ಇಂದಿನಿಂದ ಸಂಗ್ಮಾ ಸರಕಾರ
Team Udayavani, Mar 6, 2018, 7:15 AM IST
ಶಿಲ್ಲಾಂಗ್/ಹೊಸದಿಲ್ಲಿ: ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಮೇಘಾಲಯ ರಾಜಕೀಯ ವಲಯದಲ್ಲಿ ನಡೆದ ಎಲ್ಲ ಹೈಡ್ರಾಮಾಗಳಿಗೂ ಸೋಮವಾರ ತೆರೆಬಿದ್ದಿದ್ದು, ಲೋಕಸಭೆ ಮಾಜಿ ಸ್ಪೀಕರ್ ಪಿ.ಎ.ಸಂಗ್ಮಾ ಅವರ ಪುತ್ರ, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಅಧ್ಯಕ್ಷ ಕೊನ್ರಾಡ್ ಸಂಗ್ಮಾ ಅವರು ಸರಕಾರ ರಚನೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ರಾಜ್ಯಪಾಲರು ಸರಕಾರ ರಚನೆಗೆ ತಮಗೆ ಆಹ್ವಾನ ನೀಡಿದ್ದು, ಮಂಗಳವಾರವೇ ಪ್ರಮಾಣ ಸ್ವೀಕಾರ ನಡೆಯಲಿದೆ ಎಂದು ಸಂಗ್ಮಾ ಸೋಮವಾರ ತಿಳಿಸಿದ್ದಾರೆ.
ಭಾನುವಾರವೇ ಸಂಗ್ಮಾ ಅವರು ರಾಜ್ಯಪಾಲ ಗಂಗಾಪ್ರಸಾದ್‌ರನ್ನು ಭೇಟಿ ಯಾಗಿದ್ದು, 34 ಶಾಸಕರ (ಎನ್‌ಪಿಪಿ-19, ಯುಡಿಪಿ-6, ಪಿಡಿಎಫ್-4, ಎಚ್‌ಎಸ್‌ಪಿಡಿಪಿ ಮತ್ತು ಬಿಜೆಪಿಯ ತಲಾ 2 ಮತ್ತು ಒಬ್ಬ ಪಕ್ಷೇತರ ಶಾಸಕ) ಬೆಂಬಲವಿರುವ ಪತ್ರವನ್ನು ಹಸ್ತಾಂತರಿ ಸಿದ್ದರು. ಸೋಮವಾರ ಈ ಕುರಿತು ಸ್ಪಷ್ಟ ಮಾಹಿತಿ ನೀಡಿದ ಅವರು, ಮಂಗಳವಾರವೇ ಸಚಿವರು ಪ್ರಮಾಣ ಸ್ವೀಕರಿಸಲಿದ್ದು, ನೂತನ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದಿದ್ದಾರೆ.
ಬಾಹ್ಯ ಬೆಂಬಲ: ಇನ್ನೊಂದೆಡೆ, ತ್ರಿಪುರದಲ್ಲಿ ಬಿಜೆಪಿ ಜತೆ ಕೈಜೋಡಿಸಿರುವ ಇಂಡಿಜೀನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ (ಐಪಿಎಫ್ಟಿ) ಸೋಮವಾರ, ತಮಗೆ ಸರಕಾರದಲ್ಲಿ ಗೌರವಾನ್ವಿತ ಸ್ಥಾನಕ್ಕಾಗಿ ಒತ್ತಾಯಿಸಿದೆ. ಸಂಪುಟದಲ್ಲಿ ಗೌರವಾನ್ವಿತ ಸ್ಥಾನ ಕೊಡದೇ ಇದ್ದರೆ ನಾವು ಸರಕಾರಕ್ಕೆ ಬಾಹ್ಯ ಬೆಂಬಲವನ್ನಷ್ಟೇ ನೀಡುತ್ತೇವೆ ಎಂದು ಪಕ್ಷದ ಅಧ್ಯಕ್ಷ ಎನ್.ಸಿ. ಡೆಬ್ಬರ್ಮಾ ತಿಳಿಸಿದ್ದಾರೆ. ಸಂಪುಟದಲ್ಲಿ ನಮ್ಮ ಶಾಸಕರಿಗೆ ಪ್ರಮುಖ ಹುದ್ದೆ ಹಂಚಿಕೆ ಮಾಡುವುದಿಲ್ಲ ಎಂದು ಹೇಳಲಾಗುತ್ತಿದೆ. ಸೂಕ್ತ ಹುದ್ದೆ ಕೊಡದಿದ್ದರೆ, ಇಪಿಎಫ್ಟಿ ತನ್ನ ಶಾಸಕರಿಗೆ ಅಸೆಂಬ್ಲಿಯಲ್ಲಿ ಪ್ರತ್ಯೇಕ ಬ್ಲಾಕ್ ನೀಡುವಂತೆ ಒತ್ತಾಯಿಸುತ್ತೇವೆ ಎಂದಿದ್ದಾರೆ.
