ಬಾಲ್ಯದಲ್ಲಿಸಿಕ್ಕಿದ ಶಿಸ್ತಿನ ಪಾಠಸೈನಿಕನನ್ನಾಗಿಸಿತು!


Team Udayavani, Mar 4, 2018, 5:38 PM IST

maq-1.jpg

ಮಾ. 4: ಖಾದರ್‌ಗೆ ಸಮ್ಮಾನ 
ಮುಡಿಪು: ಕುರ್ನಾಡು ಜಿ.ಪಂ. ಕ್ಷೇತ್ರಕ್ಕೆ ಸುಮಾರು ನೂರು ಕೋಟಿಗೂ ಮಿಕ್ಕಿ ಅನುದಾನ ಮಂಜೂರು ಮಾಡಿರುವ ಸಚಿವ ಯು.ಟಿ. ಖಾದರ್‌ ಅವರು ತನ್ನ ಶಾಸಕತ್ವದ ಮೂರು ಅವಧಿಯಲ್ಲಿ ಹಾಗೂ ಸಚಿವರಾಗಿ ಕ್ರಾಂತಿಕಾರಿ ಅಭಿವೃದ್ಧಿ ಕಾರ್ಯ ನಡೆಸಿದ್ದು ಆ ನಿಟ್ಟಿನಲ್ಲಿ ಕುರ್ನಾಡು ಜಿ.ಪಂ. ಕ್ಷೇತ್ರದ ಸರ್ವ ಜನಾಂಗದ ನಾಗರಿಕ ಬಂಧುಗಳಿಂದ ಮಾ. 4ರಂದು ಸಂಜೆ 4 ಗಂಟೆಗೆ ಸಚಿವ ಖಾದರ್‌ ಅವರಿಗೆ ಸಾರ್ವಜನಿಕ ಅಭಿನಂದನೆ, ಸಮ್ಮಾನ ಸಮಾರಂಭ ನಡೆಯಲಿದೆ ಎಂದು ಜಿ.ಪಂ. ಸದಸ್ಯೆ ಮಮತಾ ಡಿ.ಎಸ್‌. ಗಟ್ಟಿ ಹೇಳಿದರು.

ಮುಡಿಪುವಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾದರ್‌ ಅವರ ಕೊಡುಗೆ ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಕ್ಕೂ ಬಹಳಷ್ಟು ಅನುದಾನ ಮಂಜೂರು ಮಾಡಿಸಿದ್ದಾರೆ. ಇಂದಿರಾ ಗಾಂಧಿ ಕ್ಯಾಂಟಿನ್‌, ಹರೀಶ್‌ ಸಾಂತ್ವನ ಯೋಜನೆ, 94ಸಿ ಹಾಗೂ 94ಸಿಸಿಯಡಿಯಲ್ಲಿ ಹಕ್ಕುಪತ್ರ ಕೊಡಿಸುವ ಮೂಲಕ
ಮಂಗಳೂರು ಕ್ಷೇತ್ರಕ್ಕೆ ಬಹುಪಾಲು ಅನುದಾನ ಒದಗಿಸಿ ಕೊಟ್ಟಿದ್ದಾರೆ. ಕುರ್ನಾಡು ಕಾಲೇಜಿಗೆ ಪದವಿ ಕಾಲೇಜು ಕೊಟ್ಟಿದ್ದಾರೆ. ಒಟ್ಟಿನಲ್ಲಿ ಚುನಾವಣಾ ಪೂರ್ವ ಅವರು ಜನತೆಗೆ ಕೊಟ್ಟ ಭರವಸೆಗಳಲ್ಲಿ ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ 95ಶೇ. ಅಭಿವೃದ್ಧಿ ಕಾಮಗಾರಿ ನಡೆಸಿದ್ದಾರೆ ಎಂದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಹತ್ತು ವರ್ಷಗಳ ಬೇಡಿಕೆ ಇದ್ದ ಪಡಿತರ ಚೀಟಿ ವಿತರಣೆ ಸಮಸ್ಯೆ, ಸರಕಾರಿ ಗೋಮಾಳ ಜಾಗದಲ್ಲಿ ಮನೆ ಕಟ್ಟಿ ಕುಳಿತವರಿಗೆ ಹಕ್ಕುಪತ್ರ, ನೀರಾವರಿ ಇಲಾಖೆಯಿಂದ ಕಿಂಡಿ ಅಣೆಕಟ್ಟು ನಿರ್ಮಾಣ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದಲ್ಲಿ ಬಹಳಷ್ಟು ರಸ್ತೆ ನಿರ್ಮಾಣವಾಗಿದ್ದು, ಈ ನಿಟ್ಟಿನಲ್ಲಿ ಕ್ಷೇತ್ರದ ಜನತೆ ಬಹಳ ಪ್ರೀತಿಯಿಂದ ಸಚಿವರನ್ನು ಸಮ್ಮಾನಿಸಲು ಮುಂದಾಗಿದ್ದು, ಸಾರ್ವಜನಿಕರು ಯಶಸ್ವಿಗೊಳಿಸಬೇಕು ಎಂದರು.

