ನಿಮ್ಮ ಪ್ರವಾಸ ಸಂದರ್ಭ ಆರೋಗ್ಯ ರಕ್ಷಣೆಯ ಹೊಸ ವಿಭಾಗ
Team Udayavani, Mar 4, 2018, 6:00 AM IST
ಹಿಂದಿನ ವಾರದಿಂದ– ಪ್ರವಾಸಿಗರಿಗೆ ಇತರ ಸಾಮಾನ್ಯ ಸಲಹೆಗಳು
– ಸುರಕ್ಷಿತ ಮೂಲಗಳಿಂದ ಪಡೆದ ನೀರನ್ನೇ ಕುಡಿಯಿರಿ.
– ನೈರ್ಮಲ್ಯಯುಕ್ತವಾಗಿ ಅಡುಗೆ ಮಾಡಿದ ಆಹಾರವನ್ನೇ ಸೇವಿಸಿ.
– ಬಿಸಿಬಿಸಿಯಾಗಿರುವ ಆಹಾರ ವಸ್ತುಗಳೇ ಸುರಕ್ಷಿತ.
– ಕತ್ತರಿಸಿ ತೆರೆದಿರಿಸಿದ ಹಣ್ಣುಗಳು ಮತ್ತು ತರಕಾರಿಗಳು, ಹಸಿ ಸಲಾಡ್‌ಗಳು, ಹಣ್ಣಿನ ರಸಗಳು, ಅರೆಬೆಂದ ಸಮುದ್ರ ಆಹಾರಗಳನ್ನು ವರ್ಜಿಸಿರಿ.
– ಸೊಳ್ಳೆ ಪರದೆಯೊಳಗೆ ನಿದ್ರಿಸಿರಿ, ಸೊಳ್ಳೆ ವಿಕರ್ಷಕಗಳನ್ನು ಉಪಯೋಗಿಸಿ.
– ಸ್ವತ್ಛ ಮತ್ತು ಸುರಕ್ಷಿತ ವಾಸ್ತವ್ಯ ವ್ಯವಸ್ಥೆಯಲ್ಲಿಯೇ ಉಳಿದುಕೊಳ್ಳಿ.
– ಅಪಾಯಕಾರಿ ಸ್ವಭಾವಗಳಿಂದ ದೂರವಿರಿ.
– ಪ್ರಯಾಣ ಸಂದರ್ಭದಲ್ಲಿ ಮದ್ಯಸೇವನೆಯಿಂದ ದೂರವಿರಿ.
– ಬೀದಿನಾಯಿಗಳು ಮತ್ತು ಪ್ರಾಣಿಗಳ ಸಂಪರ್ಕದಿಂದ ದೂರವಿರಿ.
– ಶಿಫಾರಸು ಮಾಡಲ್ಪಟ್ಟ ಲಸಿಕೆ ಮತ್ತು ಕಿಮೊಪ್ರೊಫಿಲ್ಯಾಕ್ಸಿಸ್ ಪಡೆಯಿರಿ.
– ಹತ್ತಿರದ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿ.
