ನಾಡಿದ್ದು ಜೋಡು ರಥೋತ್ಸವ: ರಂಭಾಪುರಿ-ಉಜ್ಜಯಿನಿ ಶ್ರೀ ಅಡ್ಡಪಲ್ಲಕ್ಕಿ
Team Udayavani, Mar 8, 2018, 11:43 AM IST
ಜೇವರ್ಗಿ: ತಾಲೂಕಿನ ಸುಕ್ಷೇತ್ರ ಶಖಾಪುರ ತಪೋವನಮಠದಲ್ಲಿ ಸದ್ಗುರು ವಿಶ್ವರಾಧ್ಯರ ಮತ್ತು ಮಾತೋಶ್ರೀ ಬಸವಾಂಬೆ ತಾಯಿ ಅವರ 67ನೇ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.10ರಂದು ಜೋಡು ರಥೋತ್ಸವ ನಡೆಯಲಿದೆ ಎಂದು ಮಠದ ಪೀಠಾಧಿಪತಿ ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಶಖಾಪುರ ಮಠದಲ್ಲಿ ಸುದ್ಧಿಗೋಷ್ಠಿ ಮಾತನಾಡಿದ ಸ್ವಾಮೀಜಿ, ಉಚಿತ ಆರೋಗ್ಯ ಶಿಬಿರ, ಬೃಹತ್ ಕೃಷಿ ವಸ್ತು ಪ್ರದರ್ಶನ, 51 ಜನ ಸಾಧಕರಿಗೆ ಸನ್ಮಾನ, ವಿಶ್ವ ಬಸವಾಂಬೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಾ.9ರಂದು ನಡೆಯುವ ಕಾರ್ಯಕ್ರಮದಲ್ಲಿ ಬಾಲೆಹೊಸೂರಿನ ದಿಂಗಾಲೇಶ್ವರ ವಿರಕ್ತ ಮಠದ ದಿಂಗಾಲೇಶ್ವರ ಸ್ವಾಮೀಜಿ ಪ್ರವಚನ ನೀಡಲಿದ್ದು, ಗಡಿಗೌಡಗಾಂವದ ಶಾಂತವೀರ ಸ್ವಾಮೀಜಿ ನೇತೃತ್ವ, ಸಾತಖೇಡದ ಈರಣ್ಣ ಮುತ್ಯಾ, ಕುಳೆಕುಮಟಗಿ ಗುರುಲಿಂಗ ಸ್ವಾಮೀಜಿ ಸಮ್ಮುಖ ವಹಿಸುವರು ಎಂದು ತಿಳಿಸಿದರು.
ಮಾ.10ರಂದು ಬೆಳಗ್ಗೆ 6:00ಕ್ಕೆ ಸದ್ಗುರು ವಿಶ್ವರಾಧ್ಯರ ಶಿಲಾ ಮೂರ್ತಿಗೆ ಶತರುದ್ರಾಭಿಷೇಕ, ಪುರಾಣ ಮಹಾಮಂಗಲ
ನಂತರ ರಂಭಾಪುರಿ ಜಗದ್ಗುರು ಡಾ| ಪ್ರಸನ್ನರೇಣುಕ ವೀರಸೋಮೇಶ್ವರ ಶಿವಾಚಾರ್ಯ ರಾಜದೇಶೀಕೇಂದ್ರ ಭಗವತ್ಪಾದರು ಹಾಗೂ ಶೀ ಸಿದ್ಧಲಿಂಗ ದೇಶಿಕೇಂದ್ರ ಶಿವಾಚಾರ್ಯ ಭಗತ್ಪಾದರ ಅಡ್ಡ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ. ಮಧ್ಯಾಹ್ನ 12:00ಕ್ಕೆ ಉಚಿತ ಅರೋಗ್ಯ ಶಿಬಿರದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಮುರುಳಿಧರ ಅಧ್ಯಕ್ಷತೆ ವಹಿಸುವರು.
ಡಾ| ಸುಧಾ ಹಾಲಕಾಯಿ, ಚಂದ್ರಶೇಖರಗೌಡ ಪಾಟೀಲ, ರಾಕೇಶ ಇಟಗಿ, ಸಿದ್ದೇಶ್ವರ ಅನಂತಪುರ, ಡಾ| ಸಿದ್ದು ಪಾಟೀಲ ಭಾಗವಹಿಸುವರು. ಮಧ್ಯಾಹ್ನ 3:00ಕ್ಕೆ ಕೃಷಿ ವಸ್ತು ಪ್ರದರ್ಶನ ಮತ್ತು ಮಾಹಿತಿ ಕಾರ್ಯಾಗಾರದವನ್ನು ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಉದ್ಘಾಟಿಸುವರು. ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ ಅಧ್ಯಕ್ಷತೆ ವಹಿಸುವರು. ರಾಜು ತೆಗ್ಗೆಳ್ಳಿ, ಎಂ.ಎ. ಬೆಳ್ಳಕ್ಕಿ, ಪ್ರವೀಣಕುಮಾರ ಮೋಗೇಕರ್ ಉಪನ್ಯಾಸ ನೀಡುವರು. ಸಂಜೆ 7:00ಕ್ಕೆ ಜೋಡು ರಥೋತ್ಸವ ನಡೆಯಲಿದೆ. ನಂತರ ನಡೆಯುವ ಧರ್ಮಸಭೆಯಲ್ಲಿ ರಂಭಾಪುರಿ ಜಗದ್ಗುರು ಸಾನ್ನಿಧ್ಯ, ನಾಲವಾರದ ಡಾ| ಸಿದ್ಧತೋಟೇಂದ್ರ ಶಿವಾಚಾರ್ಯರು ಅಧ್ಯಕ್ಷತೆ, ಹೊನ್ನಕಿರಣಗಿ ಶ್ರೀ, ಅಫಜಲಪುರ ಶ್ರೀ, ಕಳ್ಳಿಮಠ ಶ್ರೀ, ಕಡಕೋಳ ಶ್ರೀ, ಪಾಳಾ ಶ್ರೀ, ಕುಳೆಕುಮಟಗಿ ಶ್ರೀ ಭಾಗವಹಿಸಲಿದ್ದಾರೆ.
ಶಾಸಕ ಡಾ| ಅಜಯಸಿಂಗ್ ಧರ್ಮಸಭೆ ಉದ್ಘಾಟಿಸುವರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಸಿದ್ಧಾಂತ ಶಿಖಾಮಣಿ ಪಾರಾಯಣ ಸಿಡಿ ಬಿಡುಗಡೆ ಮಾಡುವರು. ನಂತರ ಖ್ಯಾತ ಎಲುಬು ಮತ್ತು ಕೀಲು ತಜ್ಞ ಡಾ| ಶರಣಬಸಪ್ಪ ಕಾಮರೆಡ್ಡಿ ಅವರಿಗೆ ವಿಶ್ವಬಸವಾಂಬೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 51 ಜನರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.