ಕೈವಶಕ್ಕೆ ನೈಸ್‌ ಖೇಣಿ; ನಾಯಕರು ರಫ್


Team Udayavani, Mar 6, 2018, 6:30 AM IST

Ashok-Kheni-6-3.jpg

ಬೆಂಗಳೂರು: ಕರ್ನಾಟಕ‌ ಮಕ್ಕಳ ಪಕ್ಷದ ಮುಖ್ಯಸ್ಥ ಹಾಗೂ ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ್‌ ಖೇಣಿ ಅವರು ವಿರೋಧದ ನಡುವೆಯೂ ತರಾತುರಿಯಲ್ಲಿ  ಕಾಂಗ್ರೆಸ್‌ ಸೇರ್ಪಡೆಗೊಂಡರು. ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಸಮ್ಮುಖ ಖೇಣಿ ಕೈ ಪಾಳಯ ಸೇರಿಕೊಂಡಿದ್ದು, ಅವರ ಸೇರ್ಪಡೆಗೆ ಪಕ್ಷ ದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಅಶೋಕ್‌ ಖೇಣಿ ಪಕ್ಷಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಅವರು ಪಕ್ಷ ಸೇರಿದ ಬೆನ್ನಲ್ಲೇ ಕಾಂಗ್ರೆಸ್‌ನೊಳಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಅತ್ತ ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಪ್ರಬಲ ಆಕಾಂಕ್ಷಿಯಾಗಿರುವ ಚಂದ್ರಸಿಂಗ್‌ ಬೆಂಬಲಿಗರು ಖೇಣಿ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಬೆಂಗಳೂರಿನ ಕಾಂಗ್ರೆಸ್‌ ನಾಯಕರೂ ಸಿಡಿಮಿಡಿಗೊಂಡಿದ್ದಾರೆ.

ಇದರ ಮಧ್ಯೆ, ಅಶೋಕ್‌ ಖೇಣಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌, ಖೇಣಿ ಯಾವುದೇ ಷರತ್ತು ಇಲ್ಲದೆ ಪಕ್ಷ ಸೇರಿದ್ದಾರೆ. ರಾಹುಲ್‌ ಗಾಂಧಿ ನಾಯಕತ್ವ ಒಪ್ಪಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಅವರ ಕರ್ನಾಟಕ ಮಕ್ಕಳ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದ್ದಾರೆ ಎಂದರು. ಖೇಣಿಯವರು ರಾಜಕೀಯವಾಗಿ ಕಾಂಗ್ರೆಸ್‌ ಪಕ್ಷ ಸೇರಿಕೊಂಡಿದ್ದಾರೆ. ನೈಸ್‌ ಹಗರಣಕ್ಕೆ ಸಂಬಂಧಿಸಿದಂತೆ ಖೇಣಿ ಪರವಾಗಿ ಕಾಂಗ್ರೆಸ್‌ ಕೆಲಸ ಮಾಡುವುದಿಲ್ಲ. ಅವರು ಪಕ್ಷಕ್ಕೆ ಸೇರ್ಪಡೆಯಾಗಿರುವುದಿಂದ ಬೀದರ್‌ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. 

ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಮಾತನಾಡಿ, ನೈಸ್‌ ಅಕ್ರಮಕ್ಕೂ ಖೇಣಿ ಕಾಂಗ್ರೆಸ್‌ ಸೇರುವುದಕ್ಕೂ ಸಂಬಂಧವಿಲ್ಲ. ವ್ಯವಹಾರ ಬೇರೆ ರಾಜಕೀಯ ಬೇರೆ ಎಂದು ಹೇಳಿದರು. ರಾಜಕೀಯ ದೃಷ್ಟಿಯಿಂದ ಮಾತ್ರ ಅವರು ಪಕ್ಷ ಸೇರುವುದನ್ನು ಸ್ವಾಗತಿಸುತ್ತೇವೆ. ಅವರ ವೈಯಕ್ತಿಕ ವಿಚಾರಗಳು ಪಕ್ಷಕ್ಕೆ ಸಂಬಂಧ ಇಲ್ಲ. ಅಶೋಕ್‌ ಖೇಣಿ ಶಾಸಕರಾಗುವ ಮೊದಲೇ ನೈಸ್‌ ಪ್ರಾರಂಭಿಸಿರುವುದು. ಈ ಯೋಜನೆಗೆ ದೇವೇಗೌಡರು ಹಾಗೂ ಜೆ.ಎಚ್‌. ಪಟೇಲ್‌ ಸಹಿ ಹಾಕಿದ್ದಾರೆ. ನೈಸ್‌ನಲ್ಲಿ ಅಕ್ರಮ ನಡೆದಿದ್ದರೆ, ಅದನ್ನು ಕಾಂಗ್ರೆಸ್‌ ಬೆಂಬಲಿಸಲ್ಲ ಎಂದು ಹೇಳಿದರು. 