ಅತಿ ಸಾಮಾನ್ಯ ಪ್ರವಾಸ ಸಂಬಂಧಿ ಅನಾರೋಗ್ಯ – ಪ್ರಯಾಣಿಕ ಬೇಧಿ
ಪ್ರಯಾಣ ಸಂಬಂಧಿ ಅನಾರೋಗ್ಯಗಳಲ್ಲಿ ಅತ್ಯಂತ ಸಾಮಾನ್ಯವಾಗಿ ನಿರೀಕ್ಷಿಸಬಹುದಾದದ್ದು ಪ್ರಯಾಣಿಕ ಬೇಧಿ – ಟ್ರಾವೆಲರ್ಸ್ ಡಯರಿಯಾ (ಟಿಡಿ). ಪ್ರವಾಸಿಗರಲ್ಲಿ ಶೇ.30ರಿಂದ ಶೇ.70ರಷ್ಟು ಮಂದಿ ಈ ಅನಾರೋಗ್ಯದಿಂದ ಬಳಲಬಹುದಾಗಿದೆ. ಪ್ರಯಾಣಿಕ ಬೇಧಿ ಉಂಟಾಗಲು ಸ್ಥಳೀಯ ಉಪಾಹಾರ ಗೃಹ, ಹೊಟೇಲ್‌ಗಳಲ್ಲಿ ಇರುವ ಕಳಪೆ ನೈರ್ಮಲ್ಯ ಅತ್ಯಂತ ದೊಡ್ಡ ಕೊಡುಗೆದಾರನಾಗಿರುತ್ತದೆ. ಆಹಾರದ ಮೂಲಕ ಮುಂಚಿತವಾಗಿ ರೂಪುಗೊಂಡ ವಿಷಕಾರಿ ಅಂಶಗಳು ಹೊಟ್ಟೆ ಸೇರುವ ಈ ವಿದ್ಯಮಾನವನ್ನು ಸಾಮಾನ್ಯವಾಗಿ “ಫುಡ್ ಪಾಯಿಸನಿಂಗ್’ ಎಂದು ಕರೆಯುತ್ತಾರೆ. ಈ ಅನಾರೋಗ್ಯದಲ್ಲಿ ವಾಂತಿ ಮತ್ತು ಬೇಧಿಗಳೆರಡೂ ಇರಬಹುದು, ಆದರೆ ರೋಗಲಕ್ಷಗಳು ಸಾಮಾನ್ಯವಾಗಿ ತಂತಾನೇ 12 ತಾಸುಗಳ ಒಳಗೆ ಉಪಶಮನಗೊಳ್ಳುತ್ತವೆ.
ಕಾರಣಗಳು
– ಕಳಪೆ ನೈರ್ಮಲ್ಯ
– ಅಗತ್ಯ ಪ್ರಮಾಣದ, ಸರಿಯಾದ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳ ಕೊರತೆ – ಮಲದ ಮೇಲೆ ಕುಳಿತ ನೊಣಗಳು, ಶುಚಿಯಿಲ್ಲದ ಕೈಗಳು, ಶುಚಿಯಾಗಿಲ್ಲದ ವಸ್ತುಗಳು, ಶುಚಿಯಾಗಿಲ್ಲದ ತಟ್ಟೆಲೋಟಗಳು, ಚಮಚಗಳ ಮೂಲಕ ನೀರು ಮತ್ತು ಆಹಾರ ಮಲಿನಗೊಳ್ಳುವುದಕ್ಕೆ ಕಾರಣವಾಗುತ್ತದೆ.
– ಅಸುರಕ್ಷಿತ ಆಹಾರ ನೈರ್ಮಲ್ಯ
– ಅಸುರಕ್ಷಿತ ಆಹಾರ ದಾಸ್ತಾನು
– ಆಹಾರವನ್ನು ತಯಾರಿಸುವ, ಸಾಗಿಸುವ ಅಥವಾ ಬಡಿಸುವ ಜನರು ರೋಗವಾಹಕರಾಗಿರಬಹುದು.
ಲಕ್ಷಣಗಳು
ಬ್ಯಾಕ್ಟೀರಿಯಾ ಮತ್ತು ವೈರಲ್‌ಗಳಿಂದ ಉಂಟಾಗುವ ಪ್ರಯಾಣಿಕ ಬೇಧಿಯು ಲಘುವಾದ ಹೊಟ್ಟೆಹಿಡಿತ – ನೋವು, ಶೀಘ್ರ ಬೇಧಿಯ ಸಹಿತ ಹಠಾತ್ತನೆ ಕಾಣಿಸಿಕೊಳ್ಳುತ್ತದೆ, ತೀವ್ರ ಹೊಟ್ಟೆ ನೋವು, ಜ್ವರ, ವಾಂತಿ ಮತ್ತು ರಕ್ತಸಹಿತ ಬೇಧಿಗೂ ಮುಂದುವರಿಯಬಹುದಾಗಿದೆ.
