ಉನ್ನತ ಶಿಕ್ಷಣವೆಂಬ ಅವಕಾಶಗಳ ಹೆಬ್ಟಾಗಿಲು ತೆರೆಯಲಿ
Team Udayavani, Mar 8, 2018, 6:00 AM IST
ಶಿಕ್ಷಣಕ್ಕೂ ಊರಿನ ಅಭಿವೃದ್ಧಿಗೂ ಅವಿನಾಭಾವ ಸಂಬಂಧವಿದೆ. ಎಷ್ಟೋ ಬಾರಿ ನಾವು ಶಿಕ್ಷಣವೆಂದರೆ ಬರೀ ಬೌದ್ಧಿಕತೆಯ ವಿಸ್ತಾರ ಎಂದುಕೊಳ್ಳುತ್ತೇವೆ. ಆದರೆ ಅದರಿಂದಲೂ ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿನ ಆರ್ಥಿಕತೆಗೆ ಬೆನ್ನೆಲುಬು ಎನ್ನುವುದನ್ನು ನಮ್ಮ ಜನಪ್ರತಿನಿಧಿಗಳು ಅರಿಯುವ ಕ್ಷಣವಿದು. ಆಗ ಕುಂದಾಪುರ ಮತ್ತಷ್ಟು ಎತ್ತರಕ್ಕೆ ಏರೀತು.
ಕುಂದಾಪುರ: ತಾಲೂಕಿನ ಒಟ್ಟೂ ಚಿತ್ರಣ ಈಗಾಗಲೇ ಹೇಳಿದಂತೆ ನಗರ, ಗ್ರಾಮೀಣ ಹಾಗೂ ಅರೆ ಗ್ರಾಮೀಣ. ಹಾಗಾಗಿ ಶಿಕ್ಷಣದ ಮಹತ್ವ ಇಲ್ಲಿ ಉಳಿದೆಲ್ಲದಕ್ಕಿಂತ ಮಹತ್ವದ್ದು. ಹಾಗೆಯೇ ಶೈಕ್ಷಣಿಕ ಸ್ಥಿತಿಗತಿಯೂ ಕೊಂಚ ವಿಭಿನ್ನ. ಉಡುಪಿ ಜಿಲ್ಲೆ ಸಾಕ್ಷರತೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಆದರೆ ಜಿಲ್ಲೆಗೆ ಹೋಲಿಸಿದರೆ ಕುಂದಾಪುರ ತಾಲೂಕಿನ ಸಾಕ್ಷರತೆಯ ಪ್ರಮಾಣ ಇನ್ನಷ್ಟು ಏರಬೇಕಿದೆ. ಇದು ಬರೀ ಹಂಬಲವಷ್ಟೇ ಅಲ್ಲ ; ಗುರಿಯಾಗುವ ಹೊತ್ತಿದು. ಪ್ರಸ್ತುತ ತಾಲೂಕಿನಲ್ಲಿ ಎರಡು ಸರಕಾರಿ ಪದವಿ ಕಾಲೇಜುಗಳಿವೆ. ಎಂಕಾಂ ಹೊರತುಪಡಿಸಿದರೆ ಬೇರೆ ಯಾವುದೇ ಸ್ನಾತಕೋತ್ತರ ಕೋರ್ಸ್‌ಗಳಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಕಾಲೇಜುಗಳು, ಕೋರ್ಸ್ ಗಳು ಲಭ್ಯವಾಗಬೇಕಿದೆ.
ತಾಲೂಕುವಾರು ನೋಡಿದರೆ ಉಡುಪಿ ಶೇ. 89.3ರಷ್ಟು ಸಾಕ್ಷರತೆ ಹೊಂದಿದ್ದರೆ, ಕಾರ್ಕಳದಲ್ಲಿ ಶೇ. 86.7ರಷ್ಟಿದೆ. ಕುಂದಾಪುರ ಶೇ. 81.6ರಷ್ಟು ಸಾಕ್ಷರರಿದ್ದಾರೆ. ಜಿಲ್ಲೆಯ ಒಟ್ಟು ಸಾಕ್ಷರತೆಯ ಪ್ರಮಾಣ ಶೇ. 86.24. ಲಿಂಗಾಧಾರಿತ ಸಾಕ್ಷರತೆ ಪ್ರಮಾಣದಲ್ಲೂ ಕುಂದಾಪುರ ಪ್ರಗತಿ ಸಾಧಿಸಬೇಕು.