ಇದೇ ವೇಳೆ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ವೈ.ಪಾಟೂನ್‌ರನ್ನು ಆಯ್ಕೆ ಮಾಡಲಾಗಿದೆ. ಮಂಗಳವಾರ ಎನ್‌ಡಿಪಿಪಿ ಜತೆ ರಾಜ್ಯಪಾಲರನ್ನು ಭೇಟಿಯಾಗುವುದಾಗಿ ಕೇಂದ್ರ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ. 2008ರಿಂದ ಅಧಿಕಾರದಲ್ಲಿರುವ ನಾಗಾ ಪೀಪಲ್ಸ್ ಫ್ರಂಟ್(ಎನ್‌ಪಿಎಫ್) ಜತೆ ಬಿಜೆಪಿ ಮೈತ್ರಿ ಕಡಿದುಕೊಂಡಿದೆ.
ಕೊನೆಗೂ ಮೌನ ಮುರಿದ ರಾಹುಲ್
ಈಶಾನ್ಯ ರಾಜ್ಯಗಳ ಫಲಿತಾಂಶ ಹೊರಬಿದ್ದು 3 ದಿನಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಮೌನ ಮುರಿದಿದ್ದಾರೆ. ಇಟಲಿ ಪ್ರವಾಸದಲ್ಲಿರುವ ಅವರು ಸೋಮವಾರ ಟ್ವೀಟ್ ಮಾಡಿದ್ದು, “ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಜನತೆ ನೀಡಿದ ತೀರ್ಪನ್ನು ನಾವು ಗೌರವಿಸುತ್ತೇವೆ. ಈಶಾನ್ಯದಾದ್ಯಂತ ಪಕ್ಷವನ್ನು ಬಲಿಷ್ಠಗೊಳಿಸಲು ಹಾಗೂ ಜನರ ನಂಬಿಕೆಯನ್ನು ಮರಳಿ ಗಳಿಸಲು ನಾವು ಬದ್ಧರಾಗಿದ್ದೇವೆ,’ ಎಂದು ಹೇಳಿದ್ದಾರೆ. ಕೇವಲ 2 ಸ್ಥಾನಗಳನ್ನು ಗೆದ್ದಿದ್ದರೂ, ಬಿಜೆಪಿಯು ತನ್ನ ಹಿಂಬಾಗಿಲ ರಾಜಕೀಯ ನಡೆಯಿಂದಾಗಿ ಮೇಘಾಲಯದಲ್ಲಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಜನಾದೇಶಕ್ಕೆ ವಿರುದ್ಧವಾಗಿ ಈ ಸರಕಾರ ರಚಿಸುವುದು ಆ ಪಕ್ಷಕ್ಕೆ ಅಂಟಿರುವ ಚಟ ಎಂದೂ ಕಿಡಿಕಾರಿದ್ದಾರೆ. ಜತೆಗೆ, ಪಕ್ಷಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನಿಗೂ ನನ್ನ ಪ್ರಾಮಾಣಿಕ ಧನ್ಯವಾದಗಳು ಎಂದಿದ್ದಾರೆ ರಾಹುಲ್.
ಹೇಗಾದರೂ ಮಾಡಿ ಅಧಿಕಾರ ಹಿಡಿಯ ಬೇಕೆಂಬ ದುರಾಸೆ ಯಿಂದಾಗಿ ಬಿಜೆಪಿ ಈಶಾನ್ಯ ಪ್ರದೇಶವನ್ನು ಅಸ್ಥಿರ ಗೊಳಿಸುವಂಥ ಅಪಾಯಕಾರಿ ಆಟ ಆಡುತ್ತಿದೆ.
ರಣದೀಪ್ ಸುಜೇìವಾಲಾ, ಕಾಂಗ್ರೆಸ್ ವಕ್ತಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.