ಪ್ರತಿಬಂಧನೆ
ಆಹಾರ
– ಪ್ರಯಾಣಿಕ ಬೇಧಿಯನ್ನು “”ಕುದಿಸಿ, ಬೇಯಿಸಿ, ಸಿಪ್ಪೆ ತೆಗೆಯಿರಿ ಅಥವಾ ದೂರವಿರಿಸಿ” ಎಂಬ ಅತ್ಯಂತ ಸರಳವಾದ ಸಲಹಾಸೂತ್ರದ ಮೂಲಕ ತಡೆಯಬಹುದಾಗಿದೆ.
– ಬೀದಿಬದಿಯ ವ್ಯಾಪಾರಿಗಳಿಂದ ಖರೀದಿಸಿದ ಆಹಾರ ಮತ್ತು ಪಾನೀಯಗಳ ಉಪಯೋಗ ಈ ಅನಾರೋಗ್ಯಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ.
– ಹಸಿ ಆಹಾರವಸ್ತುಗಳು ಮಲಿನಗೊಂಡಿರುವ ಸಾಧ್ಯತೆಗಳು ಹೆಚ್ಚು. ಹಸಿ ಅಥವಾ ಅರೆಬೆಂದ ಮೊಟ್ಟೆಗಳು, ಮಾಂಸ, ಮೀನು ಮತ್ತು ಚಿಪ್ಪು ಮೀನುಗಳು ವಿವಿಧ ರೋಗಕಾರಕಗಳನ್ನು ಹೊಂದಿರುವ ಸಾಧ್ಯತೆ ಅಧಿಕ.
– ನೈರ್ಮಲ್ಯ ಮತ್ತು ಶುಚಿತ್ವ ಅಸಮರ್ಪಕವಾಗಿರುವ ಅಥವಾ ಅದರ ಸ್ಥಿತಿಗತಿ ತಿಳಿಯದೆ ಇರುವ ಸ್ಥಳಗಳಲ್ಲಿ ಪ್ರವಾಸಿಗರು ಸಲಾಡ್‌ಗಳು, ಬೇಯಿಸದ ತರಕಾರಿಗಳು, ಪ್ಯಾಶ್ಚರೀಕರಣಗೊಳ್ಳದ ಹಣ್ಣಿನ ರಸಗಳು, ಪ್ಯಾಶ್ಚರೀಕರಣಗೊಳ್ಳದ ಹಾಲು ಅಥವಾ ಪ್ಯಾಶ್ಚರೀಕರಿಸದ ಹಾಲಿನಿಂದ ತಯಾರಿಸಿದ ಚೀಸ್ ಉಪಯೋಗಿಸುವುದನ್ನು ವರ್ಜಿಸಬೇಕು.
– ಪೂರ್ಣವಾಗಿ ಬೇಯಿಸಿದ ಮತ್ತು ಬಿಸಿಬಿಸಿಯಾಗಿರುವ ಆಹಾರ ವಸ್ತುಗಳನ್ನೇ ಸೇವಿಸುವುದು ಅತ್ಯಂತ ಸುರಕ್ಷಿತ.
– ಆಹಾರ ತಯಾರಿಸುವ ಮುನ್ನ, ಸೇವಿಸುವ ಮುನ್ನ ಮತ್ತು ಶೌಚಾಲಯ ಬಳಕೆ, ಡಯಾಪರ್ ಬದಲಾವಣೆ ನಡೆಸಿ ಬಳಿಕ; ಅನಾರೋಗ್ಯಕ್ಕೆ ಈಡಾದವರ ಶುಶ್ರೂಷೆ ನಡೆಸಿದ ಅನಂತರ ಹಾಗೂ ಪ್ರಾಣಿಗಳು ಮತ್ತು ಅವುಗಳ ಪರಿಸರದ ಸಂಪರ್ಕ ನಡೆಸಿದ ಅನಂತರ ಪ್ರವಾಸಿಗರು ತಮ್ಮ ಕೈಗಳನ್ನು ಸಾಬೂನು ಮತ್ತು ನೀರು ಉಪಯೋಗಿಸಿ ಸ್ವತ್ಛವಾಗಿ ತೊಳೆದುಕೊಳ್ಳಬೇಕು.
