ಜಮೀನು ಮಂಜೂರಾತಿಗಾಗಿ 110 ವರ್ಷದ ವೃದ್ಧೆಯ ಪ್ರಯತ್ನ!
Team Udayavani, Mar 6, 2018, 7:31 PM IST
ಮೂಡಿಗೆರೆ: ತಾನು ಕಳೆದ 40 ವರ್ಷದಿಂದ ಸಾಗುವಳಿ ಮಾಡಿಕೊಂಡು ಬಂದಿರುವ 4 ಎಕರೆ ಕಾಫಿ ಹಾಗೂ ಅಡಿಕೆ ತೋಟವನ್ನು ತನ್ನ ಹೆಸರಿಗೆ ಮಂಜೂರು ಮಾಡಿಕೊಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಕೋಳೂರು ಗ್ರಾಮದ ಬಡವನದಿಣ್ಣೆಯ ನಿವಾಸಿ 110 ವರ್ಷ ಪ್ರಾಯದ ಸುಬ್ಬಮ್ಮ ತಮ್ಮ ಅಳಲು ತೋಡಿಕೊಂಡಿದ್ದರು.
ಜಮೀನು ಮಂಜೂರಿಗಾಗಿ ಅರ್ಜಿ ಸಲ್ಲಿಸಲು ತಹಶೀಲ್ದಾರ್ ಕಚೇರಿ ಬಾಗಿಲಲ್ಲಿ ಸೋಮವಾರ ಕಚೇರಿಗೆ ಶಾಸಕರು ಬರಲಿದ್ದಾರೆ ಎಂದು ಸಂಜೆವರೆಗೂ ಕಾದು ಕುಳಿತಿದ್ದರು. ಈ ವೇಳೆ ಅಜ್ಜಿ ಸುಬ್ಬಮ್ಮ ಅವರೊಂದಿಗೆ ಸುದ್ದಿಗಾರರು ಮಾತನಾಡಿಸಿದಾಗ, ಕೋಳೂರು ಗ್ರಾಮದ ಸರ್ವೆ ನಂ 173 ರಲ್ಲಿ ತಾನು 40 ವರ್ಷದಿಂದ ಕಾಫಿ, ಅಡಿಕೆ ಬೆಳೆದುಕೊಂಡಿದೇನೆ. 1989ರಲ್ಲಿ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಭೂಮಿ ಮಂಜೂರು ಮಾಡಿಕೊಡುವಂತೆ ಕೇಳಿಕೊಂಡಿದ್ದೆ. ಆರ್ಜಿ ಇದೂವರೆಗೂ ಇತ್ಯರ್ಥವಾಗಿಲ್ಲ. ಇತ್ತೀಚೆಗೆ ಕಂದಾಯ ಅಧಿ ಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ. ಸರ್ವೆ ಕೂಡ ನಡೆದಿದೆ. ಆದರೆ ಮಂಜೂರಾತಿಗಾಗಿ ಕಾಯುತ್ತಿದ್ದರೂ ಇನ್ನೂ ಮಾಡಿಕೊಟ್ಟಿಲ್ಲ. ಇಂದು ಫಾ.ನಂ 53 ಸಭೆ ಇದೆ. ಶಾಸಕರು ಬರುತ್ತಾರೆ ಎಂದು ವಿಷಯ ತಿಳಿಯಿತು. ಹಾಗಾಗಿ ತಾನು ಬಂದು ಶಾಸಕರಿಗಾಗಿ ಕಾಯುತ್ತಿರುವುದಾಗಿ ತಿಳಿಸಿದರು.
ತನಗೆ ಮೂವರು ಪುತ್ರರು, ಪುತ್ರಿ ಇದ್ದಾರೆ. ತನ್ನ ಗಂಡ ದಿ| ಸುಬ್ಬೇಗೌಡರು ಮಾಡಿಟ್ಟಿದ್ದ ಜಮೀನನ್ನು ನನ್ನ ಮಕ್ಕಳಿಗೆ ಹಂಚಿಕೆ ಮಾಡಿದ್ದಾರೆ. ಅವರೆಲ್ಲರೂ ಬೇರೆ ಬೇರೆಯಾಗಿ ವಾಸವಾಗಿದ್ದಾರೆ. ತಾನು ಮಗ ಲಕ್ಷ್ಮಣ ಗೌಡ ಅವರೊಂದಿಗೆ ವಾಸವಿದ್ದೇನೆ. ಹಾಗಾಗಿ ನಾನು ನೆಟ್ಟು ಬೆಳೆಸಿದ ಕಾಫಿ, ಅಡಿಕೆ ಬೆಳೆಯಿರುವ 4 ಎಕರೆ ಜಮೀನಿನ ಬೆಳೆಯನ್ನು ನಂಬಿಕೊಂಡೆ ಜೀವನ ನಡೆಸುತ್ತಿದೇನೆ ಎಂದು ಅಳಲು ತೋಡಿಕೊಂಡರು. ಸುಬ್ಬಮ್ಮ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಡಿ ಎಂದು ಗೋಗರೆಯುತ್ತಿದ್ದದ್ದು ನೋಡಿ, ಅಲ್ಲಿದ್ದ ಸಾರ್ವಜನಿಕರು ಮರುಕಪಡುತ್ತಿದ್ದರು. ನಂತರ ಸಂಜೆ 5.30ರ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಬಿ.ಬಿ.ನಿಂಗಯ್ಯ ಒತ್ತುವರಿ ಅರ್ಜಿ ವಿಲೆ ಸಭೆಗೂ ಮುನ್ನ ಅಜ್ಜಿಯೊಂದಿಗೆ ಮಾತನಾಡಿ, ಆ ಜಮೀನನ್ನು ನಿಮ್ಮ ಹೆಸರಿಗೆ ಮಂಜೂರು ಮಾಡಿಕೊಡುವುಗಾಗಿ ತಿಳಿಸಿ.
ನೀವು ಮನೆಗೆ ಹೋಗಿ ವಿಶ್ರಾಂತಿ ಪಡೆಯಿರಿ ಎಂದು ಅಜ್ಜಿಯನ್ನು ಸಮಾಧಾನಪಡಿಸಿ ಕಳುಹಿಸಿದರು. ಚುನಾವಣೆ ಘೋಷಣೆಯಾಗುವ ಮುನ್ನವೇ ಅಜ್ಜಿಯ ಜಮೀನನ್ನು ಮಂಜೂರಾತಿ ಮಾಡಿಕೊಡುವುದಾಗಿ ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Chikkamagaluru: ಮೂರು ದಿನದ ಬಾಣಂತಿ ಮೃತ್ಯು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪ
Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.