ಪರಿಶುದ್ಧ ಚುನಾವಣೆಗೆ ಜಗಳೂರು ಕ್ಷೇತ್ರ ಮಾದರಿಯಾಗಲಿ
Team Udayavani, Mar 6, 2018, 7:10 PM IST
ಸಿರಿಗೆರೆ: ಬರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹಣ, ಹೆಂಡ, ತೋಳ್ಬಲ, ಜಾತಿಯ ಹಂಗು ಎಲ್ಲವನ್ನೂ ತೊರೆದು
ಯಾವುದೇ ಆಮಿಷಗಳಿಲ್ಲದ ಚುನಾವಣೆ ನಡೆಸಿ ಜಗಳೂರು ಕ್ಷೇತ್ರದ ಮತದಾರರು ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದು ಶ್ರೀ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಿರಿಗೆರೆಯ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದ ರಾಜಕೀಯ ಕ್ಷೇತ್ರದ ಶುದ್ಧೀಕರಣ ಪ್ರಯೋಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂತಹ ರಾಜಕೀಯ ಪ್ರಯೋಗಕ್ಕೆ ತಾವು ಕೈಹಾಕಿರುವುದು ಇದೇ ಮೊದಲೇನಲ್ಲ. 1994 ರಲ್ಲಿ ಜಾತ್ಯತೀತ ಮತ್ತು ಪಕ್ಷಾತೀತವಾಗಿ ನಡೆದುಕೊಳ್ಳುವಂತೆ ಮತದಾರರಿಗೆ ಕರೆಕೊಟ್ಟಿದ್ದೆವು. ಅದರಂತೆ ಮತದಾರರು ತಮ್ಮ ಆಶಯವನ್ನು ಈಡೇರಿಸಿದ್ದರು ಎಂದರು.
ಈಗ ಕಾಲಮಾನ ಬದಲಾಗಿದ್ದು, ಚುನಾವಣೆಗಳಲ್ಲಿ ಆತಂಕವಾಗುವಷ್ಟು ಭ್ರಷ್ಟತೆ ಆವರಿಸಿದ್ದು, ಮತದಾರರನ್ನು ಆಮಿಷಗಳಲ್ಲಿ
ಮುಳುಗೇಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ಮತದಾರರನ್ನು ಜಾಗೃತಗೊಳಿಸಿ ಹಣ, ಹೆಂಡ, ತೋಳ್ಬಲ, ಜಾತಿಯನ್ನು ಮೀರಿದ ಚುನಾವಣೆ ನಡೆಸುವ ಸಾಹಸಕ್ಕೆ ಮುಂದಾಗಿದ್ದೇವೆ. ಇದಕ್ಕೆ ಜಗಳೂರು ಕ್ಷೇತ್ರದ ಮತದಾರರು ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಜಗಳೂರು ಪಟ್ಟಣದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವವು ಇತ್ತೀಚೆಗೆ ವಿಜೃಂಭಣೆಯಿಂದ ನಡೆದಿದೆ. ಅದರಂತೆಯೇ ಈಗ ಶುದ್ಧವಾದ ಚುನಾವಣೆಯನ್ನು ಈ ಕ್ಷೇತ್ರದ ಜನರು ಮಾಡಬೇಕು. ರಾಜಕೀಯ ವ್ಯವಸ್ಥೆ ಕೆಸರಿನಲ್ಲಿ ಸಿಲುಕಿದ ವ್ಯಕ್ತಿ ಮೇಲೆ ಬಾರದೆ ಒದ್ದಾಡುವಂತಿದೆ. ಕೆಸರಿನಲ್ಲಿ ಸಿಲುಕಿದವರನ್ನು ಮೇಲೆತ್ತಲು ಹೋದವರು ಅಲ್ಲಿಯೇ ಸಿಕ್ಕಿಕೊಂಡಿದ್ದಾರೆ. ರಾಜಕೀಯ ಮುಂದಾಳುಗಳು, ಅವರ ಬೆಂಬಲಿಗರು, ಮತದಾರರಿಂದ ಮಾತ್ರ ಶುದ್ಧ ಚುನಾವಣೆ ಸಾಧ್ಯ. ಎಲ್ಲರೂ ಸೈನ್ಯೋಪಾದಿಯಲ್ಲಿ
ಮನಸ್ಸು ಮಾಡಿ, ಜಾಗೃತಿ ಮೂಡಿಸಿದರೆ ಯಶಸ್ಸು ನಿಜವಾಗಿಯೂ ಸಿಗುತ್ತದೆ ಎಂದರು.
