ಆಸ್ಟ್ರೇಲಿಯ 118 ರನ್ ವಿಜಯ
Team Udayavani, Mar 6, 2018, 6:00 AM IST
ಡರ್ಬನ್: ಡರ್ಬನ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯದ ಗೆಲುವಿನ ಔಪಚಾರಿಕತೆ ಅಂತಿಮ ದಿನದ 22 ಎಸೆತಗಳಲ್ಲಿ ಪೂರ್ತಿಗೊಂಡಿದೆ. 4ನೇ ದಿನ 9ಕ್ಕೆ 293 ರನ್ ಮಾಡಿದ್ದ ಆತಿಥೇಯ ದಕ್ಷಿಣ ಆಫ್ರಿಕಾ 298ಕ್ಕೆ ಸರ್ವಪತನ ಕಂಡಿತು. ಇದರೊಂದಿಗೆ ಕಿಂಗ್ಸ್‌ಮೀಡ್‌ನಲ್ಲಿ ಪ್ರವಾಸಿ ಆಸೀಸ್ 118 ರನ್ನುಗಳ ಅಮೋಘ ಗೆಲುವು ಸಾಧಿಸಿ 4 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿತು.
ಗೆಲುವಿಗೆ 417 ರನ್ನುಗಳ ಕಠಿನ ಸವಾಲು ಪಡೆದಿದ್ದ ದಕ್ಷಿಣ ಆಫ್ರಿಕಾ, ಐಡನ್ ಮಾರ್ಕ್‌ರಮ್ ಅವರ ಶತಕದ ನೆರವಿನಿಂದ 4ನೇ ದಿನದಾಟದಲ್ಲಿ ಹೋರಾಟವೊಂದನ್ನು ಜಾರಿಯಲ್ಲಿರಿಸಿತ್ತು. ಆದರೆ ವೇಗಿ ಮಿಚೆಲ್ ಸ್ಟಾರ್ಕ್ ದಾಳಿಗೆ ತತ್ತರಿಸಿ ಕೊನೆಯ 5 ವಿಕೆಟ್‌ಗಳನ್ನು ಬರೀ 15 ರನ್ ಅಂತರದಲ್ಲಿ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಹ್ಯಾಟ್ರಿಕ್ ವಂಚಿತ ಸ್ಟಾರ್ಕ್ 75 ರನ್ನಿತ್ತು 4 ವಿಕೆಟ್ ಕಿತ್ತರು. ಮೊದಲ ಸರದಿಯಲ್ಲಿ ಸ್ಟಾರ್ಕ್ ಸಾಧನೆ 34ಕ್ಕೆ 5 ವಿಕೆಟ್. ಈ ಸಾಹಸಕ್ಕಾಗಿ ಅವರು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
4ನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ಒಂದು ವಿಕೆಟ್ ಉಳಿಸಿಕೊಂಡು ಸೋಲಿನ ಅಂಚಿಗೆ ಬಂದು ನಿಂತಿತ್ತು. ಅಂತಿಮ ದಿನವಾದ ಸೋಮವಾರ 83 ರನ್ ಮಾಡಿದ ಡಿ ಕಾಕ್ ಅವರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದ ಹ್ಯಾಝಲ್‌ವುಡ್ ಆಸ್ಟ್ರೇಲಿಯದ ಗೆಲುವನ್ನು ಸಾರಿದರು.
ಮಾರ್ಕ್‌ರಮ್ ಹೋರಾಟ
ಒಂದೆಡೆ ವಿಕೆಟ್‌ಗಳು ಉರುಳುತ್ತ ಹೋದರೂ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಐಡನ್ ಮಾರ್ಕ್‌ರಮ್ 143 ರನ್ ಬಾರಿಸಿದ್ದು ಹರಿಣಗಳ ಸರದಿಯ ಅಮೋಘ ಸಾಧನೆಯಾಗಿ ದಾಖಲಾಯಿತು. ಇದು ಮಾರ್ಕ್‌ರಮ್ ಅವರ 3ನೇ ಶತಕ ಹಾಗೂ ಜೀವನಶ್ರೇಷ್ಠ ಗಳಿಕೆ. 340 ನಿಮಿಷಗಳ ಕಾಲ ಕ್ರೀಸ್ ಆಕ್ರಮಿಸಿಕೊಂಡ ಮಾರ್ಕ್‌ರಮ್ 218 ಎಸೆತಗಳನ್ನು ನಿಭಾಯಿಸಿದರು. ಇದರಲ್ಲಿ 19 ಬೌಂಡರಿ ಒಳಗೊಂಡಿತ್ತು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-351 ಮತ್ತು 227. ದಕ್ಷಿಣ ಆಫ್ರಿಕಾ-162 ಮತ್ತು 298 (ಮಾರ್ಕ್‌ರಮ್ 143, ಡಿ ಕಾಕ್ 83, ಡಿ ಬ್ರುಯಿನ್ 36, ಸ್ಟಾರ್ಕ್ 75ಕ್ಕೆ 4, ಹ್ಯಾಝಲ್‌ವುಡ್ 61ಕ್ಕೆ 3). ಪಂದ್ಯಶ್ರೇಷ್ಠ: ಮಿಚೆಲ್ ಸ್ಟಾರ್ಕ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!
Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ
Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.