ಸೋಲಾರ್ ಪ್ರಾಜೆಕ್ಟ್; ಅರ್ಜಿ ಸಲ್ಲಿಸುವುದು ಹೇಗೆ?
Team Udayavani, Mar 5, 2018, 12:30 PM IST
ಸೂರ್ಯ ದೇವನಿಗೆ ಕೈ ಮುಗಿದು ಸೋಲಾರ್ ರೂಫ್ಟಾಪ್ ನಿರ್ಮಾಣಕ್ಕೆ ಮುಂದಾಗುವವರಿಗೆ ಸೂರ್ಯನ ಬೆಳಕು ಮಾತ್ರ ದಾರಿ ತೋರಿಸುವುದಿಲ್ಲ. ಈ ಅಂಕಣವನ್ನು ಓದಿ ಸೂರ್ಯ ಶಿಕಾರಿಗೆ ಮುಂದಾಗುವವರಿಗೆ ಕೆಲವು ಪ್ರಾಥಮಿಕ ಮಾಹಿತಿಗಳನ್ನು ಕೊಡುವ ಉದ್ದೇಶದಿಂದ ಈ ಲೇಖನ.
ಗ್ರಾಹಕರು ಎರಡು ವರ್ಗಗಳಲ್ಲಿ ಸೂರ್ಯ ಶಿಕಾರಿಗೆ ಮುಂದಾಗಬಹುದು. ಸರಳ ವಿದ್ಯುತ್ ಗ್ರಾಹಕನಾಗಿ ಹಾಗೂ ಉದ್ಯಮದ ಪ್ರತಿನಿಧಿಯಾಗಿ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಮುಂದಾಗಬಹುದು. ಎರಡಕ್ಕೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ತಮ್ಮ ಆದ್ಯತಾ ಸಂಖ್ಯೆ ಪಡೆಯುವ ಗ್ರಾಹಕ ಎಸ್ಕಾಂನ ಸಂಬಂಧಿಸಿದ ಉಪಭಾಗೀಯ ಓ ಎಂಡ್ ಎಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ದರಪಟ್ಟಿಯನ್ವಯ ಬೇಡಿಕೆಯ ಲೋಡ್‌ಗೆ ಅನ್ವಯಿಸುವಂಥ ಅರ್ಜಿ ಶುಲ್ಕ ಪಾವತಿಸಬೇಕು. 5 ಕೆಡಬ್ಲ್ಯುಪಿವರೆಗಿನ ನೋಂದಣಿ ಶುಲ್ಕ 500 ರೂ. ಫೆಸಿಲಿಟೇಷನ್ ಶುಲ್ಕ ಒಂದು ಸಾವಿರ ರೂ. 5ರಿಂದ 50 ಕೆಡಬ್ಲ್ಯುಪಿ ವರೆಗಿನ ಶುಲ್ಕಗಳು ಅನುಕ್ರಮವಾಗಿ ಒಂದು ಮತ್ತು ಎರಡು ಸಾವಿರ ರೂ…. ಪಟ್ಟಿ ಈ ರೀತಿ ಮುಂದುರಿಯುತ್ತದೆ.
