“ಗುರ್ಮೆ ಪದ್ಮಾವತಿ ಶೆಟ್ಟಿ ಅವರ ಕೊಡುಗೆ ಸ್ಮರಣೀಯ’
Team Udayavani, Mar 8, 2018, 6:00 AM IST
ಕಾಪು: ಬಿಜೆಪಿ ಮುಖಂಡ ಗುರ್ಮೆ ಸುರೇಶ್ ಪಿ. ಶೆಟ್ಟಿ ಅವರ ತಾಯಿ ಕಳತ್ತೂರು ಗುರ್ಮೆ ಪದ್ಮಾವತಿ ಶೆಟ್ಟಿ ಅವರ ಗೌರವಾರ್ಥ ಕಳತ್ತೂರು ಕುಶಲ ಶೇಖರ ಶೆಟ್ಟಿ ಅಡಿಟೋರಿಯಂನಲ್ಲಿ ಮಾ. 4ರಂದು ಸಂತಾಪ ಸೂಚಕ ಸಭೆ ನಡೆಸಿ, ನುಡಿನಮನ ಸಹಿತ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಸಂತಾಪ ಸೂಚಕ ಸಭೆಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕುದಿ ವಸಂತ ಶೆಟ್ಟಿ ಮಾತನಾಡಿ, ಗುರ್ಮೆ ಪದ್ಮಾವತಿ ಶೆಟ್ಟಿ ಅವರು ಆದರ್ಶ ಗೃಹಿಣಿಯಾಗಿ, ಮಮತೆಯ ಮಾತೆಯಾಗಿ ಸಮಾಜಕ್ಕೆ ನೀಡಿರುವ ಕೊಡುಗೆಗಳು ಸ್ಮರಣೀಯವಾಗಿವೆ. ಸಮಾಜದ ಪ್ರತಿಯೋರ್ವರೂ ಮೆಚ್ಚುವಂತಹ ರೀತಿಯ ಪುತ್ರರತ್ನರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಸರ್ವರಿಗೂ ಆದರ್ಶ ಪ್ರಾಯರಾಗಿದ್ದಾರೆ. ಇಂತಹ ತಾಯಂದಿರ ಸ್ಮರಣೆ ಇಂದಿನ ದಿನಗಳಲ್ಲಿ ಅತ್ಯವಶ್ಯ ಎಂದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಶಾಸಕರಾದ ವಿನಯಕುಮಾರ್ ಸೊರಕೆ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ವಿಭಾಗ ಸಂಚಾಲಕ ಕೆ. ಉದಯ ಕುಮಾರ್ ಶೆಟ್ಟಿ, ಆರ್‌ಎಸ್‌ಎಸ್ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್, ಶಂಭು ಶೆಟ್ಟಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ದಾ.ಮಾ. ರವೀಂದ್ರ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಗಣ್ಯರಾದ ಕೆ.ಪಿ. ಆಚಾರ್ಯ, ಡಾ| ಪ್ರಭಾಕರ ಶೆಟ್ಟಿ, ಬನ್ನಂಜೆ ಬಾಬು ಅಮೀನ್, ಸುಕುಮಾರ ಶೆಟ್ಟಿ ಬೈಂದೂರು, ಪ್ರವೀಣ್ ಶೆಟ್ಟಿ ವಕ್ವಾಡಿ, ಮುನಿಯಾಲು ಉದಯಕುಮಾರ್ ಶೆಟ್ಟಿ ಸಹಿತ ವಿವಿಧ ಗಣ್ಯರು, ರಾಜಕೀಯ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ಮತ್ತು ಉದ್ಯಮಿಗಳು ಪುಷ್ಪ ನಮನ ಸಲ್ಲಿಸಿದರು.
ಗುರ್ಮೆ ಪದ್ಮಾವತಿ ಶೆಟ್ಟಿ ಅವರ ಪುತ್ರರಾದ ಗುರ್ಮೆ ಸುರೇಶ್ ಪಿ. ಶೆಟ್ಟಿ, ಹರೀಶ್ ಪಿ. ಶೆಟ್ಟಿ, ಸತೀಶ್ ಪಿ. ಶೆಟ್ಟಿ, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ಹಾಗೂ ಕಳತ್ತೂರು ಸೂರು ಶೆಟ್ಟಿ ಮನೆ ಕುಟುಂಬಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.