ತೋಡುಗೋಳಿ ಮಹಾಬಲೇಶ್ವರ ಭಟ್‌, ಬೇಕಲ ಉಸ್ತಾದ್‌ ಸೇರಿದಂತೆ ಧಾರ್ಮಿಕ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮುಡಿಪು ಬ್ಲಾಕ್‌ ಕಾಂಗ್ರೆಸ್‌ ಪ್ರ.ಕಾ. ಅಬ್ದುಲ್‌ ಜಲೀಲ್‌ ಮೋಂಟುಗೋಳಿ, ವಕ್ಫ್ ಜಿಲ್ಲಾ ಸಮಿತಿ ಸದಸ್ಯ ಉಮರ್‌ ಪಜೀರು, ಡಾ| ಸುರೇಖ, ಉದ್ಯಮಿ ಇಮಿಯಾಝ್ ಹಾಗೂ ರಹ್‌ಮಾನ್‌ ಉಪಸ್ಥಿತರಿದ್ದರು.

ಅವಿನಾಶ್‌ ವಿ. ಅವರಿಗೆ ಪಿಎಚ್‌.ಡಿ.
ಮಹಾನಗರ: ಮಂಗಳೂರು ವಿಶ್ವ ವಿದ್ಯಾಲಯ ಇತಿಹಾಸ ವಿಭಾಗ ಸಂಶೋಧನ ವಿದ್ಯಾರ್ಥಿ ಅವಿನಾಶ್‌ ವಿ. ಅವರು ಮಂಡಿಸಿದ “ವಸಾ ಹತುಶಾಹಿ ಕೊಡಗಿನಲ್ಲಿ ಕಮಿಷನರ್‌ ಗಳ ಆಡಳಿತ ಮತ್ತು ಸಾಮಾಜಿಕ, ಆರ್ಥಿಕ ಪರಿವರ್ತನೆಗಳು (ಕ್ರಿ.ಶ. 1834 ರಿಂದ 1947)’ ಎಂಬ ವಿಷಯದ ಕುರಿತ ಸಂಶೋಧನ ಮಹಾಪ್ರಬಂಧಕ್ಕೆ ಮಂಗಳೂರು ವಿವಿ ಪಿಎಚ್‌.ಡಿ. ಪ್ರದಾನ ಮಾಡಿದೆ. ಅವಿನಾಶ್‌ ಅವರು ಇತಿಹಾಸ ವಿಭಾಗದ ಪ್ರಾಧ್ಯಾಪಕ ಲೋಕೇಶ್‌ ಕೆ. ಎಂ. ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆ ನಡೆಸಿದ್ದಾರೆ.

