ್ಯಗಳು ಸಾಮಾನ್ಯವಾಗಿದ್ದವು. ಹಲವು ಕಡೆಗಳಲ್ಲಿ ಹಲಗೆ ನಾದದ ಜೊತೆಗೆ ಜಾನಪದಗಳಲ್ಲಿ ಜಾನಪದರು ವರ್ಣಿಸಲ್ಪಟ್ಟಿರುವ ಹಲವು ಹಾಡುಗಳನ್ನು ಕೊಂಚ ಕೊಂಚ ಹಾಡಿಕ ಕುಣಿದರು.
ನಗರದಲ್ಲಿ ಹೋಳಿ ಹುಣ್ಣಿಮೆ ಹಿಂದಿನ ದಿನ ಗುರುವಾರ ಮಧ್ಯ ರಾತ್ರಿ ವೇಳೆ ಮನೆ ಮುಂದೆ ಕುಳ್ಳು-ಕಟ್ಟಿಗೆ ರಾಶಿ ಹಾಕಿ ಬೆಂಕಿ ಹೊತ್ತಿಸಿ, ಮೂರ್ತಿ ದಹನ ಮಾಡಿ ಹೋಳಿ ಹಬ್ಬಕ್ಕೆ ಚಾಲನೆ ನೀಡಿದರು. ನಗರದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಕಟ್ಟಿಗೆ, ಕುಳ್ಳುಗಳ ಬೃಹತ್ ರಾಶಿಗೆ ಬೆಂಕಿ ಹೊತ್ತಿಸಿ ಕಾಮದಹನ ಮಾಡಿ ಸಾರ್ವಜನಿಕ ಹೋಳಿ ಆಚರಣೆಗೆ ಚಾಲನೆ ನೀಡಲಾಯಿತು. ನಗರ ಮಾತ್ರವಲ್ಲ ಜಿಲ್ಲೆಯ ಬಹುತೇಕ ಎಲ್ಲ ನಗರ, ಪಟ್ಟಣ, ಪ್ರದೇಶದಲ್ಲಿ ಹೋಳಿ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು.
ಕಾಮದಹನದ ಬಳಿಕ ಶುಕ್ರವಾರ ಬೆಳಗ್ಗೆಯಿಂದಲೇ ಎಲ್ಲೆಲ್ಲೂ ಯುವಕರು, ಯುವತಿಯರು, ಮಕ್ಕಳು ಮಾತ್ರವಲ್ಲದೇ ಮಧ್ಯ ವಯಸ್ಕರು ಗುಂಪು ಗುಂಪಾಗಿ ತಮ್ಮ ಸ್ನೇಹಿತರೊಂದಿಗೆ ಗಲ್ಲಿ ಗಲ್ಲಿಯಲ್ಲೆಲ್ಲಾ ತಿರುಗಿ ಓಕುಳಿ ಆಡಿದರು. ಕೆಲ ಯುವಕರು ದ್ವಿಚಕ್ರ ಹಾಗೂ ಲಘು ವಾಹನಗಳಲ್ಲಿ ತೆರಳಿ ವಿವಿಧ ಬಣ್ಣಗಳನ್ನು ಎರಚುತ್ತ ಸಂಭ್ರಮಿಸುತ್ತಿದ್ದರು.
ಬಣ್ಣದ ಆಟದಲ್ಲಿ ತೊಡಗಿರುವ ಗುಂಪಿನ ಯುವಕರಿಗೆ ಹಲವು ಕಡೆಗಳಲ್ಲಿ ವ್ಯಾಪಾರಿಗಳು ಹೋಳಿ ಹಬ್ಬಕ್ಕೆ ಉತ್ತೇಜನ ನೀಡಲು ಹಣ, ಸಿಹಿ ನೀಡಿ ಪ್ರೋತ್ಸಾಹಿಸಿದರು. ಕೆಲವು ವ್ಯಾಪಾರಿಗಳು ಓಕುಳಿ ಹಬ್ಬದ ನಿಮಿತ್ತ ನಗರದ ಹಲವು ಕಡೆಗಳಲ್ಲಿ ವ್ಯಾಪಾರಿಗಳು ವ್ಯವಹಾರ ಸ್ಥಗಿತಗೊಳಿಸಿ ಬಣ್ಣದ ಹಬ್ಬದಲ್ಲಿ ಪಾಲ್ಗೊಂಡು ಓಕುಳಿಯ ಸಂಭ್ರಮ ಅನುಭವಿಸಿದರು.
