ಘಮ ಘಮ ದೋಸೆಯ ಮೈಸೂರು ಗಾಯತ್ರಿ ಹೋಟೆಲ್‌


Team Udayavani, Mar 5, 2018, 1:25 PM IST

hotel.jpg

ಮಸಾಲೆ ದೋಸೆಗೂ ಮೈಸೂರಿಗೂ ಬಿಡಿಸಲಾರದ ನಂಟು. ಮೈಸೂರಿಗೆ ಬಂದು ಹೋಗುವ ದೇಶ-ವಿದೇಶಗಳ ಪ್ರವಾಸಿಗರಿಂದ ಹಿಡಿದು, ಸ್ಥಳೀಯರೂ ಇಷ್ಟಪಡುವ ನೆಚ್ಚಿನ ತಿಂಡಿ ಕೂಡ ಮಸಾಲೆ ದೋಸೆಯೇ ಆಗಿ ಹೋಗಿದೆ.
ಬಾಯಲ್ಲಿ ನೀರೂರಿಸುವ ಗರಿಗರಿಯಾದ ಮಸಾಲೆ ದೋಸೆ ತಿನ್ನಲು ನೀವು ಬರಲೇಬೇಕಾದ ಹೋಟೆಲ್‌ ಮೈಸೂರಿನ ಗಾಯತ್ರಿ ಟಿಫಿನ್‌ ರೂಂ. ಶಾರ್ಟ್‌ ಫಾರ್ಮ್ನಲ್ಲಿ ಜಿಟಿಆರ್‌ ಎಂದೇ ಈ ಹೋಟೆಲ್‌  ಹೆಸರಾಗಿದೆ.

ಚಾಮುಂಡಿಪುರಂ ಮುಖ್ಯರಸ್ತೆಯಲ್ಲಿರುವ ಗಾಯತ್ರಿ ಹೋಟೆಲ್‌ಗೆ ಐದೂವರೆ ದಶಕದ ಇತಿಹಾಸವಿದೆ. 60ರ ದಶಕದಲ್ಲಿ ಮೈಸೂರು ಅಷ್ಟೇನೂ ಅಭಿವೃದ್ಧಿ ಹೊಂದಿರಲಿಲ್ಲ. ಆಗ ಮೈಲಿಗಟ್ಟಲೆ ನಡೆದು ಬಂದು ಇಲ್ಲಿ ತಿಂಡಿ ತಿಂದು, ಕಾಫಿ ಕುಡಿದು ಹೋಗುತ್ತಿದ್ದರಂತೆ.  ಈಗ ಮೈಸೂರು ಸಾಕಷ್ಟು ಬೆಳೆದು, ಕಣ್ಣು ಹಾಯಿಸಿದ್ದಲ್ಲೆಲ್ಲಾ ಹೋಟೆಲ್‌ಗ‌ಳು ಕಾಣಸಿಕ್ಕರೂ ಜಿಟಿಆರ್‌ನ ರುಚಿಗೆ ಮಾರು ಹೋಗಿರುವ ಗ್ರಾಹಕರುನಾಲಗೆ ರುಚಿ ತಣಿಸಲು ಈ ಹೋಟೆಲ್‌ಅನ್ನು ಹುಡುಕಿಕೊಂಡು ಬರುವುದುಂಟು.

ಪ್ರತಿ ಸೋಮವಾರ ಈ ಹೋಟೆಲ್‌ಗೆ ರಜೆ. ವಾರದ ಇನ್ನುಳಿದ ಆರು ದಿನಗಳ ಕಾಲ ಬೆಳಗ್ಗೆ 7 ರಿಂದ 11 ಗಂಟೆವರೆಗೆ ಹಾಗೂ ಮಧ್ಯಾಹ್ನ 3.30ರಿಂದ 8ಗಂಟೆವರೆಗೆ ತೆರೆದಿರುತ್ತದೆ.

ಈ ಹೋಟೆಲ್‌ನಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಎರಡೂ ಹೊತ್ತು ಘಮ ಘಮ ಮಸಾಲೆ ದೋಸೆ ಲಭ್ಯ.  ಇದರ ಜೊತೆಗೆ ಇಡ್ಲಿ-ಚಟ್ನಿ, ಇಡ್ಲಿ-ಸಾಂಬಾರು, ಮಂಗಳೂರು ಬಜ್ಜಿ, ಫಿಲ್ಟರ್‌ ಕಾಫಿ, ಟೀ ದೊರೆಯುತ್ತದೆ. ಮಸಾಲೆ ದೋಸೆಯ ಯೊಂದಿಗೆ ಸೊಪ್ಪಿನ ದೋಸೆ ಬಾಯಲ್ಲಿ ನೀರು ತರಿಸುತ್ತದೆ. ಜಿಟಿಆರ್‌ನ  ಮತ್ತೂಂದು ವಿಶೇಷ ಅಂದರೆ ಪಾಲಕ್‌, ಮೆಂತ್ಯ ಹಾಗೂ ಸಬ್ಬಸಿಗೆ ಸೊಪ್ಪಿನ ಮಿಶ್ರಣದಿಂದ ತಯಾರಿಸುವ ಸೊಪ್ಪಿನ ದೋಸೆ ಪ್ರತಿ ದಿನ ಸಂಜೆ ಮಾತ್ರ ದೊರೆಯುತ್ತದೆ.

