ಲೆನಿನ್ ಪ್ರತಿಮೆ ಧ್ವಂಸ; ದೇಶಾದ್ಯಂತ ಚರ್ಚೆ
Team Udayavani, Mar 7, 2018, 9:10 AM IST
ತ್ರಿಪುರದಲ್ಲಿ 25 ವರ್ಷಗಳ ಕಮ್ಯೂನಿಸ್ಟ್ ಆಡಳಿತಕ್ಕೆ ತೆರೆ ಎಳೆದ ಬಿಜೆಪಿ, ಅಧಿಕಾರಕ್ಕೇರುವ ಮುನ್ನವೇ ವಿವಾದಕ್ಕೀಡಾಗಿದೆ. ಇಲ್ಲಿ ಕಮ್ಯೂನಿಸ್ಟ್ ನಾಯಕ “ಲೆನಿನ್’ ಅವರ ಎರಡು ಪ್ರತಿಮೆಗಳನ್ನು ಕಿಡಿಗೇಡಿಗಳು ಧ್ವಂಸಗೈದಿದ್ದಾರೆ. ಕೇವಲ 48 ಗಂಟೆಗಳ ಅವಧಿಯಲ್ಲಿ ಎರಡೂ ಘಟನೆಗಳು ನಡೆದಿವೆ. ಈ ಕೃತ್ಯದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಸಿಪಿಎಂ ಆರೋಪಿಸಿದ್ದು, ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿದೆ. ಈ ಘಟನೆ ಬಗ್ಗೆ ಪರ-ವಿರೋಧ ಚರ್ಚೆಗಳೂ ಆರಂಭವಾಗಿವೆ.
ಘಟನೆ ನಡೆದಿದ್ದೆಲ್ಲಿ?
ದಕ್ಷಿಣ ತ್ರಿಪುರ ಜಿಲ್ಲೆಯ ಬೆಲೋನಿಯಾ ಎಂಬ ನಗರದಲ್ಲಿ. ಸೋಮವಾರ ಜೆಸಿಬಿ ಯಂತ್ರವೊಂದರ ಜತೆಗೆ ಬಂದ ಕೆಲ ಕಿಡಿಗೇಡಿಗಳ ಗುಂಪು ನಗರದಲ್ಲಿದ್ದ ಲೆನಿನ್ ಪ್ರತಿಮೆಯನ್ನು ನೆಲಸಮ ಮಾಡಿದೆ. ಅದು ನೆಲಕ್ಕುರುಳು ತ್ತಿದ್ದಂತೆ, ಯುವಕರ ಗುಂಪು “ಬೋಲೋ ಭಾರತ್ ಮಾತಾ ಕೀ ಜೈ’ ಎಂದು ಘೋಷಣೆಗಳನ್ನು ಕೂಗಿದ್ದಾರೆ.
ತಮಿಳುನಾಡಿನಲ್ಲಿ ವಾಕ್ಸಮರ
“ಲೆನಿನ್ ಪ್ರತಿಮೆಯಂತೆಯೇ, ತಮಿಳುನಾಡಿನ ಜಾತಿವಾದಿ ಪೆರಿಯಾರ್ ಅವರ ಪುತ್ಥಳಿಯನ್ನೂ ಮುಂದೊಂದು ದಿನ ಕೆಡವಲಾಗುತ್ತದೆ’ ಎಂದು ತಮಿಳುನಾಡು ಬಿಜೆಪಿ ನಾಯಕ ಎಚ್. ರಾಜಾ ಹೇಳಿದ್ದಾರೆ. ರಾಜಾ ಅವರನ್ನು ಬಂಧಿಸಬೇಕೆಂದು ಡಿಎಂಕೆ ನಾಯಕ ಸ್ಟಾಲಿನ್ ಆಗ್ರಹಿಸಿದ್ದಾರೆ. ಎಂಡಿಎಂಕೆ ನಾಯಕ ವೈಕೋ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿ, “ಪೆರಿಯಾರ್ ಪುತ್ಥಳಿ ಕೆಡವಲು ಯತ್ನಿಸುವವರ ಕೈ ಕತ್ತರಿಸಲಾಗುವುದು’ ಎಂದಿದ್ದಾರೆ.
