ಪೌರಕಾರ್ಮಿಕರ ಧರಣಿ: ಹುಣಸೂರಿನಲ್ಲಿ ಕಸರಾಶಿ
Team Udayavani, Mar 5, 2018, 12:29 PM IST
ಹುಣಸೂರು: ಸ್ವತ್ಛ ಸರ್ವೇಕ್ಷಣ್-2018ಕ್ಕೆ ಆಯ್ಕೆಯಾಗಿರುವ ಹುಣಸೂರು ನಗರದಲ್ಲೀಗ ಕಸದರಾಶಿ ರಾರಾಜಿಸುತ್ತಿದೆ! ಸ್ವತ್ಛ ನಗರದ ಪರಿಕಲ್ಪನೆಯಲ್ಲಿ ಜಿಲ್ಲೆಯಲ್ಲೇ ಸದಾ ಮುಂದಿದ್ದ ಹುಣಸೂರು ನಗರವೀಗ ಕಸದಿಂದ ನಲುಗಿ ಹೋಗಿದ್ದು, ಕೆಲವೆಡೆ ಅಕ್ಕಪಕ್ಕದ ಮನೆಯವರೇ ಕಸಕ್ಕೆ ಬೆಂಕಿ ಹಾಕುತ್ತಿದ್ದಾರೆ. ಹಾರು ಬೂದಿ, ದುರ್ವಾಸನೆಯಿಂದ ದಾರಿ ಹೋಕರು ಮೂಗು ಮುಚ್ಚಿಕೊಂಡು, ಅಸಹ್ಯಪಟ್ಟುಕೊಂಡು ಸಂಚರಿಸುವ ದುಃಸ್ಥಿತಿ ಬಂದಿದೆ.
ಹುಣಸೂರು ನಗರಸಭೆಯ ಹೊರ ಗುತ್ತಿಗೆ ಪೌರಕಾರ್ಮಿಕರು 15 ದಿನಗಳಿಂದ ಸಂಬಳ ಬಾಕಿಗಾಗಿ ಮುಷ್ಕರ ನಡೆಸುತ್ತಿರುವ ಪರಿಣಾಮ ಕಸ ವಿಲೇವಾರಿಯಾಗದೆ ಇಡೀ ನಗರವೀಗ ಗಬ್ಬೆದ್ದು ನಾರುತ್ತಿದೆ !.
ಗೊಂದಲದ ಆದೇಶ: ಸರ್ಕಾರದ 2018 ಆಗಸ್ಟ್‌ರ ಹೊಸ ಮಾರ್ಗಸೂಚಿಯಂತೆ ಹೊರಗುತ್ತಿಗೆ ಅವಧಿ ಮುಗಿದಿರುವ ನಗರಗಳಲ್ಲಿ ನೇರ ನೇಮಕಾತಿಗೆ ಆದೇಶಿಸಿತ್ತು. ಅದೇ ಮಾಸಾಂತ್ಯದಲ್ಲಿ ರೋಸ್ಟರ್ ಪದ್ಧ ಅನುಸರಿಸುವಂತೆ ಮತ್ತೂಂದು ಆದೇಶ ಹೊರಡಿಸುವ ಜೊತೆಗೆ ಪ್ರತಿ 700 ಮಂದಿಗೊಬ್ಬರನ್ನು ಮಾತ್ರ ನೇಮಕಾತಿ ಮಾಡಿಕೊಳ್ಳಬೇಕೆಂಬ ನಿಯಮದಿಂದಾಗಿ ಗೊಂದಲಕ್ಕೀಡಾದ ಅಧಿಕಾರಿಗಳು ಹಳಬರನ್ನೇ ಮುಂದುವರೆಸಿದ್ದರಿಂದಾಗಿ ಹೊರಗುತ್ತಿಗೆ ಪೌರಕಾರ್ಮಿಕರು ಕಳೆದ ಐದು ತಿಂಗಳಿನಿಂದ ಸಂಬಳವೂ ಇಲ್ಲದೆ ಬೀದಿಪಾಲಾಗಿದ್ದಾರೆ.
