ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರಕಟ
Team Udayavani, Mar 8, 2018, 6:35 AM IST
ಬೆಂಗಳೂರು: ಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯ ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ ವಿವಿಧ ಕ್ಷೇತ್ರದ ಸಾಧಕಿಯರಿಗೆ ನೀಡುವ 2017-18ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಮಹಿಳೆಯರ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಸಂಸ್ಥೆಗಳು, ವ್ಯಕ್ತಿಗಳನ್ನು ಪ್ರೋತ್ಸಾಹಿಸುವುದರ ಜತೆಗೆ ಕಲೆ, ಕ್ರೀಡೆ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಮಹಿಳೆಯರು ಮತ್ತು ಅಸಾಮಾನ್ಯ ಧೈರ್ಯ ಪ್ರದರ್ಶಿಸಿದ ಮಹಿಳೆ ಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಗುರುವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ದೇವದಾಸಿ ಪದ್ದತಿಯ ನಿರ್ಮೂಲನೆಗಾಗಿ 2017-18ನೇ ಸಾಲಿನ ಪದ್ಮಶ್ರೀ ಪುರಸ್ಕೃತ ಸೀತವ್ವ ದುಂಡಪ್ಪ ಜೋಡತ್ತಿ ಅವರನ್ನು ಸನ್ಮಾನಿಸಲಾಗುವುದು. ಅಲ್ಲದೆ, ಸ್ತ್ರೀಶಕ್ತಿ ಗುಂಪಿನ ಮಹಿಳೆಯರು ಹಮ್ಮಿಕೊಂಡಿರುವ ಆದಾಯೋತ್ಪನ್ನ ಚಟುವಟಿಕೆಗಳ ಸಾಧನೆ ಬಿಂಬಿಸುವ ಅಂತರಾಳ ಕಿರುಹೊತ್ತಿಗೆಯ 13ನೇ ಸಂಚಿಕೆ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಹಿಳಾ ಅಭಿವೃದ್ದಿಗಾಗಿ ಶ್ರಮಿಸಿದ ಉತ್ತಮ ಸಂಸ್ಥೆಗಳು: ರಾಮನಗರ ಜಿಲ್ಲೆ ಮಾಗಡಿ ತಾಲೂಕು ಸಮೃದ್ದಿ ಗ್ರಾಮೀಣಾಭಿವೃದ್ದಿ ಸಂಸ್ಥೆ ವಿಜಯಪುರ ಶ್ರೀ ಗುರುಮಾತೆಯರ ಮಹಿಳಾ ಸೌಹಾರ್ದ ಸಹಕಾರಿ ನಿಗಮ, ಬೆಂಗಳೂರು ನಗರದ ಸಾಧನಾ ವನಿತಾ ಮಂಡಳಿ, ಮೈಸೂರಿನ ಓಂ ಶ್ರೀ ಸಾಯಿ ಟ್ರಸ್ಟ್, ಮಂಂಡ್ಯ ಜಿಲ್ಲೆ ಮಲವಳ್ಳಿ ತಾಲೂಕಿನ ಶ್ರೀ ಅಂಬಿಕಾ ಮಹಿಳಾ ಮಂಡಳಿ,ಧಾರವಾಡದ ಯಲ್ಲಾಪುರ ವಿಶ್ವಬಂಧು ಸೇವಾ ಸಂಸ್ಥೆ.
ಉತ್ತಮ ವ್ಯಕ್ತಿ ಪ್ರಶಸ್ತಿ:ಬೆಂಗಳೂರು ಲಿಂಗರಾಜಪುರದ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಸಂಘದ ಸಲ್ಮಾ ತಾಜ್, ಯಲಹಂಕದ ರಾಮ ಗೊಂಡನಹಳ್ಳಿಯ ಸಾಯಿಚೈತನ್ಯ ಚಾರಿ ಟೆಬಲ್ ಟ್ರಸ್ಟ್‌ನ ಅನುಷಾ ಎನ್.ಆರ್. ರಮೇಶ್, ಸಂಪಂಗಿರಾಮ ನಗರದ ಕೆ.ಯನ್.ಸವಿತಾ ರಾಮು, ತುಮಕೂರಿನ ಎಚ್.ಆರ್.ಶಾಲಿನಿ, ಮೈಸೂರಿನ ರಚನಾ ಮಹೇಶ್, ಮಂಡ್ಯದ ಕೆ.ಪಿ.ಅರುಣಕುಮಾರಿ, ಬಾಗಲಕೋಟೆ ನವನಗರದ ಲಕ್ಷ್ಮೀ ಡಿ.ಗೌಡರ, ಕಲಬುರಗಿ ಜಿಲ್ಲೆ ಅಳಂದ ತಾಲೂಕಿನ ನಂದಾದೇವಿ.
