ಮೆರವಣಿಗೆಗೆ ಸಂಸ್ಕೃತಿಯ ಸ್ಪರ್ಶ


Team Udayavani, Mar 6, 2018, 11:37 AM IST

0503sub02B-VIDVATH-SANMANA.jpg

ಸುಬ್ರಹ್ಮಣ್ಯ (ಕೊಳಂಬೆ ಪುಟ್ಟಣ್ಣ ಗೌಡ ವೇದಿಕೆ) : ಕನ್ನಡ ಸೇವೆ ಮಾಡುವ ಮನಸ್ಸುಗಳಿಗೆ ಭುವನೇಶ್ವರಿ ದಿಬ್ಬಣದಲ್ಲಿ ಪಾಲ್ಗೊಳ್ಳುವ ಉತ್ಸಾಹ. ಜನಪದ ತಂಡ ಗಳಿಗೆ ಕನ್ನಡದ ಕಂಪನ್ನು ಹತ್ತೂರಿ ನಾಚೆಗೂ ಪಸರಿಸುವ ತವಕ. ವಿದ್ಯಾರ್ಥಿ ಸಮೂಹ, ಸಾಹಿತ್ಯ ಅಭಿಮಾನಿಗಳ ಎಲ್ಲರ ಮನದಲ್ಲೂ ಕನ್ನಡದ್ದೇ ಗುಣಗಾನ.

ದ.ಕ. ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುನ್ನುಡಿ ಬರೆಯುವಂತೆ ಸೋಮವಾರ ನಡೆದ ಅದ್ದೂರಿ ಮೆರವಣಿ ಗೆಯಲ್ಲಿ ಸೃಷ್ಟಿಸಿದ ಭಾವ ಲೋಕವಿದು. ಕೆಎಸ್‌ಎಸ್‌ ಕಾಲೇಜು ಬಳಿಯ ಆವರಣ ದಿಂದ ಆಕರ್ಷಕ ಮೆರವಣಿಗೆಗೆ ಬೆಳಗ್ಗೆ ಚಾಲನೆ ನೀಡಲಾಯಿತು. ಮೆರವಣಿಗೆ ಮುಖ್ಯ ರಸ್ತೆಯಲ್ಲಿ ಸಾಗಿ ಕಾಶಿಕಟ್ಟೆ ಮೂಲಕ ಬೈಪಾಸ್‌ ರಸ್ತೆಯಲ್ಲಿ ಸಾಗಿ ಮುಖ್ಯ ಪೇಟೆ ಮೂಲಕ ಅಂಗಡಿಗುಡ್ಡೆಯ ಕುಲ್ಕುಂದ ಶಿವರಾವ್‌ (ನಿರಂಜನ) ಸಭಾಂಗಣಕ್ಕೆ ತಲುಪಿತು.

ಅಲಂಕೃತ ಎರಡು ರಥಗಳ ಪೈಕಿ ಬೆಳ್ಳಿಯ ಸಾರೋಟನಲ್ಲಿ ಸಮ್ಮೇಳನದ ಅಧ್ಯಕ್ಷೆ ಎ.ಪಿ ಶೀಲಾವತಿ ಇದ್ದರೆ ಅವರ ಪಕ್ಕದಲ್ಲೆ ದ.ಕ ಜಿಲ್ಲಾ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮತ್ತು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಕುಳಿತಿ ದ್ದರು. ಇನ್ನೊಂದರಲ್ಲಿ ಕನ್ನಡ ತಾಯಿ ಭುವನೇಶ್ವರಿ ದೇವಿಯ ವೇಷಧಾರಿ ಎಲ್ಲರ ಗಮನ ಸೆಳೆದಳು.

