“ಜಾಗತಿಕ ಸ್ಪರ್ಧೆಗೆ ತೆರೆದುಕೊಳ್ಳಬೇಕಿದೆ’
Team Udayavani, Mar 3, 2018, 1:05 PM IST
ಮೂಡಬಿದಿರೆ: ಭಾರತದ ಜಿಡಿಪಿಯಲ್ಲಿ ಶೇ. 56ರಷ್ಟು ಸೇವಾರಂಗವೇ ಮುಂಚೂಣಿಯಲ್ಲಿರುವ ಪ್ರಸಕ್ತ ಸನ್ನಿವೇಶದಲ್ಲಿ ಭಾರತೀಯ ಯುವಜನರು ಅದರಲ್ಲೂ ಭಾವೀ ಎಂಜಿನಿಯರ್‌ಗಳು ಜಾಗತೀಕರಣದ ಸವಾಲುಗಳನ್ನು ಎದುರಿಸಿ ಬೆಳೆಯಲು, ವಿಶ್ವಮಟ್ಟದ ಸ್ಪರ್ಧೆಗಾಗಿ ತೆರೆದುಕೊಳ್ಳುವ ಆವಶ್ಯಕತೆ ಇದೆ ಎಂದು ನ್ಯೂಯಾರ್ಕ್‌ನ ಬಿಂಗ್‌ಹ್ಯಾಮrನ್ ವಿ.ವಿ.ಪ್ರಾಧ್ಯಾಪಕ ಡಾ| ಕೃಷ್ಣಸ್ವಾಮಿ(ಹರಿ)ಶ್ರೀಹರಿ ಅಭಿಪ್ರಾಯಪಟ್ಟರು.
ಮಿಜಾರಿನಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಇಂಜಿನಿಯರಿಂಗ್ (ಮೈಟ್)ನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮತ್ತು ನ್ಯೂಯಾರ್ಕ್‌ನ ಬಿಂಗ್‌ಹ್ಯಾಮrನ್ ವಿ.ವಿ.ಸಂಯುಕ್ತ ಆಶ್ರಯದಲ್ಲಿ “ಅಡ್ವಾನ್ಸಸ್ ಇನ್ ಮ್ಯಾನುಫ್ಯಾಕ್ಚರಿಂಗ್, ಮೆಟೀರಿಯಲ್ಸ್ ಆ್ಯಂಡ್ ಎನರ್ಜಿ ಎಂಜಿನಿಯರಿಂಗ್ ಎನ್ನುವ ವಿಷಯದ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಅಧಿವೇಶನ “ಐಕಾನ್ ಎಂಎಂಇಇ-2018’ನ್ನು ಉದ್ಘಾಟಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಬಿಂಗ್‌ಹ್ಯಾಮrನ್ ವಿ.ವಿ.ಯಲ್ಲಿ ಭಾರತದ 550 ಮಂದಿ ವಿದ್ಯಾರ್ಥಿಗಳು ಅಭ್ಯಾಸ ಮಾಡು ತ್ತಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಧಿವೇಶನದ ಕುರಿತಾದ ವಿಶೇಷ ಸಂಚಿಕೆಯನ್ನು ಅವರು ಬಿಡುಗಡೆಗೊಳಿಸಿದರು.
ಮಂಗಳೂರಿನ ರಾಜಲಕ್ಷ್ಮೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜೇಶ್ ಚೌಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನವೀನ ತಂತ್ರಜ್ಞಾನಗಳ ವಿನಿಮಯದಲ್ಲಿ ಇಂತಹ ಅಧಿವೇಶನಗಳು ನಿರ್ವಹಿಸುವ ಪಾತ್ರದ ಕುರಿತು ಬೆಳಕು ಚೆಲ್ಲಿದರು.
ಡಾ| ಕೃಷ್ಣಸ್ವಾಮಿ ಶ್ರೀಹರಿ ಅವರಲ್ಲದೆ, ಮಸ್ಕತ್‌ನ ಕೆಲೆಡೋನಿಯನ್ ವಿ.ವಿ.ಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ| ಕೆ.ಪಿ. ರಾಮಚಂದ್ರನ್, ಬಿಂಗ್‌ಹ್ಯಾಮrನ್ ವಿ.ವಿ. ಪ್ರಾಧ್ಯಾಪಕ ಡಾ| ಪೌಲ್ ಆರ್ ಶಿರಾಟ್ ಹಾಗೂ ಡಾ| ಮಹಮ್ಮದ್ ಟಿ. ಖಸಾವೆ°, ಜಪಾನಿನ ಕುಮಾಮೋಟೋ ವಿ.ವಿ. ಪ್ರಾಧ್ಯಾಪಕರಾದ ಡಾ| ಸೂಚಿ ತೋರಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ| ಜಿ.ಎಲ್.ಈಶ್ವರ ಪ್ರಸಾದ್ ಪ್ರಸ್ತಾವನೆಗೈದರು. ಉಪ ಪ್ರಾಂಶುಪಾಲ ಡಾ| ಸಿ.ಆರ್. ರಾಜಶೇಖರ್ ಸ್ವಾಗತಿಸಿದರು. ಅಧಿವೇಶನದ ಸಂಘಟನ ಕಾರ್ಯದರ್ಶಿ ಡಾ| ಲೋಕೇಶ್ ವಂದಿಸಿದರು.
ಬಿಂಗ್‌ಹ್ಯಾಮrನ್ ವಿ.ವಿ.- ಮೈಟ್ ಒಪ್ಪಂದ
ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಜಾಗತಿಕ ಗುಣಮಟ್ಟದ ಸಂಶೋಧನ ವಾತಾವರಣವನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯೊಂದಿಗೆ ಪ್ರತಿ ವರ್ಷವೂ ಇಂತಹ ಅಧಿವೇಶನಗಳನ್ನು ಸಂಘಟಿಸುತ್ತಿದೆ. 2016ರಲ್ಲಿ ಶೈಕ್ಷಣಿಕ ಪ್ರಗತಿ ಮತ್ತು ಸಂಶೋಧನೆಯಲ್ಲಿ ಅಭಿವೃದ್ಧಿ ಸಾಧಿಸುವ ಉದ್ದೇಶದೊಂದಿಗೆ ಸಂಸ್ಥೆ ನ್ಯೂಯಾರ್ಕಿನ ಬಿಂಗ್‌ಹ್ಯಾಮrನ್ ವಿ.ವಿ.ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ 137 ಮಂದಿ ಸಂಶೋಧಕರು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.