ಸೋಲಾರ್ ಉತ್ಪಾದಕನಿಗೆ ವಿದ್ಯುತ್ ಸರಬರಾಜು ಕಂಪನಿ ಪಿಪಿಎ ಅರ್ಥಾತ್ ವಿದ್ಯುತ್ ಖರೀದಿ ಒಪ್ಪಂದಕ್ಕೆ ಬರುವ ಮುನ್ನ ಸ್ಥಾವರದ ಸ್ಥಾಪನೆಯು ಸಂಪೂರ್ಣ ನಿಯಮಬದಟಛಿವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ನೋಂದಾಯಿತ ಪ್ಯಾನಲ್ ಮಾರಾಟಗಾರರು, ತಯಾರಿಕೆಗಳನ್ನು ಅಧಿಕೃತ ಗುತ್ತಿಗೆದಾರರಿಂದ ಸೋಲಾರ್ ವ್ಯವಸ್ಥೆ ಮಾಡಿಸಿಕೊಳ್ಳುವ ಜವಾಬ್ದಾರಿ ಗ್ರಾಹಕರದ್ದು. ಕೆಲವು ನೋಂದಾಯಿತರ ವಿವರಗಳನ್ನು ಎಸ್ಕಾಂನ ವೆಬ್ ಪುಟಗಳಲ್ಲಿ ಕಾಣಬಹುದು. ಇದೇ ಗುತ್ತಿಗೆದಾರರಿಂದ ಕೆಲಸ ಮಾಡಿಸಿಕೊಳ್ಳಿ ಎಂದು ಎಸ್ಕಾಂ ಯಾವತ್ತೂ ಒತ್ತಾಯ ಹೇರುವುದಿಲ್ಲ.
ಆದರೆ ರೂಫ್ಟಾಪ್ ಸ್ಥಾಪಿಸುವ ಸಂದರ್ಭದ ಅನಾಹುತಗಳಿಗೆ ವಿಮೆ ಮಾಡಿಸಿಕೊಳ್ಳುವುದು, ಕನಿಷ್ಠ 5 ವರ್ಷಗಳ ಕಾಲ ಕಾರ್ಯಕ್ಷಮತೆ, ಸೇವೆ ಕುರಿತಾದ ಒಪ್ಪಂದವನ್ನು ಈ ಗುತ್ತಿಗೆದಾರರ ಜೊತೆ ಖುದ್ದು ಸೂರ್ಯ ಶಿಕಾರಿ ಅರ್ಜಿದಾರ ಮಾಡಿಕೊಳ್ಳುವುದು ಕ್ಷೇಮ ಎಂದು ಅವು ಸಲಹೆ ನೀಡುತ್ತವೆ. ಎಸ್‌ಆರ್‌ಟಿಪಿ ಸ್ಥಾಪನೆಯ ಮಾಹಿತಿ ಪಡೆದ ನಂತರ ಎಸ್ಕಾಂ ತಂಡದಿಂದ ಪರಿಶೀಲನೆ ನಡೆಯುತ್ತದೆ. 10 ಕೆಡಬ್ಲ್ಯುಪಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದ ಸ್ಥಾವರಕ್ಕೆ ಎಸ್ಕಾಂನ ಎಇಇ-ಎಲೆಕ್ಟ್ರಿಕಲ್ ಪರಿಶೀಲನಾ ಅಧಿಕಾರಿಯಾಗಿರದೆ, ಸರ್ಕಾರದ ಮುಖ್ಯ ವಿದ್ಯುತ್ ಎಲೆಕ್ಟೊರೇಟ್ ಈ ವ್ಯವಸ್ಥೆಯ ಸುರûಾ ಅಂಶಗಳನ್ನು ಪರಿಶೀಲಿಸಿ ವರದಿ ಕೊಡುವವರಾಗಿರುತ್ತಾರೆ.