ನೈಸ್‌ ಅಕ್ರಮ ಬಗ್ಗೆ ಕಾಂಗ್ರೆಸ್‌ ಧ್ವನಿಯೆತ್ತಿತ್ತು: ಬೆಂಗಳೂರು ಮೈಸೂರು ಇನ್ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ನಿರ್ಮಾಣ ಜವಾಬ್ದಾರಿ ಹೊತ್ತಿದ್ದ ನೈಸ್‌ ಕಂಪನಿ ಅಗತ್ಯಕ್ಕಿಂತಲೂ ಹೆಚ್ಚಿನ ರೈತರ ಜಮೀನು ಪಡೆದು ಒಪ್ಪಂದದ ಪ್ರಕಾರ ಯೋಜನೆ ಜಾರಿಗೊಳಿಸಿಲ್ಲ ಎಂದು ವಿಧಾನಸಭೆಯಲ್ಲಿ ಪಕ್ಷಾತೀತ ಆರೋಪ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ನೈಸ್‌ ಸಂಸ್ಥೆಯ ಅಕ್ರಮಗಳ ಕುರಿತು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿಯು ನೈಸ್‌ ಕಂಪನಿ ಮೂಲ ಒಪ್ಪಂದದ ನಿಯಮಗಳನ್ನು ಉಲ್ಲಂ ಸಿದೆ. ಕಾಂಕ್ರಿಟ್‌ ರಸ್ತೆ ಮಾಡದೇ, ಯೋಜನೆ ಪೂರ್ಣಗೊಳ್ಳುವ ಮೊದಲೇ ಟೋಲ್‌ ಸಂಗ್ರಹ, ರಸ್ತೆಗೆ ರೈತರ ಜಮೀನು ಪಡೆದು ರಿಯಲ್‌ ಎಸ್ಟೇಟ್‌ ಮಾಡುತ್ತಿದೆ ಎಂದು ವರದಿ ನೀಡಿತ್ತು. ವರದಿಯನ್ನು ಸರಕಾರ ಒಪ್ಪಿ ಸದನದಲ್ಲಿಯೂ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಅಧಿಕಾರ ನೀಡಲಾಗಿತ್ತು. ಆದರೆ ಸರಕಾರ ಆ ವರದಿ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.  