ಮಂಗಳೂರು, ಮಾ.3: ಬಾಲ್ಯದಲ್ಲಿ ಸಿಕ್ಕಿದ ಶಿಸ್ತಿನ ಪಾಠ ಮನುಷ್ಯನನ್ನು ರೂಪಿಸುವುದು ಮಾತ್ರವಲ್ಲ ದೇಶಸೇವೆಗೆ ಹೆಗಲು ನೀಡುವ
ಸೈನಿಕನನ್ನಾಗಿಯೂ ಮಾಡಬಹುದು. ಇದಕ್ಕೊಂದು ಉದಾಹರಣೆ ಬೆಳ್ತಂಗಡಿಯ ವೇಣೂರು ಪಾಂಚಜನ್ಯ ದೋಟ ಮನೆಯ ರಾಧಾಕೃಷ್ಣ ಡಿ. ಶಾಲಾ-ಕಾಲೇಜು ದಿನಗಳಲ್ಲಿ ಆರೆಸ್ಸೆಸ್‌ ಶಾಖೆಗೆ ತೆರಳುತ್ತಿದ್ದ ಅವರಿಗೆ ಅಲ್ಲಿ ಸಿಕ್ಕಿದ ದೇಶಾಭಿಮಾನದ
ಪಾಠ, ಭಾರತೀಯತೆಯ ಶ್ರೇಷ್ಠತೆ ಕುರಿತ ಮಾತುಗಳು, ಅವರನ್ನು ಸೈನಿಕನನ್ನಾಗಿಸುವಲ್ಲಿ ಪ್ರೇರೇಪಿಸಿತು.

ಸೇನೆಗೆ ಸೇರುವ ಛಲ ಲೋಕಯ್ಯ ಪೂಜಾರಿ, ತಾಯಿ ಸುನಂದಾ ಅವರ ಪುತ್ರರಾದ ರಾಧಾಕೃಷ್ಣ ಅವರು ಉಂಬೆಟ್ಟು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವೇಣೂರು ಸ.ಪ.ಪೂ. ಕಾಲೇಜಿನಲ್ಲಿ ಪ್ರೌಢ ಮತ್ತು ಪಿಯುಸಿ ಶಿಕ್ಷಣವನ್ನು ಪೂರೈಸಿದರು. ಬಳಿಕ ಮೂಡಬಿದಿರೆ ಮಹಾವೀರ ಕಾಲೇಜಿನಲ್ಲಿ 9 ತಿಂಗಳು ಐಟಿಐ ತರಬೇತಿಯಲ್ಲಿರುವಾಗಲೇ ಸೇನಾ ನೇಮಕಾತಿಗೆ ಅರ್ಜಿ ಸಲ್ಲಿಸಿ
ವಿಫ‌ಲರಾಗಿದ್ದರು. ಆದರೂ ಛಲಬಿಡದೆ ಮತ್ತೂಮ್ಮೆ ಪ್ರಯತ್ನಿಸಿದ್ದರು.

ಪರಿಣಾಮ 2001, ಎಪ್ರಿಲ್‌ನಲ್ಲಿ ಸೇನೆಗೆ ಆಯ್ಕೆಯಾದರು. ಹಿರಿಯರ ಮಾರ್ಗದರ್ಶನ ಆರೆಸ್ಸೆಸ್‌ನ ಸಂಪರ್ಕ ದಿಂದ ಶಿಸ್ತುಗಳನ್ನು ಕಲಿತಿದ್ದ ರಾಧಾಕೃಷ್ಣ ಅವರಿಗೆ ರಾಷ್ಟ್ರರಕ್ಷಣೆಯ ಸೈನಿಕನಾಗಲು ಮಾರ್ಗದರ್ಶನವೂ ಸಿಕ್ಕಿತ್ತು. ಸಂಘದ ಹಿರಿಯರಾದ ಮಾಧವ್‌
ಕಾರಂತ್‌ ಮತ್ತು ಸುರೇಶ್‌ ಘೋರೆ ಅವರಿಂದಾಗಿ ನಾನಿಂದು ಸೈನಿಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎನ್ನುತ್ತಾರೆ ರಾಧಾಕೃಷ್ಣ