ನಗರದ ಪ್ರಮುಖ ವ್ಯಾಪಾರ ಕೇಂದ್ರಗಳಿರುವ ಕಾರ್ಖಾನೆ ರಸ್ತೆ, ಜೆ.ಎಲ್.ಬಿ.ರಸ್ತೆ, ಮಾರುಕಟ್ಟೆ, ಸಂತೆಮಾಳ, ಬಸ್ ನಿಲ್ದಾಣದ ಮುಖ್ಯ ರಸ್ತೆ, ಹೆದ್ದಾರಿಯ ಬೈಪಾಸ್ ರಸ್ತೆಗಳಲ್ಲಿ, ಕಲ್ಕುಣಿಕೆ ಸೇರಿದಂತೆ ಎಲ್ಲ ವಾರ್ಡ್‌ಗಳಲ್ಲೂ ಕಸದ ರಾಶಿ ಬಿದ್ದಿವೆ. ಹಲವೆಡೆ ಕಸ ಹರಡಿಕೊಂಡು ಪ್ಲಾಸ್ಟಿಕ್ ಮತ್ತಿತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಜಾನುವಾರುಗಳು ನಾಯಿ-ಹಂದಿಗಳು ಕಸದಲ್ಲಿ ಬಿದ್ದು ಹೊರಳಾಡುತ್ತಿವೆಯಲ್ಲದೆ ಪ್ಲಾಸ್ಟಿಕ್ ಚೀಲಗಳನ್ನು ಹರಿದು ಚೆಲ್ಲಾಡುವುದರಿಂದಾಗಿ ರಸ್ತೆಯೆಲ್ಲಾ ಕಸಮಯವಾಗುತ್ತಿದೆ.
ಏಕಿಂತ ಸಮಸ್ಯೆ?: 60 ಸಾವಿರ ಜನಸಂಖ್ಯೆ ಹೊಂದಿರುವ ನಗರದ 32 ವಾರ್ಡ್‌ಗಳ ಶುಚಿತ್ವಕ್ಕೆ ಕೇವಲ 24 ಮಂದಿ ಕಾಯಂ ಪೌರಕಾರ್ಮಿಕರು, ಈ ಪೈಕಿ 6 ಮಂದಿ ವಾಚ್‌ಮನ್, 2 ನೀರುಗಂಟಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದಂತೆ 16 ಮಂದಿ ಮಾತ್ರ ನಗರದ ಸ್ವತ್ಛತಾ ಕಾರ್ಯಕ್ಕೆ ಲಭ್ಯವಿದ್ದು, ಹೊರಗುತ್ತಿಗೆ ಆಧಾರದ ಮೇಲೆ 11 ವಾಹನ ಚಾಲಕರು ಸೇರಿದಂತೆ 71 ಪೌರಕಾರ್ಮಿಕರು ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.
ಸರಕಾರದ ನಿರ್ದೇಶನದಂತೆ ಹೊರಗುತ್ತಿಗೆ 2017 ಜುಲೈ ಅಂತ್ಯಕ್ಕೆ ರದ್ದಾದರೂ ಅನಿವಾರ್ಯವಾಗಿ ಮುಂದುವರಿಸಲಾಗಿತ್ತು. ಆದರೆ ಕಳೆದ ಐದು ತಿಂಗಳಿನಿಂದ ಇವರಿಗೆ ಸುಮಾರು 50 ಲಕ್ಷ ರೂ. ಸಂಬಳ ಬಾಕಿ ಇದ್ದರೂ ಕೆಲಸ ಮುಂದುವರಿಸಿದ್ದರು. ಆದರೆ ಸಂಬಳಕ್ಕೇ ಕಾನೂನು ತೊಡಕಿನಿಂದ ತಕ್ಷಣಕ್ಕೆ ಸಿಗುವುದಿಲ್ಲ ಎಂಬುದನ್ನು ಅರಿತು ಸಂಸಾರ ನಿರ್ವಹಣೆ ಮಾಡಲಾಗದೆ ಪರಿತಪಿಸುತ್ತಿದ್ದ 71 ಮಂದಿ ಪೌರಕಾರ್ಮಿಕರು ಸಂಬಳಕ್ಕಾಗಿ ನಗರಸಭೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದರು.