‘ಯೂ ಸಿಡೌನ್‌’ ಎಂದು ಗದರಿಸಿ ಕುಳ್ಳರಿಸಿದ್ದ ಕಾಗೋಡು: ನೈಸ್‌ ಸಂಸ್ಥೆ ಹಗರಣದ ಬಗ್ಗೆ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಬಹುದೊಡ್ಡ ಚರ್ಚೆ ನಡೆದು ಸದನ ಸಮಿತಿ ರಚಿಸುವ ತೀರ್ಮಾನವಾದಾಗ, ಅಶೋಕ್‌ ಖೇಣಿ ಸಮಜಾಯಿಷಿ ನೀಡಲು ಎದ್ದು ನಿಂತರು. ಆಗ ಸ್ಪೀಕರ್‌ ಸ್ಥಾನದಲ್ಲಿದ್ದ ಕಾಗೋಡು ತಿಮ್ಮಪ್ಪ, ನೋ….ಯೂ ಸಿಡೌನ್‌…ನೀವು  ಈಗ ಆರೋಪಿ, ನಿಮ್ಮ ಬಗ್ಗೆ ಚರ್ಚೆ ಆಗುತ್ತಿದೆ. ನೀವು ಮಾತಾಡುವಂತಿಲ್ಲ ಎಂದು ಗದರಿಸಿ ಕುಳ್ಳರಿಸಿದ್ದರು. ಜೆಡಿಎಸ್‌ನ ಕುಮಾರಸ್ವಾಮಿ, ಕಾಂಗ್ರೆಸ್‌ನ ಎಸ್‌.ಟಿ.ಸೋಮ ಶೇಖರ್‌, ಕೆ.ಎನ್‌.ರಾಜಣ್ಣ ನೈಸ್‌ ಅಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಸದನ ಒಕ್ಕೊರಲಿನಿಂದ ಸದನ ಸಮಿತಿ ರಚನೆಗೆ ತೀರ್ಮಾನಿಸಿತ್ತು. 

ಕಾಂಗ್ರೆಸ್‌ಗೆ ಏನು ಲಾಭ?
– ಬೀದರ್‌ ದಕ್ಷಿಣ ಕ್ಷೇತ್ರ ಸಹಿತ ಕೆಲವೆಡೆ ಕಾಂಗ್ರೆಸ್‌ಗೆ ಅನುಕೂಲ
– ಆ ಭಾಗದಲ್ಲಿ ಲಿಂಗಾಯತ ಸಮುದಾಯದ ಬೆಂಬಲಕ್ಕೆ ನೆರವು
– ಸಂಪನ್ಮೂಲ ಕ್ರೋಡೀಕರಣಕ್ಕೆ ಸಹಾಯ

ನಷ್ಟವೇನು?
– ವಿವಾದಿತ ನೈಸ್‌ ಸಂಸ್ಥೆ ಮುಖ್ಯಸ್ಥ ರಾಗಿರುವುದರಿಂದ ಕಾಂಗ್ರೆಸ್‌ ‘ಕಳಂಕ’ ಹೊರಬೇಕಾಗಬಹುದು.
– ರೈತರು ನೈಸ್‌ ವಿರುದ್ಧ ಆಕ್ರೋಶ ಹೊಂದಿರುವುದರಿಂದ ಯಶವಂತಪುರ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ, ಆನೇಕಲ್‌, ರಾಮನಗರ, ಮಂಡ್ಯ, ಮೈಸೂರು ಭಾಗದಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು.
– ವಿಪಕ್ಷಗಳ ವಾಗ್ಧಾಳಿಯನ್ನು ಎದುರಿಸಬೇಕಾಗಬಹುದು.
– ಜೆಡಿಎಸ್‌ನ ವೈರತ್ವ ಕಟ್ಟಿಕೊಳ್ಳಬೇಕಾಗಬಹುದು.

ಖೇಣಿಗೇನು ಲಾಭ?
– ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಗೆಲ್ಲಲು ಸಹಕಾರಿ
– ರಾಷ್ಟ್ರೀಯ ಪಕ್ಷವೊಂದರ ಆಶ್ರಯ
– ನೈಸ್‌ ಅಕ್ರಮ ಸದನ ಸಮಿತಿ ವರದಿ ‘ಗಂಡಾಂತರ’ದಿಂದ ಬಚಾವ್‌

ಮುಂದೇನಾಗಬಹುದು?
–  ಕಾಂಗ್ರೆಸ್‌ ಸರಕಾರವೇ ಬಂದರೆ ನಿಟ್ಟುಸಿರು
–  ಬಿಜೆಪಿ ಸರಕಾರ ಬಂದರೆ ಮತ್ತೆ ವಿವಾದ ಕೆದಕಬಹುದು
–  ಜೆಡಿಎಸ್‌ ಸರಕಾರ ಬಂದರೆ ಆತಂಕ ತಪ್ಪಿದ್ದಲ್ಲ, ನೈಸ್‌ ಇಡೀ ಯೋಜನೆ ರದ್ದಾಗಬಹುದು

