ಗೆಲ್ಲೊಕೆ 10 ಕೋಟಿ, ಗೆದ್ದಮೇಲೆ 20 ಕೋಟಿ
Team Udayavani, Mar 6, 2018, 12:24 PM IST
ಬೆಂಗಳೂರು: ಚುನಾವಣೆ ಗೆಲ್ಲುವುದಕ್ಕೆ 10 ಕೋಟಿ ರೂ. ಖರ್ಚು ಮಾಡುತ್ತೇವೆ. ಗೆದ್ದನಂತರ 20 ಕೋಟಿ ವಸೂಲಿ ಮಾಡುತ್ತೇವೆ. ಇದು ಇಂದಿನ ಜನ ಪ್ರತಿನಿಧಿಗಳ ವಸ್ತುಸ್ಥಿತಿ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದರು.
ಕಿಮ್ಮನೆ ರತ್ನಾಕರ ಅಭಿಮಾನಿ ಬಳಗದಿಂದ ಭಾನುವಾರ ಆನಂದರಾವ್ ವೃತ್ತದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ನಮ್ಮ ಕ್ಷೇತ್ರ ನಮ್ಮ ಕನಸು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರನ್ನು ಕರೆದು ಪಾರ್ಟಿ ಫಂಡ್ ರೈಸ್ ಮಾಡುವಂತೆ ಹೇಳುತ್ತಾರೆ.
ಆದರೆ, ಪಾರ್ಟಿ ಫಂಡ್ ರೈಸ್ ಮಾಡಿರುವ ಯಾವ ದಾಖಲೆಯಲ್ಲೂ ಇರುವುದಿಲ್ಲ. ಇದು ಕಾಂಗ್ರೆಸ್ ಮಾತ್ರವಲ್ಲ, ಎಲ್ಲ ಪಕ್ಷಗಳ ಸ್ಥಿತಿ. ಜನಪ್ರತಿನಿಧಿಗಳು ಮಾಡಿಟ್ಟ ಆಸ್ತಿಯನ್ನು ಹಂಚಿಕೊಳ್ಳಲು ಮಕ್ಕಳು, ಸೊಸೆ, ಮೊಮ್ಮೊಕ್ಕಳು ಕಿತ್ತಾಡುತ್ತಿರುತ್ತಾರೆ. ಇದು ಚುನಾವಣಾ ಭ್ರಷ್ಟಾಚಾರದ ಉದಾಹರಣೆ ಎಂದರು.
ಚುನಾವಣೆ ಎಂದರೆ ಭ್ರಷ್ಟಾಚಾರ ಎಂದು ಹಲವು ಹೋರಾಟಗಾರರು ಹೇಳುತ್ತಿದ್ದರು. ಆದರೆ ನಾವು ಈಗ ಅದರಲ್ಲೇ ಈಜುತ್ತಿದ್ದೇವೆ. ನಾಮಿನೇಷನ್ ಹಾಕುವಾಗಲೂ ಅದನ್ನೇ ಮಾಡುತ್ತೇವೆ. ನಾನು ಪಾರ್ಟಿಗೆ ಹಗ್ಗ ಕಟ್ಟಿ ಓಡಾಡುವವನಲ್ಲ. ಕೆಲವೊಮ್ಮೆ ಪಾರ್ಟಿ ಹಗ್ಗವನ್ನು ಬಿಚ್ಚಿ ಓಡಾಡಿದ್ದೇನೆ.
ಭ್ರಷ್ಟಾಚಾರ ಚುನಾವಣೆಯಿಂದಲೇ ಶುರುವಾಗಿದೆ. ದುಡ್ಡು ಖರ್ಚು ಮಾಡಿದರೆ ಮಾತ್ರ ಗೆÇÉೋದು ಎನ್ನುವ ಮನಸ್ಥಿತಿ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು. ಭ್ರಷ್ಟಾಚಾರ ತೊಡೆದುಹಾಕುತ್ತೇನೆ ಎನ್ನುವುದು ಸುಳ್ಳು. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಅಂತಾರೆ ನಮ್ಮ ದೇಶದ ಪ್ರಧಾನಿಗಳು. ಆದರೆ ಭ್ರಷ್ಟಾಚಾರ ತೊಡೆದುಹಾಕಿ¨ªಾರಾ?
ನಾನು, ಬಿ.ಎಲ್. ಶಂಕರ್, ಕಿಮ್ಮನೆ ದುಡ್ಡಿಲ್ಲದವರು. ನಮಗೆ ಭ್ರಷ್ಟಾಚಾರದ ಬಗ್ಗೆ ಗೊತ್ತಿಲ್ಲ. ನಾವು ಕ್ಷೇತ್ರಕ್ಕೆ ಹೋದಾಗ ಜನ ನಮ್ಮ ಕೈ ನೋಡಿ,ದುಡ್ಡಿನ ಬ್ಯಾಗ್ ಇದೆಯಾ ಎಂದು ಗಮನಿಸುತ್ತಾರೆ. ಬರಿ ಕೈ ನೋಡಿ ಆ ಮೇಲೆ ಮರೆಯಾಗುತ್ತಾರೆ. ಇದನ್ನು ಜನ ಬಿಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮಾಜಿ ವಿಧಾನಪರಿಷತ್ ಸಭಾಪತಿ ಬಿ.ಎಲ್.ಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆಗ ನಾನು ಗೂರ್ಖನಂತಿದ್ದೆ: “ಕಿಮ್ಮನೆ ರತ್ನಾಕರ್ ಸಚಿವರಾಗಿದ್ದರು. ಆಗ ನಾನು ಸಚಿವನಾಗಿರಲಿಲ್ಲ. ಗೂರ್ಖನಂತೆ ಬ್ಯಾಗ್ ಹಾಕಿಕೊಂಡು ಅಸೆಂಬ್ಲಿಗೆ ಬರ್ತಿದ್ದೆ. ಅಸೆಂಬ್ಲಿಯಲ್ಲಿ ಯಾರಾದರೂ ಜೋರು ಮಾಡಿದ್ರೆ, ಬೊಗಳ್ಳೋದು ಮಾಡುತ್ತಿದ್ದೆ. ಸಂಜೆ ಮತ್ತೆ ಬ್ಯಾಗ್ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದೆ. ಆಮೇಲೆ ಈ ಗೂರ್ಖನಿಗೂ ಒಂದು ಅವಕಾಶ ಕೊಟ್ಟು ಮಂತ್ರಿ ಮಾಡಿದರು. ಈಗ ನಾನು ಮಂತ್ರಿ, ಕಿಮ್ಮನೆ ಗೂರ್ಖನಾಗಿ ಸೇವೆ ಸಲ್ಲಿಸುತ್ತಿದ್ದಾರೆ,’ ಎಂದು ತಮ್ಮ ಪರಿಸ್ಥಿತಿಯನ್ನು ಸಚಿವ ರಮೇಶ್ ಕುಮಾರ್ ಗೂರ್ಖನಿಗೆ ಹೋಲಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.