ಇನ್ನು ನಗರದ ಹಲವು ಕಡೆಗಳಲ್ಲಿ ಕೃತಕ ಹೊಂಡ ಹಾಗೂ ಜಲ ಸಿಂಚನ ವೇದಿಕೆಗಳನ್ನು ನಿರ್ಮಿಸಲಾಗಿತ್ತು. ವೇದಿಕೆ ಸ್ಥಳದಲ್ಲೇ ವಿವಿಧ ಹಾಡುಗಳ ಸಂಗೀತ ನಿನಾದ ತೂರಿ ಬರುತ್ತಿತ್ತು. ಇಂಥ ಕಡೆಗಳಲ್ಲೆಲ್ಲ ಹೊರ ಪ್ರದೇಶದಿಂದ ನಗರಕ್ಕೆ ಶಿಕ್ಷಣಕ್ಕಾಗಿ ಬಂದಿರುವ ವಿವಿಧ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಣ್ಣದ ಜೊತೆಗೆ ಮಣ್ಣಿನ ನೀರಲ್ಲೂ ಮಿಂದೆದ್ದು ವಿಶಿಷ್ಟ ಅನುಭವ ಪಡೆದರು.
ಹೋಳಿ ಹಬ್ಬದ ನಿಮಿತ್ತ ಹಿಂದೂ ಸಂಪ್ರದಾಯದ ಮನೆಗಳಲ್ಲಿ ಹೋಳಿಗೆ ಸೇರಿದಂತೆ ವಿವಿಧ ಬಗೆಯ ಖಾದ್ಯ ತಯಾರಿಸಿದ್ದ ಮಹಿಳೆಯರು, ದಹನಕ್ಕೆ ಮುನ್ನ ಮನ್ಮಥನಿಗೆ ನೈವೇದ್ಯ ಮಾಡಿದರು. ಹಲವರು ಹೋಳಿ ಹಬ್ಬಕ್ಕೆ ಸ್ನೇಹಿತರನ್ನು ತಮ್ಮ ಮನೆಗೆ ಆಹ್ವಾನಿಸಿ ಸಿಹಿ ಊಟ ಹಾಕಿಸಿ ರಂಗಿನ ಆಟವನ್ನು ಸ್ಮರಣಾರ್ಹ ಮಾಡಿಕೊಂಡರು.
ಸಂಭ್ರಮ ಹೋಳಿ
ವಿಜಯಪುರ: ಹೋಳಿ ಹಬ್ಬದ ವೇದಿಕೆಯಲ್ಲಿ ಸಂಗೀತಕ್ಕೆ ಕುಣಿದು ಕುಪ್ಪಳಿಸಿದ ಯುವತಿಯರ ಸಮೂಹ.
ವಿಜಯಪುರ: ನಗರದ ಬಿಎಲ್‌ಡಿಇ ರಸ್ತೆಯಲ್ಲಿ ಹೋಳಿ ಹಬ್ಬಕ್ಕಾಗಿ ನಿರ್ಮಿಸಿರುವ ಕೃತಕ ಹೊಂಡಗಳಲ್ಲಿ ಕಾಲೇಜುಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಮಿಂದೆದ್ದ ಪರಿ.
ನಾಲತವಾಡ: ಬಸವೇಶ್ವರ ನಗರದಲ್ಲಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ ಬಾಲಕಿಯರು.
ತಾಳಿಕೋಟೆ: ಹೋಳಿ ಹುಣ್ಣಿಮೆಯ ನಿಮಿತ್ತ ಪಟ್ಟಣದಲ್ಲಿ ರತಿ ಮನ್ಮಥರ ಮೂರ್ತಿ ಮೆರವಣಿಗೆ ಮಾಡಲಾಯಿತು.
ದೇವರಹಿಪ್ಪರಗಿ: ಹೋಳಿ ನಿಮಿತ್ತ ನಡೆದ ಅಣಕು ಶವಯಾತ್ರೆ ಜನರ ಗಮನ ಸೆಳೆಯಿತು.