ಜಿಲ್ಲೆಯಲ್ಲೇ ಅತೀ ಹೆಚ್ಚಿನ ಪ್ರಾಥಮಿಕ ಶಾಲೆಗಳನ್ನು ಹೊಂದಿದೆ ಎನ್ನುವ ಹೆಗ್ಗಳಿಕೆ ಕುಂದಾಪುರ ತಾಲೂಕಿನದ್ದು. ಇಲ್ಲಿ ಪ್ರತಿ ಸಾವಿರ ವಿದ್ಯಾರ್ಥಿಗಳಿಗೆ 8 ಶಾಲೆಗಳಿವೆ. ಕುಂದಾಪುರದಲ್ಲಿ 52 ಕಿರಿಯ, 76 ಹಿರಿಯ ಒಟ್ಟು 128 ಸರಕಾರಿ ಶಾಲೆಗಳು, 25 ಅನುದಾನಿತ ಖಾಸಗಿ, 22 ಅನುದಾನ ರಹಿತ ಖಾಸಗಿ, ಒಟ್ಟು 175 ಪ್ರಾಥಮಿಕ ಶಾಲೆಗಳಿವೆ. 20 ಸರಕಾರಿ, 18 ಅನುದಾನಿತ, 7 ಅನುದಾನ ರಹಿತ ಖಾಸಗಿ ಸೇರಿದಂತೆ ಒಟ್ಟು 45 ಪ್ರೌಢಶಾಲೆಗಳಿವೆ.
ಸೌಕರ್ಯಗಳು ಬೇಕು
ಕುಂದಾಪುರದ 22 ಕಿರಿಯ ಪ್ರಾ. ಶಾಲೆಗಳು, 28 ಹಿ.ಪ್ರಾ. ಶಾಲೆಗಳಲ್ಲಿ ಅಡುಗೆ ಕೋಣೆ, ಹಲವು ಶಾಲೆಗಳಲ್ಲಿ ಆಟದ ಮೈದಾನ, ಆವರಣ ಗೋಡೆ, ವಿದ್ಯುತ್ ಸೌಕರ್ಯ, ಗ್ರಂಥಾಲಯ, ಸ್ವಂತ ನೀರಿನ ಸೌಲಭ್ಯ ಕಲ್ಪಿಸಬೇಕಿದೆ. ಶೇ. 90 ರಷ್ಟು ಶಿಕ್ಷಕರಿದ್ದಾರೆ. ಹಿರಿಯ ಪ್ರಾಥಮಿಕ 15 ಹಾಗೂ ಪ್ರೌಢಶಾಲೆಗಳಿಗೆ 3 ಮುಖ್ಯ ಶಿಕ್ಷಕರು ಬೇಕಾಗಿದ್ದಾರೆ. ಶೌಚಾಲಯ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಲಭ್ಯವಾದರೆ ಅನುಕೂಲ.
ಜಿಲ್ಲೆಯಲ್ಲಿ 3 ವೈದ್ಯಕೀಯ ಕಾಲೇಜು ಗಳಿದ್ದರೂ ಕುಂದಾಪುರದಲ್ಲಿಲ್ಲವೆಂಬ ಕೊರಗಿದೆ. ಕೋಟೇಶ್ವರ ಹಾಗೂ ಶಂಕರನಾರಾಯಣದಲ್ಲಿ ಎರಡು ಸರಕಾರಿ ಪದವಿ ಕಾಲೇಜುಗಳಿವೆ. ಕುಂದಾಪುರದ ಎಂಐಟಿ ಎಂಜಿನಿಯರಿಂಗ್ ಹಾಗೂ ಕಾಮತ್ ಇನ್‌ಸ್ಟಿÕಟ್ಯೂಟ್ ಡಿಪ್ಲೊಮಾ ಕಾಲೇಜುಗಳಿವೆ.
ಕೋರ್ಸ್‌ಗಳ ಆಯ್ಕೆ ಬೇಕು”
ತಾಲೂಕಿನಲ್ಲಿರುವ ಎರಡು ಸರಕಾರಿ ಪದವಿ ಕಾಲೇಜುಗಳಲ್ಲಿ ಎಂಕಾಂ ಬಿಟ್ಟರೆ ಬೇರೆ ಕೋರ್ಸ್‌ಗಳಿಲ್ಲ. ಎಂಸ್ಸಿ, ಎಂಎ, ಎಂಎಸ್‌ಡಬ್ಲೂÂ ಕೋರ್ಸ್‌ಗಳಿಗಾಗಿ ಸಿದ್ದಾಪುರ, ಶಂಕರನಾರಾಯಣ ಭಾಗದ ಸುಮಾರು 19 ವಿದ್ಯಾರ್ಥಿಗಳು ಬಾಕೂìರು ಕಾಲೇಜಿಗೆ ಹೋಗುತ್ತಾರೆ. ಶಂಕರನಾರಾಯಣದ ಪದವಿ ಕಾಲೇಜಿನಲ್ಲಿ ಬಿಸಿಎ, ಬಿಎಸ್ಸಿ ಕೋರ್ಸ್‌ಗಳಿಲ್ಲ. ಅನೇಕ ವಿದ್ಯಾರ್ಥಿಗಳು ಕುಂದಾಪುರ ಅಥವಾ ಉಡುಪಿಗೆ ತೆರಳುತ್ತಿದ್ದಾರೆ. ಎರಡೂ ಸರಕಾರಿ ಪದವಿ ಕಾಲೇಜುಗಳಲ್ಲೂ ಕಟ್ಟಡ, ತರಗತಿ ಕೋಣೆ, ಉಪನ್ಯಾಸಕರು ಬೇಕು.ವಿಶಾಲವಾದ ಮೈದಾನ ಮತ್ತು ಪ್ರತ್ಯೇಕ ಗ್ರಂಥಾಲಯಗಳದ ಬೇಡಿಕೆಯೂ ಇದೆ.