ನೈಸ್‌ ಅಕ್ರಮದ ವಿರುದ್ಧ ನಾವು ಹೋರಾಟ ಮಾಡಿದ್ದೇವೆ. ಖೇಣಿ ವಿರುದ್ಧ ಕ್ರಮ ಆಗಬೇಕೆಂದು ಸದನ ತೀರ್ಮಾನ ಮಾಡಿದೆ. ಖೇಣಿ ಸೇರ್ಪಡೆಗೆ ನನ್ನ ವೈಯಕ್ತಿಕ ವಿರೋಧ ಇದೆ. ನಮ್ಮ ವಿರೋಧವನ್ನು ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರಿಗೆ ತಿಳಿಸುತ್ತೇನೆ. 
– ಎಸ್‌. ಟಿ. ಸೋಮಶೇಖರ್‌, ಶಾಸಕ

ಹಲವು ಶಾಸಕರ ವಿರೋಧ ಇದ್ದರೂ ಖೇಣಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು ನಮಗೆಲ್ಲ ಅಚ್ಚರಿ ಮೂಡಿಸಿದೆ. ನೈಸ್‌ ವಿರುದ್ಧ ಸದನದಲ್ಲಿ ಎಲ್ಲ ಶಾಸಕರು ಧ್ವನಿ ಎತ್ತಿದ್ದಾರೆ. ಬೀದರ್‌ ದಕ್ಷಿಣದಲ್ಲಿ ಅವರಿಗೆ ಟಿಕೆಟ್‌ ನೀಡುವ ಮೊದಲು ಸ್ಥಳೀಯ ನಾಯಕರ ಅಭಿಪ್ರಾಯ ಪಡೆಯಬೇಕು. 
– ಡಾ. ಅಜಯ್‌ ಸಿಂಗ್‌, ಜೇವರ್ಗಿ ಶಾಸಕ

ಖೇಣಿ ಸೇರ್ಪಡೆಯಿಂದ ಪಕ್ಷಕ್ಕೆ ಧಕ್ಕೆ ಆಗಲಿದೆ. ಅವರನ್ನು ಕಾಂಗ್ರೆಸ್‌ಗೆ ಯಾಕೆ ಸೇರಿಸಿಕೊಂಡಿದ್ದಾರೆ ಎನ್ನುವುದು ಅರ್ಥ ಆಗುತ್ತಿಲ್ಲ. ಕಾರ್ಯಕರ್ತರ ಜತೆ ಸೇರಿ ನಾನು ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿದ್ದೇನೆ. ಬೀದರ್‌ ದಕ್ಷಿಣದಿಂದ ನಾನು ಟಿಕೆಟ್‌ ಆಕಾಂಕ್ಷಿ.  
– ಚಂದ್ರಸಿಂಗ್‌,  ಧರ್ಮಸಿಂಗ್‌ ಅಳಿಯ

ಟಾಪ್ ನ್ಯೂಸ್

Kharge

5 adjectives; ಮೋದಿ ಸರ್ಕಾರದ 5 ವಿಶೇಷಣಗಳು ಇವು..: ಖರ್ಗೆ ಕೆಂಡಾಮಂಡಲ

Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ

Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ

Online Trading: ಉಡುಪಿ ಮೂಲದ ವ್ಯಕ್ತಿಗೆ 27 ಲಕ್ಷ ರೂ. ವಂಚನೆ

Online Trading: ಆನ್‌ಲೈನ್‌ ಲಿಂಕ್‌ ಅಪ್ಲಿಕೇಶನ್‌ ಬಳಸಿ 27 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

