ಆ್ಯಂಡ್ರಾಯ್ಡ್ “ಪಿ’ಗೆ ಪಾಯಸವೋ, ಪೇಣಿಯೋ?
Team Udayavani, Mar 5, 2018, 6:00 AM IST
ವಾಷಿಂಗ್ಟನ್: ಗೂಗಲ್ ಅಭಿವೃದ್ಧಿಪಡಿಸುತ್ತಿರುವ ಆ್ಯಂಡ್ರಾಯ್ಡ ಆಪರೇಟಿಂಗ್ ಸಿಸ್ಟಮ್‌ನ ಈ ಬಾರಿಯ ಸುಧಾರಿತ ಆವೃತ್ತಿಗೆ ದಕ್ಷಿಣ ಭಾರತದ ಸಿಹಿ ತಿನಿಸುವಿನ ಹೆಸರು ಸಿಗಲಿದೆಯೇ?
ಇಂಥ ದ್ದೊಂದು ಚರ್ಚೆ ಈಗಾಗಲೇ ಶುರುವಾಗಿದೆ. ಆ್ಯಂಡ್ರಾಯ್ “ಪಿ’ ಒಎಸ್‌ಗೆ “ಪಾಯಸಂ’,”ಪೇಣಿ’ ಅಥವಾ “ಪೇಡಾ’ ಹೆಸರಿಡುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಅಲ್ಲದೆ ಈಜಿಪ್ಟ್ನ “ಪೈ’ ಎಂಬ ಹೆಸರನ್ನೂ ಇರಿಸಬಹುದು ಎಂಬ ಚರ್ಚೆಗಳೂ ನಡೆಯುತ್ತಿವೆ.
ಮಾರ್ಚ್ ಎರಡನೇ ವಾರದಲ್ಲಿ ಒಎಸ್ ಸರಣಿಯ ಪಿ ನಾಮಾಂಕಿತ ಆವೃ ತ್ತಿಯ ಡೆವಲಪರ್ ಪ್ರಿವ್ಯೂ ( ಪರೀಕ್ಷೆ ಗಾಗಿ ಬಿಡುವುದು) ಅನ್ನು ಗೂಗಲ್ ಬಿಡುಗಡೆ ಮಾಡುತ್ತಿದ್ದು, ಇದರ ಸಂಪೂರ್ಣ ಮತ್ತು ಅಂತಿಮ ಆವೃತ್ತಿ ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಹಿಂದೆ ಅಂದರೆ, “ಒರಿಯೋ’ಗಿಂತ ಹಿಂದಿನ “ನಾಗೌಟ್’ನ ನಾಮಾಂಕನ ವೇಳೆ ಭಾರತದ ತಿನಿಸುವಿನ ಹೆಸರಿಡುವ ಬಗ್ಗೆ ಚರ್ಚೆಯಾಗಿತ್ತು. ಆದರೆ ಆಗ ಭಾರತೀಯರ ನಿರೀಕ್ಷೆ ಹುಸಿಯಾಗಿತ್ತು. 2015ರಲ್ಲಿ ಭಾರತಕ್ಕೆ ಬಂದಿದ್ದ ಗೂಗಲ್ ಸಿಇಒ ಸುಂದರ್ ಪಿಚೈ,”ಎನ್’ ಅಥವಾ “ಪಿ’ ಒಎಸ್ ವೇಳೆ ಭಾರತದ ತಿನಿಸುವಿನ ಹೆಸರಿಡುವ ಬಗ್ಗೆ ಸುಳಿವು ನೀಡಿದ್ದರು.
ಇಂಗ್ಲಿಷಿನ ಅಕಾರಾದಿಗೆ ಅನುಗುಣವಾಗಿ ನಾಮಕರಣ ಮಾಡುವ ಸಂಪ್ರದಾಯವನ್ನು ಗೂಗಲ್ ಬೆಳೆಸಿಕೊಂಡು ಬಂದಿದ್ದು, ಈ ಬಾರಿ ಇದು “ಪಿ’ ಇನಿಶಿಯಲ್ ಹೊಂದಿದೆ. ಇದರ ಪೂರ್ಣ ಪಾಠ ಅಂದರೆ “ಒ’ಗೆ ಒರಿಯೋ, “ಎನ್’ಗೆ ನಾಗೌ ಟ್, “ಎಂ’ಗೆ ಮಾರ್ಶ್‌ಮಲ್ಲೋ, “ಎಲ್’ಗೆ ಲಾಲಿಪಾಪ್, “ಕೆ’ಗೆ ಕಿಟ್‌ಕ್ಯಾಟ್ ಎಂಬ ಹೆಸರಿಡಲಾಗಿದೆ.