ಆಗ ಶಾಸಕ ಮಂಜುನಾಥ್ ಸಂಬಳ ಕೊಡಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಟ್ಟು, ಕೆಲದಿನ ಕಾರ್ಯ ನಿರ್ವಹಿಸಿದರು. ಆದರೆ ಮತ್ತೆ ಸಂಬಳ ಸಿಕ್ಕಿಲ್ಲವೆಂದು ಕಾರ್ಯ ಸ್ಥಗಿತಗೊಳಿಸಿದ ಕಾರಣ ಕಸದ ರಾಶಿಯೇ ಬಿದ್ದಿದ್ದು, ಇಡೀನಗರ ವಾಸನೆಯಿಂದ ನಾರುತ್ತಿದೆ.
ಕಸ ಸಂಗ್ರಹಣೆಯೂ ಸ್ಥಗಿತ: ಹೊರಗುತ್ತಿಗೆ ಪೌರಕಾರ್ಮಿಕರೊಂದಿಗೆ ತಳ್ಳುವ ಗಾಡಿಗಳ ಮೂಲಕ ಮನೆ ಮನೆ ಕಸ ಸಂಗ್ರಹಿಸುತ್ತಿದ್ದ ಸ್ವಸಹಾಯ ಸಂಘದ ಮಹಿಳೆಯರೂ ಸಂಬಳ ಬಂದಿಲ್ಲವೆಂದು ಕಳೆದ ತಿಂಗಳಿಂದ ಮುಷ್ಕರ ಕೈಗೊಂಡಿದ್ದಾರೆ. ಇದರಿಂದ ಮುಖ್ಯರಸ್ತೆಗಳಲ್ಲದೆ ನಗರದ ಪ್ರತಿ ಗಲ್ಲಿ, ಮನೆ ಮುಂದೆಯೂ ಸಹ ಕಸದ ರಾಶಿಯೇ ಸಂಗ್ರಹವಾಗಿದೆ.
ಪೌರಕಾರ್ಮಿಕರ ಸಂಬಳ ಬಿಡುಗಡೆಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದ್ದು, ಶೀಘ್ರ ಆದೇಶ ಹೊರಬೀಳಲಿದೆ.
-ಶಿವಕುಮಾರ್, ನಗರಸಭೆ ಅಧ್ಯಕ್ಷ
ಕೆಲವೆಡೆ ಕಸಕ್ಕೆ ಬೆಂಕಿ ಹಾಕಿ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಪೌರಕಾರ್ಮಿಕರ ಸಮಸ್ಯೆಯನ್ನು ಸರಕಾರ ನಿಭಾಯಿಸುವಲ್ಲಿ ವಿಫಲವಾಗಿದೆ. ತಕ್ಷಣವೇ ನಗರಸಭೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಿ.
-ಸಂಜಯ್, ಸೇವ್ ಅವರ್ ಅರ್ಥ್ ಕ್ಲಬ್ ಅಧ್ಯಕ್ಷ
ಶಾಸಕರು ಹಾಗೂ ನಗರಸಭೆ ವತಿಯಿಂದ ಸರ್ಕಾರದೊಡನೆ ವ್ಯವಹರಿಸಲಾಗಿದೆ. ಪೌರಾಡಳಿತ ನಿರ್ದೇಶಕರಿಂದ ನಗರಸಭೆ ವತಿಯಿಂದಲೇ ಪೌರಕಾರ್ಮಿಕರಿಗೆ ಸಂಬಳ ವಿತರಿಸಲು ನಿರ್ದೇಶನ ನೀಡಿದ್ದು, ಇನ್ನೆರಡು ದಿನದೊಳಗೆ ಸಂಬಳ ದೊರೆಯಲಿದೆ.
-ಶಿವಪ್ಪ ನಾಯ್ಕ, ಪೌರಾಯುಕ್ತ
* ಸಂಪತ್‌ಕುಮಾರ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.