ಓಲಾ ಕ್ಯಾಬ್ ಡ್ರೈವರ್ ಈಗ ಸೇನಾಧಿಕಾರಿ: ಇದು ಓಂ ಪೈಠಣೆ ಸಾಧನೆ
Team Udayavani, Mar 8, 2018, 11:02 AM IST
ಪುಣೆ: ಜೀವನ ನಿರ್ವಹಣೆಗಾಗಿ ಓಲಾ ಕ್ಯಾಬ್ ಡ್ರೈವರ್ ಆಗಿ ದುಡಿಯುತ್ತಿದ್ದ ಇಲ್ಲಿನ ಓಂ ಪೈಠಣೆ ಎಂಬ ತರುಣ ಇದೇ ಮಾರ್ಚ್ 10ರಂದು ಚೆನ್ನೈನಲ್ಲಿನ ಸೇನಾಧಿಕಾರಿಗಳ ತರಬೇತಿ ಕೇಂದ್ರದಲ್ಲಿ ತನ್ನ ತರಬೇತಿಯನ್ನು ಮುಗಿಸಿಕೊಂಡು ಭಾರತೀಯ ಸೇನೆಗೆ ಓರ್ವ ಅಧಿಕಾರಿಯಾಗಿ ಸೇರಲಿದ್ದಾರೆ. ಪೈಠಣೆ ಅವರ ಈ ಸಾಧನೆಯ ಬಗ್ಗೆ ಅವರ ಕುಟುಂಬದವರಿಗೆ ತುಂಬ ಹೆಮ್ಮೆ ಎನಿಸಿದೆ.
ಮಗನ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ, ಸ್ವತಃ ತಾನೂ ಓರ್ವ ಕ್ಯಾಬ್ ಡ್ರೈವರ್ ಆಗಿ ತನ್ನ ಕುಟುಂಬವನ್ನು ನಡೆಸಿದ್ದ, ಪೈಠಣೆ ಅವರ ತಂದೆ ಉತ್ತಮ್ ಪೈಠಣೆ ಹೀಗೆ ಹೇಳುತ್ತಾರೆ: ಮಗನಿಗೆ ಭಾರತೀಯ ಸೇನೆ ಸೇರಬೇಕೆಂಬ ಆಸೆ ಚಿಕ್ಕಂದಿನಿಂದಲೂ ಇತ್ತು. ಈಗ ಆತನ ಕನಸು ನನಸಾಗುತ್ತಿದೆ; ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶ ಅವನಿಗೆ ಪ್ರಾಪ್ತವಾಗಿದೆ.
ಓಂ ಪೈಠಣೆ ಸಹೋದರ ಆದಿನಾಥ್ ತನ್ನ ಅಣ್ಣನ ಸಾಧನೆಯ ಬಗ್ಗೆ ಹೆಮ್ಮೆಯಿಂದ ಹೀಗೆ ಹೇಳುತ್ತಾರೆ: ಆತ ಕಲಿಕೆ ಮತ್ತು ಸಂಪಾದನೆಯನ್ನು ಜತೆಜತೆಗೆ ನಡೆಸುತ್ತಿದ್ದ. ಮನೆಗೆ ಆರ್ಥಿಕವಾಗಿ ನೆರವಾಗುವುದಕ್ಕಾಗಿ ಆತ ದುಡಿಯುವುದು ಅನಿವಾರ್ಯವಾಗಿತ್ತು. ನಮ್ಮ ತಂದೆ 25 ವರ್ಷ ಡ್ರೈವರ್ ಆಗಿ ದುಡಿದವರು. ಅವರಿಗೆ ತಮ್ಮ ಮಕ್ಕಳು ಯಾರೂ ಈ ವೃತ್ತಿಗೆ ಇಳಿಯುವುದು ಬೇಡ ಎಂಬ ಅಭಿಪ್ರಾಯವಿತ್ತು. ತಾನು ಡ್ರೈವಿಂಗ್ ಮಾಡುತ್ತಿದ್ದುದನ್ನು ಆತ ತಂದೆಯಿಂದ ಮುಚ್ಚಿಟ್ಟಿದ್ದ. ಆದರೂ ಅಣ್ಣ ಡ್ರೈವಿಂಗ್ ಮಾಡುತ್ತಲೇ ಕಲಿತು ಸೇನೆಯನ್ನು ಸೇರಿಕೊಂಡ.
ಓಂ ಪೈಠಣೆ ಸೇನೆಯನ್ನು ಸೇರಿಕೊಂಡ ಸುದ್ದಿ ಆತನ ತಂದೆ ಉತ್ತಮ್, ತಾಯಿ ಸುಶೀಲಾ ಮತ್ತು ಸಹೋದರಿ ಮೋನಿಕಾಗೆ ಗೊತ್ತಾದದ್ದೇ ಮೊನ್ನೆ ಸೋಮವಾರ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾದ ಸಂದರ್ಶನದಿಂದ. ಓಂ ಸಾಧನೆ ಮನೆಯವರಿಗೆ ಅಪರಿಮಿತ ಹರ್ಷ ತಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.