ಆಗಬೇಕಾದದ್ದಿವು
ಕುಂದಾಪುರದಲ್ಲೂ ಸರಕಾರಿ ಎಂಜಿನಿಯರಿಂಗ್ ಕಾಲೇಜು, ವೈದ್ಯಕೀಯ ಕಾಲೇಜು ಆರಂಭವಾದರೆ ಹಲವರು ಪರವೂರಿಗೆ ತೆರಳುವುದು ತಪ್ಪುತ್ತದೆ. ಐಟಿಐ ಕಾಲೇಜು ಕುಂದಾಪುರದಿಂದ 20 ಕಿ.ಮೀ. ದೂರದ ಬಿದ್ಕಲ್‌ಕಟ್ಟೆಯಲ್ಲಿ ಮಾತ್ರವಿದೆ. ಕುಂದಾಪುರ ಪರಿಸರದಲ್ಲೊಂದು ಐಟಿಐ ಕಾಲೇಜು ನಿರ್ಮಾಣವಾಗಬೇಕಿದೆ.
ಪದವಿ, ಪ.ಪೂ. ಸರಕಾರಿ, ಖಾಸಗಿ ಕಾಲೇಜುಗಳು
– ಕೋಟೇಶ್ವರ ಪ್ರಥಮ ದರ್ಜೆ ಕಾಲೇಜು
– ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜು
– ಭಂಡಾರ್‌ಕಾರ್ ಕಾಲೇಜು
– ಡಾ| ಬಿ.ಬಿ. ಹೆಗ್ಡೆ ಕಾಲೇಜು
– ಬಸೂÅರು ಶಾರದಾ ಕಾಲೇಜು
ಪದವಿಪೂರ್ವ ಕಾಲೇಜುಗಳು
– ಕೋಟೇಶ್ವರ ಪ.ಪೂ.
– ತೆಕ್ಕಟ್ಟೆ ಪ.ಪೂ.
– ಕುಂದಾಪುರ ಪ.ಪೂ.
– ಬಿದ್ಕಲ್‌ಕಟ್ಟೆ ಪ.ಪೂ.
– ಶಂಕರನಾರಾಯಣ ಪ.ಪೂ.
– ಹೊಸಂಗಡಿ ಪ.ಪೂ.
– ಹಾಲಾಡಿ ಪ.ಪೂ.
– ಭಂಡಾರ್‌ಕಾರ್
– ಆರ್. ಎನ್. ಶೆಟ್ಟಿ
– ಬ್ಯಾರೀಸ್ ಕೋಡಿ
– ಸಂತ ಮೇರಿ ಪ.ಪೂ.
– ಬಸೂÅರು ಶಾರದಾ
– ಮದರ್ ತೆರೆಸಾ ಶಂಕರನಾರಾಯಣ
– ವೆಂಕಟರಮಣ ಕುಂದಾಪುರ
– ಗುರುಕುಲ ಕೋಟೇಶ್ವರ
– ಎಕ್ಸಲೆಂಟ್ ಕೋಟೇಶ್ವರ
ಪ್ರಗತಿಗೆ ಸಲಹೆ ನೀಡಿ
“ಪ್ರಗತಿ ಪಥ’ ನಮ್ಮ ಊರಿನ ಪ್ರಗತಿಯ ಗತಿ ಗುರುತಿಸುತ್ತಿರುವ ಪ್ರಯತ್ನ. ಕುಂದಾಪುರ ತಾಲೂಕು ಪ್ರಗತಿ ಕುರಿತು ಸಲಹೆಗಳಿದ್ದರೆ ನಮ್ಮ ವಾಟ್ಸಾಪ್ ನಂಬರ್ 91485 94259 ಕಳಿಸಿ. ಸೂಕ್ತವಾದುದನ್ನು ಪ್ರಕಟಿಸುತ್ತೇವೆ. ನಿಮ್ಮ ಹೆಸರು, ಊರು ಹಾಗೂ ಭಾವಚಿತ್ರವಿರಲಿ.
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.