ಬೆಂಗಳೂರಿನ ಶಾಂತಿಗಾಗಿ ಅಭಿಯಾನ
Team Udayavani, Mar 4, 2018, 11:57 AM IST
ಬೆಂಗಳೂರು: ಈ ಮೊದಲು ಬೆಂಗಳೂರು ಹಕ್ಕಿಗಳ ಗೂಡಾಗಿತ್ತು. ಈಗ ಗಾಂಜಾ, ಅಫೀಮುಗಳ ಬೀಡು ಎಂಬ ಅಪಕೀರ್ತಿಗೆ ಒಳಗಾಗಿದೆ ಎಂದು ಹೃದ್ರೋಗ ತಜ್ಞೆ ಡಾ ವಿಜಯಲಕ್ಷಿ ಬಾಳೆಕುಂದ್ರಿ ಬೇಸರ ವ್ಯಕ್ತಪಡಿಸಿದರು. ಸಿ ಟಿ ಜನ್ ಫಾರ್ ಡೆ ಮಾ ಕ್ರಸಿ ಶನಿವಾರ ಸಂಜೆ ನಗರದ ಪುರಭವನ ಎದುರು ಆಯೋಜಿಸಿದ್ದ “ಬೆಂಗಳೂರಿನಲ್ಲಿ ಶಾಂತಿಗಾಗಿ ಜನ ಧ್ವನಿ’ ಎಂಬ ಶೀರ್ಷಿಕೆ ಅಡಿಯಲ್ಲಿ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನದಲ್ಲಿ ಅವರು ಮಾತನಾಡಿದರು.
ಶಾಂತಿಯುತವಾದ ಬೆಂಗಳೂರಿನಲ್ಲಿ ಇತ್ತೀಚೆಗೆ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿವೆ. ಮೊದಲು ನಿರ್ಭಯವಾಗಿ ಓಡಾಡುತ್ತಿದ್ದ ಸಾರ್ವಜನಿಕರು ಆತಂಕದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಗರದ ಎಲ್ಲ ನಾಗರೀಕರು ಶಾಂತಿಗಾಗಿ ಶ್ರಮಿಸಬೇಕಿದೆ. ಅಲ್ಲದೇ ಸರ್ಕಾರ ಹಾಗೂ ಗೃಹ ಇಲಾಖೆ ಕೂಡ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಒತ್ತಾಯಿಸಿದರು.
ನಟ ಜಗ್ಗೇಶ್ ಮಾತನಾಡಿ, ಪ್ರಸ್ತುತ ತಮ್ಮ ಕಣ್ಮುಂದೆ ನಗರದಲ್ಲಿ ಸಾಕಷ್ಟು ಅನಾಚಾರ, ಅಪರಾಧಗಳು ನಡೆಯುತ್ತಿವೆ. ಆ ದ ರೂ ಯಾರೂ ಪ್ರ ಶ್ನಿ ಸುವ ಮ ನ ಸ್ಸು ಮಾ ಡು ತ್ತಿಲ್ಲ. ಹೀಗಾಗಿ ಯಾರೇ ತಪ್ಪು ಮಾ ಡಿ ದರೂ ಸಾ ರ್ವ ಜ ನಿ ಕರು ಪ್ರ ಶ್ನಿಸಿ,ಆ ಗುವ ಅ ನಾ ಹುತ ತ ಪ್ಪಿ ಸಲು ಮುಂದಾ ಗಬೇಕು. ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಬೇಕು. ಮ ಕ್ಕಳಲ್ಲೂ ಆ ಮ ನೋ ಭಾವ ಬೆ ಳೆ ಸ ಬೇಕು. ಆಗ ಮಾತ್ರ ನ ಗ ರದಲ್ಲಿ ಶಾಂತಿ ನೆ ಲೆ ಸು ತ್ತದೆ ಎಂದರು.
ಇಂದು ಯಾರೇ ತಪ್ಪು ಮಾ ಡಿ ದರೂ ಹೇ ಳು ವ ವರು, ಕೇ ಳು ವ ವರು ಇ ಲ್ಲವಾಗಿದೆ. ಮ ಹಿ ಳೆ ಯ ರಿಗೆ, ಮ ಕ್ಕ ಳಿಗೆ ರ ಕ್ಷಣೆ ಇ ಲ್ಲ ವಾ ಗಿದೆ. ಪೊ ಲೀ ಸರು ರಾ ಜ ಕಾ ರ ಣಿ ಗಳ ತಾ ಳಕ್ಕೆ ತ ಕ್ಕಂತೆ ಕು ಣಿ ಯುವ ಸ್ಥಿತಿ ನಿ ರ್ಮಾ ಣ ವಾ ಗಿದ್ದು, ಒಂದು ವೇಳೆ ರಾಜಕೀಯ ಮುಖಂಡರ ತದ್ವಿರುದ್ಧವಾಗಿ ನಡೆದುಕೊಂಡರೆ ರಾ ತ್ರೋ ರಾತ್ರಿ ಎ ತ್ತಂಗಡಿ ಮಾಡುತ್ತಾರೆ ಎಂದು ಬೇ ಸರ ವ್ಯ ಕ್ತ ಪ ಡಿ ಸಿ ದರು.
