ಗುಣಮಟ್ಟದ ರಸ್ತೆ ನಿರ್ಮಿಸಿ
Team Udayavani, Mar 8, 2018, 5:31 PM IST
ಶಹಾಪುರ: ಸಾರ್ವಜನಿಕರ ಬಳಕೆ ವ್ಯಾಪ್ತಿ ಬರುವ ರಸ್ತೆಗಳು ಸಂಚಾರಕ್ಕೆ ಅನುಕೂಲ ಆಗಿರಬೇಕು. ಆ ನಿಟ್ಟಿನಲ್ಲಿ
ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಅದಕ್ಕೆ ಬಡಾವಣೆಯ ಸರ್ವರ ಕಾಳಜಿ ಅಗತ್ಯ ಎಂದು ಶಾಸಕ ಗುರು ಪಾಟೀಲ್ ಶಿರವಾಳ ಹೇಳಿದರು.
ನಗರದ ಹಳಿಪೇಟೆಯಲ್ಲಿ ಹೆಚ್ಕೆಆರ್ಡಿಬಿ ಯೋಜನೆಯಡಿ 23 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಗರದದ ಎಲ್ಲಾ ಬಡಾವಣೆಗಳಲ್ಲಿ ಕುಡಿಯುವ ನೀರು ಸೇರಿದಂತೆ, ರಸ್ತೆ, ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಅವುಗಳ ಅಧಿಕ ಬಾಳಿಕೆ ಬರುವಂತೆ ಎಚ್ಚರಿಕೆ ವಹಿಸುವುದು ಗುತ್ತಿಗೆದಾರ ಸೇರಿದಂತೆ ನಮ್ಮೆಲ್ಲರ ಕರ್ತವ್ಯವಾಗಿದೆ. ನಗರದ 23 ವಾರ್ಡ್ಗಳಿಗೂ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕಾಮಗಾರಿ
ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಡಾ| ಬಸವರಾಜ, ನಗರಸಭೆ ಸದಸ್ಯ ಬಸವರಾಜ ಆನೇಗುಂದಿ, ವಸಂತ ಸುರಪುರಕರ್, ಚಾಂದ ಪಾಶಾ, ಲಾಲಅಹ್ಮದ ಖುರೇಶಿ, ಪ್ರಮುಖರಾದ ಅನಂತರಾವ್ ದೇಶಪಾಂಡೆ, ವಿಠಲಾಚಾರ್ಯ, ಬಸವರಾಜ ಯಂಕಂಚಿ, ಬಸವರಾಜ ವಗ್ಗನವರ, ಮುದಕಪ್ಪ ಜಂಗಳಿ, ಮಧ್ವಾಚಾರ್ಯ ಸಗರ, ಕಲ್ಲಪ್ಪ ಮಾಳಗಿ, ಮುರಳಿಧರ ಸುಂಬಡ, ಸಣ್ಣ ಮಾನಯ್ಯ, ನಯ್ಯೂಮ್ ಅಫಗಾನ, ಯುಸೂಫ್ ಜಾನಿ, ಶಕೀಲ ಸಾಹೇಬ, ಶಕೀಲ ಇನಾಂದಾರ, ಅಮೃತ ಹೂಗಾರ, ಮಲ್ಲಿಕಾರ್ಜುನ ಹೂಗಾರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.