ಚುನಾವಣೆ ಹೊತ್ತಲ್ಲಿ ಸಾಧಕರ ನೆನದರಾ ಶಾಸಕ ತಿಪ್ಪರಾಜ್?
Team Udayavani, Mar 5, 2018, 5:27 PM IST
ರಾಯಚೂರು: ಸಾಹಿತ್ಯ ವಿಮರ್ಶೆ, ಚಿಂತನ ಮಂಥನ, ವಿಚಾರಗೋಷ್ಠಿ, ಜ್ವಲಂತ ಸಮಸ್ಯೆಗಳನ್ನು ಬಿಂಬಿಸಲು ಬಳಕೆಯಾಗಬೇಕಿದ್ದ ಸಾಹಿತ್ಯ ಸಮ್ಮೇಳನ ಗ್ರಾಮೀಣ ಶಾಸಕರ ಸ್ವಾರ್ಥ ಸಾಧನೆಗೆ ಬಳಕೆಯಾಯಿತೇ..? ಇಂಥದ್ದೊಂದು ಸಂದೇಹ ಮೂಡಲು ಕಾರಣವಾಗಿದ್ದು ತಾಲೂಕಿನ ಮಟಮಾರಿಯಲ್ಲಿ ನಡೆದ ನಾಲ್ಕನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮ.
ಸ್ವಾಗತ ಸಮಿತಿ ಅಧ್ಯಕ್ಷರು ಆಗಿರುವ ಶಾಸಕ ತಿಪ್ಪರಾಜ್ ಹವಾಲ್ದಾರ್, ಈ ಬಾರಿ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ಹೇಳಿದ್ದರು. ಆದರೆ, ನೂರಾರು ಜನರಿಗೆ ಸನ್ಮಾನಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಶಿಕ್ಷಕರು, ರೈತರು, ವೈದ್ಯರು, ಕಲಾವಿದರು, ಪತ್ರಕರ್ತರು, ಅಧಿಕಾರಿಗಳು ಹೀಗೆ ಎಲ್ಲ ಕ್ಷೇತ್ರಗಳ ನೂರಾರು ಜನರಿಗೆ
ಸನ್ಮಾನಿಸುವುದಾಗಿ ಪ್ರಕಟಿಸಲಾಗಿತ್ತು. ಅದರಂತೆ ಖುದ್ದು ಶಾಸಕರೇ ಮುಂದೆ ನಿಂತು ಸನ್ಮಾನ ಮಾಡಿದ್ದು, ಸ್ಮರಣಿಕೆಯಲ್ಲಿ ಶಾಸಕ ತಿಪ್ಪರಾಜ್ ಅವರ ಭಾವಚಿತ್ರ ದೊಡ್ಡದಾಗಿ ಕಾಣುತ್ತಿದೆ.
ಸಾಮಾನ್ಯವಾಗಿ ವಿವಿಧ ಕ್ಷೇತ್ರಗಳ ಆಯ್ದ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ರೂಢಿ. ಅದಕ್ಕೂ ಒಂದು ಮಿತಿ ಇರುತ್ತದೆ. ಹೀಗೆ ನೂರಾರು ಜನರಿಗೆ ಸ್ಮರಣಿಕೆ, ಶಾಲು, ಹಾರ ಹಾಕಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಅಲ್ಲದೇ, ಸಾಹಿತ್ಯ ಸಮ್ಮೇಳನಗಳು ಕೂಡ ತನ್ನದೇ ಘನತೆ ಹೊಂದಿವೆ. ಆದರೆ, ಸಾರಾಸಗಟಾಗಿ ಹೀಗೆ ಸನ್ಮಾನ ಮಾಡಿರುವುದು ಚುನಾವಣೆ ಉದ್ದೇಶದಿಂದಲೇ ಎಂಬ ಟೀಕೆಗಳು ಕೇಳಿಬಂದಿವೆ. ಒಂದು ವೇಳೆ ಹಾಗೆ ಸನ್ಮಾನ ಮಾಡುವ ಉದ್ದೇಶವಿದ್ದಲ್ಲಿ ಶಾಸಕರು ಪ್ರತ್ಯೇಕ ಕಾರ್ಯಕ್ರಮ ಆಯೋಜಿಸಬೇಕಿತ್ತು. ತಾವು ಸ್ವಾಗತ ಸಮಿತಿ ಅಧ್ಯಕ್ಷರು ಎಂಬ ಕಾರಣಕ್ಕೆ ಶಾಸಕರು ಪರಿಷತ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ರೀತಿ ನಡೆದಕೊಳ್ಳುವುದು ಸರಿಯಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ.
ಸಮ್ಮೇಳನಗಳು ತಮ್ಮದೇ ಚೌಕಟ್ಟಿನಡಿ ನಡೆದರೆ ಸೂಕ್ತ. ಹೀಗೆ ಹಳಿ ತಪ್ಪಲು ಕಸಾಪ ಸದಸ್ಯರು ಬಿಡಬಾರದು. ಜನಪ್ರತಿನಿಧಿಗಳ ನೆರವು ಪಡೆದು ಕಾರ್ಯಕ್ರಮ ಆಯೋಜನೆ ಮಾಡುವುದು ಸಾಮಾನ್ಯ. ಹಾಗಂತ ಸಂಪೂರ್ಣ ಹೊಣೆಗಾರಿಕೆ ಬಿಡುವುದು ಸರಿಯಲ್ಲ.
ಮಹಾಂತೇಶ ಮಸ್ಕಿ, ಕಸಾಪ ನಿಕಟಪೂರ್ವ ಅಧ್ಯಕ್ಷ
ಶಾಸಕ ತಿಪ್ಪರಾಜ್ ಚುನಾವಣೆ ಗಿಮಿಕ್ ಮಾಡುತ್ತಿದ್ದಾರೆ. ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ನೂರಾರು ಜನರಿಗೆ ಸನ್ಮಾನ ಮಾಡಿದ್ದಾರೆ. ನಮ್ಮ ತಾಲೂಕಿನಲ್ಲಿ ಅಷ್ಟೊಂದು ಸಾಧಕರಿದ್ದಾರಾ. ಚುನಾವಣೆ ಬರುತ್ತಿದ್ದಂತೆ ಶಾಸಕರು ಹೊಸ ಹೊಸ ತಂತ್ರ ಹೂಡುತ್ತಿದ್ದಾರೆ.
ನೀಲಕಂಠ ಬೇವಿನ್, ನಮ್ಮ ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.