ಪೊಲೀಸರು ಏನಂತಾರೆ?
ಈ ಬಗ್ಗೆ ಪ್ರತಿಕ್ರಿಯಿಸಿರುವ ದಕ್ಷಿಣ ತ್ರಿಪುರ ಜಿಲ್ಲೆಯ ಪೊಲೀಸ್ ಅಧಿ ಕಾರಿ ಮೊಂಚಾಕ್ ಇಪ್ಪರ್, ಧ್ವಂಸ ಪ್ರಕರಣ ಸಂಬಂಧ ಜೆಸಿಬಿ ಯಂತ್ರದ ಚಾಲಕ ನನ್ನು ಬಂಧಿಸಲಾಗಿದ್ದು, ಆತ ಜಾಮೀನು ಪಡೆದು ಹೊರಬಂದಿದ್ದಾನೆ. ಭಗ್ನಗೊಂಡ ಪ್ರತಿಮೆಯನ್ನು ಬೆಲೋ ನಿಯಾ ಮುನ್ಸಿಪಲ್ ಕಾರ್ಪೊರೇಶನ್‌ಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ಲೆನಿನ್ ಪ್ರತಿಮೆಯ ವಿವರ
ಸುಮಾರು ಐದು ಅಡಿ ಎತ್ತರವಿದ್ದ ಫೈಬರ್ ಗ್ಲಾಸ್‌ನಲ್ಲಿ ನಿರ್ಮಾಣವಾಗಿದ್ದ ಲೆನಿನ್‌ರ ಪ್ರತಿಮೆಯಿದು.ತ್ರಿಪುರದ ಬೆಲೋನಿಯಾದ ವೃತ್ತವೊಂದರ ಮಧ್ಯಭಾಗದಲ್ಲಿ ಸ್ಥಾಪಿಸಲ್ಪಟ್ಟಿದ್ದ ಇದನ್ನು ಸಿಪಿಎಂನ ಪಾಲಿಟ್ ಬ್ಯೂರೋ ಸದಸ್ಯ ಪ್ರಕಾಶ್ ಕಾರಾಟ್ ಅವರು ಕೆಲವು ತಿಂಗಳುಗಳ ಹಿಂದಷ್ಟೇ ಉದ್ಘಾಟಿಸಿದ್ದರು.
ರಾಜನಾಥ್ ಸಿಂಗ್ ಮಾತುಕತೆ
ವಿವಾದ ಕುರಿತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ತ್ರಿಪುರ ರಾಜ್ಯಪಾಲ ಹಾಗೂ ಪೊಲೀಸ್ ಮಹಾ ನಿರ್ದೇಶಕರ ಜತೆ ದೂರವಾಣಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಶಾಂತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ಇತ್ತ, ದಿಲ್ಲಿಯಲ್ಲಿ ಗೃಹ ಇಲಾಖೆ, ಪರಿಸ್ಥಿತಿ ನಿಭಾಯಿಸಲು ಬೇಕಿರುವ ಅಗತ್ಯ ಕೇಂದ್ರೀಯ ಪಡೆಗಳು ಹಾಗೂ ಪೊಲೀಸ್ ಪಡೆಯನ್ನು ತ್ರಿಪುರ ಹೊಂದಿದೆ ಎಂದಿದೆ.
ಸ್ಥಳೀಯರು ಲೆನಿನ್ ಪ್ರತಿಮೆ ಬದಲು ವಿವೇಕಾನಂದ, ವಲ್ಲಭಬಾಯಿ ಪಟೇಲ್, ಮದರ್ ಥೆರೆಸಾ ಪುತ್ಥಳಿ ನಿರ್ಮಿಸುವ ಆಸಕ್ತಿ ಹೊಂದಿದ್ದಾರೆ. ಹಾಗಾಗಿ, ಲೆನಿನ್ ಪ್ರತಿಮೆ ಕೆಡವಿದ್ದಾರೆ.