ಕಲಾಕ್ಷೇತ್ರ: ವಿಜಯಪುರದ ಅನಸೂಯ ಕುಲಕರ್ಣಿ. ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಮಾಲತಿ ಸುಧೀರ್, ಬೆಂಗಳೂರು ಜಯನಗರದ ಪದ್ಮಾ ಹೇಮಂತ್, ಅನ್ನಪೂರ್ಣೇಶ್ವರಿನಗರದ ಪದ್ಮಜಾ ಜಯರಾಂ.
ಸಾಹಿತ್ಯ ಕ್ಷೇತ್ರ: ಮೈಸೂರು ಜಯನಗರದ ಪಿ.ಕುಸುಮ ಅಯರಹಳ್ಳಿ (ಕುಸುಮಬಾಲೆ), ಬೆಂಗಳೂರಿನ ಯಲಹಂಕದ ಅಟ್ಟೂರಿನ ಇಂದಿರಾ ಕೃಷ್ಣಪ್ಪ, ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಶಶಿಕಲಾ ವಸOಉದ.
ಕ್ರೀಡಾ ಕ್ಷೇತ್ರ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಲಲಿತಾ ಲಮಾಣಿ,ಮಂಡ್ಯ ಜಿಲ್ಲೆ ಮಲವಳ್ಳಿ ತಾಲೂಕಿನ ರತ್ನಮ್ಮ.
ಶಿಕ್ಷಣ ಕ್ಷೇತ್ರ: ಧಾರವಾಡ ಜಿಲ್ಲೆ ಹಳೆ ಹುಬ್ಬಳ್ಳಿಯ ಸುವರ್ಣಲತಾ ಜಿ. ಗದಿಗೆಪ್ಪಗೌಡ.
ವೀರ ಮಹಿಳೆ ಪ್ರಶಸ್ತಿ
– ಬೆಂಗಳೂರು ಎಚ್‌ಎಸ್ ಆರ್ ಲೇಔಟ್‌ನ ಶಾಲಿನಿ ಸರಸ್ವತಿ.
2017-18ನೇ ಸಾಲಿಗೆ ರಾಜ್ಯಮಟ್ಟದ ಪ್ರಶಸ್ತಿಗೆ
ಆಯ್ಕೆಯಾದ ಸ್ತ್ರೀಶಕ್ತಿ ಗುಂಪು/ ಒಕ್ಕೂಟಗಳು
– ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕು ಹೆಸರಘಟ್ಟದ ಸ್ಪಂದನ ಸ್ತ್ರೀಶಕ್ತಿ ಗುಂಪು,ಕೋಲಾರ ಜಿಲ್ಲೆ ಮಾಲೂರು ತಾಲೂಕು ಭುವನಹಳ್ಳಿಯ ಶಿವಸ್ತ್ರೀಶಕ್ತಿ ಗುಂಪು, ಧಾರವಾಡ ಜಿಲ್ಲೆ ಕಲಘಟಕಿಯ ದಮ್ಮವಾಡದ ನಂದಿನಿ ಸ್ತ್ರೀಶಕ್ತಿ ಗುಂಪು.
ವಿಭಾಗೀಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾದ
ಸ್ತ್ರೀಶಕ್ತಿ ಗುಂಪುಗಳು
ಬೆಂಗಳೂರು ನಗರ ಜಿಲ್ಲೆ ಹೊಸಕೋಟೆ ತಾಲೂಕಿನ ತತ್ತನೂರು ತೇಜಸ್ವಿನಿ ಸ್ತ್ರೀಶಕ್ತಿ ಗುಂಪು, ಹಾಸನ ಜಿಲ್ಲೆ ಅರಕಲಗೂಡಿನ
ದುರ್ಗಾಪರಮೇಶ್ವರಿ ಸ್ತ್ರೀಶಕ್ತಿ ಗುಂಪು, ಹಾವೇರಿ ತಾಲೂಕಿನ ಮೂಕಾಂಬಿಕ ಸ್ತ್ರೀಶಕ್ತಿ ಗುಂಪು, ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕು ಕೂಡ್ಲಿಯ ತಾಜ್ ಬೀಬಿ ಸ್ತ್ರೀಶಕ್ತಿ ಗುಂಪು.
ತಾಲೂಕು ಸ್ತ್ರೀಶಕ್ತಿ
ಒಕ್ಕೂಟಗಳು
– ಬೆಂಗಳೂರು ನಗರ ಜಿಲ್ಲೆ, ಉತ್ತರ ತಾಲೂಕು ಸ್ತ್ರೀಶಕ್ತಿ ಒಕ್ಕೂಟ
– ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕುಸ್ತ್ರೀಶಕ್ತಿ ಒಕ್ಕೂಟ,
– ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಸ್ತ್ರೀಶಕ್ತಿ ಒಕ್ಕೂಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.