ಕೋಲಿ ಸಮಾಜ ಏಳ್ಗೆಗೆ ಯತ್ನ
Team Udayavani, Mar 5, 2018, 12:33 PM IST
ಹುಮನಾಬಾದ: ರಾಜ್ಯ ಸರ್ಕಾರ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪಿಸಿ ಹಿಂದುಳಿದ ಅಂಬಿಗರ, ಗಂಗಾಮತ, ಕೋಲಿ, ಕಬ್ಬಲಿಗ ಸಮುದಾಯಗಳ ಏಳ್ಗೆಗಾಗಿ ಶ್ರಮಿಸುತ್ತಿದೆ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.
ಪಟ್ಟಣದ ತೇರು ಮೈದಾನದಲ್ಲಿ ರವಿವಾರ ಗಂಗಾಮತ ಕೋಲಿ ಕಬ್ಬಲಿಗ ಟೋಕ್ರೆ ಕೋಲಿ, ಅಂಬಿಗರ ಚೌಡಯ್ಯ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ಸರ್ಕಾರ ಬೀದರ ಜಿಲ್ಲೆಗೆ ನಿಗಮದ ಅಧ್ಯಕ್ಷಸ್ಥಾನ ನೀಡಿದೆ. ಈ ಭಾಗದ ಸಮುದಾಯ ಜನರ ಏಳ್ಗೆಗಾಗಿ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಕೆಲಸ ಮಾಡುತ್ತಿದೆ.
ಕಾಂಗ್ರೆಸ್ ಸರ್ಕಾರ ಎಲ್ಲಾ ಜಾತಿ ಧರ್ಮಗಳ ಜನರನ್ನು ಸಮನಾಗಿ ಕಾಣುವ ಮೂಲಕ ಎಲ್ಲರ ಸವರ್ತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಕ್ಷೇತ್ರದಲ್ಲಿ ಕೂಡ ಸಮುದಾಯದ ಜನರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಯಾವುದೇ ಒಂದು ಸಮುದಾಯ ಆರ್ಥಿಕವಾಗಿ ಬೆಳೆಯಬೇಕಾದರೆ ಆ ಸಮುದಾಯದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು. ಎಲ್ಲರೂ ಏಕತೆಯಿಂದ ಸಂಘಟಿತರಾಗಿದ್ದರೆ ಮಾತ್ರ ಆ ವರ್ಗದ ಜನರ ಏಳ್ಗೆ ಸಾಧ್ಯ ಎಂದರು.
ಸಂಸದ ಭಗವಂತ ಖೂಬಾ ಮಾತನಾಡಿ, ಹಿಂದುಳಿದ ಅಂಬಿಗರ, ಗಂಗಾಮತ, ಕೋಲಿ, ಕಬ್ಬಲಿಗ ಸಮುದಾಯವನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸುವಂತೆ ಒತ್ತಾಯಿಸುತ್ತಿರುವ ಸಮಾಜದ ಮುಖಂಡರಿಗೆ ನಾನು ಕೂಡ ಬೆಂಬಲ ನೀಡುತ್ತೇನೆ. ರಾಜ್ಯ ಸರ್ಕಾರದಲ್ಲಿನ ಗೊಂದಲಗಳನ್ನು ಬಗೆಹರಿಸಿಕೊಂಡು ದೆಹಲಿಗೆ ಬಂದರೆ ನಾನು ಕೂಡ ಸಮಾಜದ ಜನರ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಸಾಹಿತಿ ಪಾರ್ವತಿ ಸೋನಾರೆ ಮಾತನಾಡಿ, ಸಮುದಾಯದ ಜನರು ದುಶ್ಚಟಗಳನ್ನು ಬಿಟ್ಟು, ಆಳುವವರ ಗುಲಾಮರಾಗದೆ,
ಸ್ವಾವಲಂಬಿ ಜೀವನ ಮಾಡುವಂತರಾಗಬೇಕು. ನೇರ ನುಡಿಗಳಿಂದ ಗುರುತಿಸಿಕೊಂಡ ಅಂಬಿಗರ ಚೌಡಯ್ಯ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಜೀವನಕ್ಕೆ ಅರ್ಥ ದೊರೆಯುತ್ತದೆ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ನಸಿಮೋದ್ದಿನ್ ಪಟೇಲ, ಅಂಕುಶ ಗೋಖಲೆ, ದತ್ತಾತ್ರೇಯ ಮಹಾರಾಜ, ಸಮಾಜ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದರ, ಶಿವಾಜಿ ಮೇಟಿಗಾರ, ಸೋಮನಾಥ ಪಾಟೀಲ, ಗೌರಮ್ಮ ನರನಾಳ, ಶಾರದಾಬಾಯಿ ಬಾವಗಿ, ಲಕ್ಷ್ಮಣ ಔಂಟಿ, ಸುಭಾಷ ಅಂತಪ್ಪಗಂಗಾ, ಶಾಲಿನಿ ವಾಡೇಕರ್, ಶಾಂತಪ್ಪಾ ಕೋಡಿ, ಅರವಿಂದ ಪಾಟೀಲ, ಸುನೀಲ ಖಾಶೆಂಪುರ, ರಾಜು ಪಂಚಾಳ, ಶಿವಶಂಕರ ಹಡಪದ, ದತ್ತು ಲದ್ದಿ, ನಾಗಭೂಷಣ ಸಂಗಮ, ಅಶೋಕ ಹಣಕುಣಿ, ದಯಾನಂದ ಮೇತ್ರಿ, ಶಂಕರ ಡಾಕುಳಗಿ, ನರಸಪ್ಪ ನರನಾಳ, ಅರುಣ ಬಾವಗಿ, ಸಂಜು ಗೌಳಿ, ವೀರಣ್ಣ ಹಳ್ಳಿಖೇಡ(ಕೆ), ಬಸವರಾಜ ಸದಲಾಪುರೆ, ಶಿವರಾಜ ಮಂಗಲಗಿ ಸೇರಿದಂತೆ ಸಮಾಜದ ಅನೇಕ ಮುಖಂಡರು ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.