ಸೂರ್ಯನ ಮುಟ್ಟಲು ಬನ್ನಿ
Team Udayavani, Mar 8, 2018, 8:15 AM IST
ಭೂಮಿಯನ್ನು ಬೆಳಗುತ್ತಿರುವ ಸೂರ್ಯನ ಅಧ್ಯಯನಕ್ಕೆ ಮುಂದಾಗಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ), ವಿಶ್ವದ ಸಮಸ್ತ ಜನತೆಗೆ ಸೂರ್ಯನನ್ನು ಸ್ಪರ್ಶಿಸುವ ಅಪೂರ್ವ ಅವಕಾಶವನ್ನು ತಂದುಕೊಟ್ಟಿದೆ! ಹೀಗಾಗಿ ವಿಶ್ವದ ನಾಗರಿಕರಿಗೆ ತಮ್ಮ ಹೆಸರುಗಳನ್ನು ತನ್ನ ವೆಬ್ಸೈಟ್ನಲ್ಲಿ ನೋಂದಾಯಿಸುವಂತೆ ಆಹ್ವಾನಿಸಿದೆ.
ಇದು ನಿಜವಾ?
ಸೂರ್ಯನಲ್ಲಿಗೆ ನಾಸಾ ಜನ ರನ್ನು ನೇರವಾಗಿ ಕಳುಹಿಸುತ್ತಿಲ್ಲ. ಆದರೆ, ಸೂರ್ಯನಲ್ಲಿಗೆ ತಾನು ಕಳುಹಿಸಲಿರುವ ಆಕಾಶಕಾಯದ ಎಲೆಕ್ಟ್ರಾನಿಕ್ ಸರ್ಕಿಟ್ನ ಚಿಪ್ ಒಂದರಲ್ಲಿ ವಿಶ್ವದ ನಾನಾ ದೇಶಗಳ ನಾಗರಿಕರ ಹೆಸರುಗಳನ್ನು ಅಳವಡಿಸಿ ಸೂರ್ಯನತ್ತ ಕಳುಹಿಸಲು ನಿರ್ಧರಿಸಿದೆ.
ಸಂಶೋಧನೆ ಮಹತ್ವ?
ನಾಸಾ ತಾನು ಕೈಗೊಂಡಿರುವ ಈ ಮಹತ್ವದ ಅಧ್ಯಯನಕ್ಕೆ “ಪಾರ್ಕರ್ ಸೋಲಾರ್ ಮಿಷನ್’ ಎಂದು ನಾಮ ಕರಣ ಮಾಡಿದ್ದು, ಸಂಶೋಧನೆ ಗಾಗಿ ಸಾಗುವ ಆಕಾಶಕಾಯ ಜುಲೈ 31ರಂದು ಉಡಾವಣೆ ಆಗಲಿದೆ. ಸೂರ್ಯನಿಂದ ಉತ್ಪತ್ತಿ ಯಾಗುವ ಮಹಾ ಶಾಖದ ಪ್ರಸರಣ ರೀತಿಯನ್ನು ಅಧ್ಯಯನ ಮಾಡುವುದು ಯೋಜನೆಯ ಉದ್ದೇಶವಾಗಿದೆ.
ಏಕೆ ಈ ಐಡಿಯಾ?
ಸೂರ್ಯನತ್ತ ಹೆಸರುಗಳನ್ನು ಕಳುಹಿಸುವ ಮೂಲಕ ವಿಶ್ವದ ಜನತೆಗೆ ತಮ್ಮ ಹೆಸರನ್ನು ಸೂರ್ಯನಿಗೆ ರವಾನಿಸಿದ ಭಾವನೆ ಮೂಡಿಸುವ ಉದ್ದೇಶವನ್ನು ನಾಸಾ ಹೊಂದಿದೆ. ವಿಶ್ವದ ಸಮಸ್ತ ಜನರಿಗೆ ತಮ್ಮ ಹೆಸರುಗಳನ್ನು ತನ್ನ ವೆಬ್ಸೈಟ್ವೊಂದರಲ್ಲಿ ನೋಂದಾಯಿಸಲು ಅದು ಕೋರಿದೆ. go.nasa.gov/HotTicket ಮೂಲಕ ಏಪ್ರಿಲ್ 27ರವರೆಗೆ ಹೆಸರು ನೋಂದಾಯಿಸಲು ಅವಕಾಶವಿದೆ.
ನಾಸಾದಿಂದ ರಸೀದಿ!
ನಿಮ್ಮ ಹೆಸರು, ಸ್ವವಿವರಗಳನ್ನು ನೀಡಿದ ಮೇಲೆ ನಿಮಗೆ ರಸೀದಿ ರೀತಿಯಲ್ಲಿ ನಾಸಾ ವತಿಯಿಂದ ಟಿಕೆಟ್ ಬರುತ್ತದೆ. ಇದನ್ನು ವಿಐಪಿ ಪಾಸ್ ಎಂದು ನಾಸಾ ಹೆಸರಿಸಿದೆ. ಇದು 94 ಲಕ್ಷ ಕಿ.ಮೀ.ಗಳಷ್ಟು ದೂರವಿರುವ ಸೂರ್ಯನತ್ತ ನಿಮ್ಮ ಹೆಸರನ್ನು ಕಳುಹಿಸಿದ ಹೆಗ್ಗಳಿಕೆ ನಿಮ್ಮದಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.