ದೇವರಹಿಪ್ಪರಗಿ: ಕಾಮದಹನದ ಮುಂದೆ ಬಣ್ಣದಾಟದಲ್ಲಿ ನಿರತರಾದ ಯುವಕರು ಬೊಬ್ಬೆ ಹಾಕಿ ಸಂಭ್ರಮಿಸಿದರು.
ಹೂವಿನಹಿಪ್ಪರಗಿ: ಪಟ್ಟಣದಲ್ಲಿ ಬಣ್ಣದಾಟದಲ್ಲಿ ಮಿಂದೆದ್ದ ಚಿಣ್ಣರು.
ಸಿಂದಗಿ: ಪಟ್ಟಣದಲ್ಲಿ ಹೆಣ್ಣು ಮಕ್ಕಳು, ಯುವಕರು, ಹಿರಿಯರು ಹಾಗೂ ಮಹಿಳೆಯರು ಹೋಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.
ಬಸವನಬಾಗೇವಾಡಿ: ಗಣಪತಿ ಚೌಕ್‌ದಲ್ಲಿ ಕಾಮದಹನಕ್ಕೆ ಸಿದ್ದಗೊಂಡ ಕಾಮಣ್ಣ.
ವಾಡಿ ತಾಳಿಕೋಟೆ: ಪಟ್ಟಣದಲ್ಲಿ ಹೋಳಿಹುಣ್ಣಿಮೆ ನಿಮಿತ್ತ ಕಾಮದಹನಮಾಡುವ ಮೂಲಕ ಸ್ನೇಹಿತ ಮಿತ್ರರಿಗೆ ಹಿತೈಷಿಗಳಿಗು ಚನದೆಸಿ,ನೆದ ಆಡಿದರು. ಕಲ ಯುವಕರು ದ್ವಿಚಕ್ರ ಹಾಗೂ ಲಘು ವಾಹನಗಳಲ್ಲಿ ತೆರಳಿ ವಿವಿಧ ಬಣ್ಣಗಳನ್ನು ಎರಚುತ್ತ ಸಂಭ್ರಮಿಸುತ್ತಿದ್ದರು. ಬಣ್ಣದ ಆಟದಲ್ಲಿ ತೊಡಗಿರುವ ಗುಂಪಿನ ಯುವಕರಿಗೆ ಹಲವುಕಡೆಗಳಲ್ಲಿ ವ್ಯಾಪಾರಿಗಳು ಹೋಳಿ ಹಬ್ಬಕ್ಕೆ ಉತ್ತೇಜನ ನೀಡಲುಹಣ, ಸಿಹಿ ನೀಡಿ ಪ್ರೋತ್ಸಾಹಿಸಿದರು. ಕೆಲವು ವ್ಯಾಪಾರಿಗಳು ಓಕುಳಿ ಹಬ್ಬದ ನಿಮಿತ್ತನಗರದ ಹಲವುಕಡೆಗಳಲ್ಲಿ ಪಡೆದರು.
ಹೋಳಿ ಹಬ್ಬದ ನಿಮಿತ್ತ ಹಿಂದೂ ಸಂಪ್ರದಾಯದ ಮನೆಗಳಲ್ಲಿ ಹೋಳಿಗೆ ಸೇರಿದಂತೆ ವಿವಿಧ ಬಗೆಯ ಖಾದ್ಯ ತಯಾರಿಸಿದ್ದಮಹಿಳೆಯರು, ದಹನಕ್ಕೆ ಮುನ್ನ ಮನ್ಮಥನಿಗೆ ನೈವೇದ್ಯ ಮಾಡಿದರು. ಹಲವರು ಹೋಳಿ ಹಬ್ಬಕ್ಕೆಸ್ನೇಹಿತರನ್ನು ತಮ್ಮ ಮನೆಗೆ ಆಹ್ವಾನಿಸಿ ಸಿಹಿ ಊಟ ಹಾಕಿಸಿ ರಂಗಿನ ಆಟವನ್ನು ಸ್ಮರಣಾರ್ಹ ಮಾಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.