ರಣಜಿ ಕ್ರಿಕೆಟಿಗರಿಗೆ ಬಿಸಿಸಿಐ ಪಂದ್ಯ ಶುಲ್ಕ ನೀಡಿಲ್ಲ ?
Team Udayavani, Mar 7, 2018, 8:15 AM IST
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಂತಹ ಬಿಸಿಸಿಐ ಕಳೆದ 2 ವರ್ಷಗಳಿಂದ ರಣಜಿ ಕ್ರಿಕೆಟಿಗರಿಗೆ ಪಂದ್ಯದ ಶುಲ್ಕ ನೀಡದೆ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ. ಈ ಕುರಿತಂತೆ ಸ್ಫೋಟಕ ವರದಿಯೊಂದನ್ನು ಆಂಗ್ಲ ಪತ್ರಿಕೆಯೊಂದು ಪ್ರಕಟಿಸಿದೆ.
ಪಂದ್ಯದ ಶುಲ್ಕ ಬಾಕಿ ಉಳಿ ದಿರುವುದೇಕೆ?: ಲೋಧಾ ಶಿಫಾ ರಸನ್ನು ಇನ್ನೂ ಎಲ್ಲ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳು ಅಳವಡಿಸಿಕೊಂಡಿಲ್ಲ. ಈ ಕಾರಣದಿಂದ ಸರ್ವೋಚ್ಚ ನ್ಯಾಯಾ ಲಯ ನಿಯೋಜಿತ ಬಿಸಿಸಿಐ ಕಟು ನಿರ್ಧಾರ ತೆಗೆದುಕೊಂಡಿದೆ. ಶಿಫಾರಸು ಜಾರಿಗೆ ತರದ ಕ್ರಿಕೆಟ್ ಸಂಸ್ಥೆಗಳ ಆಟಗಾರರಿಗೆ ಪಂದ್ಯ ಶುಲ್ಕವನ್ನು ತಡೆಹಿಡಿದಿದೆ. ಇದು ನೇರವಾಗಿ ಕ್ರಿಕೆಟ್ ಸಂಸ್ಥೆಗಳ ಮೇಲೆ ಒತ್ತಡ ಬೀರಿ ಶಿಫಾರಸು ಜಾರಿ ಮಾಡಲೇಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ ಎನ್ನು ವುದು ಲೆಕ್ಕಾಚಾರ. ಈ ಬಗ್ಗೆ ಸ್ವತಃ ಆಡಳಿತಾಧಿಕಾರಿಗಳು ಹಿಂದೆಯೇ ಸೂಚನೆ ನೀಡಿದ್ದರು.
ಬಿಸಿಸಿಐ ತನ್ನ ಒಟ್ಟು ಆದಾಯದಲ್ಲಿ ಶೇ.10.6ರಷ್ಟು ಹಣವನ್ನು ದೇಶೀಯ ಕ್ರಿಕೆಟ್ ಆಟಗಾರರ ಪಂದ್ಯದ ಶುಲ್ಕಕ್ಕಾಗಿಯೇ ಮೀಸಲಿಟ್ಟಿದೆ. ಒಂದು ಋತುವಿನ ಎಲ್ಲ ರಣಜಿ ಪಂದ್ಯಗಳಲ್ಲಿ ಆಡಿದರೆ ಆಟಗಾರನೊಬ್ಬ 15 ಲಕ್ಷ ರೂ. ಪಡೆಯುತ್ತಾನೆ. ಈ ಮೊತ್ತವನ್ನು ಹೆಚ್ಚಿಸಬೇಕೆಂದು ಶಿಫಾರಸಾಗಿದ್ದು, ಅದು ಜಾರಿಯಾದ ಬಗ್ಗೆ ಮಾಹಿತಿ ಲಭಿಸಿಲ್ಲ. ಬಿಸಿಸಿಐ ಒಟ್ಟಾರೆ ತನ್ನ ಆದಾಯದಲ್ಲಿ ಶೇ.26ರಷ್ಟು ಹಣವನ್ನು ಆಟಗಾರರಿಗೆ ಸಂಭಾವನೆಯಾಗಿಯೇ ನೀಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್ ಬುಮ್ರಾ ಹೆಸರು
First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್ ಡ್ರಾ
ದಕ್ಷಿಣ ಭಾರತದ ಕುಸ್ತಿ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ಧಾರವಾಡದ ಹಳ್ಳಿ ಪೈಲ್ವಾನ್
INDvAUS; ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದ ಹೆಡ್ ವಿಚಿತ್ರ ಸೆಲೆಬ್ರೇಶನ್: ಇದರ ಅರ್ಥವೇನು?
INDvsAUS; ಮಾನಸಿಕವಾಗಿ ಕಾಡುತ್ತಿದೆ..: ಮೆಲ್ಬೋರ್ನ್ ಸೋಲಿನ ಬಳಿಕ ನಾಯಕ ರೋಹಿತ್ ಮಾತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.