ಗ್ರಾಮೀಣ ಸೊಗಡಿನ ಸುಗ್ಗಿ ನೃತ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಸ್ತುತ ಪಡಿಸಿದ ಕುಶಾಲಪ್ಪ ಮತ್ತು ಅವರ ತಂಡದ ಕರಂಗೋಲು ನೃತ್ಯ ಹಾಗೂ ಕಂಗೀಲು ನೃತ್ಯಗಳು ಮೆರವಣಿಗೆಗೆ ವಿಶೇಷ ರಂಗು ತಂದುಕೊಟ್ಟಿತು. ಬಂಟ್ವಾಳದ ಚಿಲಿಪಿಲಿ ಗೊಂಬೆ, ಮಂಗಳೂರು ತಂಡದ ಚೆಂಡೆವಾದನ ನಿನಾದ ರಂಗು ಮೂಡಿಸಿತು. ನೆಲ್ಯಾಡಿ ಶ್ರೀ ರಾಮ ವಿದ್ಯಾರ್ಥಿಗಳ ಕುಣಿತ ಭಜನೆ ಗಮನ ಸೆಳೆದವು. ವಿವಿಧ ಸಾಂಸ್ಕೃತಿಕ ತಂಡದ ಕೋಲಾಟ, ಕಂಸಾಳೆ ಕುಣಿತ ಹಾಗೂ ವೇಷಭೂಷಣಗಳು ಮೆರವಣಿಗೆಗೆ ರಂಗು ತುಂಬಿದವು. ಸಿಂಗಾರಿ ಮೇಳ, ನವಿಲು ನೃತ್ಯ, ಬೇಡರ ನೃತ್ಯ, ಯಕ್ಷಗಾನ ವೇಷ, ಜೋಕರ್‌ ನೃತ್ಯ, ಪೇಪರ್‌ ಗೊಂಬೆ, ಕೀಲು ಕುದುರೆ ನೃತ್ಯ, ಹಾಲಕ್ಕಿ ನೃತ್ಯ, ಗ್ರಾಮೀಣ ಸೊಗಡಿನ ಸುಗ್ಗಿ ನೃತ್ಯ ಮೆರವಣಿಗೆ ವೈಭವ ಹೆಚ್ಚಿಸಿದವು. ಸುಬ್ರಹ್ಮಣ್ಯ ಕೆಎಸ್‌ಎಸ್‌ ಕಾಲೇಜಿನ ಎನ್‌ಸಿಸಿ ಘಟಕದ ಪೆರೇಡ್‌ ಮೆರವಣಿಗೆಯಲ್ಲಿ ಭಾಗವಹಿಸಿತ್ತು.

ಕುಕ್ಕೆ ಶ್ರೀ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು, ಕುಮಾರಸ್ವಾಮಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮೆರವಣೆಗೆ ಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕೈಯಲ್ಲಿ ಕನ್ನಡದ ಪತಾಕೆ ಹಿಡಿದು ಸಾಗಿದ ಶಾಲಾ ಮಕ್ಕಳ ಆಕರ್ಷಕ ಪಥಸಂಚಲನ, ಕುಣಿತ ಎಲ್ಲರ ಮನಸೂರೆಗೊಳಿಸಿತು. ಮೆರವಣಿಗೆ ಸಮಿತಿ ಸಂಚಾಲಕ ರವಿ ಕಕ್ಕೆಪದವು ನೇತೃತ್ವ ವಹಿಸಿದ್ದರು. ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ ಮೆರವಣಿಗೆಗೆ ಚಾಲನೆ ನೀಡಿದರು. ತಾ.ಪಂ. ಸದಸ್ಯ ಅಶೋಕ ನೆಕ್ರಾಜೆ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿದರು.

