ಅನುಮಾನಗಳ ಜೊತೆಜೊತೆಗೇ ನಗಿಸುವ “ತರ್ಲೆ ತಿಪ್ಪ’


Team Udayavani, Mar 3, 2018, 2:12 PM IST

6.jpg

ಹಾಸ್ಯ ನಾಟಕಗಳು, ಗಂಭೀರ ನಾಟಕಗಳು ಎಂಬ ವರ್ಗೀಕರಣದ ಮಾತು ಒತ್ತಟ್ಟಿಗಿರಲಿ; ರಂಗಕೃತಿಗಳ ರಚನೆಯ ಮಾದರಿ ನಿರ್ದೇಶಕನನ್ನು ಅಣಿಮಾಡುತ್ತವೆ ಎನ್ನುವುದು ನಿಜ. ಕೆಲವು ನಾಟಕ ಕೃತಿಗಳ ರಚನಾ ಒಳವಿನ್ಯಾಸದಲ್ಲೇ ನಾಟಕೀಯತೆ ಹಾಸುಹೊಕ್ಕಾಗಿರುತ್ತದೆ. ಪಾತ್ರಗಳ ಮಾತಿನ ಬೀಸುಗಳಲ್ಲೇ ರೂಪಕಗಳು ಅಡಗಿ ಕುಳಿತಿರುತ್ತವೆ. ಇಂಥವು ನಿರ್ದೇಶಕ ಕಟ್ಟುವ ಬಗೆಯನ್ನು ವಿಸ್ತರಿಸುತ್ತಿರುತ್ತವೆ. ಇಂಥ ರಂಗಕೃತಿಗಳಲ್ಲಿ ಜೀವನದ ಸರಳಗತಿಯ ಚಲನೆಯನ್ನು ತರಲಾಗುವುದಿಲ್ಲ. ರಂಗಕೃತಿಗಳೇ ಈ ರೀತಿಯ ಸ್ಟೈಲಿಸ್ಡ್ ಮಾದರಿಯನ್ನು ಅಪೇಕ್ಷಿಸುವ ಕಾರಣ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಸೃಜನಶೀಲ ಸೆಲೆಗಳು ಕಾಣಿಸುತ್ತಿರುತ್ತವೆ.

