ಗೊಂದಲದ ಗೂಡಾಯ್ತು ಸಭೆ
Team Udayavani, Mar 4, 2018, 1:18 PM IST
ನಾಲತವಾಡ: ಸ್ಥಳೀಯ ಪಪಂ ಸಾಮಾನ್ಯಸಭೆಯಲ್ಲಿ ಮಹಿಳಾ ಸದಸ್ಯರಿಗೆ ಮುಖ್ಯಾಧಿಕಾರಿ ಏಕವಚನ ಬಳಸಿದ್ದಾರೆ
ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಸಭೆ ಗೊಂದಲ ಗೂಡಾಗಿ ಪರಿಣಮಿಸಿತು.
ಹಲವು ವಿಷಯಗಳನ್ನು ಚರ್ಚಿಸುವ ಹಿನ್ನಲೆಯಲ್ಲಿ ಶನಿವಾರ ಸಾಮಾನ್ಯ ಸಭೆ ಕರೆಯಲಾಗಿತ್ತು. ಸಭೆಯ ನಡುವಳಿಕೆ
ವಿಷಯಗಳನ್ನು ಓದುತ್ತಿದ್ದ ವೇಳೆ ಮಹಿಳಾ ಸದಸ್ಯೆ ಸುಮಾ ಗಂಗನಗೌಡ ಮಧ್ಯ ಪ್ರವೇಶಿಸಿ ಈ ಮೊದಲು ನಾವು ಕೇಳಿದ ಅನುದಾನ ಬಳಕೆ, ಮನೆಗಳ ವಿತರಣೆ, ಇತರೆ ವಿಷಯಗಳಿಗೆ ಕಳೆದ ಹಲವು ಬಾರಿ ಮನವಿ ನೀಡಿದ್ದೇವೆ. ಅವುಗಳಿಗೆ ಇನ್ನು ಉತ್ತರವೇ ನೀಡಿಲ್ಲ, ಈಗೇಕೆ ನಮಗೆ ನಮ್ಮ ವಾರ್ಡ್‌ನ ಸಮಸ್ಯೆಗಳನ್ನು ಕೇಳುತ್ತೀರಿ ಎಂದು ಪ್ರಶ್ನಿಸಿದರು.
ಒಬ್ಬರಿಗೊಬ್ಬರು ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ರೋಷಗೊಂಡ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ
ಮಹಿಳಾ ಸದಸ್ಯರಿಗೆ ಏಕವಚನ ಬಳಸಿ ಅವುಗಳನ್ನು ಕೇಳುವ ಅವಶ್ಯಕತೆ ಇಲ್ಲ, ಇನ್ನೇನಿದ್ದರೂ ಇಂದಿನ ವಿಷಯ ಕೇಳಿ ಎಂದು ಉತ್ತರಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇನ್ನೋರ್ವ ಮಹಿಳಾ ಸದಸ್ಯೆ ಲತಾ ಕಟ್ಟಿಮನಿ ಮೊದಲು ಮಹಿಳೆಯರಿಗೆ ಸರಿಯಾಗಿ ಮಾತನಾಡುವದನ್ನು ಕಲಿಯಬೇಕು. ನಮ್ಮ ವಾರ್ಡ್‌ನಲ್ಲಿ ಇದುವರೆಗೂ ಸರಿಯಾಗಿ ಅನುದಾನ ನೀಡಿಲ್ಲ, ಮನೆಗಳ ವಿತರಣೆಗೆ ಮಲತಾಯಿ ಧೋರಣೆ ತೋರುತ್ತಿದ್ದೀರಿ, ನಮಗೆ ಸರಕಾರದ ಹಕ್ಕು ಇಲ್ಲವೇ? ಈ ಹಿಂದೆ ಕೇಳಿದ ಲೆಕ್ಕ ಪತ್ರ ಕೊಟ್ಟು ಹೊಸದಾಗಿ
ಮಾತಾಡಿ ಎಂದು ನೇರವಾಗಿ ಪ್ರಶ್ನಿಸಿದರು.
ಸಭೆ ಬಹಿಷ್ಕಾರ: ನೇರವಾಗಿ ಮುಖ್ಯಾಧಿಕಾರಿ ಅವರೊಂದಿಗೆ ವಾದಕ್ಕಿಳಿದ ಸದಸ್ಯರಾದ ಭೀಮಣ್ಣ ಗುರಿಕಾರ, ಲತಾ ಕಟ್ಟಿಮನಿ ಹಾಗೂ ಸುಮಾ ಗಂಗನಗೌಡ್ರ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು. ಪಪಂನಲ್ಲಿ ಏಕಪಕ್ಷೀಯ ಆಡಳಿತ ನಡೆಸಲಾಗುತ್ತಿದೆ ಎಂದು ಆರೋಪಿಸಿ ಮುಖ್ಯಾಧಿಕಾರಿಗೆ ಧಿಕ್ಕಾರ ಕೂಗಿದರು. ನಂತರ ಮಧ್ಯ ಪ್ರವೇಶಿಸಿದ ಮುಖ್ಯಾಧಿಕಾರಿಯೊಂದಿಗೆ ಸುಮಾರು ಒಂದು ಗಂಟೆ ಕಾಲ ವಾದ ವಿವಾದ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿತು.
ಜೆಡಿಎಸ್ ಸದಸ್ಯರ ಕಡೆ ಗಮನ ಕೊಡದೇ ನೇರವಾಗಿ ಹೊರ ಹೋದ ಸಿಒ, ಸದಸ್ಯರ ಪ್ರತಿಭಟನೆಗೆ ಉತ್ತರ ಕೊಡದೇ ಅಲ್ಲಿಂದ ಸ್ಥಳ ಖಾಲಿ ಮಾಡಿದರು.
ಎಚ್ಚರಿಕೆ: ಜೆಡಿಎಸ್ ಸದಸ್ಯರ ಕಡಗಣನೆ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ಸಭೆಯಲ್ಲೂ ಸಹ ನಾವು ಕೇಳಿದ ಅಭಿವೃದ್ಧಿ ಹಾಗೂ ಯೋಜನೆಗಳ ವಿಷಯಗಳಿಗೆ ಉತ್ತರ ನೀಡದಿದ್ದರೆ ಸಭೆ ನೆಡೆಸಲು ಬಿಡಲ್ಲ ಎಂದು ಸದಸ್ಯರು ಹೇಳಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.