ಅಂತೆಯೇ ಚುನಾವಣೆಗೆ ಸ್ಪರ್ಧಿಸಿದ ಉಮೇದುವಾರರು ಮತದಾರರಿಗೆ ಚುನಾವಣೆಯ ಸಂದರ್ಭದಲ್ಲಿ ಹಣ, ಹೆಂಡ ಹಂಚುವುದನ್ನು ನಿಲ್ಲಿಸಬೇಕು. ಎಲ್ಲಾ ಉಮೇದುವಾರರು ಸಾಮೂಹಿಕವಾಗಿ ಪ್ರಚಾರ ಕಾರ್ಯವನ್ನು ಏರ್ಪಡಿಸಬೇಕು. ಅಲ್ಲಿ ಪರಸ್ಪರರನ್ನು ತೆಗೆಳದೆ ಚುನಾವಣೆಯಲ್ಲಿ ವಿಜಯಶಾಲಿಗಳಾದಲ್ಲಿ ಕ್ಷೇತ್ರಕ್ಕೆ ಮಾಡುವ ಉತ್ತಮ ಕೆಲಸಗಳೇನೆಂಬುದನ್ನು ಮತದಾರರಿಗೆ ವಿವರಿಸಬೇಕು ಎಂದು ತಿಳಿಸಿದರು.
ಈ ಸಂಬಂಧ ಮೂರನೆ ಸಭೆಯನ್ನು ಮಾ. 25ರಂದು ಜಗಳೂರು ಪಟ್ಟಣದ ತರಳಬಾಳು ಕೇಂದ್ರದಲ್ಲಿ ಕರೆಯಲಾಗಿದೆ. ಜಗಳೂರು
ಕ್ಷೇತ್ರದಲ್ಲಿರುವ ಎಲ್ಲಾ ಧರ್ಮಗುರುಗಳೂ ಈ ಸಭೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಅಂದು ನಡೆಯಲಿರುವ ಸಭೆಯಲ್ಲಿ ಜಿಪಂ, ತಾಪಂ, ಗ್ರಾಪಂ, ಎಪಿಎಂಸಿ, ಪಟ್ಟಣ ಪುರಸಭೆಯ ಹಾಲಿ ಮತ್ತು ಮಾಜಿ ಸದಸ್ಯರು, ಸರ್ವಪಕ್ಷದ ಬೆಂಬಲಿಗರು ಹಾಗೂ ಮತದಾರರು ಭಾಗವಹಿಸುತ್ತಾರೆ ಎಂದು ಹೇಳಿದರು. ಸಾಣೇಹಳ್ಳಿ ಪೀಠಾಧ್ಯಕ್ಷರಾದ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಲಿ ಶಾಸಕ ಎಚ್.ಪಿ. ರಾಜೇಶ್, ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್.ವಿ. ರಾಮಚಂದ್ರಪ್ಪ ಉಪಸ್ಥಿತರಿದ್ದರು. ಶ್ರೀಗಳ ಆಶಯಕ್ಕೆ ಸಹಮತ ಸ್ಪಷ್ಟಪಡಿಸಿದರು. ನಾಗರಾಜ್, ಕೆಂಚನಗೌಡ, ಎಸ್ .ಬಿ. ರಾಜು, ಭೈರೇಶ, ಮಂಜಣ್ಣ, ಚಂದ್ರನಾಯ್ಕ,
ಶಿವಮೂರ್ತಿ ಮತ್ತಿತರರು ರಾಜಕೀಯ ಶುದ್ಧೀಕರಣ ಪ್ರಯೋಗದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಶ್ರೀಗಳ ಪ್ರಯೋಗಕ್ಕೆ ಬೆಂಬಲ
ಘೋಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.