ಈಗಾಗಲೇ ಗೂಗಲ್ ಈ ಸಂಬಂಧ ಆನ್‌ಲೈನ್ ಸರ್ವೆ ನಡೆಸಿದೆ. ಆದರೆ ಮಾರ್ಚ್‌ನಲ್ಲೇ ಹೆಸರು ಬಹಿರಂಗಗೊಳಿಸುವುದು ಅನಿಶ್ಚಿತ. ಪಾಯಸ, ಪೇಡಾ, ಪೇಣಿ ಸೇರಿದಂತೆ “ಪ’ದಿಂದ ಆರಂಭವಾಗುವ ಎಲ್ಲ ಸಿಹಿತಿನಿಸುಗಳ ಹೆಸರುಗಳೂ ಅಂತರ್ಜಾಲದಲ್ಲಿ ಸುತ್ತಾಡಿವೆ. ಈ ಹಿಂದೆ ಭಾರತಕ್ಕೆ ಆಗಮಿಸಿದ್ದಾಗ ಪಿಚೈರನ್ನು ಪಿ ಆವೃತ್ತಿಗೆ ಭಾರತೀಯ ತಿನಿಸುಗಳ ಹೆಸರಿಡುತ್ತೀರಾ ಎಂದು ಕೇಳಿದ್ದಕ್ಕೆ, ಈ ಬಗ್ಗೆ ನನ್ನ ಅಮ್ಮನ ಬಳಿ ಸಲಹೆ ಪಡೆಯಬೇಕು ಎಂದು ಹೇಳಿದ್ದರು.
ಮಾರ್ಚ್‌ನಲ್ಲೇ ಯಾಕೆ?:
ಗೂಗಲ್ ಸಾಮಾನ್ಯವಾಗಿ ಮಾರ್ಚ್‌ನಲ್ಲೇ ಹೊಸ ಆಂಡ್ರಾಯ್ಡ ಆವೃತ್ತಿಯನ್ನು ಬಿಡುಗಡೆ ಮಾಡುವ ಸಂಪ್ರದಾಯ ಹೊಂದಿದೆ. ಕಳೆದ ವರ್ಷ ಮಾರ್ಚ್ 21ರಂದು ಒ ಡೆವಲಪರ್ ಪ್ರಿವ್ಯೂ ಬಿಡುಗಡೆ ಮಾಡಿತ್ತು. ನಂತರ ಕೆಲವು ತಿಂಗಳುಗಳವರೆಗೆ ಹಲವು ಆವೃತ್ತಿಗಳನ್ನು ಬಿಡುಗಡೆ ಮಾಡಿ, ಆಗಸ್ಟ್‌ನಲ್ಲಿ ಅಂತಿಮ ಆವೃತ್ತಿಯನ್ನು ಅನಾವರಣಗೊಳಿಸಲಿದೆ. ಆರಂಭದಲ್ಲಿ ಗೂಗಲ್‌ನ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವೇ ಹೊಸ ಆವೃತ್ತಿ ಬಳಕೆಯಾಗಲಿದ್ದು, ನಂತರದ ದಿನಗಳಲ್ಲಿ ಇತರ ಕಂಪನಿಗಳ ಹಾಗೂ ಇತರ ಮಾದರಿಯ ಪಿ ಅಳವಡಿಕೆಯಾಗಲಿದೆ.
ಏನಿರಲಿದೆ ಹೊಸ ಸೌಲಭ್ಯ?
ಸದ್ಯ ಸ್ಮಾರ್ಟ್‌ಫೋನ್ ಯುಐ ಗೂಗಲ್ ಅಸಿಸ್ಟೆಂಟ್ ಸಪೋರ್ಟ್ ಮಾಡುತ್ತದೆಯಾದರೂ, ಸ್ಮಾರ್ಟ್‌ಫೋನ್‌ನಲ್ಲಿರುವ ಅಪ್ಲಿಕೇಶನ್‌ಗಳು ಗೂಗಲ್ ಅಸಿಸ್ಟೆಂಟ್ ಕಮಾಂಡ್‌ಗಳಿಗೆ ಸ್ಪಂದಿಸುವುದಿಲ್ಲ. ಈ ಸಮಸ್ಯೆಯು ಪಿಯಲ್ಲಿ ನಿವಾರಣೆಯಾಗುವ ಸಾಧ್ಯತೆಯಿದೆ. ಅಲ್ಲದೆ ಈಗಾಗಲೇ ಕೆಲವು ಸುಧಾರಿತ ಆವೃತ್ತಿಯ ಯುಐಗಳಲ್ಲಿರುವ ಹಲವು ಸ್ಕ್ರೀನ್‌ಗಳು, ನಾಚ್‌ಗಳನ್ನೂ ಇದು ಒಳಗೊಂಡಿರಲಿದೆ. ಈ ಹಿಂದಿನ ಆವೃತ್ತಿಗಳಲ್ಲಿ ವಿನ್ಯಾಸವನ್ನು ಸ್ವಲ್ಪವೇ ಬದಲಾವಣೆ ಮಾಡಲಾಗಿದ್ದು, ಈ ಆವೃತ್ತಿಯಲ್ಲೂ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.
ಅಪ್ಲಿಕೇಶನ್‌ಗಳು ಬ್ಯಾಕ್‌ಗ್ರೌಂಡ್‌ನಲ್ಲಿ ಕ್ಯಾಮೆರಾ ಅಥವಾ ಮೈಕ್ರೋಫೋನ್ ಅಕ್ಸೆಸ್ ಮಾಡುವುದನ್ನು ತಡೆಯುವುದೂ ಹೊಸ ಆವೃತ್ತಿಯಲ್ಲಿರಲಿದೆ ಎಂದು ಹೇಳಲಾಗಿದೆ. ಅಲ್ಲದೆ ಇತರ ನೂರಾರು ಸೌಲಭ್ಯಗಳು, ಕಸ್ಟಮೈಸೇಶನ್‌ಗಳೂ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಲಭ್ಯವಾಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.