ರೂಫ್ಟಾಪ್‌ಗೆ ಸುಲಭದಲ್ಲಿ ತಲುಪುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಿರಬೇಕಾಗುತ್ತದೆ. ಅರ್ಜಿದಾರ ಸೋಲಾರ್ ಅಳವಡಿಸುವ ಮನೆಯ ಮಾಲೀಕತ್ವ ಹೊಂದಿರಬೇಕು. ಒಂದೊಮ್ಮೆ ಕಂಪನಿ, ದತ್ತಿ, ಸಹಕಾರ ಸಂಸ್ಥೆ, ಪಾಲುದಾರಿಕೆ ವ್ಯವಸ್ಥೆಯಾಗಿದ್ದರೆ ಒಬ್ಬರಿಗೆ ಈ ಯೋಜನೆಯ ನಿರ್ವಹಣೆಯ ಸಂಪೂರ್ಣ ಅಧಿಕಾರವನ್ನು ಕೊಟ್ಟಿರುವ ದಾಖಲೆ ಇರಬೇಕು. ಆ ಅಧಿಕಾರಸ್ಥ ವ್ಯಕ್ತಿ ಅರ್ಜಿ ಸಲ್ಲಿಸಿರಬೇಕು. ಪಾಲುದಾರಿಕೆಯಲ್ಲಿ ಅಧಿಕಾರ ಪಡೆದ ವ್ಯಕ್ತಿ ಪಾಲುದಾರಿಕೆಯಲ್ಲಿ ಇರುವವನೇ ಆಗಿರಬೇಕಾಗುತ್ತದೆ. ಅಧಿಕಾರ ನೀಡಿಕೆ ಪತ್ರದ 1ಎ ಅಥವಾ 1ಬಿ ಪತ್ರದ ನಕಲು ಎಸ್ಕಾಂಗಳ ವೆಬ್‌ನಲ್ಲಿ ಲಭ್ಯವಿದೆ.
ಅರ್ಜಿ ಸಲ್ಲಿಕೆಯ ಜೊತೆಗೆ ರೂಫ್ ಟಾಪ್ ಅಳವಡಿಸಬೇಕಾದ ಸಂಪರ್ಕದ ಇತ್ತೀಚಿನ ವಿದ್ಯುತ್ ಬಿಲ್, ಈ ಮೊದಲು ಹೇಳಿದ ಅಧಿಕಾರ ಪತ್ರದ ಪ್ರತಿಯ ಜೊತೆಗಿರಬೇಕು. ಅಂಗೀಕೃತ ಸಂಸ್ಥೆಯಿಂದ ಮೀಟರ್ ಹಾಕಿಸಬೇಕಾಗುತ್ತದೆ. ಮೀಟರ್ ಅಳವಡಿಕೆಗೆ ಕೆಡಬ್ಲ್ಯುಪಿ ಪ್ರಕಾರವಾಗಿ ಶುಲ್ಕವಿದೆ. ಸೋಲಾರ್ ರೂಫ್ಟಾಪ್ ಪಿ ಸಿಸ್ಟಂಗಳಿಗೆ ಎಂಅನ್‌ಆರ್‌ಇ ಸಹಾಯಧನ ಪಡೆಯಲು ಇಚ್ಛಿಸುವವರು ಡಿಡಿಡಿ.ಞ್ಞrಛಿ.ಜಟv.ಜಿn ವೆಬ್‌ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು. ಗ್ರಾಹಕ ಇತರ ದಾಖಲೆಗಳೊಂದಿಗೆ ಕೆಲಸ ಮುಕ್ತಾಯದ ದಾಖಲಾತಿಗಳನ್ನು ಒಪ್ಪಿಸಿ, ಪರಿಶೀಲನೆಯಾದ ನಂತರ ಈ ಇಬ್ಬರ ನಡುವೆ ವಿದ್ಯುತ್ ಖರೀದಿ ಒಪ್ಪಂದ ಪಿಪಿಎ ನಡೆಯುತ್ತದೆ. ಒಮ್ಮೆ ಪಿಪಿಎ ಆದರೆ ಅದು 25 ವರ್ಷಕ್ಕೆ
ಅನ್ವಯವಾಗುತ್ತದೆ. ವಿದ್ಯುತ್ ಯೂನಿಟ್ ದರ ಕೆಇಆರ್‌ಸಿ ಕಾಲಕಾಲಕ್ಕೆ ನಿಗದಿಪಡಿಸಿದಂತೆ ಲಾಗೂ ಆಗುತ್ತದೆ. ಸ್ಥಾವರ
ನಿರ್ಮಾಣಗೊಂಡ 180 ದಿನಗಳಲ್ಲಿ ವಿದ್ಯುತ್ ಸರಬರಾಜು ಕಂಪನಿಯೊಂದಿಗೆ ಗ್ರಾಹಕ ಪಿಪಿಎಗೆ ಸಹಿ ಹಾಕದಿದ್ದರೆ
ನೋಂದಣಿ ವ್ಯರ್ಥವಾಗುತ್ತದೆ.