ಮತ್ತೆ ಕೆಲವು ರಂಗಕೃತಿಗಳು ಮೇಲೆ ವಿವರಿಸಿದ ರೀತಿಯ ವಿನ್ಯಾಸವನ್ನೇನೂ ಬೇಡುವುದಿಲ್ಲ. ಕಾರಣ ಅವುಗಳ ರಚನಾ ವಿನ್ಯಾಸದಲ್ಲಿನ ಗತಿಯಲ್ಲೇ ನಾಟಕೀಯತೆಗಳಿರುವುದಿಲ್ಲ. ಬದಲಿಗೆ ಬದುಕಿನ ಸಹಜಗತಿ ಇರುತ್ತದೆ. ಅದರಲ್ಲೇ ಒಂದು ತಿರುಳು ಇಣುಕುತ್ತಿರುತ್ತದೆ. ಅದಕ್ಕೆ ಹಾಸ್ಯ ಲೇಪಿಸಿರುತ್ತಾರೆ ಅಥವಾ ಅದನ್ನೇ ಪ್ರಧಾನ ಮಾಡಿಕೊಳ್ಳಲು ಪ್ರತಿ ಹಂತದಲ್ಲೂ ಹವಣಿಸಿರುವುದು ಕಂಡುಬರುತ್ತದೆ.
ಈಚೆಗೆ “ಸ್ಪಷ್ಟ’ ರಂಗತಂಡ ಕೆ.ಎಚ್‌ ಕಲಾಸೌಧದಲ್ಲಿ ಪ್ರದರ್ಶಿಸಿದ “ತರ್ಲೆ ತಿಪ್ಪ’ ನಾಟಕ ಪ್ರದರ್ಶನದಲ್ಲಿ ಇದೇ ಅಂಶ ಪ್ರಧಾನವಾಗಿ ಕಂಡಿತು. ಬೇಲೂರು ಕೃಷ್ಣಮೂರ್ತಿ ಈ ನಾಟಕದ ಕತೃì. ಈಗಾಗಲೇ ಹೇಳಿದಂತೆ, ಈ ನಾಟಕದಲ್ಲಿ ಬದುಕಿನ ಒಳ-ಹೊರಗನ್ನು ಸೂಚ್ಯ ಮಾತುಗಳಲ್ಲಿ ಅಡಗಿಸಿ ಹೇಳಿ ಮೌನದಲ್ಲೇ ಹಲವು ಅರ್ಥಗಳನ್ನು ಧ್ವನಿಸುವಂತೆ ಮಾಡುವ ಯಾವ ಚಿತ್ರಗಳೂ ಇಲ್ಲ. ಬದಲಿಗೆ ಬದುಕಿನ ನೇರಾನೇರಾ ನಿರೂಪಣೆ ಇದೆ. ಕುಟುಂಬವನ್ನು ಒಡೆಯುವ ಮನೆಮುರುಕರು ಹೇಗಿರುತ್ತಾರೆ ಎಂಬುದರ ಚಿತ್ರಣವಿದೆ. ಈ ಪಾತ್ರಕ್ಕೆ ಚಾಣಾಕ್ಷತನದ ಅಗತ್ಯವಿರುವ ಕಾರಣ ಆ ಪ್ರಕಾರವಾಗೇ ಹೆಣಿಗೆ ಇದೆ. ಕುಟುಂಬ ಮತ್ತು ಸಂಬಂಧಗಳಲ್ಲಿ ಒಡಕು ಮೂಡುವ ಬಗೆ ಹೇಗೆ ಎಂಬುದರ ಚಿತ್ರಗಳಿವೆ. ವ್ಯಕ್ತಿಯೊಬ್ಬ ಮನೆಯ ಪ್ರತಿಯೊಬ್ಬರನ್ನೂ ನಂಬಿಸುವ ಮತ್ತು ವಂಚಿಸುವ ಬಗೆಯನ್ನೇ ಇಲ್ಲಿ ಹಾಸ್ಯದ ರೀತಿಯಲ್ಲಿ ಕಟ್ಟಿದ್ದಾರೆ. ಇದು ಸುಲಭಕ್ಕೆ ನಮ್ಮ ಬದುಕಿಗೆ ನಿಲುಕುತ್ತದೆ ಎಂಬ ಸೂತ್ರವೂ ಇದರಲ್ಲಿ ಇದೆ. 

    ಈ ಎಲ್ಲವೂ ಸರಿ; ಆದರೆ “ತರ್ಲೆ ತಿಪ್ಪ’ ನಾಟಕದಲ್ಲಿ ಚಿತ್ರಿತವಾಗಿರುವ ಕುಟುಂಬದ ಚಿತ್ರಣ ಚೂರು ಅನುಮಾನಕ್ಕೆ ಮೊದಲಿಂದ ಗುರಿ ಮಾಡಿಕೊಡುತ್ತ ಸಾಗುತ್ತದೆ. ಒಡಕು ಉಂಟು ಮಾಡುವ ತಿಪ್ಪನ ಎಲ್ಲ ಮಾತುಗಳಿಗೂ ಕುಟುಂಬದ ಪ್ರತಿಯೊಬ್ಬರೂ ಬಲೆಗೆ ಬೀಳುವ ಬಗೆಯಲ್ಲೇ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಆಗಂತುಕನೊಬ್ಬನ ಮಾತುಗಳನ್ನು ಏಕಾಏಕಿ ನಂಬುವ, ದುಡ್ಡು ಕೊಡುವ, ತನ್ನ ಒಡವೆಯನ್ನೇ ತೆಗೆದುಕೊಟ್ಟುಬಿಡುವ ಸಂಗತಿಗಳು ನಿಜಕ್ಕೆ ದೂರ ಅನಿಸುತ್ತವೆ. ಇಲ್ಲಿ ಸಾಧ್ಯಾಸಾಧ್ಯತೆಗಳ ಲೆಕ್ಕಾಚಾರಗಳ ಬಗ್ಗೆ ಲೇಖಕರು ಮತ್ತೂಂದಿಷ್ಟು ಗಮನ ಹರಿಸಿದ್ದರೆ ತರ್ಕಬದ್ಧವಾಗಿರುತ್ತಿತ್ತು ಎನಿಸಿತು. ಕಟ್ಟಕಡೆಗೆ ಮೋಸದ ಜಾಲ ಬಯಲಾಗುತ್ತದೆ ಎನ್ನುವುದು ಬೇರೆ ಮಾತು; ಅಲ್ಲಿಯವರೆಗಿನ ನಿರೂಪಣೆಯಲ್ಲಿ ತಮಾಷೆ ಮತ್ತು ಲವಲವಿಕೆಯೇನೊ ಇದೆ. ಆದರೆ ಕಡೆಯ ಹಂತಕ್ಕೆ ಬರುವಷ್ಟರಲ್ಲಾಗಲೇ ನಾಟಕದಲ್ಲಿ ಪ್ರಶ್ನೆಗಳ ಕೊಂಡಿಗಳು ಎದ್ದಿರುತ್ತವೆ. ಇದು ಒಂದು ಕಾಲಘಟ್ಟದ ಮುಗ್ಧ ಕುಟುಂಬವೊಂದರ ಚಿತ್ರಣ ಎಂದು ಉದಾರವಾಗಿ ಅರ್ಥೈಸಿಕೊಂಡು ನಾವೇ ನಾಟಕ ನೋಡುವ ಬಗೆಯನ್ನು ಬದಲಿಸಿಕೊಂಡು ನಗಲು ನಮ್ಮನ್ನು ಅಣಿಮಾಡಿಕೊಳ್ಳುವುದಾದರೆ ಅಡ್ಡಿ ಇಲ್ಲ. ಬದಲಿಗೆ ಇವತ್ತಿನ ಬದುಕಿನ ಚಿಂತನಕ್ರಮಕ್ಕೆ ತಾಳೆ ಹಾಕಿಕೊಳ್ಳಲು ಆರಂಭಿಸಿದರೆ ನಗಲು ಸಾಧ್ಯವಿಲ್ಲ.

