ಸಮಾಜಮುಖಿ ಕಾರ್ಯಗಳಲ್ಲಿ ಶಕುಂತಲಾ
Team Udayavani, Mar 8, 2018, 12:45 PM IST
ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಎನ್ನೆಸ್ಸೆಸ್ ಹಿರಿಯ ಯೋಜನಾಧಿಕಾರಿಯಾಗಿರುವ ಶಕುಂತಳಾ ಅವರು ರಾಜ್ಯ ಸರಕಾರದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ 2016ರ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ.
ಇವರು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ರಕ್ತದಾನ, ಜಲಸಂರಕ್ಷಣೆ, ಸ್ವಚ್ಛತಾಕಾರ್ಯ, ರಾಜ್ಯಮಟ್ಟದ ಯುವಜನೋತ್ಸವ
ಸಂಘಟನೆಗಳಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಇವರು ಸ್ನಾತ್ತಕೋತ್ತರ ಪದವೀಧರರು ಜಿನರಾಜಯ್ಯ ಹಾಗೂ ಪ್ರೇಮಾ ದಂಪತಿಯ ಪುತ್ರಿ. ಇವರಿಗೆ ಇಬ್ಬರು ಮಕ್ಕಳು.
‘ಯಾವುದೇ ಸಾಧನೆ ಮಾಡಬೇಕಾದರೆ ಹಿರಿಯರ, ಕಿರಿಯರ ಸಹಕಾರ ಮುಖ್ಯ. ಅದು ನನಗೆ ನಮ್ಮ ಸಂಸ್ಥೆಯಿಂದ ಲಭಿಸಿದೆ. ವಿದ್ಯಾರ್ಥಿಗಳು ಹಾಗೂ ಸಮಾಜಕ್ಕೆ ಸೇವಾಮನೋಭಾವ ಮೂಡಿಸುವ ಉದ್ದೇಶದಿಂದ ಕಾಲೇಜು ವತಿಯಿಂದ ಹಲವಾರು ಕಾರ್ಯಕ್ರಮ ಸಂಘಟಿಸಲಾಗಿದ್ದು, ಸಾಧನೆಗೆ ಸಂಸ್ಥೆಯ ಸಹಕಾರ ಅಪಾರ’ ಎನ್ನುತ್ತಾರೆ ಶಕುಂತಲಾ.
ಕುಟುಂಬದ ಜವಾಬ್ದಾರಿ
‘ಮಕ್ಕಳು ಸಣ್ಣವರಾದ್ದರಿಂದ ಸ್ವಲ್ಪ ಕಷ್ಟವಾಯಿತು. ಮುಖ್ಯವಾಗಿ ವಾರ್ಷಿಕ ವಿಶೇಷ ಶಿಬಿರದ ಸಂದರ್ಭ ಏಳೂ ದಿನಗಳ ಕಾಲ ಮನೆಯಿಂದ ದೂರವಿರಬೇಕಾಗಿತ್ತು. ಕುಟುಂಬ ನೀಡಿದ ಸಹಕಾರ, ಪ್ರೋತ್ಸಾಹದಿಂದ ಎಲ್ಲವೂ ಸಾಧ್ಯವಾಯಿತು’ ಎಂದು ಶಕುಂತಲಾ ಸ್ಮರಿಸಿಕೊಳ್ಳುತ್ತಾರೆ.
ಶ್ರೇಷ್ಠ ಮಹಿಳಾಧಿಕಾರಿ
ರಾಜ್ಯ ಎನ್ನೆಸ್ಸೆಸ್ ಪ್ರಶಸ್ತಿ ಘೋಷಣೆಯಾಗಿದ್ದು, ಶಕುಂತಲಾ ಅವರಿಗೆ ಶ್ರೇಷ್ಠ ಮಹಿಳಾಧಿಕಾರಿ ಪ್ರಶಸ್ತಿ ಒಲಿದು ಬಂದಿದೆ. ಮಹಿಳಾ ದಿನಾಚರಣೆ ಸುಸಂದರ್ಭದಲ್ಲಿ ಅವರ ಸಾಧನೆಯ ಮೆಲುಕು ಇಲ್ಲಿದೆ.
ಪ್ರೋತ್ಸಾಹ ಅಗತ್ಯ
ಮಹಿಳೆಯರಿಗೆ ಸೂಕ್ತ ಅವಕಾಶ ಸಿಕ್ಕಿದಲ್ಲಿ ಯಾವುದೇ ಸಾಧನೆ ಬೇಕಾದರೂ ಮಾಡಲು ಸಾಧ್ಯ. ಕುಟುಂಬದ ಜವಾಬ್ದಾರಿ ಜತೆಗೆ ಸಮಾಜದಲ್ಲಿ ಉನ್ನತ ಮಟ್ಟಕ್ಕೇರುವ ಸಾಮರ್ಥ್ಯ ಮಹಿಳೆಯರಿಗಿದೆ. ಮಹಿಳೆಯರಿಗೆ ಸೂಕ್ತ ಅವಕಾಶಗಳನ್ನು ನೀಡುವುದರ ಜತೆಗೆ ಅವರ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಒದಗಿಸುವ ಕೆಲಸವಾಗಬೇಕಿದೆ.
– ಶಕುಂತಲಾ
ಹರ್ಷಿತ್ ಪಿಂಡಿವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.