 ಮೆರವಣಿಗೆ ಸಮಾಪನಗೊಂಡ ಬಳಿಕ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸಮ್ಮೇಳನ ಧ್ವಜಾರೋಹಣ ನೆರವೇರಿಸಿದರು. ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಹೊಸಮನೆ ರಾಷ್ಟ್ರ ಧ್ವಜರೋಹಣ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ ಕಲ್ಕೂರ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.ಕುಕ್ಕೆ ಸುಬ್ರಹ್ಮಣ್ಯದಲ್ಲಿ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಸ್ಥಳದ ಕೂಗಳತೆಯ ದೂರದಲ್ಲಿ ಸುಬ್ರಹ್ಮಣ್ಯ ಸ.ಉ.ಮಾ.ಹಿ. ಪ್ರಾಥಮಿಕ ಸರಕಾರಿ ಶಾಲೆ ಇದೆ. ಹೀಗಿದ್ದರೂ ಆ ಶಾಲೆಯ ಮಕ್ಕಳಿಗೆ ಸೋಮವಾರ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಸಿಗಲಿಲ್ಲ. ಬೇರೆ ಶಾಲೆಗಳ ಮಕ್ಕಳು ಕನ್ನಡದ ಬಾವುಟ ಹಿಡಿದು, ಘೋಷಣೆ ಕೂಗುತ್ತ ಇದೇ ಶಾಲೆ ಎದುರಿನಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಶಾಲೆಯ ಮಕ್ಕಳು ಕಿಟಕಿಗಳ ಮೂಲಕವೇ ಕನ್ನಡ ಹಬ್ಬವನ್ನು ಕಣ್ತುಂಬಿಕೊಂಡರು.

ಅಂತರ್ಜಾಲ ಸದ್ಬಳಕೆ ಆಗಲಿ
ಅಂತರ್ಜಾಲವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡರೆ ಮನುಜಕುಲಕ್ಕೆ ವರದಾನ. ಹದ ಮೀರಿದರೆ ನಮ್ಮನ್ನೇ ಸುಡುವ ಭಸ್ಮಾಸುರ. ಲೇಖಕರ ಪಾಲಿಗೆ ಅಂತರ್ಜಾಲ ದೊಡ್ಡ ಗ್ರಂಥ ಭಂಡಾರ. ಮೊಗೆದರೂ ಮುಗಿಯದ ಜ್ಞಾನಸಾಗರ. ಲೇಖಕರು ಎಷ್ಟೇ ಹಳಬರಾಗಿರಲಿ, ಹೊಸ ಕಾಲಕ್ಕೆ ತಮ್ಮನ್ನು ಬದಲಾವಣೆಗೆ ತೆರೆದುಕೊಳ್ಳಬೇಕು.
 ಎ.ಪಿ. ಮಾಲತಿ, ಸಮ್ಮೇಳನಾಧ್ಯಕ್ಷೆ 

ವಿದ್ವತ್‌ ಸಂಮಾನ
ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಗಿರೀಶ್‌ ಭಾರದ್ವಾಜ್‌ (ಪದ್ಮಶ್ರೀ ಪುರಸ್ಕೃತರು), ಕೆ.ಇ. ರಾಧಾಕೃಷ್ಣ ( ಶಿಕ್ಷಣ ತಜ್ಞ) ವಿದ್ವಾನ್‌ ಕದ್ರಿ ಪ್ರಭಾಕರ ಅಡಿಗ (ಬಹುಭಾಷಾ ವಿದ್ವಾಂಸ), ಕುಡುಪು ನರಸಿಂಹ ತಂತ್ರಿ (ಆಗಮ ಪಂಡಿತ), ಪ್ರೊ| ಮಹಾಬಲ ಶೆಟ್ಟಿ ಸುಬ್ರಹ್ಮಣ್ಯ (ಶಿಕ್ಷಣ ತಜ್ಞ), ಡಾ| ಕೆ.ಎಸ್‌.ಎನ್‌. ಉಡುಪ ಸುಬ್ರಹ್ಮಣ್ಯ (ವಿದ್ವಾಂಸರು), ಎಸ್‌.ಕೆ. ಆನಂದ ಪುತ್ತೂರು (ವಾಸ್ತು ತಂತ್ರಜ್ಞರು) ಅವರನ್ನು ಕುವೆಂಪು ವಿ.ವಿ. ನಿವೃತ್ತ ಕುಲಪತಿ ಪ್ರೊ| ಕೆ. ಚಿದಾನಂದ ಗೌಡ ಅವರು ಸಮ್ಮಾನಿಸಿದರು. ವಿಧಾನಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅವರು ವಿವಿಧ ಕೃತಿಗಳನ್ನು ಬಿಡುಗಡೆಗೊಳಿಸಿದರು.

ಬಾಲಕೃಷ್ಣ  ಭೀಮಗುಳಿ

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.