ಮುಂಚೂಣಿ ಶೇರುಗಳ ಭರಾಟೆ ಖರೀದಿ: ಸೆನ್ಸೆಕ್ಸ್ 318 ಅಂಕ ಜಂಪ್
Team Udayavani, Mar 8, 2018, 4:34 PM IST
ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದ ಸ್ಥಿರತೆಯ ಪ್ರವೃತ್ತಿಯನ್ನು ಅನುಸರಿಸಿ ಹೂಡಿಕೆದಾರರು ಮತ್ತು ವಹಿವಾಟುದಾರರು, ಕಳೆದ ಆರು ದಿನಗಳ ನಿರಂತರ ಕುಸಿತದಲ್ಲಿ ನೆಲ ಕಚ್ಚಿದ್ದ ಮುಂಚೂಣಿ ಶೇರುಗಳನ್ನು ಭರಾಟೆಯಿಂದ ಖರೀದಿಸಿದ ಪ್ರಯುಕ್ತ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 318 ಅಂಕಗಳ ಜಿಗಿತದೊಂದಿಗೆ ಆಶಾದಾಯಕವಾಗಿ ಕೊನೆಗೊಳಿಸಿತು.
ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಆಮದು ಸುಂಕ ಹೇರುವ ಪ್ರಸ್ತಾವವನ್ನು ತಾನು ಸದ್ಯಕ್ಕೆ ಕೈಬಿಟ್ಟಿರುವುದಾಗಿ ಅಮೆರಿಕದ ಶ್ವೇತ ಭವನ ಹೇಳಿರುವುದು ಶೇರು ಮಾರುಕಟ್ಟೆಗಳಿಗೆ ಹೆಚ್ಚು ಸಮಾಧಾನ ತಂದಿದೆ.
ದಿನಾಂತ್ಯಕ್ಕೆ ಸೆನ್ಸೆಕ್ಸ್ 318.48 ಅಂಕಗಳ ಏರಿಕೆಯೊಂದಿಗೆ 33,351.57 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 88.45 ಅಂಕಗಳ ಮುನ್ನಡೆಯೊಂದಿಗೆ 10,242.65 ಅಂಕಗಳ ಮಟ್ಟದಲ್ಲೂ ಸ್ಥಿತವಾಗಿತ್ತು. ಸೆನ್ಸೆಕ್ಸ್ ಕಳೆದ ಆರು ದಿನಗಳ ಕುಸಿತದಲ್ಲಿ 1,412.66 ಅಂಕಗಳ ನಷ್ಟವನ್ನು ಅನುಭವಿಸಿತ್ತು.
ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಇಂದು 2,866 ಕಂಪೆನಿಗಳ ಶೇರು ವಹಿವಾಟಿಗೆ ಒಳಪಟ್ಟವು. 1,202 ಶೇರುಗಳು ಮುನ್ನಡೆ ಸಾಧಿಸಿದವು; 1,511 ಶೇರುಗಳು ಹಿನ್ನಡೆಗೆ ಗುರಿಯಾದವು; 153 ಕಂಪೆನಿಗಳ ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.