2012ರಲ್ಲಿ ಇದೇ ಕಟ್ಟಡದ ಮೊದಲ ಮಹಡಿಯಲ್ಲಿ ಜಿಟಿಆರ್‌ ರೆಸ್ಟೋರೆಂಟ್‌ ಸಹ ಆರಂಭವಾಯಿತು. ಇಲ್ಲಿ ಮಧ್ಯಾಹ್ನ 12ರಿಂದ ರಾತ್ರಿ 10ಗಂಟೆವರೆಗೆ ದಕ್ಷಿಣ ಭಾರತ, ಉತ್ತರ ಭಾರತ ಶೈಲಿಯ ಊಟ, ಚೈನೀಸ್‌ ಶೈಲಿಯ ತಿನಿಸು, ಐಸ್‌ಕ್ರೀಂ ಮತ್ತು ತಂಪು ಪಾನೀಯಗಳು ದೊರೆಯುತ್ತವೆ.

1960ರಲ್ಲಿ ಉಡುಪಿಯಿಂದ ಮೈಸೂರಿಗೆ ವಲಸೆ ಬಂದ ಸುಬ್ರಾಯ ಭಟ್‌ ಅವರು ಚಾಮುಂಡಿಪುರಂನಲ್ಲಿ ಸಣ್ಣದಾಗಿ ಬ್ರಾಹ್ಮಣರ ಫ‌ಲಹಾರ ಮಂದಿರ ಹೆಸರಿನಲ್ಲಿ ಈ  ಹೋಟೆಲ್‌ ಆರಂಭಿಸಿದರು. ನೆಲದ ಮೇಲೆ ಮಣೆ ಹಾಕಿ ಗ್ರಾಹಕರನ್ನು ಕೂರಿಸಿ ಬಾಳೆಎಲೆಯಲ್ಲಿ ತಿನಿಸುಗಳನ್ನು ಬಡಿಸುತ್ತಿದ್ದರು. ಗುಣಮಟ್ಟದ ಸೇವೆಗಳಿಂದಾಗಿ ಕೆಲವೇ ವರ್ಷಗಳಲ್ಲಿ ಈ ಹೋಟೆಲ್‌ ಜನಪ್ರಿಯವಾಯಿತು. ಆ ನಂತರ ಗ್ರಾಹಕರು ಹೆಚ್ಚು ಬರತೊಡಗಿದ್ದರಿಂದ ಭಟ್ಟರು, ಈ ಕಟ್ಟಡದಲ್ಲೇ 1964ರಲ್ಲಿ ಗಾಯತ್ರಿ ಟಿಫಿನ್‌ ರೂಂ ಆರಂಭಿಸಿದರು. 54 ವರ್ಷಗಳಿಂದಲೂ ಹೋಟೆಲ್‌ ಜಿಟಿಆರ್‌, ಅದೇ ಶುಚಿ-ರುಚಿಯನ್ನು ಕಾಯ್ದುಕೊಂಡು ಗ್ರಾಹಕರನ್ನು ಸೆಳೆಯುತ್ತಿದೆ.

ಸುಬ್ರಾಯಭಟ್ಟರ ನಿಧನಾನಂತರ ಅವರ ನಾಲ್ಕು ಜನ ಗಂಡು ಮಕ್ಕಳೂ ಹೋಟೆಲ್‌ ವ್ಯವಹಾರ ನೋಡಿಕೊಳ್ಳುತ್ತಿದ್ದರು. ನಾಲ್ವರು ಗಂಡು ಮಕ್ಕಳ ಪೈಕಿ ರಾಮಚಂದ್ರರಾವ್‌, ಶ್ರೀನಿವಾಸನ್‌ ಹಾಗೂ ರಾಘವೇಂದ್ರ ಅವರು ತೀರಿಕೊಂಡಿದ್ದು, ಸುಬ್ರಾಯಭಟ್ಟರ ಮೂರನೇ ಮಗ ಗುರುರಾಜ್‌ ಮತ್ತು ಶ್ರೀನಿವಾಸನ್‌ ಅವರ ಮಗ ವಿಜಯೇಂದ್ರ ಅವರು ಪ್ರಸ್ತುತ ಜಿಟಿಆರ್‌ ಹೋಟೆಲ್‌ಅನ್ನು ಮುನ್ನಡೆಸುತ್ತಿದ್ದಾರೆ.
ಮೈಸೂರಿಗೆ ಬಂದರೆ ಜಿಟಿಆರ್‌ ಮಸಾಲೆ ದೋಸೆ ಸವಿಯೋದನ್ನು ಮರೆಯಬೇಡಿ.

– ಗಿರೀಶ್‌ ಹುಣಸೂರು

ಟಾಪ್ ನ್ಯೂಸ್

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

vidhana-soudha

2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

Vijayendra (2)

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.