Panambur: ಬೀಚ್‌ ಬಳಿ ನಿಲ್ಲಿಸಿದ್ದ ಕಾರಿನಿಂದ ಚಿನ್ನಾಭರಣ, ನಗದು ಕಳವು

Panambur: ಬೀಚ್‌ ಬಳಿ ನಿಲ್ಲಿಸಿದ್ದ ಕಾರಿನಿಂದ ಚಿನ್ನಾಭರಣ, ನಗದು ಕಳವು

India A vs Australia A: ಸುದರ್ಶನ್‌ 96, ಪಡಿಕ್ಕಲ್‌ 80, ಆಸೀಸ್‌ಗೆ ಭಾರತ ತಿರುಗೇಟು

India A vs Australia A: ಸುದರ್ಶನ್‌ 96, ಪಡಿಕ್ಕಲ್‌ 80, ಆಸೀಸ್‌ಗೆ ಭಾರತ ತಿರುಗೇಟು

Jammu – Kashmir: ಮುಂದುವರೆದ ಉಗ್ರರ ದಾಳಿ… ಇಬ್ಬರು ವಲಸೆ ಕಾರ್ಮಿಕರಿಗೆ ಗಾಯ

Jammu – Kashmir: ಮುಂದುವರೆದ ಉಗ್ರರ ದಾಳಿ… ಇಬ್ಬರು ವಲಸೆ ಕಾರ್ಮಿಕರಿಗೆ ಗಾಯ

1-reeee

BJP ಸ್ನೇಹಿತರಿಗೆ ಕೈ ಜೋಡಿಸಿ ಮನವಿ ಮಾಡಿಕೊಳ್ಳುವೆ, ದಾರಿ ತಪ್ಪಿಸಬೇಡಿ: ಜಮೀರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-bng

Bengaluru: ಕಾವೇರಿ ನೀರು 6ನೇ ಹಂತದ ಯೋಜನೆಗೆ ಸಿದ್ಧತೆ

18-bng

ಆಟೋದಲ್ಲಿ ಗಾಂಜಾ ಮಾರುತ್ತಿದ್ದ ಚಾಲಕನ ಬಂಧನ

17-bng

Bengaluru: ನಟ ದರ್ಶನ್‌ಗೆ ಜಾಮೀನು: ಸುಪ್ರೀಂಗೆ ಪೊಲೀಸರ ಮೊರೆ?

16-skin

Deepawali: ಪಟಾಕಿ ಅವಘಡ: ಚರ್ಮ ಕಸಿ ಶಸಚಿಕಿತ್ಸೆಗೆ ಸಜ್ಜು

15-bng

Bengaluru: ಆಂಧ್ರಪ್ರದೇಶದಿಂದ ಗಾಂಜಾ ತಂದು ನಗರದಲ್ಲಿ ಮಾರುತ್ತಿದ್ದ ಇಬ್ಬರ ಬಂಧನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Kharge

5 adjectives; ಮೋದಿ ಸರ್ಕಾರದ 5 ವಿಶೇಷಣಗಳು ಇವು..: ಖರ್ಗೆ ಕೆಂಡಾಮಂಡಲ

Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ

Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ

Online Trading: ಉಡುಪಿ ಮೂಲದ ವ್ಯಕ್ತಿಗೆ 27 ಲಕ್ಷ ರೂ. ವಂಚನೆ

Online Trading: ಆನ್‌ಲೈನ್‌ ಲಿಂಕ್‌ ಅಪ್ಲಿಕೇಶನ್‌ ಬಳಸಿ 27 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

Panambur: ಬೀಚ್‌ ಬಳಿ ನಿಲ್ಲಿಸಿದ್ದ ಕಾರಿನಿಂದ ಚಿನ್ನಾಭರಣ, ನಗದು ಕಳವು

Panambur: ಬೀಚ್‌ ಬಳಿ ನಿಲ್ಲಿಸಿದ್ದ ಕಾರಿನಿಂದ ಚಿನ್ನಾಭರಣ, ನಗದು ಕಳವು

India A vs Australia A: ಸುದರ್ಶನ್‌ 96, ಪಡಿಕ್ಕಲ್‌ 80, ಆಸೀಸ್‌ಗೆ ಭಾರತ ತಿರುಗೇಟು

India A vs Australia A: ಸುದರ್ಶನ್‌ 96, ಪಡಿಕ್ಕಲ್‌ 80, ಆಸೀಸ್‌ಗೆ ಭಾರತ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.