ಮನೆಯವರ ಪ್ರೋತ್ಸಾಹ ಸೇನೆಗೆ ಸೇರ್ಪಡೆಯಾಗುವ ಸಂದರ್ಭ  ಮನೆಯವರಿಂದ ಸಿಕ್ಕ ಪ್ರೋತ್ಸಾಹವನ್ನೂ ರಾಧಾಕೃಷ್ಣ ಅವರು ಮರೆಯುವುದಿಲ್ಲ. ಸಹೋದರರಾದ ಲಕ್ಷ್ಮಣ, ಕರುಣಾಕರ, ಪ್ರಭಾಕರ, ಶೇಖರ ಪೂಜಾರಿ, ತಂಗಿ ಶೋಭಾ ಬೆಂಬಲಕ್ಕೆ ನಿಂತಿದ್ದಾರೆ. ಕಾರ್ಕಳ ಭುವನೇಂದ್ರ ಪ್ರೌಢಶಾಲೆ ಯಲ್ಲಿ ಶಿಕ್ಷಕಿಯಾಗಿರುವ ಪತ್ನಿ ಶುಭಲಕ್ಷ್ಮೀ ಮತ್ತು ಮಗಳು ಶ್ರೀಯಾ ದೇಶಸೇವೆಯ ಕೆಲಸಕ್ಕೆ ಬೆಂಗಾವಲಾಗಿದ್ದಾರೆ. ಸೇನಾ ಸಮವಸ್ತ್ರದಲ್ಲಿ ರಾಧಾಕೃಷ್ಣ. ಪಠಾಣ್‌ಕೋಟ್‌ನಲ್ಲಿ ನಿಗಾ ಪಠಾಣ್‌ಕೋಟ್‌ ಉಗ್ರ ದಾಳಿ ಸಂದರ್ಭ ಆ ಪ್ರದೇಶದ ಪಕ್ಕದಲ್ಲೇ ರಾಧಾಕೃಷ್ಣ ಅವರೂ ಕರ್ತವ್ಯ ನಿರತರಾಗಿದ್ದರು. ಈ ವೇಳೆ ಸುತ್ತಮುತ್ತಲಿನ ಭಾಗಗಳಲ್ಲಿ ಹೈ ಅಲರ್ಟ್‌ ಘೋಷಣೆಯಾದ ಬಳಿಕದ ದಿನಗಳು ಮರೆಯಲಾಗದ್ದು. ತೀವ್ರತರವಾದ ನಿಗಾ ವಹಿಸಿ ಎಚ್ಚರಿಕೆಯಿಂದ ಕಳೆದ ದಿನಗಳವು ಎನ್ನುತ್ತಾರೆ ರಾಧಾಕೃಷ್ಣ. ವಾಜಪೇಯಿ ಸರಕಾರ ಇದ್ದ ಸಂದರ್ಭ ಮುಜಾಫರಾಬಾದ್‌ನಲ್ಲಿ ಅಮನ್‌ಸೇತು ಲೋಕಾರ್ಪಣೆಯಾದ ಸಂದರ್ಭದಲ್ಲೂ
ಅವರು ಅಲ್ಲಿ ಕೆಲಸ ಮಾಡಿದ್ದರು. 

ಸುವರ್ಣಾವಕಾಶ ದಕ್ಷಿಣ ಕನ್ನಡ ಜಿಲ್ಲೆಯಿಂದ ಸೇನೆಗೆ ಸೇರುವವರ ಸಂಖ್ಯೆ ತೀರಾ ಕಡಿಮೆ ಇದೆ. ಆದರೆ ಸೇನೆಯಲ್ಲಿ ಸೇವೆ ಸಲ್ಲಿಸುವುದು ಸುವರ್ಣಾವಕಾಶ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಕರ್ತವ್ಯದ ಒಲವು ಹೊಂದಬೇಕು. 
-ರಾಧಾಕೃಷ್ಣ

ದೋಟ ಪತಿ ಬಗ್ಗೆ ಖುಷಿ ಪತಿ ದೇಶ ಸೇವೆ ಮಾಡುತ್ತಿರುವುದರ ಬಗ್ಗೆ ನನಗೆ ತುಂಬ ಹೆಮ್ಮೆ ಇದೆ. ಅವರು ಸೇವೆಯಲ್ಲಿ ಮುಂದುವರಿಯಬೇಕೆಂಬ ಇಚ್ಛೆ ನನಗಿತ್ತು. ಆದರೆ ಕಾರಣಾಂತರಗಳಿಂದ ಮುಂದಿನ ಮೇಯಲ್ಲಿ ನಿವೃತ್ತಿಯಾಗಲಿದ್ದಾರೆ. ಆದರೂ 17 ವರ್ಷಗಳ ಸೇವೆಯ ಬಗ್ಗೆ ಖುಷಿ ಇದೆ. 
-ಶುಭಲಕ್ಷ್ಮೀ, ಪತ್ನಿ

ಧನ್ಯಾ ಬಾಳೆಕಜ

ಟಾಪ್ ನ್ಯೂಸ್

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.