– ಸಾಬೂನು ಮತ್ತು ನೀರು ಅಲಭ್ಯವಾಗಿದ್ದಲ್ಲಿ, ಮದ್ಯಸಾರಯುಕ್ತ ಕೈಗಳನ್ನು ನಿರ್ಮಲಗೊಳಿಸುವ ದ್ರಾವಣಗಳ (ಶೇ.60 ಅಥವಾ ಹೆಚ್ಚು ಮದ್ಯಸಾರಯುಕ್ತ) ನ್ನು ಉಪಯೋಗಿಸಬೇಕು ಹಾಗೂ ಸಾಬೂನು ಮತ್ತು ನೀರು ಲಭ್ಯವಾದ ಕೂಡಲೇ ಅವುಗಳನ್ನು ಉಪಯೋಗಿಸಿ ಕೈಗಳನ್ನು ಸ್ವತ್ಛಗೊಳಿಸಿಕೊಳ್ಳಬೇಕು.
ನೀರು
– ನೀರು ಶುದ್ಧೀಕರಣ, ನೈರ್ಮಲ್ಯ ಮತ್ತು ಶುಚತ್ವ ಅಸಮರ್ಪಕವಾಗಿರುವ ಕಡೆಗಳಲ್ಲಿ ನಲ್ಲಿನೀರು ರೋಗಕಾರಕ ಸೂಕ್ಷ್ಮಾಣುಗಳನ್ನು ಹೊಂದಿರಬಹುದು.
– ಶಿಶುಗಳು, ಮಕ್ಕಳು, ಗರ್ಭಿಣಿ ಮಹಿಳೆಯರು, ಹಿರಿಯರು ಮತ್ತು ರೋಗ ಪ್ರತಿರೋಧ ಶಕ್ತಿ ಬಲಗುಂದಿದ (ಉದಾಹರಣೆಗೆ, ಎಚ್‌ಐವಿ ಪೀಡಿತರು, ಕಿಮೋಥೆರಪಿಗೆ ಒಳಗಾದವರು, ಅಂಗಾಂಗ ಕಸಿಗೆ ಒಳಗಾದ ಬಳಿಕ ಔಷಧಿ ಸೇವಿಸುತ್ತಿರುವವರು) ವಿಶೇಷವಾಗಿ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು.
– ಪ್ರವಾಸಿಗರು ನಲ್ಲಿನೀರನ್ನು ಕುಡಿಯುವುದು ಅಥವಾ ಬಾಯಿಗೆ ಹಾಕಿಕೊಳ್ಳುವುದನ್ನು ತಪ್ಪಿಸಬೇಕು.
– ನಲ್ಲಿ ನೀರು ಅಸುರಕ್ಷಿತವಾಗಿರುವ ಕಡೆಗಳಲ್ಲಿ ತೆರೆದಿಲ್ಲದ, ಭದ್ರ ಮುಚ್ಚಳದ ವಾಣಿಜ್ಯವಾಗಿ ಲಭ್ಯವಿರುವ ಬಾಟಲಿ ಅಥವಾ ಸಮರ್ಪಕವಾಗಿ ಶುದ್ಧೀಕರಿಸಿದ ನೀರನ್ನು ಕುಡಿಯಲು, ಆಹಾರ ತಯಾರಿಸಲು, ಪಾನೀಯಗಳನ್ನು ತಯಾರಿಸಲು, ಐಸ್ ತಯಾರಿಸಲು, ಅಡುಗೆ ಮಾಡಲು ಮತ್ತು ಹಲ್ಲುಜ್ಜಲು ಉಪಯೋಗಿಸಬೇಕು.
– ಕುದಿಸಿದ ನೀರಿನಿಂದ ತಯಾರಿಸಿದ ಪಾನೀಯಗಳು ಮತ್ತು ಹಬೆಯಾಡುತ್ತಿರುವ ಪಾನೀಯಗಳು (ಚಹಾ ಅಥವಾ ಕಾಫಿ) ಕುಡಿಯಲು ಸುರಕ್ಷಿತ.
– ಮುಂದಿನ ವಾರಕ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.