ಸೋಲಾರ್ ರೂಫ್ಟಾಪ್ ಅಳವಡಿಕೆಯ ಬಗೆಗಿನ ಮಾಹಿತಿಗಳು ಪ್ರತಿ ಎಸ್ಕಾಂನ ವೆಬ್ ಪುಟಗಳಲ್ಲಿ ಸಿಗುತ್ತವೆ.
ಇವು ಎಸ್ಕಾಂನಿಂದ ಎಸ್ಕಾಂಗೆ ಭಿನ್ನವಾಗೇನೂ ಇಲ್ಲ. ನಿಮಗೆ ಬೆಸ್ಕಾಂನ ಲಿಂಕ್ ಕೊಡುವುದಾದರೆ, ಜಠಿಠಿಟs://
ಚಿಛಿscಟಞ.ಟ್ಟಜ/ಛಿn/sಟlಚr rಟಟf/, ಜಠಿಠಿಟ://ಡಿಡಿಡಿ. ಞಛಿscಟ.ಜಿn/srಠಿ/ಜಿnಛಛಿx.ಚsಟ-. ಲಂಚದ್ದೇ ದೊಡ್ಡ ಸಮಸ್ಯೆ ಸಮಸ್ಯೆ ಲಂಚದ್ದು. ಆನ್‌ಲೈನ್ ಅರ್ಜಿ ಸಲ್ಲಿಕೆಯ ನಂತರ 180 ದಿನಗಳಲ್ಲಿ ಪಿಪಿಎಗೆ ಬರುವ ಮಧ್ಯದ ಅವಧಿಯಲ್ಲಿ ಎಸ್ಕಾಂ ಅಧಿಕಾರಿಗಳು ಲಂಚಕ್ಕಾಗಿ ಪೀಡಿಸುತ್ತಾರೆ. ಸಂಪೂರ್ಣ ಗುತ್ತಿಗೆ ಪಡೆದ ಕಂಪನಿಗಳು ಅದರಲ್ಲಿ ಅಧಿಕಾರಿಗಳಿಗೆ ಕೊಡುವ “ಬೋಫೋರ್ಸ್’ನ್ನು ಸೇರಿಸುತ್ತಾರೆ! ದೊಡ್ಡ ದೊಡ್ಡ ಅಂದರೆ 600, 800 ಕೆಡಬ್ಲ್ಯುಪಿ ಸ್ಥಾವರಗಳ ವಿಚಾರದಲ್ಲಿ ಒಂದೊಂದು ದಿನವೂ ಮಹತ್ವದ್ದು. ಹತ್ತಿರಹತ್ತಿರ ಕೋಟಿ ರೂ. ಬಂಡವಾಳ ಹೂಡಿರುವವರಿಗೆ ಎಸ್ಕಾಂ ಅಧಿಕಾರಿಗಳು ಪಿಪಿಎಎಗೆ 180 ದಿನಗಳ ಅವಕಾಶವಿದೆ ಎಂದು ಆಟವಾಡಲು ತೊಡಗಿದರೆ ಅನಿವಾರ್ಯವಾಗಿ ಬಂಡವಾಳ ಹಾಕಿದಾತ ಲಂಚದ ಮೊತ್ತ ಏರಿಸುತ್ತಾನೆ! ಬದಲಾವಣೆಯ ಗಾಳಿಗೆ ಕೆಂಪು ಪಟ್ಟಿಯ “ಇವತ್ತಿನ ಬ್ರಿಟಿಷರು’ ತಡೆಯಾಗಿದ್ದಾರೆ ಎಂಬುದು ನಿಜಕ್ಕೂ ವಿಷಾದಕರ.
– ಗುರು ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.