– ಸಬ್ರತಾ ಚಕ್ರವರ್ತಿ, ತ್ರಿಪುರ ಬಿಜೆಪಿ ವಕ್ತಾರ
ಲೆನಿನ್ ರಷ್ಯಾದಲ್ಲಿ ಸರ್ವಾಧಿಕಾರಿ ಆಡಳಿತ ನಡೆಸಿದಾತ. ತನ್ನ ದಬ್ಟಾಳಿಕೆಯಿಂದ ಸಾವಿರಾರು ಜನರನ್ನು ಕೊಂದ ಆತಂಕವಾದಿ. ಅಂಥವನ ಪುತ್ಥಳಿ ನಮಗೆ ಬೇಕೇ?
– ಸುಬ್ರಹ್ಮಣ್ಯನ್ ಸ್ವಾಮಿ, ಬಿಜೆಪಿ ಸಂಸದ
ವಿದೇಶಿ ನಾಯಕರ ಪುತ್ಥಳಿಗಳು ನಮಗೆ ಬೇಕಿಲ್ಲ. ನಮ್ಮಲ್ಲೇ ಗಾಂಧಿ, ಅಂಬೇಡ್ಕರ್, ವಿವೇಕಾನಂದ, ದೀನ್ ದಯಾಳ್‌ರಂಥ ನಾಯಕರಿದ್ದಾರೆ. ಅವರ ಪುತ್ಥಳಿಗಳು ಬೇಕು.
– ಹನ್ಸರಾಜ್ ಅಹಿರ್, ಕೇಂದ್ರ ಸಚಿವ
ಲೆನಿನ್ ಪುತ್ಥಳಿ ಬೀಳಿಸಿದ್ದು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೀಡಿದ ಪೆಟ್ಟು. ಭಗತ್ ಸಿಂಗ್, ಆತನ ಸಹಚರರೂ ಲೆನಿನ್‌ನಿಂದ ಸ್ಫೂರ್ತಿಗೊಂಡಿದ್ದರೆಂಬುದನ್ನು ಬಿಜೆಪಿ ಮರೆಯಬಾರದು.
– ಶರದ್ ಪವಾರ್, ಎನ್‌ಸಿಪಿ ನಾಯಕ
ಈ ಕೃತ್ಯವನ್ನು ಸಹಿಸಲಾಗದು. ಸಿಪಿಎಂ ನಮ್ಮ ವಿರೋಧಿ, ಲೆನಿನ್ ನನ್ನ ನಾಯಕನಲ್ಲ.ಆದರೆ, ಲೆನಿನ್‌ರಂಥ ನಾಯಕರ ಪ್ರತಿಮೆ ಧ್ವಂಸ ಮಾಡುವುದನ್ನು ಒಪ್ಪಲಾಗದು.
– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಲ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
Supreme Court: ಮೀಸಲಿಗಾಗಿ ಆಗುವ ಮತಾಂತರ ಸಂವಿಧಾನಕ್ಕೆ ಮೋಸ
Lokasabha: ಕರ್ನಾಟಕದ 869 ಸೇರಿ 58,929 ವಕ್ಫ್ ಆಸ್ತಿಗಳ ಅತಿಕ್ರಮ: ಕಿರಣ್ ರಿಜಿಜು
Jaipur: ಬರೋಬ್ಬರಿ 3,676 ಕಿ.ಮೀ. ಹಾರಿದ ಕೊಕ್ಕರೆ: ದಾಖಲೆ
EVM Issue: ಇವಿಎಂಗೂ ಮುನ್ನ ರಾಹುಲ್‌ರನ್ನು ಬದಲಿಸಿ ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.