   ಇದು ಕೃತಿಯಲ್ಲಿ ಕಂಡಿದ್ದು; ಆದರೆ ನಿರ್ದೇಶಕ ಗಗನ್‌ ಪ್ರಸಾದ್‌ ಇಲ್ಲಿನ ಸೂಕ್ಷ್ಮಗಳ ಬಗೆಗೆ ಚಿಂತಿಸಲಿಕ್ಕೆ ಹೋಗದೆ ತಮ್ಮ ಕೆಲಸವಾದ ನಿರ್ದೇಶನದಲ್ಲಿ ಬದ್ಧತೆ ಮೆರೆದಿದ್ದಾರೆ. ಅವರಿಗೆ ಸ್ಟೈಲಿಸ್ಡ್ ಗೀಳು ಇನ್ನೂ ಹತ್ತಿಲ್ಲ. ಬದುಕಿನ ಸಹಜಗತಿಯ ನಿರೂಪಣೆಗೆ ಗಗನ್‌ ಎಲ್ಲರಿಂದ ಅಭಿನಯದಲ್ಲಿ ಮೆರುಗು ತರಿಸಲು ಯತ್ನಿಸಿದ್ದಾರೆ.

ಹಾಗಾಗಿ ನಟರ ನಟನೆಯಲ್ಲಿ ತುಂಬ ಸಹಜತೆ ಇತ್ತು. ನೆರಳು ಬೆಳಕಿನ ಆಟವಿತ್ತು. ಅದರ ಹಿಂದಿನ ಕಥೆಯನ್ನು ಹಾಡಿನಲ್ಲಿ ಹೇಳಿಸುವ ಜಾಣ್ಮೆ ಇತ್ತು. ತಿಪ್ಪನ ಪಾತ್ರಧಾರಿಯೇ ಇಡೀ ನಾಟಕದ ಹೈಲೈಟ್‌. ಒಟ್ಟಿನಲ್ಲಿ ಗಗನ್‌ರಲ್ಲಿ ನಿರ್ದೇಶನದ ಸೂಕ್ಷ್ಮತೆಗಳು ಅಡಗಿ ಕೂತಿವೆ. ಗಂಭೀರ ಒಳಹುಗಳುಳ್ಳ ನಾಟಕಗಳನ್ನು ಅವರು ನಿರ್ದೇಶಿಸಬಲ್ಲರು ಎಂಬುದನ್ನು ಈ ಪ್ರಯೋಗ ತೋರಿಸಿತು.

– ಎನ್‌.ಸಿ ಮಹೇಶ್‌  

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.