ಬೆಂಗ ಳೂರು ದೇ ಶ ದಲ್ಲಿ 3ನೇ ಅ ಪ ರಾಧ ಸಿಟಿ ಆಗಿ ರೂ ಪು ಗೊಂಡಿದೆ. ಅ ಫೀಮು, ಗಾಂಜಾ ದಂತಹ ಮಾ ದಕ ವ ಸ್ತು ಗ ಳನ್ನು ಮಾ ರಾಟ ಮಾ ಡು ವ ವರು ಹೆಚ್ಚಾಗಿದ್ದಾರೆ. ರಾಜಕೀಯ ಪ್ರಭಾವದಿಂದ ಕಳ್ಳರು, ಸಮಾಜಘಾತುಕ ಕೃತ್ಯವೆಸಗುವವರು ಸುರಕ್ಷಿತವಾಗಿದ್ದಾರೆ. ಆದರೆ, ಹಗಲು ರಾತ್ರಿ ನಮ್ಮನ್ನು ಕಾಯುವ ಪೊ ಲೀ ಸ ರಿಗೇ ರ ಕ್ಷಣೆ ಇಲ್ಲವಾ ಗಿ ದೆ ಎಂದು ಹೇಳಿದರು.
ಇದೇ ವೇಳೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕು ಹಾಗೂ ಪೊಲೀಸರ ಕರ್ತವ್ಯದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಟಿಜನ್ ಫಾರ್ ಡೆಮಾಕ್ರಸಿ ರಾಜ್ಯ ಸಂಚಾಲಕ ರಾಜೇಶ್ ಪದ್ಮಾರ್, ರಾಧಕೃಷ್ಣ ಹೊಳ್ಳ, ಕ್ಯಾನ್ಸರ್ ರೋಗತಜ್ಞೆ ವಿಜಯಲಕ್ಷಿ ದೇಶಮಾನೆ, ಪತ್ರಕರ್ತ ದೂಗು ಲಕ್ಷ್ಮಣ್, ವೃಕ್ಷ ತಜ್ಞ ವಿಜಯ ನಿಶಾಂತ್, ನಟಿಯರಾದ ತಾರಾ, ಶೃತಿ, ಲಹರಿವೇಲು, ಮಾದಿಗ ದಂಡೊರ ಸಮಿತಿ ಮುಖ್ಯಸ್ಥ ಶಂಕರಪ್ಪ ಇತರರು ಇದ್ದರು.
“ನಾಟ್ ಮೈ ಬೆಂಗಳೂರು’: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣ ಹಿನ್ನೆಲೆಯಲ್ಲಿ ಸಿಟಿಜನ್ ಫಾರ್ ಡೆಮಾಕ್ರಸಿ “ನಾಟ್ ಮೈ ಬೆಂಗಳೂರು’ ಎಂಬ ಟ್ವಿಟರ್ ಖಾತೆ ತೆರೆದಿದೆ. ಈ ಖಾತೆಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಟ್ವಿಟಿಗರು ಬೆಂಗಳೂರು ಮೊದಲು ಹೇಗಿತ್ತು. ಈಗ ಹೇಗಿದೆ ಎಂಬೆಲ್ಲ ವ್ಯಾಖ್ಯಾನ ನೀಡಿದ್ದಾರೆ. ಪೊಲೀಸರಿಗೆ ಸರ್ಕಾರ ಒತ್ತಡ ಹಾಕಬಾರದು. ಪ್ರಮಾಣಿಕವಾಗಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂಬೆಲ್ಲ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
“ಶಾಂತಿಗಾಗಿ ಜನ ಧ್ವನಿ’: ಇದೇ ವೇಳೆ ಶಾಂತಿಗಾಗಿ ಜನ ಧ್ವನಿ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡ ಸುಮಾರು 400ಕ್ಕೂ ಅಧಿಕ ಮಂದಿ ಯುವ ಸಮೂಹ ಹಾಗೂ ಸಾರ್ವಜನಿಕರು ಸಹಿ ಮಾಡಿ ಬೆಂಗಳೂರಿನಲ್ಲಿ ಮತ್ತೆ ಶಾಂತಿ ಮರುಕಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.